ಹೊಲಿಗೆ ಕೆಲಸ ಹೊಟ್ಟೆ ತುಂಬಿಸಿತು…
Team Udayavani, Mar 22, 2021, 6:44 PM IST
ಕೋವಿಡ್ ಸಮಯ ನಮಗೂ ಸಹ ಸಾಕಷ್ಟು ತೊಂದರೆಯಾಯಿತು. ನಮ್ಮದು ಐಸ್ ಕ್ರೀಮ್ ಮಾಡಿ ಮಾರುವ ಬಿಸಿನೆಸ್ ಆದ ಕಾರಣ,ಕೋವಿಡ್ ಕಳೆದ ನಂತರವೂ ನಮ್ಮ ಕಷ್ಟಗಳ ಸರಮಾಲೆ ಮುಂದುವರಿಯಿತು.
ಇದರ ನಡುವೆ,ನನ್ನ ಯಜಮಾನರಿಗೆ ಅಪಘಾತವಾಗಿ ಅವರ ಚಿಕಿತ್ಸೆಗೆ ಸಾಕಷ್ಟು ಹಣ ಬೇಕಾಯಿತು. ಮಗಳು 10ನೇ ತರಗತಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು.ಅವಳ ಮುಂದಿನ ಶಿಕ್ಷಣಕ್ಕೆ ಹಣ ಹೊಂದಿಸಲೇಬೇಕಿತ್ತು. ಇಂಥ ಸಂದರ್ಭದಲ್ಲಿ ನನ್ನ ಕೈ ಹಿಡಿದದ್ದು ಟೈಲರಿಂಗ್ ವಿದ್ಯೆ ಮತ್ತು ಮಹಿಳಾಮಾರುಕಟ್ಟೆ- ಹೀಗೆನ್ನುತ್ತಲೇ ತಮ್ಮಹೊಸ ಸಾಹಸದ ಬಗ್ಗೆ ಹೇಳುತ್ತಾ ಹೋದರು ಛಾಯಾ ಮಹಾಲೆ.
ಚಿಕ್ಕ ವಯಸ್ಸಿನಿಂದಲೇ ಟೈಲರಿಂಗ್‌ಮಾಡಿ ಗೊತ್ತಿತ್ತು. ಐಸ್ ಕ್ರೀಮ್‌ಬಿಸಿನೆಸ್ ಮುಚ್ಚಿಹೋದ ಕಾರಣ,ಮನೆಯ ಸುತ್ತಮುತ್ತಲಿನವರಿಗೆ ಸೀರೆ,ಬಟ್ಟೆಯ ಕವರ್‌ಗಳನ್ನು ಹೊಲೆದುಕೊಡಲು ಶುರು ಮಾಡಿದೆ. ಅಷ್ಟರಲ್ಲಿಸ್ನೇಹಿತೆಯೊಬ್ಬರು ನನ್ನನ್ನು ಮಹಿಳಾಮಾರುಕಟ್ಟೆ ಗುಂಪಿಗೆ ಸೇರಿಸಿದರು. ನಾನು ಹೊಲೆದಿದ್ದ 3 ಸೀರೆ ಕವರ್‌ಗಳ ಫೋಟೋ ತೆಗೆದು ಆ ಗುಂಪಿನಲ್ಲಿ ಹಾಕಿದೆ. ನೋಡು ನೋಡುತ್ತಿದಂತೆಯೇ ಆರ್ಡರ್‌ಗಳು ಬರಲು ಪ್ರಾರಂಭವಾದವು. 25 ಸೀರೆ ಕವರ್‌ಗಳನ್ನು ಹೊಲೆದುಕೊಡುವಂತೆ ಕೇಳಿದಾಗ, ಹಗಲು ರಾತ್ರಿ ಹೊಲೆದು, 2 ದಿನಗಳಲ್ಲಿಯೇ ಕೊಟ್ಟೆ. ಅವರು ಹಾಕಿದ ಪ್ರೋತ್ಸಾಹದಾಯಕ ವಿಮರ್ಶೆಯಿಂದ ನನಗೆ ಮೊದಲ ತಿಂಗಳಲ್ಲೇ, 1000 ಆರ್ಡರ್ಸ್ ಬಂದವು. ನಾನು ಒಬ್ಬಳೇ ಹೊಲೆಯುತ್ತಿದ್ದ ಕಾರಣ, ಎಷ್ಟೋ ರಾತ್ರಿ 3 ಗಂಟೆಯವರೆಗೂ ಹೊಲೆದು ಆರ್ಡರ್ಸ್ ಪೂರೈಸಿದ್ದಿದೆ.
