ಪಾಯ ಉಳಿತಾಯ


Team Udayavani, Feb 27, 2017, 2:39 PM IST

House.jpg

ಮನೆ ಕಟ್ಟುವ ಶುರುವಿನಲ್ಲಿ ಮಾಲೀಕರಿಗೆ ಹಣದ ತೊಂದರೆ ಹೆಚ್ಚಿರುವುದಿಲ್ಲ. ಇರಲಿ ಎಂದು ನಾಲ್ಕಾರು ಮಹಡಿಗೆಂದೇ ಪಾಯ ಹಾಕುವ ಜೋರಿನಲ್ಲಿ ಕೆಲವೊಮ್ಮೆ ಅನಗತ್ಯವಾಗಿ ಖರ್ಚು ಮಾಡುವುದೂ ಉಂಟು. ಮನೆಗೆ ಗಟ್ಟಿಯಾದ ಪಾಯ ಹಾಕಬೇಕು ಎಂಬುದರಲ್ಲಿ ಯಾವುದೇ ತಕರಾರು ಇಲ್ಲವಾದರೂ, ಗಟ್ಟಿಮುಟ್ಟಾಗಿರುವ ಕಡೆ ಮತ್ತಷ್ಟು ಸಿಮೆಂಟ್‌ ಕಾಂಕ್ರಿಟ್‌ ಸುರಿಯುವ ಬದಲು ಮನೆಯನ್ನು ಇತರೆ ಕಡೆಗಳಲ್ಲಿ ಮತ್ತಷ್ಟು ಗಟ್ಟಿಗೊಳ್ಳುವುದರತ್ತ ನಮ್ಮ ಚಿತ್ತ ಹರಿದರೆ ಹೆಚ್ಚು ಸೂಕ್ತ. ಕಾಲಂ ಹಾಗೂ ಫ‌ುಟಿಂಗ್‌ಗಳ ಭಾರ ಹೊರುವ ಸಾಮರ್ಥ್ಯವನ್ನು ಹೆಚ್ಚಿಸುವ ರೀತಿಯಲ್ಲಿ ಗೋಡೆಗಳ ಪಾಯವನ್ನು ಅವುಗಳ ಮೇಲೆ ಬರುವ ಲೋಡ್‌ ಲೆಕ್ಕಾಚಾರದಲ್ಲಿ ಮಾಡಿದರೆ ಮನೆ ಹೆಚ್ಚು ಸದೃಢವಾಗಿರುತ್ತದೆ. 

ನೆಲದ ಮಹಡಿಯ ಗೋಡೆಗಳಿಗೆ ಒಂದಷ್ಟು ಪಾಯ ಹಾಕುವುದು ಅನಿವಾರ್ಯ. ಅದರಲ್ಲೂ ಮನೆ ನೆಲದ ಮಟ್ಟದಿಂದ ಒಂದೆರಡು ಅಡಿ ಎತ್ತರದಲ್ಲಿದ್ದರೆ, ನಾಲ್ಕಾರು ವರಸೆ ಸೈಜು ಕಲ್ಲಿನ ಇಲ್ಲವೆ ಇಟ್ಟಿಗೆಯ ಪಾಯ ಹಾಕುವುದು ಇದ್ದದ್ದೇ. ಯಾವುದೇ ಪಾಯ ಗಟ್ಟಿಮುಟ್ಟಾದ ಮಣ್ಣಿನ ಪದರದ ಮೇಲೆ ಇರಬೇಕಾದ ಕಾರಣ. ಕಡೆ ಪಕ್ಷ ಮೂರು -ನಾಲ್ಕು ಅಡಿ ಅಗೆದು ಪಾಯ ಹಾಕಲಾಗುತ್ತದೆ. ಅಲ್ಲಿಗೆ ಗೋಡೆಗೆ ಕಲ್ಲಿನದ್ದಾದರೆ, ಐದಾರು ವರಸೆ ಪಾಯ ಬಂದಹಾಗೆ ಆಯಿತು. ಸಾಮಾನ್ಯವಾಗಿ ಕಾಲಂ ಬೀಮ್‌ ಇರುವ ಮನೆಗಳಲ್ಲಿ, ಗೋಡೆಗಳು ಸೂರಿನ ಭಾರ ಹೊರದ ಕಾರಣ, ಪಾಯದ ಅಗಲವನ್ನು ಕಡಿಮೆ ಮಾಡಲಾಗುತ್ತದೆ.  ಆದರೆ ಆಳವನ್ನು ಕಡಿಮೆ ಮಾಡಲಾಗಲ್ಲ. ಹೇಗಿದ್ದರೂ ಪಾಯ ಆಳವಾಗಿ ಇರುವುದರಿಂದ, ಅದನ್ನೇ ಒಂದು ಅಡಿಷ್ಟು ಹೆಚ್ಚುವರಿಯಾಗಿ ಅಂದರೆ ಮಾಮೂಲಿ ಒಂದೂವರೆ ಅಡಿ ಅಗಲಕ್ಕೆ ಬದಲು ಎರಡೂವರೆ ಅಡಿ ಅಗಲಕ್ಕೆ ಮಾಡಿಕೊಂಡರೆ, ಮನೆಯ ಭಾರವನ್ನು ಗೋಡೆಗಳೂ ಒಂದು ಮಟ್ಟದವರೆ ಹೊರಲು ಸಹಕಾರಿಯಾಗಿರುತ್ತದೆ.

