ಫೀಲ್ಡಿಗೆ ಇಳಿದ ಎನ್‌ಫೀಲ್ಡ್‌


Team Udayavani, Jan 6, 2019, 12:42 PM IST

royal.jpg

“ರಾಯಲ್‌ ಎನ್‌ಫೀಲ್ಡ್‌! ಕನಸಿನ ಬೈಕ್‌. ಲೈಫ‌ಲ್ಲಿ ಒಂದ್ಸಲನಾದ್ರೂ ಈ ಬೈಕ್‌ ಖರೀದಿಸಬೇಕು, ಸುಖ ಸವಾರಿ ಮಾಡಬೇಕು’ ಎನ್ನುವವರು ಬಹಳ ಮಂದಿ. ಇಂಥ ಆಕಾಂಕ್ಷೆ ಇದ್ದವರಿಗಾಗಿಯೇ ಹೃದಯ ಬಡಿತ ಏರಿಸುವಂತೆ ಇದೀಗ ರಾಯಲ್‌ ಎನ್‌ಫೀಲ್ಡ್‌ ಹೊಸ ಮಾದರಿಯ ಬೈಕ್‌ಗಳನ್ನು ಮಾರುಕಟ್ಟೆಗೆ ತರಲು ಸಿದ್ಧವಾಗಿದೆ. 

ಇತ್ತೀಚೆಗೆ ಐಕಾ¾ ಮೋಟಾರ್‌ ಶೋದಲ್ಲಿ ಎನ್‌ಫೀಲ್ಡ್‌ ತನ್ನ ಟ್ವಿನ್‌ ಸಿಲಿಂಡರ್‌ನ ಕಾಂಟಿನೆಂಟಲ್‌ ಐ ಮತ್ತು ಇಂಟರ್‌ಸೆಪ್ಟರ್‌ ಮಾಡೆಲ್‌ಗ‌ಳನ್ನು ಪರಿಚಯಿಸಿದೆ. ಈ ಮೋಟಾರ್‌ ಶೋದಲ್ಲಿ ಈ ಎರಡೂ ಬೈಕ್‌ಗಳು ಪ್ರಶಂಸೆಗೆ ಪಾತ್ರವಾಗಿದ್ದವು. 

ಹೇಗಿದೆ ಲುಕ್‌? 
ಹೊಸ ಚಾಸಿಸ್‌ ಮತ್ತು ಹೊಸ ಫ್ರೆàಮ್‌ಗಳಲ್ಲಿ ಈ ಬೈಕ್‌ ಅನ್ನು ನಿರ್ಮಿಸಲಾಗಿದೆ. ಎರಡೂ ಮಾಡೆಲ್‌ಗ‌ಳ ಜಿಯೋಮೆಟ್ರಿ ತುಸು ಬದಲಿದೆ. ಐಟಿ 535ಗಿಂತ ಹೊಸ ಜಿಟಿ ಗಡುಸಾಗಿದೆ. ಹಾಗೆಯೇ, ಇದರಲ್ಲಿರುವ ಇಂಟರ್‌ಸೆಪ್ಟರ್‌, 60ರ ದಶಕದ ಮಾದರಿಯಂತಿದೆ. ಎರಡು ಸೈಲೆನ್ಸರ್‌, ಫೀಲ್‌ ಆಗುವ ರೀತಿ ರೌಂಡ್‌ ಹೆಡ್‌ಲೈಟ್‌, ಅಗಲವಾದ ಹ್ಯಾಂಡಲ್‌ ಬಾರ್‌ ಮತ್ತು ಆರಾಮದಾಯಕ ಸೀಟುಗಳು ಇವಕ್ಕಿವೆ. ಇಂಟರ್‌ಸೆಪ್ಟರ್‌ ಮತ್ತು ಜಿಟಿ650ಯ ಹ್ಯಾಂಡಲ್‌ ಬಾರ್‌ಗಳು ಭಿನ್ನವಾಗಿದ್ದು, ಇಂಟರ್‌ಸೆಪ್ಟರ್‌ ಆರಾಮದಾಯಕ, ಟೂರಿಂಗ್‌ಗೆ ಹೇಳಿ ಮಾಡಿಸಿದಂತಿದೆ. 
 
