ಗುಲಾಬಿ ಖುಷಿ  


Team Udayavani, May 14, 2018, 2:16 PM IST

rose.jpg

ಸಾಮಾನ್ಯವಾಗಿ ರೈತರು ಗುಲಾಬಿ ಗಿಡಗಳನ್ನು ವರ್ಷಕ್ಕೆ ಒಂದು ಬಾರಿ ಕತ್ತರಿಸುವುದು ವಾಡಿಕೆ. ಆದರೆ ಇವರು ಎರಡು ಬಾರಿ ಕತ್ತರಿಸುತ್ತಾರೆ. ಲಾಭದ ಮೂಲ ಕೂಡ ಇದೆ. 

ಕಬ್ಬಿನ ಕೃಷಿ ಮಾಡಿದರೆ ವರ್ಷಕ್ಕೊಮ್ಮೆ ಆದಾಯ. ಆ ಬೆಳೆ ಕೈಗೆ ಬರುವ ತನಕ ಏನು ಮಾಡೋದು? ಈ ಪ್ರಶ್ನೆ ಎದ್ದಾಗಲೇ ಪತಿಯ ಮನವೊಲಿಸಿದರು ಬೆಳಗಾವಿಯ ಅಂಬೇವಾಡಿ ಗ್ರಾಮದ ಅಂಜನಾ ಭುಜಂಗ ಕೋವಾಡಕರ. ಈಗ ನೋಡಿ, ದಿನೇ ದಿನೇ ಕಾಂಚಾಣ ಎಣಿಸುತ್ತಿದ್ದಾರೆ. 

ಇವರದು ಮೂರು ಎಕರೆ ಜಮೀನು. ಸುತ್ತಮುತ್ತಲಿನ ಇತರೆ ರೈತರಂತೆ ಬುಜಂಗ ಕೋವಾಡಕರರಿಗೂ ನಿತ್ಯ ಆದಾಯ ಇರಲಿಲ್ಲ. ವರ್ಷಕ್ಕೊಮ್ಮೆ ಬರುವ ಕಬ್ಬಿನ ಹಣಕ್ಕೆ ಎದುರು ನೋಡಬೇಕಿತ್ತು. ಈ ಸ್ಥಿತಿಯನ್ನು ಹಲವು ವರ್ಷಗಳಿಂದ ಗಮನಿಸುತ್ತಲೇ ಬಂದಿದ್ದ ಅಂಜನಾ, ದಿನ ನಿತ್ಯ ಗಳಿಕೆ ಕಂಡುಕೊಳ್ಳುವ ಮಾರ್ಗ ಹುಡುಕಿಕೊಳ್ಳುವ ತುಡಿತದಲ್ಲಿದ್ದರು. ಆಗಲೆ  ಸ್ವಗ್ರಾಮದಲ್ಲಿದ್ದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸ್ವ ಸಹಾಯ ಸಂಘದ ನೆರವು ದೊರಕಿತು.  ಸಜಾìಪುರದಿಂದ ಮುಳ್ಳು ಹೈಬ್ರಿಡ್‌ ಗುಲಾಬಿ ಗಿಡಗಳನ್ನು ತಂದು ನೆಟ್ಟರು.  