ಈ ರೀತಿಯಾಗಿ ಗೋಡೆಯ ಪಾಯ ಹಾಗೂ ಕಾಲಂ ಫ‌ುಟಿಂಗ್‌ ಜೊತೆಜೊತೆಯಾಗಿ ಮನೆಯ ಭಾರ ಹೊರುವುದರಿಂದ ಆಗುವ ಮುಖ್ಯ ಲಾಭ- ಕಾಲಂಗಳ ಮೇಲಿನ ಹೊರೆ ಕಡಿಮೆ ಮಾಡುವುದರ ಜೊತೆಗೆ ಅವುಗಳ ಮೇಲೆ ಬರುವ ಹೆಚ್ಚುವರಿ ಖರ್ಚು ಕಡಿಮೆ ಆಗುತ್ತದೆ. ಹೇಳಿಕೇಳಿ ಕಾಲಂ ಹಾಗೂ ಅದರ ಪಾದ ಹೆಚ್ಚು ದುಬಾರಿ- ಮನೆಯ ಪಾಯದ ಖರ್ಚಿಗೆ ಹೋಲಿಸಿದರೆ, ಹಾಗಾಗಿ ಒಂದಷ್ಟು ಭಾರವನ್ನು ಗೋಡೆಯ ಪಾಯವೂ ಹೊರುವಂತೆ ಮಾಡಿದರೆ, ಸಾಕಷ್ಟು ಉಳಿತಾಯ ಮಾಡಬಹುದು.

ಕಾಲಂ ಫ‌ುಟಿಂಗ್‌ ಹಾಗೂ ಗೋಡೆಯ ಪಾಯ ಜೊತೆಯಾಗಿ ಕಾರ್ಯ ನಿರ್ವಹಿಸಲು, ಅವುಗಳನ್ನು ಸೂಕ್ತ ರೀತಿಯಲ್ಲಿ ವಿನ್ಯಾಸ ಮಾಡಬೇಕಾಗುತ್ತದೆ. ಹಾಗೆಯೇ ಒಟ್ಟೊಟ್ಟಿಗೆ ಇವೆರಡನ್ನೂ ಕಟ್ಟಿದರೆ ಉತ್ತಮ. ಸಾಮಾನ್ಯವಾಗಿ ಮನೆಯ ಕಾಲಂ ಹಾಗೂ ಫ‌ುಟಿಂಗ್‌ಗೆ ಪಾಯ ತೋಡಿ ದಪ್ಪಜಲ್ಲಿ ಹಾಕಿ, ಕಂಬಿಯ ಮ್ಯಾಟ್‌ ಜೊತೆಗೆ ಕಾಲಂ ಕಾಂಕ್ರಿಟ್‌ ಹಾಕಿದ ನಂತರ ಗೋಡೆಯ ಪಾಯವನ್ನು ತೋಡಲಾಗುತ್ತದೆ. ಕಾಲಂ ಹಾಗೂ ಗೋಡೆಯ ಪಾಯಗಳು ಬೆಸೆಯಲು, ಪ್ಲಿಂತ್‌ ಮಟ್ಟಕ್ಕೆ ಕಾಲಂ ಕಾಂಕ್ರಿಟ್‌ ನಿಲ್ಲಿಸಿಕೊಂಡು, ಗೋಡೆಯ ಪಾಯವನ್ನು ಇದೇ ಮಟ್ಟಕ್ಕೆ ತರಬೇಕು. ನಂತರ ಪ್ಲಿಂತ್‌ ಬೀಮ್‌ ಹಾಕಿ ಕ್ಯೂರಿಂಗ್‌ ಆದಮೇಲೆ ಮೇಲಿನ ಕಾರ್ಯ ಶುರುಮಾಡುವುದು ಉತ್ತಮ. ಹೀಗೆ ಮಾಡುವುದರಿಂದ ಕಾಲಂಗಳ ಮೇಲೆ ಹೆಚ್ಚುವರಿ ಭಾರ ಬಂದರೂ, ಗೋಡೆಗಳ ಪಾಯವೂ ಜೊತೆಜೊತೆಯಾಗಿ ಕಾರ್ಯ ನಿರ್ವಸುವುದರಿಂದ ಹೆಚ್ಚು ಸಮರ್ಥವಾಗಿ ಲೋಡ್‌ ಹೊರಲು ಸಾಧ್ಯ.

