ಸ್ಯಾಮಸಂಗ್ ಗೆಲಾಕ್ಸಿ ಎಸ್ 10 ಭಾರತದ ಮಾರುಕಟ್ಟೆಗೆ
Team Udayavani, Mar 11, 2019, 12:30 AM IST
ದುಬಾರಿ ಮೊಬೈಲ್ ಬೇಕೆಂಬ ಬ್ಯುಸಿನೆಸ್ ಹಾಗೂ ಅಧಿಕಾರಿ ವರ್ಗದವರು, ಧನಿಕರ ಆಯ್ಕೆ ಸಾಮಾನ್ಯವಾಗಿ ಆ್ಯಪಲ್ ಹಾಗೂ ಸ್ಯಾಮ್‌ಸಂಗ್ ಎಸ್ ಸೀರೀಸ್ ಆಗಿರುತ್ತದೆ. ಸ್ಯಾಮ್‌ಸಂಗ್ ತನ್ನ ಗೆಲಾಕ್ಸಿ ಎಸ್ ಸರಣಿಯ ಫೋನ್‌ಗಳನ್ನು ವರ್ಷಕ್ಕೊಮ್ಮೆ ಬಿಡುಗಡೆ ಮಾಡುತ್ತದೆ. ಈ ಬಾರಿ ಗೆಲಾಕ್ಸಿ ಎಸ್ 10 ಗೆಲಾಕ್ಸಿ ಎಸ್10ಪ್ಲಸ್ ಹಾಗೂ ಗೆಲಾಕ್ಸಿ ಎಸ್ 10ಇ ಎಂಬ ಮೂರು ಮಾಡೆಲ್‌ಗಳನ್ನು ಹೊರತಂದಿದೆ.
ಸ್ಯಾಮ್‌ಸಂಗ್ ತನ್ನ ಅತ್ಯುನ್ನತ ದರ್ಜೆ (ಫ್ಲಾಗ್‌ಶಿಪ್) ಯ ಗೆಲಾಕ್ಸಿ ಎಸ್ 10 ಸರಣಿಯ ಮೂರು ಮಾಡೆಲ್‌ಗಳನ್ನು ಈ ವಾರ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ದುಬಾರಿ ಮೊಬೈಲ್ ಬೇಕೆಂಬ ಬ್ಯುಸಿನೆಸ್ ಹಾಗೂ ಅಧಿಕಾರಿ ವರ್ಗದವರು, ಧನಿಕರ ಆಯ್ಕೆ ಸಾಮಾನ್ಯವಾಗಿ ಆ್ಯಪಲ್ ಹಾಗೂ ಸ್ಯಾಮ್‌ಸಂಗ್ ಎಸ್ ಸೀರೀಸ್ ಆಗಿರುತ್ತದೆ. ಸ್ಯಾಮ್‌ಸಂಗ್ ತನ್ನ ಗೆಲಾಕ್ಸಿ ಎಸ್ ಸರಣಿಯ ಫೋನ್‌ಗಳನ್ನು ವರ್ಷಕ್ಕೊಮ್ಮೆ ಬಿಡುಗಡೆ ಮಾಡುತ್ತದೆ. ಈ ಬಾರಿ ಗೆಲಾಕ್ಸಿ ಎಸ್ 10 ಗೆಲಾಕ್ಸಿ ಎಸ್10ಪ್ಲಸ್ ಹಾಗೂ ಗೆಲಾಕ್ಸಿ ಎಸ್ 10ಇ ಎಂಬ ಮೂರು ಮಾಡೆಲ್‌ಗಳನ್ನು ಹೊರತಂದಿದೆ.
ಸ್ಯಾಮ್‌ಸಂಗ್ ಎಸ್ 10: ಇದು 6.1 ಇಂಚಿನ ಕ್ಯೂಎಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. 19:9 ಅನುಪಾತದಲ್ಲಿ ಪರದೆಯಿದೆ. ಬಲಗಡೆಯ ಮೂಲೆಯಲ್ಲಿ ಮಾತ್ರ ಸಣ್ಣದಾದ ಸೆಲ್ಫಿà ಕ್ಯಾಮರಾ ಇದ್ದು, ಇನ್ನು ಪೂರ್ತಿ ಡಿಸ್‌ಪ್ಲೇ ಇದೆ. ಇದನ್ನು ಸ್ಯಾಮ್‌ಸಂಗ್ ಇನ್‌ಫಿನಿಟಿ ಓ ಡಿಸ್‌ಪ್ಲೇ ಎಂದು ಕರೆದಿದೆ. ಜೊತೆಗೆ ಇದಕ್ಕೆ ಅಮೋಲೆಡ್ ಪರದೆಯಿದೆ. ಪರದೆಯ ರಕ್ಷಣೆಗೆ ಗೊರಿಲ್ಲಾ ಗ್ಲಾಸ್ 6 ಇದೆ. ಈ ಮೊಬೈಲ್‌ಗೆ ಸ್ಯಾಮ್ಸಂಗ್‌ದೇ ತವರು ತಯಾರಿಕೆಯಾದ ಎಕ್ಸಿನಾಸ್ 9820 ಪ್ರೊಸೆಸರ್ ಬಳಸಲಾಗಿದೆ. 8 ಜಿಬಿ ರ್ಯಾಮ್ ಹೊಂದಿದ್ದು, 128 ಜಿಬಿ ಹಾಗೂ 512 ಜಿಬಿ ಆಂತರಿಕ ಸಂಗ್ರಹ ಹೊಂದಿದೆ.