ಕೃಷಿ ಹೇಗೆ?
ಹೂವಿನ ಕೃಷಿಗೆಂದೇ ಕಬ್ಬಿನ ಬೆಳೆಯನ್ನು ಮೂರರಿಂದ, ಎರಡು ಎಕರೆಗೆ ಇಳಿಸಿ, ಆ ಒಂದು ಎಕರೆ ಭೂಮಿಯನ್ನು ಹೂವಿನ ಕೃಷಿಗೆ ಸಿದ್ಧಪಡಿಸಿದರು. ಗಿಡದಿಂದ ಗಿಡಕ್ಕೆ ಎರಡು ಅಡಿ ಸಾಲಿನ ಮಧ್ಯೆ ನಾಲ್ಕು ಅಡಿ ಅಂತರದಲ್ಲಿ ಗುಲಾಬಿ ಗಿಡಗಳನ್ನು ನಾಟಿ ಮಾಡಿದ್ದಾರೆ. ಮುಳ್ಳು ಹೈಬ್ರಿಡ್‌ ತಳಿಯ 2000 ಗಿಡಗಳಿವೆ. ನಾಟಿ ಪೂರ್ವ ಕೊಟ್ಟಿಗೆಯ ತಿಪ್ಪೆ ಗೊಬ್ಬರ ಯಥೇತ್ಛವಾಗಿ ಬಳಸಿದ್ದಾರೆ. ಜೂನ್‌ ತಿಂಗಳ ಎರಡನೆಯ ವಾರದಲ್ಲಿ ನಾಟಿ. ಮೂರು ತಿಂಗಳ ನಂತರ ರಸಗೊಬ್ಬರ ಹಾಕಿದ್ದಾರೆ. ಉತ್ತಮ ಗುಣಮಟ್ಟದ ಗಿಡಗಳಿದ್ದುದರಿಂದ ನೆಟ್ಟ ಒಂದೂವರೆ ತಿಂಗಳಿಗೆ ಹೂವು ಬರಲು ಆರಂಭಿಸಿದೆ. ಮೂರು ತಿಂಗಳವರೆಗೆ ಮೊಗ್ಗು ಚಿವುಟಿದ್ದಾರೆ. ಬಲಿಷ್ಟವಾಗಿ ಬೆಳೆದ ಗಿಡಗಳು ಆರು ತಿಂಗಳ ನಂತರ ಪ್ರತಿ ಗಿಡದಿಂದ ಸರಾಸರಿ 2-3 ಹೂವುಗಳನ್ನು ನೀಡತೊಡಗಿವೆ.

ವರ್ಷಕ್ಕೆರಡು ಬಾರಿ ಕತ್ತರಿಸುತ್ತಾರೆ
    ಸಾಮಾನ್ಯವಾಗಿ ರೈತರು ಗುಲಾಬಿ ಗಿಡಗಳನ್ನು ವರ್ಷಕ್ಕೆ ಒಂದು ಬಾರಿ ಕತ್ತರಿಸುವುದು ವಾಡಿಕೆ. ಆದರೆ ಇವರು ಎರಡು ಬಾರಿ ಕತ್ತರಿಸುತ್ತಾರೆ. ಜೂನ್‌ ಮೊದಲನೆ ವಾರ ಹಾಗೂ ಡಿಸೆಂಬರ್‌ ತಿಂಗಳಲ್ಲಿ ಗಿಡಗಳನ್ನು ಬುಡದಿಂದ ಒಂದು ಅಡಿ ಅಂತರ ಬಿಟ್ಟು ಕತ್ತರಿಸುತ್ತಾರೆ. ನಂತರ ಆ ಗಿಡವು 45 ದಿನಕ್ಕೆ ಹೂವು ಬಿಡುತ್ತದೆ. ವರ್ಷಕ್ಕೆ ಒಮ್ಮೆ ಮಾತ್ರ ರಸಗೊಬ್ಬರ ಬಳಕೆ. ಆಮೇಲೆ ಮೂರು ತಿಂಗಳಿಗೊಮ್ಮೆ ಕೊಟ್ಟಿಗೆ ಗೊಬ್ಬರ ಹಾಕುತ್ತಾರೆ. ವರ್ಷಕ್ಕೊಮ್ಮೆ ಕತ್ತರಿಸಿದರೆ ಹೂವಿನ ಇಳುವರಿ ಕಡಿಮೆ. ಅಲ್ಲದೇ ಗಿಡಗಳು ಬೃಹತ್‌ ಗಾತ್ರದಲ್ಲಿ ಬೆಳೆದು ನಿಲ್ಲುವುದರಿಂದ ಮುಳ್ಳಿನ ನಡುವೆ ಹೂವು ಆಯ್ದುಕೊಳ್ಳಲು ಕಸರತ್ತು ಮಾಡಬೇಕಾಗುತ್ತದೆ. ವರ್ಷಕ್ಕೆ ಬುಡ ಕತ್ತರಿಸುವ ಗುರಿ ಇದ್ದರೆ ಗಿಡಗಳ ನಡುವೆ ಐದು ಅಡಿ ಹಾಗೂ ಸಾಲಿನ ನಡುವೆ ಎಂಟು ಅಡಿ ಅಂತರ ಇರಬೇಕಾಗುತ್ತದೆ. ಆರು ತಿಂಗಳಿಗೆ ಒಮ್ಮೆ ಕತ್ತರಿಸುವುದಾದರೆ ಕಡಿಮೆ ಸ್ಥಳದಲ್ಲಿ ಹೆಚ್ಚು ಗಿಡ ನಾಟಿ ಮಾಡಿ, ಇಳುವರಿಯನ್ನೂ ಜಾಸ್ತಿ ಪಡೆಯಬಹುದು ಎನ್ನುತ್ತಾರೆ ಅಂಜನಾ ಬುಜಂಗ ಕೋವಾಡಕರ.