ಇವುಗಳ ಸೈಡ್‌ ಪ್ಯಾನೆಲ್‌ಗ‌ಳು ಮತ್ತು ಹಿಂಭಾಗದ ಮಡ್‌ಗಾರ್ಡ್‌ ಒಂದೇ ರೀತಿ ಇದ್ದು, ಮಾದರಿಗಳಿಗೆ ಅನುಗುಣವಾಗಿ ರಿಮ್‌ಗೆ ಕಪ್ಪು ಮತ್ತು ಬೂದು ಬಣ್ಣಗಳನ್ನು ಹೊಂದಿವೆ. ಎರಡರಲ್ಲೂ ಇರುವ 3ಡಿ ಮೆಟಾಲಿಕ್‌ ಬ್ಯಾಡ್ಜ್ನಿಂದ ಆಕರ್ಷಕವಾಗಿದೆ. ಹಿಂಭಾಗ ಮತ್ತು ಮುಂಭಾಗದಲ್ಲಿ ಡಿಸ್ಕ್, ಹಿಂಭಾಗ ಗ್ಯಾಸ್‌ ಫಿಟ್ಟೆಡ್‌ ಶಾಕ್ಸ್‌ಗಳು, ಮುಂಭಾಗ ಟೆಲಿಸ್ಕೋಪಿಕ್‌ ಶಾಕ್ಸ್‌ಗಳನ್ನು ಹೊಂದಿದೆ. 

ಜಬರದಸ್ತ್ ಎಂಜಿನ್‌ 
ಇಂಟರ್‌ಸೆಪ್ಟರ್‌ ಮತ್ತು ಜಿಟಿ ಮಾದರಿಯ ಹೊಸ ಬೈಕ್‌ನ ಪ್ಲಸ್‌ ಪಾಯಿಂಟ್‌ ಎಂದರೆ ಹೊಸ ಎಂಜಿನ್‌. ಲಂಡನ್‌ನಲ್ಲಿರುವ ಎನ್‌ಫೀಲ್ಡ್‌ ಸಂಶೋಧನ ಕೇಂದ್ರದಲ್ಲಿ ಇದರ ಆವಿಷ್ಕಾರ ನಡೆದಿದ್ದು, ಆಯಿಲ್‌ ಕೂಲ್ಡ್‌ ಎಂಜಿನ್‌ ಇದಾಗಿದೆ. 650 ಸಿಸಿಯ ಟ್ವಿನ್‌ ಸಿಲಿಂಡರ್‌ ಹೊಂದಿರುವ ಈ ಎಂಜಿನ್‌ 7,250 ಆರ್‌ಪಿಎಂನಲ್ಲಿ 47 ಅಶ್ವಶಕ್ತಿಯನ್ನು ಹೊರಸೂಸುತ್ತದೆ. ಹಾಗೆಯೇ, 5,250 ಆರ್‌ಪಿಎಂನಲ್ಲಿ 52 ಎಳೆಯುವ ಶಕ್ತಿ ಹೊಂದಿದೆ. ಕೇವಲ 2500 ಆರ್‌ಪಿಎಂನಲ್ಲಿ ಶೇ.80ರಷ್ಟು ಎಳೆಯುವ ಶಕ್ತಿ ಲಭ್ಯವಿದ್ದು ನಗರ ಸವಾರಿಯಲ್ಲಿ ಹೆಚ್ಚು ಗೇರ್‌ ಬದಲಿಸಬೇಕಾದ ಅವಶ್ಯಕತೆಯೇ ಇಲ್ಲ. ಜೊತೆಗೆ ನಿಧಾನ ಸವಾರಿಗೆ ಸಾಕಷ್ಟು ಶಕ್ತಿ ನೀಡುತ್ತದೆ. ನಾಲ್ಕು ವಾಲ್‌Ìಗಳ ಎಂಜಿನ್‌ ಇದಾಗಿದ್ದು, ಇಂಟರ್‌ಸೆಪ್ಟರ್‌ 205 ಕೆ.ಜಿ ಮತ್ತು ಜಿಟಿ 201 ಕೆ.ಜಿ ಭಾರ ಹೊಂದಿದೆ. ಎನ್‌ಫೀಲ್ಡ್‌ನ ಈ ಹಿಂದಿನ ಎಂಜಿನ್‌ಗಳು ಹೆಚ್ಚು ವೈಬ್ರೇಷನ್‌ ಸಮಸ್ಯೆಯಿಂದ ಕೂಡಿದ್ದರಿಂದ ದೂರುಗಳು ಸಾಮಾನ್ಯವಾಗಿದ್ದವು. ಆದರೆ ಹೊಸ ಎಂಜಿನ್‌ಗಳು ವ್ಯಾಪಕ ಸುಧಾರಣೆ ಕಂಡಿದ್ದು ಎಂಜಿನ್‌ ವೈಬ್ರೇಷನ್‌ ಗಮನಾರ್ಹ ರೀತಿಯಲ್ಲಿ ತಗ್ಗಿದೆ. ಸ್ಲಿಪ್ಪರಿ ಕ್ಲಚ್‌ ಮತ್ತು ಎಬಿಎಸ್‌ ವ್ಯವಸ್ಥೆಯನ್ನು ನೀಡಲಾಗಿದ್ದು ಆರಾಮದಾಯಕ ಸವಾರಿಯ ಫೀಲ್‌ ಅನ್ನು ಮತ್ತಷ್ಟು ಹೆಚ್ಚಿಸಿದೆ. 