ಪಾರ್ಟಿಷನ್‌ ಗೋಡೆಗಳ ಪಾಯ
ಮನೆಯ ಗೋಡೆಗಳು ಸಾಮಾನ್ಯವಾಗಿ ಅಡ್ಡಕ್ಕೆ ಹಾಗೂ ಉದ್ದಕ್ಕೆ ಇದ್ದು, ಇವೆರಡರಲ್ಲಿ ಒಂದಾದರೂ ನೆಲಮಟ್ಟದಿಂದ ಮೇಲು ಮಹಡಿಯವರೆಗೂ ಮುಂದುವರಿದರೆ, ಈ ಗೋಡೆಗಳ ಭಾರದಲ್ಲಿ ಬಹುಪಾಲು ಅವುಗಳಿಗೆ ಹಾಕುವ ಪಾಯದ ಮೇಲೆಯೇ ಬರುವಂತೆಯೂ ಮಾಡಬಹುದು. ನಾನಾ ಕಾರಣಗಳಿಂದಾಗಿ, ಅದರಲ್ಲೂ ಮುಖ್ಯವಾಗಿ ನೆಲಮಹಡಿಗೆ ಆರ್‌ಸಿಸಿ ಸೂರು ಹಾಕದೆ ಇರುವುದರಿಂದ, ಅನಿವಾರ್ಯವಾಗಿ ಪಾರ್ಟಿಷನ್‌ ಗೋಡೆಗಳಿಗೂ ಒಂದಷ್ಟು ಪಾಯ ಹಾಕಲಾಗುತ್ತದೆ. ಇದೇ ಪಾಯವನ್ನು ಸ್ವಲ್ಪ ಅಂದರೆ ಕಡೇಪಕ್ಷ ಆರು ಇಂಚಿನಷ್ಟಾದರೂ ಹೆಚ್ಚಿಸಿ, ಒಂದೂವರೆ ಅಡಿ ಅಗಲಕ್ಕೆ ಬದಲಾಗಿ ಎರಡು ಅಡಿಗಳಷ್ಟು ಹಾಕಿದರೆ, ಇವೂ ಕೂಡ ಮನೆಯ ಹೊರೆಯನ್ನು ಸಾಕಷ್ಟು ಇಳಿಸಲು ಸಯಾಯಕಾರಿ. 