ಮಹಿಳಾ ಮಾರುಕಟ್ಟೆಯ ಕಾರಣದಿಂದ ನಾನು ಹೊಲೆದ ಸೀರೆ ಕವರ್‌ಗಳು ಮತ್ತು ಚೀಲಗಳು ಅಮೇರಿಕಾ, ಜಪಾನ್,ಇಂಗ್ಲೆಂಡ್, ಜರ್ಮನಿಗೆ ಪಯಣ ಬೆಳೆಸಿವೆ. ಕೆಲವೇ ವರ್ಷಗಳ ಹಿಂದೆರಾತ್ರಿ 3 ಗಂಟೆಯ ತನಕ ಒಬ್ಬಳೇಕೂತು ಹೊಲೆಯುತ್ತಿದ್ದ ನಾನು,ಇಂದು 4 ಜನರಿಗೆ ಕೆಲಸ ಕೊಟ್ಟು, ಅವರಿಗೆ ಸಂಬಳ ಕೊಡುವ ಮಟ್ಟಕ್ಕೆ ಬೆಳೆದಿದ್ದೇನೆಂದರೆ ಅದಕ್ಕೆ ನನ್ನಬೆನ್ನೆಲುಬಾಗಿ ನಿಂತು, ನನ್ನನ್ನು ಪ್ರೋತ್ಸಾಹಿಸಿ ಬೆಳೆಸಿದ ನನ್ನಕುಟುಂಬದವರು, ನನ್ನ ಮಹಿಳಾಮಾರುಕಟ್ಟೆ, ಅದರ ಅಡ್ಮಿನ್‌ಗಳು ಮತ್ತು ನನ್ನ ಮೇಲೆ ನಂಬಿಕೆಯಿಟ್ಟ ಗ್ರಾಹಕರು. ಆನ್‌ಲೈನ್ ವ್ಯಾಪಾರದಲ್ಲಿ ಮೋಸವಾಗುತ್ತದೆ ಎಂದು ಎಷ್ಟೋಬಾರಿ ಕೇಳಿದ್ದೆ, ಆದರೆ, ನನಗೆ ಸಿಕ್ಕ ಗ್ರಾಹಕರಲ್ಲಿ ಯಾರೊಬ್ಬರೂ ಸಹನನಗೆ ಒಂದೇ ಒಂದು ಪೈಸೆಯ ಮೋಸ ಮಾಡಿಲ್ಲ. ಬದಲಾಗಿ, ಸರಿಯಾದ ಸಮಯಕ್ಕೆ ಹಣ ಕಳುಹಿಸಿದ್ದಾರೆ.
ಮೂರು ಸೀರೆ ಕವರ್‌ಗಳಮಾರಾಟದಿಂದ ಪ್ರಾರಂಭವಾದ ನನ್ನ ಗೃಹ ಉದ್ಯಮದ ಪಯಣ, ಇಂದು ಮುಂದಿನ ಜೂನ್ ವರೆಗೆ ಬುಕಿಂಗ್ಸ್ ಇರುವ ಮಟ್ಟಕ್ಕೆ ಬೆಳೆದಿದೆ.
-ರೋಹಿಣಿ ರಾಮ್ ಶಶಿಧರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ
Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್ ನೋಟಿಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.