ಉಳಿತಾಯವೆಂಬ ನಿತ್ಯ ಸತ್ಯ

Team Udayavani, Sep 17, 2018, 4:54 PM IST

aisiri-saving.jpg

ನಾನು ಓದಲಿಲ್ಲ ಹಾಗಾಗಿ ನನ್ನ ಮಕ್ಕಳಾದರೂ ಓದಬೇಕು. ನಾನೇನೋ ಒಂದು ಚಿಕ್ಕ ಕೆಲಸ ಮಾಡಿಕೊಂಡು ಇದ್ದೇನೆ. ಆದರೆ ನನ್ನ ಮಗ ಹಾಗಿರಬಾರದು ಎಂದು ಯೋಚಿಸುವ ಹಾಗೆ, ಕುಡಿತದ ಚಟ ಇರುವ ತಂದೆಗೆ ತನ್ನ ಮಗ ಕುಡುಕನಾಗಬಾರದು ಎಂಬ ಮಹತ್ವದ ಬಯಕೆ ಇರುತ್ತದೆ. ತಮ್ಮ ಜೀವನವನ್ನು ಕೇವಲ ಖರ್ಚು ಮಾಡುವುದಲ್ಲೇ ಕಳೆಯುವವರು, ಮಕ್ಕಳಿಗೆ ನಮ್ಮ ಹಾಗೆ ಖರ್ಚು ಮಾಡಬೇಡಿ ಎಂದು ಹೇಳಬೇಕಾಗಿದೆ.  ನಾವಂತೂ ಉಳಿಸಲಿಲ್ಲ, ನೀವಾದರೂ ಉಳಿಸಿ ಎಂದು ಹೇಳುತ್ತಾರೆ. ನಾವಂತೂ ಭವಿಷ್ಯವನ್ನು ಸರಿಯಾಗಿ ಪ್ಲಾನ್‌ ಮಾಡಲಿಲ್ಲ. ಆದರೆ ನೀವು ಹಾಗೆ ಮಾಡಬೇಡಿ ಎಂದು ಬುದ್ದಿ ಹೇಳುತ್ತಾರೆ.

