ರೋಬೋಟ್ ನಾಯಿ
Team Udayavani, Feb 17, 2020, 4:53 AM IST
ನಾಯಿ ನಿಯತ್ತಿನ ಪ್ರಾಣಿ. ಈ ಚಿತ್ರದಲ್ಲಿ ಕಾಣುತ್ತಿರುವುದು ರೋಬೋಟ್ ನಾಯಿ. ಮನುಷ್ಯ ಹೇಳಿದಷ್ಟನ್ನು ಮಾತ್ರವೇ ಮಾಡುವುದರಿಂದ ಇದು ಜೀವಂತ ನಾಯಿಗಿಂತಲೂ ಹೆಚ್ಚು ನಿಯತ್ತುಳ್ಳದ್ದು ಎಂದು ತಿಳಿಯಬಹುದು.
ಈ ನಾಯಿ ರೋಬೋಟ್ ಅಭಿವೃದ್ಧಿ ಪಡಿಸಿದ್ದರ ಹಿಂದೆ ಒಂದು ಉದ್ದೇಶವಿದೆ. ಸುಖಾಸುಮ್ಮನೆ ರೋಬೋಟ್‌ಗಳನ್ನು ಯಾರೂ ಅಭಿವೃದ್ಧಿಪಡಿಸುವುದಿಲ್ಲವಷ್ಟೇ. ಮನುಷ್ಯನ ಅಡಿಯಾಳಾಗಿ ಕಠಿಣ ಕೆಲಸಗಳನ್ನು ನಿರ್ವಹಿಸಲಿ ಎನ್ನುವ ಧ್ಯೇಯದಿಂದಲೇ ಯಾವುದೇ ರೋಬೋಟ್‌ನ ಆವಿಷ್ಕಾರವಾಗುವುದು.
ಈ ರೋಬೋಟ್ ನಾಯಿ ಪೆಟ್ರೋಲ್ ನಿಕ್ಷೇಪಗಳಿರುವ ಗಡ್ಡಿಯನ್ನು ಕಾಯುವ ಸಲುವಾಗಿ ನಿರ್ಮಾಣಗೊಂಡಿದೆ. ಇನ್ನೂ ನಿಖರವಾಗಿ ಹೇಳಬೇಕೆಂದರೆ ನಾರ್ವೆಯಲ್ಲಿ ಖಾಸಗಿ ಸಂಸ್ಥೆಗೆ ಸೇರಿದ ನಿಕ್ಷೇಪದ ರಕ್ಷಣೆಯೇ ಅದರ ಮೂಲ ಧ್ಯೇಯ. ಅಲ್ಲಿ ಯಾವುದಾದರೂ ಪೈಪ್‌ಲೈನಿನಲ್ಲಿ ಲೀಕ್ ಕಂಡುಬರುತ್ತಿದೆಯಾ ಅಥವಾ ಬೇರಾವುದಾದರೂ ಅವಘಡ ಸಂಭವಿಸಿದೆಯಾ ಎಂಬಿತ್ಯಾದಿ ವಿಚಾರಗಳನ್ನು ಅವು ಪತ್ತೆ ಹಚ್ಚಿ ಕಂಟ್ರೋಲ್ ರೂಂಗೆ ಎಚ್ಚರಿಕೆ ಸಂದೇಶ ಕಳಿಸುತ್ತವೆ. ಇದರಿಂದಾಗಿ ತೈಲ ನಿಕ್ಷೇಪಗಳಲ್ಲಿ ಅವಘಡ ಸಂಭವಿಸುವುದನ್ನು ಮುಂಚಿತವಾಗಿ ತಿಳಿಯಬಹುದು. ಆ ಮೂಲಕ ಹೆಚ್ಚಿನ ಅನಾಹುತ ತಡೆಯಬಹುದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.