ಸೀಬೆ ಕೃಷಿಯೇ ಮೇರು
Team Udayavani, Dec 9, 2019, 6:01 AM IST
ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿರುವ ಸದಾಶಿವ, ಎರೆಹುಳು ಗೊಬ್ಬರ ತಯಾರಿಸುತ್ತಾರೆ. ಜೀವಸಾರ ಘಟಕದಿಂದ ಪ್ರತಿ ವಾರ ಹನಿ ನೀರಾವರಿ ಮೂಲಕ ಸಾವಯವ ಗೊಬ್ಬರ ನೀಡುತ್ತಾರೆ. ಹಲವಾರು ರೈತರು ಹಾಗೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇವರ ತೋಟಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಹೋಗಿದ್ದಾರೆ.
ಕಳೆದ ಮೂರ್‍ನಾಲ್ಕು ವರ್ಷಗಳಿಂದ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡು ಹೆಚ್ಚಿನ ಆದಾಯ ಪಡೆಯುತ್ತಿರುವ ರಬಕವಿ- ಬನಹಟ್ಟಿ ತಾಲ್ಲೂಕಿನ ಜಗದಾಳ ಗ್ರಾಮದ ರೈತ ಸದಾಶಿವ ಬಂಗಿ, ಸಾವಯವ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಇತರೆ ರೈತರಿಗೆ ಮಾದರಿಯಾಗಿದ್ದಾರೆ. 47 ಎಕರೆ ಜಮೀನು ಹೊಂದಿರುವ ಅವರು, ಕೃಷಿಯಾಧಾರಿತ ಕುಟುಂಬದಿಂದ ಬಂದವರು. ಒಂದೇ ಮಾದರಿಯ ಕೃಷಿಗೆ ಜೋತುಬೀಳದೆ, ಹಲವಾರು ಮಾದರಿಗಳಲ್ಲಿ ಬೆಳೆ ಬೆಳೆಯುತ್ತಿರುವುದು ಅವರ ವಿಶೇಷ.
ಪೇರು ಕೃಷಿ: ತಮ್ಮ ಒಂದು ಎಕರೆ ಜಮೀನಿನಲ್ಲಿ ಲಕನೌ- 48 ತಳಿಯ ಪೇರು ಗಿಡಗಳನ್ನು ಸಾಲಿನಿಂದ ಸಾಲಿಗೆ 12×6 ರಂತೆ 480 ಗಿಡಗಳನ್ನು ಬೆಳೆಸಿದ್ದಾರೆ. ಇದಕ್ಕೆ ತಿಪ್ಪೆಗೊಬ್ಬರ, ಬಯೋಡೆ„ಜೆಸ್ಟರ್ ಮೂಲಕ ಜೀವರಸ ಸಾರವನ್ನು ನೀಡಲಾಗುತ್ತದೆ. ಅಲ್ಲದೆ 50 ಕೆ.ಜಿ. ಲವಳಸರ್ 200 ಲೀ. ನೀರಿನಲ್ಲಿ ಕಳೆಯಲು ಇಟ್ಟು ಡ್ರಿಪ್ ಮೂಲಕ ನೀಡಲಾಗುತ್ತಿದೆ. ನುಗ್ಗೆ ತಪ್ಪಲನ್ನು 200 ಲೀ. ನೀರಿನಲ್ಲಿ ಕೊಳೆಸಿ ನೀಡಲಾಗುತ್ತಿದ್ದು ಇದರಿಂದ ಗಿಡಗಳಿಗೆ ಅಗತ್ಯ ಪೋಷಕಾಂಶವೂ, ಅದರ ಫಲವಾಗಿ ಹೆಚ್ಚು ಇಳುವರಿಯೂ ದೊರೆಯುತ್ತದೆ.
ವರ್ಷದ ಹಿಂದಷ್ಟೇ ನಾಟಿ ಮಾಡಿದ್ದ ಗಿಡಗಳು ಈಗ ಫಲ ನೀಡಲು ಆರಂಭಿಸಿರುವುದೇ ಅದಕ್ಕೆ ಸಾಕ್ಷಿ. ಸದ್ಯ, ವಾರಕ್ಕೆ 10ರಿಂದ 20 ಕೆ.ಜಿ. ಇಳುವರಿ ದೊರೆಯುತ್ತಿದ್ದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. 27 ಜನರ ಅವಿಭಕ್ತ ಕುಟುಂಬದ ಸಸದ್ಯರಾಗಿರುವ ಇವರಿಗೆ, ಪತ್ನಿ ಸುವರ್ಣಾ ಬಂಗಿ ಜೊತೆಯಾಗಿದ್ದಾರೆ. ತೋಟದಲ್ಲಿ ಬೆಳೆದ ಬೆಳೆಗಳು, ದವಸ ಧಾನ್ಯ ಮತ್ತು ತರಕಾರಿ ಉತ್ಪನ್ನಗಳನ್ನು ಸ್ಥಳೀಯ ಹಾಗೂ ದೂರದೂರಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.