ಕ್ಯಾಮರಾ ವಿಭಾಗಕ್ಕೆ ಬರುವುದಾದರೆ ಈ ಮೊಬೈಲ್ ಹಿಂಬದಿಯಲ್ಲೇ ಮೂರು ಕ್ಯಾಮರಾ ಹೊಂದಿದೆ. 12 ಮೆಗಾಪಿಕ್ಸಲ್‌ನ ವೈಡ್ ಆ್ಯಂಗಲ್ ಲೆನ್ಸ್, 12 ಮೆ.ಪಿ. ಟೆಲಿಫೋಟೋ ಲೆನ್ಸ್ ಹಾಗೂ 16 ಮೆ.ಪಿ. ಅಲ್ಟ್ರಾ ವೈಡ್ ಲೆನ್ಸ್ ಕ್ಯಾಮರಾ ಇದೆ. ಸೆಲ್ಫಿàಗಾಗಿ 10 ಮೆಗಾಪಿಕ್ಸಲ್ ಕ್ಯಾಮರಾ ಇದ್ದು, 3.5 ಎಂಎಂ ಆಡಿಯೋ ಜಾಕ್, ಯುಎಸ್‌ಪಿ ಟೈಪ್ ಸಿ ಪೋರ್ಟ್ ಇದ್ದು 3400 ಎಂಎಎಚ್ ಬ್ಯಾಟರಿ ಹೊಂದಿದೆ. ವೈರ್‌ಲೆಸ್ ಚಾರ್ಜಿಗ್ ಸೌಲಭ್ಯ ಕೂಡ ಇದೆ. ಅಲ್ಟ್ರಾಸೋನಿಕ್ ಇನ್‌ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ (ಪರದೆಯ ಮೇಲೆಯೇ ಬೆರಳಚ್ಚು) ಸ್ಕ್ಯಾನರ್ ಹೊಂದಿದೆ. ಅಂಡ್ರಾಯ್ಡ 9ಪೈ ಆವೃತ್ತಿ ಇದ್ದು, ಇದಕ್ಕೆ ಸ್ಯಾಮ್ಸಂಗ್‌ನ ಒನ್ ಯೂಸರ್ ಇಂಟರ್‌ಫೇಸ್ ಇದೆ. ದರ, 512 ಜಿಬಿ ಆವೃತ್ತಿಗೆ 84,900ರೂ. 128 ಜಿಬಿ ಆವೃತ್ತಿಗೆ 66,900 ರೂ.
ಗೆಲಾಕ್ಸಿ ಎಸ್10 ಪ್ಲಸ್: ಇದು ಎಸ್10ನ ದೊಡ್ಡದಾದ ಆವೃತ್ತಿ. (ಎಸ್10ನ ಅಣ್ಣ ಎಂದರೆ ಸರಿಯಾದೀತು!) 6.4 ಇಂಚಿನ, ಇನ್‌ಫಿನಿಟಿ ಓ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಇದರಲ್ಲಿರುವುದೂ ಸ್ಯಾಮ್ಸಂಗ್‌ನ ಎಕ್ಸಿನಾಸ್ 9820 ಪ್ರೊಸೆಸರ್ರೆà. ಇದೂ 8 ಜಿಬಿ ರ್ಯಾಮ್ ಹೊಂದಿದ್ದು, 128 ಜಿಬಿ, 512 ಜಿಬಿ ಹಾಗೂ 1 ಟಿಬಿ (1024 ಜಿಬಿ) ಆಂತರಿಕ ಸಂಗ್ರಹ ಸಾಮರ್ಥ್ಯ ಹೊಂದಿದೆ. ಹಿಂಬದಿಯಲ್ಲಿ ಎಸ್10ನಂತೆಯೇ ಮೂರು ಕ್ಯಾಮರಾ ಇವೆ. ಆದರೆ ಮುಂಬದಿಯಲ್ಲಿ 10 ಮೆ.ಪಿ. ಮತ್ತು 8 ಮೆ.ಪಿ. ಡುಯಲ್ ಲೆನ್ಸ್ ಕ್ಯಾಮರಾ ಇದೆ. ಇದರಲ್ಲಿ ಬ್ಯಾಟರಿ ಸಹ ಜಾಸ್ತಿ ಅಂದರೆ 4100 ಎಂಎಎಚ್ ಇದೆ. ಪರದೆಯ ಮೇಲೆ ಅಲ್ಟ್ರಾಸೋನಿಕ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇದೆ.