ಈಗ ಕಾಲ ಹೇಗೆ ಬದಲಾಗಿದೆ ಎಂದರೆ ಹಳೆಯ ಕಾಲದ ಎಷ್ಟೋ ಆರ್ಥಿಕ ವಿಷಯಗಳು ಬದಲಾವಣೆಯ ಹೊಡೆತದಿಂದ ಈಗ ಸಮರ್ಪಕ ಆಗದೇ ಇರಬಹುದು. ಬಾಡಿಗೆಗೆ ಮನೆ ಕಟ್ಟಿಸಿ ಕೊಟ್ಟರಾಯಿತು ಬಿಡಿ ಎನ್ನುವ ಮಾತು ಈಗ ಸೂಕ್ತವಾದದ್ದಲ್ಲ. ಇಳಿ ವಯಸ್ಸಿನಲ್ಲಿ ಮಕ್ಕಳು ನೋಡಿಕೊಳ್ಳುತ್ತಾರೆ ಬಿಡು ಎನ್ನುವ ನಿಶ್ಚಿಂತೆ ಈಗ ಹೆಚ್ಚಿನವರಿಗೆ ಇಲ್ಲ. ಮಕ್ಕಳ ಖರ್ಚುಗಳನ್ನು ಅವರು ನಿಭಾಯಿಸಿಕೊಳ್ಳುವುದೇ ಕಷ್ಟವಾಗಿರುವಾಗ ಅವರು ಇಳಿವಯಸ್ಸಿನ ತಂದೆ ತಾಯಿಯರನ್ನು ಆರೈಕೆ ಮಾಡುವ, ನೋಡಿಕೊಳ್ಳುವ ಜವಾಬ್ದಾರಿ ಹೊರುವುದು ವಿರಳ. ಬ್ಯಾಂಕಿನಿಂದ ಬದುಕುವ ಬಡ್ಡಿ ಹಣದಲ್ಲಿ ಬದುಕ ಬಹುದಾ? ಎಂದರೆ, ಅದು ಹೇಗೆ ಸಾಕಾಗತ್ತೆ? ಮತ್ತೆ ಮರು ಪ್ರಶ್ನೆ ಏಳುತ್ತದೆ. ಅಂದರೆ ಆಯಾ ಕಾಲದ ಅಗತ್ಯಕ್ಕೆ ಅನುಗುಣವಾಗಿ ಹಣಕಾಸು ಯೋಜನೆಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಆದರೆ ಉಳಿತಾಯ ಮಾತ್ರ ಎಲ್ಲ ಕಾಲಕ್ಕೂ ಅನ್ವಯಿಸುವ ಪರಮ ಸತ್ಯ. 
ಮೇಲ್ನೋಟಕ್ಕೆ ಉಳಿತಾಯ ಎಂದರೆ ದುಡ್ಡು ಉಳಿಸುವುದು ಎನ್ನಿಸುತ್ತದೆ. ನಿಜ ಏನೆಂದರೆ, ಉಳಿತಾಯ ಎನ್ನುವುದು ಒಂದು ಮನೋಭಾವನೆ. ಅಗತ್ಯ, ಅನಗತ್ಯ ಖರ್ಚುಗಳ ಬಗೆಗೆ ಇರುವ ಸ್ಪಷ್ಟ ಅರಿವು. ಈ ಅರಿವು ಮೂಡಲು ಮನಸ್ಸು ಹದಗೊಳ್ಳಬೇಕು. ಹದಗೊಳ್ಳುವುದು ಹೇಗೆ? ವಿವೇಕದಿಂದಲೇ ಹೊರತು ಬೇರೆ ದಾರಿ ಇಲ್ಲ. ಹಣಕಾಸಿನ ನಿರ್ವಹಣೆಯ ವಿಷಯದಲ್ಲಿಯೂ ಮನೆಯೇ ಮೊದಲ ಪಾಠ ಶಾಲೆ. ಎಷ್ಟು ಚಿಕ್ಕ ಸಂಬಳ, ಒಬ್ಬರ ದುಡಿಮೆ, ಸಣ್ಣ ವ್ಯವಹಾರ ಇದ್ದಾಗಲೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ ಎಷ್ಟೋ ಉದಾಹರಣೆಗಳಿವೆ. ಹೀಗೆ ಬರೆಯುವಾಗ ನೆನಪಾದವಳೇ ಪುಷ್ಟಲತಾ. ಹುಬ್ಬಳ್ಳಿಯಿಂದ ಬರುವಾಗ ಟ್ರೇನ್‌ನಲ್ಲಿ ಆಕೆ ಸಹ ಪ್ರಯಾಣಿಕಳು. ಸಹಜವಾಗಿ ನಮ್ಮ ಮಾತು ಕೆಲಸ, ಮನೆ, ಮಕ್ಕಳು ಎಂದು ಹೊರಳಿತು. ಪುಷ್ಪಲತಾ ಚನ್ನಪಟ್ಟಣದಲ್ಲಿ ಚಿಕ್ಕ ಫ್ಯಾನ್ಸಿ ಸ್ಟೋರ್‌ ಇಟ್ಟುಕೊಂಡಿದ್ದಾಳೆ. ಒಬ್ಬನೇ ಮಗ. ಈಗ ಮೆಡಿಕಲ್‌ ಓದುತ್ತಿದ್ದಾನೆ. ಅವನಿಗೆ ಸಿಕ್ಕಿದ್ದು ಸರ್ಕಾರಿ ಸೀಟು. ಪುಷ್ಟಲತಾ ಹೈಸ್ಕೂಲು ಮುಗಿಸಿದ್ದಾಳೆ ಅಷ್ಟೇ. ಅವಳ ಕಥೆ ಕೇಳಿ ನನ್ನೊಳಗಿನ ಪ್ರಶ್ನೆಗೆ ಅವಳೇ ಕೊಟ್ಟ ಉತ್ತರ: ಮಗ ಹುಟ್ಟಿದ ಒಂದು ವರ್ಷಕ್ಕೆ ಅವನ ಹೆಸರಿನಲ್ಲಿ, ಅವನಿಗೆ ಓದುವುದಕ್ಕೆ ಆಗುತ್ತದೆ ಎಂದು ಹಣ ಇಡುತ್ತ ಬಂದೆ. ಎಷ್ಟೇ ಕಷ್ಟ ಬಂದಾಗಲೂ ಆ ಹಣ ತೆಗೆಯಲಿಲ್ಲ. ನನ್ನ ಗೆಳತಿಯರು, ನೆಂಟರೆಲ್ಲ ಮನೆ ಕಟ್ಟಿಸಿದರು, ಬಂಗಾರ ಮಾಡಿಸಿಕೊಂಡರು. ನನಗೆ ಇವ್ಯಾವುದರ ಮೇಲೂ ಆಸೆ ಇಲ್ಲ. ಮಗ ಚೆನ್ನಾಗಿ ಓದಿ, ಒಳ್ಳೆಯ ವ್ಯಕ್ತಿಯಾಗಿ ಇರಬೇಕು. ನಾಲ್ಕು ಜನರಿಗೆ ಸಹಾಯಮಾಡಬೇಕು ಇದಿಷ್ಟೇ ಆಸೆ ನನ್ನದಾಗಿತ್ತು.  ಮಗನೂ ಚೆನ್ನಾಗಿ ಓದಿದ, ದರ ಪರಿಣಾಮವಾಗಿಯೇ ಈಗ ಮೆಡಿಕಲ್‌ ಸೇರಿದ್ದಾನೆ… ಅವಳ ಮುಖದ ಸಂತೃಪ್ತಿಯ ಹಿಂದೆ ಖಚಿತ ಗುರಿ, ಭವಿಷ್ಯದ ಬಗೆಗಿನ ಸ್ಪಷ್ಟ ಯೋಜನೆ ಎದ್ದು ಕಾಣುತ್ತಿತ್ತು. 

ಸುಧಾ ಶರ್ಮ ಚವತ್ತಿ 

ಟಾಪ್ ನ್ಯೂಸ್

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.