ಭರ್ತಿ ಇಳುವರಿ
    ಉತ್ತಮ ನಿರ್ವಹಣೆಯಿಂದ ಇಳುವರಿ ಹೆಚ್ಚು. ಎಷ್ಟೆಂದರೆ, ದಿನಕ್ಕೆ 300-500 ಹೂವು ಕೊಯ್ಲು ಮಾಡುತ್ತಾರೆ. ಪ್ರತಿದಿನ ಸಾಯಂಕಾಲ ಹತ್ತು ಹೂವಿನಂತೆ ಒಂದೊಂದು ಸಿವುಡು ಕಟ್ಟಿ, ಬುಟ್ಟಿಯಲ್ಲಿ ಜೋಡಿಸಿಟ್ಟು ನೀರು ಸಿಂಪಡಿಸಿಟ್ಟು, ನಸುಕಿನಲ್ಲೇ ಮಾರುಕಟ್ಟೆಗೆ ಒಯ್ಯುತ್ತಾರೆ. ಹೂವೊಂದಕ್ಕೆ ಮೂರು ರೂಪಾಯಿ ಬೆಲೆ ಇದೆ. ಆಗಸ್ಟ್‌ ಸೆಪ್ಟೆಂಬರ್‌, ಫೆಬ್ರವರಿ ಹಾಗೂ ಮಾರ್ಚ್‌ ತಿಂಗಳಿನಲ್ಲಿ ಹೂವಿನ ಇಳುವರಿ ಜಾಸ್ತಿ. ದಿನವೊಂದಕ್ಕೆ 800-1000 ಹೂವು ಕೊಯ್ಲು ಮಾಡಿದ್ದೂ ಇದೆಯಂತೆ.

    ಅಂಜನಾ ಅವರದ್ದು ಉಸುಕು ಮಿಶ್ರಿತ ಕೆಂಪು ಮಣ್ಣಿನ ಭೂಮಿಯಾಗಿರುವುರಿಂದ ಎರಡು ದಿನಕ್ಕೊಮ್ಮೆ ನೀರು ಹಾಯಿಸುವುದು ಅನಿವಾರ್ಯ. ಗುಲಾಬಿ ಗಿಡಗಳಿಗೆ ವಾರಕ್ಕೊಮ್ಮೆ ಔಷಧ ಸಿಂಪಡಿಸುತ್ತಾರೆ. ಗಿಡಗಳನ್ನು ಕತ್ತರಿಸಿದ ಸಂದರ್ಭದಲ್ಲಿ ಬುಡಗಳ ನಡುವೆ ಟಿಲ್ಲರ್‌ ಸಹಾಯದಿಂದ ಉಳುಮೆ ಮಾಡುತ್ತಾರೆ. ಬಿಸಿಲುಂಡ ಭೂಮಿ, ಮುಂದಿನ ಹೂವು ಇಳುವರಿ ಇಮ್ಮಡಿಗೊಳಿಸಲು ಸಹಕರಿಸುತ್ತದೆ. ಒಮ್ಮೆ ನಾಟಿ ಮಾಡಿದ ಗಿಡಗಳಿಂದ 8-10 ವರ್ಷಗಳ ವರೆಗೆ ಇಳುವರಿ ಪಡೆಯಬಹುದು.  ಹೀಗಾಗಿ ಭುಜಂಗ ಕೋವಾಡಕರ್‌ ಕುಟುಂಬ ನೆಮ್ಮದಿಯಾಗಿದೆ. 

– ಜೈವಂತ ಪಟಗಾರ

ಟಾಪ್ ನ್ಯೂಸ್

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

1-ct

C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!

horatti

C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Sullia: ಅಸೌಖ್ಯದಿಂದ ಮಹಿಳೆ ಸಾವು

Sullia: ಅಸೌಖ್ಯದಿಂದ ಮಹಿಳೆ ಸಾವು

Kasaragod: ಅಪರಾಧ ಸುದ್ದಿಗಳು; ಕಾರ್ಮಿಕ ಆತ್ಮಹ*ತ್ಯೆ

Kasaragod: ಅಪರಾಧ ಸುದ್ದಿಗಳು; ಕಾರ್ಮಿಕ ಆತ್ಮಹ*ತ್ಯೆ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.