ಈಗ ಇದರ ದರ ನೋಡೋಣ! 1 ಟಿಬಿ ಆಂತರಿಕ ಸಂಗ್ರಹ ಆವೃತ್ತಿಗೆ 1.17,900 ರೂ. 512 ಜಿ.ಬಿ. ಆವೃತ್ತಿಗೆ 91,900 ರೂ. ಹಾಗೂ 128 ಜಿಬಿ ಆವೃತ್ತಿಗೆ 73,900 ರೂ.
ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್ 10ಇ: ಇದು ಮೇಲಿನೆರಡರ ಕಿರು ಆವೃತ್ತಿ. 5.8 ಇಂಚಿನ ಇನ್‌ಫಿನಿಟಿ ಓ ಅಮೋಲೆಡ್ (ಮೊಬೈಲ್‌ನ ಪರದೆಗಳ ವಿಷಯಕ್ಕೆ ಬಂದಾಗ ಅಮೋಲೆಡ್ ಪರದೆಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ದೃಶ್ಯಗಳು ಹೆಚ್ಚು ಬಣ್ಣದಲ್ಲಿ, ಶ್ರೀಮಂತವಾಗಿ ಕಾಣುತ್ತವೆ. ಈ ಡಿಸ್‌ಪ್ಲೇ ಕಡಿಮೆ ಬ್ಯಾಟರಿ ಬಳಸುತ್ತದೆ. ಇದರ ನಂತರ ಎಲ್‌ಟಿಪಿಎಸ್, ಅದಾದ ಬಳಿಕ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇಗಳನ್ನು ಮೊಬೈಲ್‌ನಲ್ಲಿ ಬಳಸುತ್ತಾರೆ.) ಡಿಸ್‌ಪ್ಲೇ ಹೊಂದಿದೆ. ಇದು 6 ಜಿಬಿ ರ್ಯಾಮ್ ಹೊಂದಿದ್ದು, ಇದರಲ್ಲಿ 128 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ ಇದೆ. ಇದರಲ್ಲೂ ಎಕ್ಸಿನಾಸ್ 9820 ಪ್ರೊಸೆಸರನ್ನೇ ಬಳಸಲಾಗಿದೆ. ಆದರೆ ಇದರಲ್ಲಿ ಹಿಂಬದಿ ಮೂರು ಕ್ಯಾಮರಾ ಇಲ್ಲ. 12 ಮೆ.ಪಿ. ವೈಡ್ ಆ್ಯಂಗಲ್ ಸೆನ್ಸರ್ ಮತ್ತು 16 ಮೆ.ಪಿ. ಫಿಕ್ಸ್‌ಡ್ ಫೋಕಸ್ ಸೆನ್ಸರ್ ಡುಯಲ್ ಲೆನ್ಸ್ ಕ್ಯಾಮರಾ ಹೊಂದಿದೆ. ಸೆಲ್ಫಿàಗಾಗಿ ಎಸ್10ನಲ್ಲಿರುವಂಥದ್ದೇ 10 ಮೆ.ಪಿ. ಕ್ಯಾಮರಾ ಇದೆ. ಇದರಲ್ಲಿ ಪರದೆಯ ಮೇಲೆ ಬೆರಳಚ್ಚು ಸ್ಕ್ಯಾನರ್ ಇಲ್ಲ. ಮಾಮೂಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಪವರ್ ಬಟನ್‌ನಲ್ಲೇ ಇದೆ. ಇದರಲ್ಲಿ 3100 ಎಂಎಎಚ್ ಕಡಿಮೆ ಬಾಳಿಕೆಯ ಬ್ಯಾಟರಿ ಇದೆ. ಇದರ ದರ 55,900 ರೂ.
ಸ್ಯಾಮ್‌ಸಂಗ್ ಎಸ್ 10 ಸರಣಿಯ ಫೋನ್‌ಗಳು
ಅಮೆಜಾನ್, ಫ್ಲಿಪ್‌ಕಾರ್ಟ್, ಪೇಟಿಎಂ ಮಾಲ್, ಟಾಟಾ ಕ್ಲಿಕ್, ಸ್ಯಾಮ್‌ಸಂಗ್ ಆನ್‌ಲೈನ್ ಶಾಪ್‌ಗ್ಳಲ್ಲಿ ಮಾ. 8ರಿಂದ ಮಾರಾಟಕ್ಕೆ ದೊರಕುತ್ತಿವೆ. ಹಾಗೂ ಆಫ್ಲೈನ್ ಮೂಲಕ ಮೊಬೈಲ್ ಮಾರಾಟದ ಅಂಗಡಿಗಳಲ್ಲೂ ದೊರಕುತ್ತಿವೆ.
– ಕೆ.ಎಸ್. ಬನಶಂಕರ ಆರಾಧ್ಯ