ಸೈಜ್‌ ಕಲ್ಲಿನ ಪಾಯವ ನಾಲ್ಕಾರು ವರಸೆಗಿಂತ ಹೆಚ್ಚಿದ್ದರೆ, ಅವುಗಳ ಮೇಲೆ ಬರುವ ಭಾರದ ಲೆಕ್ಕಾಚಾರ ಆಧರಿಸಿ, ಪ್ರತಿ ಮೂರು ಇಲ್ಲವೆ ನಾಲ್ಕು ವರಸೆಗಳಿಗೆ ಮೂರು ಇಂಚಿನ ಕಾಂಕ್ರಿಟ್‌ ಪದರ ಹಾಕಿದರೆ, ಅದರ ಭಾರ ಹೊರುವ ಸಾಮರ್ಥ್ಯ ಹೆಚ್ಚಾಗುತ್ತದೆ. ಹೀಗೆ ಹಾಕುವ ಮುಖ್ಯ ಉದ್ದೇಶ- ಕಲ್ಲಿನ ವರಸೆಗಳು ಮುಂದೆ ಹಾಗೂ ಹಿಂದೆ ಸದೃಢವಾಗಿದ್ದು, ಮಧ್ಯಭಾಗದಲ್ಲಿ ಬೌಲ್ಡರ್‌ ಕಲ್ಲು ಇತ್ಯಾದಿಯಿಂದ ತುಂಬಲ್ಲಪಟ್ಟು, ಕೆಲವೊಮ್ಮೆ ಠೊಳ್ಳಾಗಿ ಇರುವುದೂ ಉಂಟು. ಒಂದು ಪದರ ಕಾಂಕ್ರಿಟ್‌ ಹಾಕಿದರೆ, ಈ ಎಲ್ಲ ನ್ಯೂನತೆಗಳನ್ನು ಸರಿದೂಗಿಸಿಕೊಂಡು ಹೋಗಲು ಸಹಾಯಕಾರಿ. ಕಲ್ಲಿನ ಪಾಯದ ಎರಡೂ ಮುಖಗಳು ಬೆಸೆದುಕೊಳ್ಳಲು, ಪ್ರತಿ ಮೂರು ನಾಲ್ಕು ಕಲ್ಲಿಗೆ ಒಂದೊಂದು ಬಾಂಡ್‌ ಕಲ್ಲನ್ನು ಹಾಕಲು ಮರೆಯಬಾರದು.
 
ಈ ಕಲ್ಲುಗಳು ಸಾಮಾನ್ಯವಾಗಿ ಒಂದೂವರೆ ಅಡಿಯಿಂದ ಎರಡು ಅಡಿ ಉದ್ದದ್ದು, ಪಾಯದ ಎರಡೂ ಬದಿಗಳನ್ನು ಬೆಸೆಯಲು ಉಪಯುಕ್ತವಾಗುತ್ತದೆ. ಕೆಲವೊಮ್ಮೆ ಎರಡು ಅಡಿ ಉದ್ದದ ಕಲ್ಲು ಬಾಂಡ್‌ ಮಾಡಲು ಸಿಗದಿದ್ದರೆ, “ಕತ್ತರಿ ಬಾಂಡ್‌’ ಅಂದರೆ ಎರಡು ಬಾಂಡ್‌ ಕಲ್ಲುಗಳು ಪಕ್ಕಪಕ್ಕದಲ್ಲಿ, ಒಂದೊಂದು ಒಂದೊಂದು ಮುಖದಿಂದ ಬಂದು ಬೆಸೆಯುವಂತೆ ಹಾಕಿ, ಕಲ್ಲಿನ ಪಾಯವನ್ನು ಬಲಗೊಳಿಸಬಹುದು. 