ಎನ್‌ಫೀಲ್ಡ್‌ಗಳಲ್ಲೇ ಅತಿ ವೇಗ
ಎನ್‌ಫೀಲ್ಡ್‌ ಬೈಕ್‌ಗಳಲ್ಲೇ ಅತಿ ವೇಗವನ್ನು ತಲುಪಬಲ್ಲ ಸಾಮರ್ಥ್ಯ ಈ ಬೈಕ್‌ಗಳದ್ದು. ಗರಿಷ್ಠ 160 ಕಿ.ಮೀ.ವರೆಗೆ ಸಾಗುವ ಸಾಮರ್ಥ್ಯ ಹೊಂದಿದೆ. ಬಹಳಷ್ಟು ಆರಾಮವಾಗಿ ಗಂಟೆಗೆ 120 ಕಿ.ಮೀ. ವೇಗದ ಸವಾರಿ ಮಾಡಬಹುದು. ಅರ್ಥಾತ್‌ ಅಷ್ಟೊಂದು ವೇಗದಲ್ಲಿದ್ದೀರಿ ಎಂದು ಅನಿಸುವುದೇ ಇಲ್ಲ. ಬೈಕ್‌ಗಳ ಸೈಲೆನ್ಸರ್‌ ನೋಟ್‌ಗಳು ಕೇಳುವುದಕ್ಕೆ ಒಳ್ಳೆ ಫೀಲ್‌ ನೀಡುತ್ತದೆ. ಎನ್‌ಫೀಲ್ಡ್‌ನ ನಿಜವಾದ ಚಾಲನೆಗೆ ಆನಂದ ಇದರಿಂದಲೇ. 

ತಾಂತ್ರಿಕತೆ 
100/90-18  ಮುಂಭಾಗದ ಹಾಗೂ 130-70-18 ಹಿಂಭಾಗದ ಟಯರ್‌ಗಳನ್ನು ಎರಡೂ ಮಾದರಿಯ ಬೈಕ್‌ಗಳು ಹೊಂದಿವೆ. ಮುಂಭಾಗ 320 ಎಂಎಂ.ನ ಡಿಸ್ಕ್ ಮತ್ತು ಹಿಂಭಾಗ 240 ಎಂಎಂ.ನ ಡಿಸ್ಕ್ ಇದೆ. 174 ಎಂ.ಎಂ. ಗ್ರೌಂಡ್‌ ಕ್ಲಿಯರೆನ್ಸ್‌, 1400 ಎಂ.ಎಂ. ವೀಲ್‌ ಬೇಸ್‌, 804 ಎಂ.ಎ. ಸೀಟ್‌ ಎತ್ತರ ಹೊಂದಿದೆ. 

ಬುಕ್ಕಿಂಗ್‌ ಶುರು
ಈ ಬೈಕ್‌ಗಳಿಗೆ 5ಸಾವಿರ ರೂ. ಕೊಟ್ಟು  ಬುಕ್ಕಿಂಗ್‌ ಮಾಡುವ ಅವಕಾಶವಿದೆ.   ಬೈಕ್‌ಗಳ ಬೆಲೆ ಇಂಟರ್‌ಸೆಪ್ಟರ್‌ಗೆ 2.34 ಲಕ್ಷ ರೂ. ಜಿಟಿ ಮಾದರಿ ಬೈಕ್‌ ಬೆಲೆ 2.65 ಲಕ್ಷ ರೂ. (ಎಕ್ಸ್‌ಷೋರೂಂ) ಆಗಿದೆ. ಈ ಕಾರಣಕ್ಕೆ ವಿದೇಶಿ ಬೈಕ್‌ಗಳಿಗೆ ಎನ್‌ಫೀಲ್ಡ್‌ ಪ್ರಬಲ ಪೈಪೋಟಿ ಒಡ್ಡಲಿದೆ ಅನ್ನೋ ಲೆಕ್ಕಾಚಾರವಿದೆ.  ಒಟ್ಟು ನಾಲ್ಕು ಬಣ್ಣಗಳಲ್ಲಿ ಈ ಬೈಕ್‌ಗಳು ಲಭ್ಯವಿದೆ. 

– ಈಶ 

ಟಾಪ್ ನ್ಯೂಸ್

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ರಾಜ್ಯಸಭೆ ಬಹುಮತದತ್ತ ಬಿಜೆಪಿ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Police

Manya: ಭಜನ ಮಂದಿರದಿಂದ ಕಳವು ಆರೋಪಿಗಳಿಂದ ಮಾಹಿತಿ ಸಂಗ್ರಹ

Suside-Boy

Putturu: ಬಡಗನ್ನೂರು: ನೇಣು ಬಿಗಿದು ಆತ್ಮಹ*ತ್ಯೆ

school

KPS ಹೆಚ್ಚುವರಿ ಎಲ್‌ಕೆಜಿ, 1ನೇ ತರಗತಿ ತೆರೆಯಲು ಅವಕಾಶ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

Modi-Tour

Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.