ಪ್ರೇರಣೆ ತುಂಬುತ್ತಿದ್ದಾರೆ: ಎಲ್ಲ ಬೆಳೆಗಳಿಗೂ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿರುವ ಸದಾಶಿವ, ಎರೆಹುಳು ಗೊಬ್ಬರ ತಯಾರಿಸುತ್ತಾರೆ. ಜೀವಸಾರ ಘಟಕದಿಂದ ಪ್ರತಿ ವಾರ ಹನಿ ನೀರಾವರಿ ಮೂಲಕ ಸಾವಯವ ಗೊಬ್ಬರ ನೀಡುತ್ತಾರೆ. ಕೃಷಿ ಅ ಧಿಕಾರಿಗಳು, ಕೃಷಿ ತರಬೇತಿ ಕೇಂದ್ರದವರು, ಹಲವಾರು ರೈತರು ಹಾಗೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇವರ ತೋಟಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಹೋಗಿದ್ದಾರೆ. ಯುವಕರು ಆಧುನಿಕತೆಯತ್ತ ವಾಲುತ್ತ ಕೃಷಿಯನ್ನು ಮರೆಯುತ್ತಿರುವ ಇಂದಿನ ದಿನಗಳಲ್ಲಿ ಕೃಷಿಯನ್ನೇ ಬದುಕಾಗಿಸಿಕೊಂಡಿರುವ ಸದಾಶಿವ ಬಂಗಿಯವರ ಪ್ರಯತ್ನ ಮೆಚ್ಚುವಂಥದ್ದು.
ತೋಟದಲ್ಲಿ ಏನುಂಟು, ಏನಿಲ್ಲ?: ಕೃಷಿಯಲ್ಲಿ ಆಧುನಿಕತೆಯನ್ನು ಮೈಗೂಡಿಸಿಕೊಂಡು ಅಂತರ ಬೆಳೆಯಾಗಿ ವಿವಿಧ ತೋಟಗಾರಿಕಾ ಬೆಳೆಗಳನ್ನು ಬೆಳೆಯುವುದರ ಮೂಲಕ ಯಾವ ರೀತಿ ಲಾಭ ಗಳಿಸಬಹುದು ಎಂಬುದನ್ನು ಬಂಗಿಯವರು ತೋರಿಸಿಕೊಟ್ಟಿದ್ದಾರೆ. ಕಬ್ಬು, ಅರಿಶಿನದ ಜೊತೆ ಮಿಶ್ರ ಬೆಳೆಗಳಾಗಿ ಬದನೆಕಾಯಿ, ಹೂಕೋಸು, ಎಲೆಕೋಸು, ಪಾಲಕ್, ಮೆಂತ್ಯೆ, ಕೊತ್ತಂಬರಿ, ಮೆಣಸಿನಕಾಯಿ, ಸಬ್ಬಸಗಿ ಪಲ್ಲೆ, ಶೇಂಗಾ, ನೀರುಳ್ಳಿ, ರಾಜಗಿರಿ ಪಲ್ಲೆ, ಸೌತೆಕಾಯಿ, ಕಲ್ಲಂಗಡಿ, ಗಜ್ಜರಿ, ಗೆಣಸು, ತೋಟಗಾರಿಕಾ ಬೆಳೆಗಳಾದ ಶುಂಠಿ, ದ್ರಾಕ್ಷಿ, ಪಪ್ಪಾಯಿ, ಚಿಕ್ಕು, ರಾಮಫಲ, ಸೀತಾಫಲ, ಅಂಜೂರ, ಮೂಸಂಬಿ, ಬಾರೆ ಹಣ್ಣು , ಮಾವು, ಪೇರಲ, ನೆಲ್ಲಿ , ತೆಂಗು ಗಿಡ ಬೆಳೆಸಿದ್ದಾರೆ. ಸಾವಯವ ಕೃಷಿಗೆ ಪೂರಕವಾಗುವ ನಿಟ್ಟಿನಲ್ಲಿ 8 ಎಮ್ಮೆ, 2 ಆಕಳು, 3 ಆಡುಗಳನ್ನು ಸಾಕುತ್ತಿದ್ದಾರೆ.
* ಕಿರಣ ಶ್ರೀಶೈಲ ಆಳಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.