ಲೋಡ್‌ ಬೇರಿಂಗ್‌ ಗೋಡೆಯ ಇತರೆ ಲಾಭಗಳು
ಸಾಮಾನ್ಯವಾಗಿ ಕಾಲಂ ಬೀಮ್‌ ಸ್ಟ್ರಕ್ಚರ್‌ಗಳಲ್ಲಿ ಕಾಟಾಚಾರಕ್ಕೆ ಎಂಬಂತೆ ಗೋಡೆಗಳಿಗೆ ಪಾಯವನ್ನು ಹಾಕಲಾಗುತ್ತದೆ. ಆದರೆ ಇವೂ ಕೂಡ ಒಂದಷ್ಟು ಭಾರ ಹೊರುತ್ತದೆ ಎಂದಾದರೆ, ಅವುಗಳನ್ನೂ ಕೂಡ ಹೆಚ್ಚುವರಿ ಕಾಳಜಿಯಿಂದ ಮಾಡಲಾಗುತ್ತದೆ. ಕೆಲವೊಮ್ಮೆ “ಹೇಗಿದ್ದರೂ ಭಾರಹೊರಲ್ಲ’ ಎಂದು ತೀರ ಕಡಿಮೆ ಅಂದರೆ ಮಣ್ಣಿನ ಮಟ್ಟದಿಂದ ಕೆಳಗೆ ಒಂದೆರಡು ಅಡಿ ಮಾತ್ರ ಪಾಯ ಹಾಕಿದರೆ, ಅದರ ಕೆಳಗಿನಿಂದ ಇಲಿ ಹೆಗ್ಗಣಗಳು ಕೊರೆದುಕೊಂಡು ಒಳಬಂದು, ಬಿಲಮಾಡಿಕೊಂಡರೆ ಪಾಯಕ್ಕೆ ಹಾನಿ ಆಗುವುದರ ಜೊತೆಗೆ ನೆಲಮಟ್ಟದ ಹಾಸುಗಳು ಸಡಿಲವಾಗಿ, ನಡೆದಾಡಿದರೆ “ಡಬ್‌ ಡಬ್‌’ ಎಂದು ಶಬ್ಧ ಬರಲು ಶುರುಮಾಡಬಹುದು. ಅದೇ ರೀತಿಯಲ್ಲಿ ಗೆದ್ದಲು ಹಾಗೂ ಇತರೆ ಕ್ರಿಮಿ ಕೀಟಗಳಿಗೆ ಮನೆಯ ಕೆಳಗೆ ಪ್ರವೇಶ ಸುಲಭದಲ್ಲಿ ನೀಡಿದಂತೆ ಆಗುತ್ತದೆ. ಮಳೆ ನೀರಿನಿಂದ ಉಂಟಾಗುವ ಹಾಗೂ ನೆಲದಿಂದ ಮೇಲೇಳುವ ತೇವವೂ ಗೋಡೆ ಹಾಗೂ ನೆಲಹಾಸನ್ನು ಹಾನಿಮಾಡಬಹುದು. ಇದೆಲ್ಲವನ್ನೂ ತಪ್ಪಿಸಲು ಕಡೆಪಕ್ಷ ಮನೆಯ ಹೊರಗಿನ ಗೋಡೆಗಳಿಗೆ ಸಾಕಷ್ಟು ಆಳದ ಪಾಯವನ್ನು ಹಾಕುವುದು ಅನಿವಾರ್ಯ. ಇದನೇ° ಸ್ವಲ್ಪ ಹಿಗ್ಗಿಸಿದರೆ, ಮನೆಯ ಎಲ್ಲಹೊರೆಯೂ ಕಾಲಂಗಳೇ ಹೊರುವುದು ತಪ್ಪುವುದರೊಂದಿಗೆ, ದೀರ್ಘ‌ಕಾಲ ಬಾಳುವ ಮನೆಯೂ ನಮ್ಮದಾಗುತ್ತದೆ.

ಹೆಚ್ಚಿನ ಮಾತಿಗೆ ಫೋನ್‌ 98441 32826 

– ಆರ್ಕಿಟೆಕ್ಟ್ ಕೆ ಜಯರಾಮ್‌

ಟಾಪ್ ನ್ಯೂಸ್

Delhi: ಆಮ್‌ ಆದ್ಮಿಯ ಮಾಜಿ ಶಾಸಕ ಸುಖ್ಬೀರ್‌ ದಲಾಲ್‌ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ

Delhi: ಆಮ್‌ ಆದ್ಮಿಯ ಮಾಜಿ ಶಾಸಕ ಸುಖ್ಬೀರ್‌ ದಲಾಲ್‌ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾವು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Arrest Warrant Against Robin Uthappa

Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್;‌ ಜೈಲು ಪಾಲಾಗ್ತಾರಾ ಕ್ರಿಕೆಟಿಗ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Why is there a hesitation to name the M. Chinnaswamy stand after Shantha Rangaswamy? What is the controversy?

M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

6(1

Kundapura: ಕಸದಿಂದಲೇ ಕಲಾಕೃತಿ; ಕಾಲ್ತೋಡಿನಲ್ಲೊಂದು ಸುಂದರ ಅಂಗನವಾಡಿ

Delhi: ಆಮ್‌ ಆದ್ಮಿಯ ಮಾಜಿ ಶಾಸಕ ಸುಖ್ಬೀರ್‌ ದಲಾಲ್‌ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ

Delhi: ಆಮ್‌ ಆದ್ಮಿಯ ಮಾಜಿ ಶಾಸಕ ಸುಖ್ಬೀರ್‌ ದಲಾಲ್‌ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ

5(1

ಹೆಬ್ಬಾಗಿಲಿನಲ್ಲಿ ಆರಂಭವಾದ ಶಾಲೆ ಇಂದು ಈ ಊರ ಮಕ್ಕಳ ಪಾಲಿನ ಶಿಕ್ಷಣದ ಹೆಬ್ಬಾಗಿಲೇ ಆಗಿದೆ

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

4

Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.