ಹೊಲದಲ್ಲಿ ಗರಿಕೆ ಕಳೆ
ಕೃಷಿ ಡಾಕ್ಟರ್; ಸಮಸ್ಯೆಗೊಂದು ಪರಿಹಾರ
Team Udayavani, Jan 6, 2020, 4:00 AM IST
ನಮ್ಮ ಹೊಲದಲ್ಲಿ ಗರಿಕೆ (ಜೇಕು) ಸಮಸ್ಯೆ ತುಂಬಾ ದಿನಗಳಿಂದ ಇದೆ. ಎಷ್ಟೆ ಉಳುಮೆ ಮಾಡಿದರೂ ಹೋಗಲಾಡಿಸಲು ಆಗುತ್ತಿಲ್ಲ.
– ನಾಗರಾಜ ಗೋಣೆಪ್ಪನವರ, ಹಡಗಲಿ, ಬಳ್ಳಾರಿ
ಪರಿಹಾರ-
ಕಳೆ ಮುಖದಲ್ಲಿದ್ದರೆ ಚೆನ್ನ, ಆದರೆ ಹೊಲದಲ್ಲಿ ಬೆಳೆವ ಕಳೆಯಿಂದ ನಷ್ಟವೇ ಹೆಚ್ಚು. “ಗರಿಕೆ’ ಬಹು ಸಮಸ್ಯಾತ್ಮಕ ಬಹುವಾರ್ಷಿಕ ಕಳೆಯಾಗಿದೆ. ಬೀಜಗಳಿಂದ ನೆಲದೊಳಗಿನ ಕಾಂಡದ ತುಂಡುಗಳಿಂದಲೂ, ಗರಿಕೆ ಬೆಳೆಯುವುದು. ಆದುದರಿಂದ ಉಳುಮೆಯಂಥ ಬೇಸಾಯ ಕ್ರಮಗಳಿಂದ ಅದರ ಹತೋಟಿ ಕಷ್ಟ. ಈ ಕ್ರಮಗಳಿಂದ ತಾತ್ಕಾಲಿಕ ಮುಕ್ತಿ ದೊರೆಯುತ್ತದೆ. ಕೆಲ ಸಮಯದ ನಂತರ ಗರಿಕೆ ಮತ್ತೆ ಬೆಳೆಯುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಎಂದರೆ ಕೀಟನಾಶಕ ಸಿಂಪಡಣೆ. ಅದೂ ಮೂರು ಬಾರಿ ಮಾಡಬೇಕಾಗುತ್ತದೆ. ಈ ಕಳೆ (ಕರಿಕೆ/ ಜೇಕು) ಹಸಿರಾಗಿದ್ದಾಗ ಪ್ರತಿ ಲೀಟರ್ ನೀರಿಗೆ 12- 15 ಮಿ.ಲೀ. ಗ್ಲೆ„ಫೋಸೇಟ್ 41 ಇ.ಸಿ. ಅಥವಾ ಪ್ಯಾರಾಕ್ಟಾಟ್ 24 ಇ.ಸಿ. ಹಾಗೂ 20 ಗ್ರಾಂ. ಯೂರಿಯಾವನ್ನು ಬೆರೆಸಿ ಡಬ್ಲೂ ಎಫ್.ಎನ್.40 ಅಥವಾ ವಿ.ಎಲ್.ವಿ 200 ನಾಝಲ್‌ಅನ್ನು ಕೈಚಾಲಿತ ಪಂಪಿನಿಂದ ಮೂರು ಬಾರಿ ಸಿಂಪರಣೆ ಮಾಡಬೇಕು.
ಮೊದಲನೇ ಸಿಂಪರಣೆಯನ್ನು ಮುಂಗಾರು ಮಳೆಯಾದ ನಂತರ ಹೆಚ್ಚು ಹಸುರಾಗಿದ್ದಾಗ, ಗರಿಕೆ ಮಾತ್ರ ತೊಯುವಂತೆ ಚೆನ್ನಾಗಿ ಸಿಂಪಡಣೆ ಮಾಡಬೇಕು. ಎರಡನೇ ಸಿಂಪರಣೆಯು ಮೊದಲನೆಯ ಸಿಂಪರಣೆಯನ್ನು 3 ತಿಂಗಳ ನಂತರ (90 ದಿನಗಳು) ಪುನಃ ಚಿಗುರಿ ಹುಲುಸಾಗಿ ಬೆಳೆದ ಕರಿಕೆಯ ಮೇಲೆ ಮಾತ್ರ ಸಿಂಪಡಣೆ ಮಾಡಬೇಕು.
ಮೂರನೆ ಹಾಗೂ ಕೊನೆಯ ಸಿಂಪಡಣೆಯನ್ನು ಪುನಃ ಚಿಗುರಿ ಹುಲುಸಾಗಿ ಬೆಳೆದ ಕರಿಕೆಯ ಮೇಲೆ ಮಾತ್ರ ಸಿಂಪಡಣೆ ಮಾಡಬೇಕು. ಕಳೆನಾಶಕ ಸಿಂಪರಣೆ ಮಾಡಿದ 15ರಿಂದ 20 ದಿನಗಳ ನಂತರ ಯಾವುದೇ ಬೆಳೆಯನ್ನು ಬೆಳೆಯಬಹುದು. ಈ ಸಿಂಪಡಣೆ ಮಾಡುವಾಗ ಯಾವುದೇ ಬೆಳೆಗಳಿಗೆ ತಗುಲದಂತೆ ಎಚ್ಚರಿಕೆ ವಹಿಸಬೇಕು. ನಂತರ ಸಿಂಪಡಕವನ್ನು ಚೆನ್ನಾಗಿ ತೊಳೆದು ಇಡಬೇಕು. ಕಳೆನಾಶಕಗಳನ್ನು ಸಿಂಪಡಣೆ ಮಾಡಲು ಪ್ರತ್ಯೇಕ ಸಿಂಪಡಕ ಇಡುವುದು ಸೂಕ್ತ.
ಸಂಪರ್ಕ: [email protected]
– ಡಾ. ಅಶೋಕ್ ಪಿ., ಹಿರಿಯ ಕೃಷಿ ವಿಜ್ಞಾನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.