ಸೈಡ್ ನೋಟ್; ನವತಾರೆಗಳ ಬಿಡುವಿನ ಬಿಝಿನೆಸ್
Team Udayavani, Sep 9, 2019, 5:01 AM IST
ಬೆಳ್ಳಿ ಪರದೆಯ ಮೇಲೆ, ಕಾರ್ಯಕ್ರಮಗಳ ವೇದಿಕೆಯಲ್ಲಿ ಹೀರೋಗಳಾಗಿ ಮಿಂಚುವುದು ಸುಲಭ ಮತ್ತು ಅದು ತಾತ್ಕಾಲಿಕ. ಆದರೆ ಲೈಟ್ ಆರಿದ ಮೇಲೂ ಹೀರೋಗಳಾಗಿಯೇ ಉಳಿಯುವವನೇ ನಿಜವಾದ ಹೀರೋ ಎನ್ನುತ್ತಿದ್ದಾರೆ ಇಲ್ಲಿನ ಸೆಲಬ್ರಿಟಿಗಳು! ಬಿಡುವಿನ ವೇಳೆಯಲ್ಲಿ ಇವರು ಕೈಗೊಳ್ಳುವ ಸೈಡ್ ಬಿಝಿನೆಸ್ಸುಗಳಲ್ಲಿ ಕೆಲವನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ.
ಶಾರುಖ್ ಖಾನ್
ಬಾಲಿವುಡ್‌ನಲ್ಲಿ “ಕಿಂಗ್ ಖಾನ್’ ಎಂದೇ ಕರೆಯಲ್ಪಡುವ ಶಾರುಖ್ ನಟನೆಯಲ್ಲಷ್ಟೇ ಅಲ್ಲ ವ್ಯಾವಹಾರಿಕ ಪ್ರಪಂಚದಲ್ಲೂ ಕಿಂಗ್. ದುಬೈನಲ್ಲಿ ಮಾನವ ನಿರ್ಮಿತ ದ್ವೀಪ ಪಾಮ್ ಬೀಚ್ ಐಲ್ಯಾಂಡ್‌ನಲ್ಲಿ ಐಷಾರಾಮಿ ಬಂಗಲೆ ಹೊಂದಿರುವ ಶಾರುಖ್, ತಪತ್ನಿ ಗೌರಿ ಜೊತೆ ಹಲವು ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ರೆಡ್ ಚಿಲ್ಲೀಸ್- ಸಿನಿಮಾ ನಿರ್ಮಾಣ ಸಂಸ್ಥೆ
ಕೋಲ್ಕತಾ ನೈಟ್ ರೈಡರ್- ಐಪಿಎಲ್ ತಂಡದ ಪಾಲುದಾರಿಕೆ
ರಿಯಲ್ ಎಸ್ಟೇಟ್- ಮುಂಬೈ ಲಂಡನ್ ಹಾಗೂ ದುಬೈನಲ್ಲಿ ಹೂಡಿಕೆ
ಕಿಡ್‌ಝಾನಿಯಾ- ಮೆಕ್ಸಿಕನ್ ಕಂಪನಿಯಲ್ಲಿ ಪಾಲುದಾರಿಕೆ
ವಿರಾಟ್ ಕೊಹ್ಲಿ
ಅತಿ ಶ್ರೀಮಂತ ಕ್ರಿಕೆಟಿಗ ಎಂಬ ಖ್ಯಾತಿಗೆ ಪಾತ್ರವಾಗಿರುವ ವಿರಾಟ್ ಲೇಟಾಗಿ ಬಂದರೂ ರನ್‌ಗಳನ್ನು ಸಿಡಿಸುವಷ್ಟೇ ಸಲೀಸಾಗಿ ಹಣ ಹೂಡಿಕೆಯಲ್ಲೂ ಮುಂದಿದ್ದಾರೆ. ಈಗ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಕೂಡಾ ಅವರಿಗೆ ಜೊತೆಯಾಗಿದ್ದಾರೆ.
ರಾಂಗ್- ಫ್ಯಾಷನ್ ಬ್ರ್ಯಾಂಡ್
ನ್ಪೋರ್ಟ್ ಕಾನೊ- ಟೆಕ್ ಸ್ಟಾರ್ಟಪ್ ಸಂಸ್ಥೆ
ಚಿಸೆಲ್- ಫಿಟೆ°ಸ್ ಜಿಮ್
ಎಫ್ಸಿ ಗೋವಾ- ಫುಟ್‌ಬಾಲ್ ತಂಡದ ಮಾಲೀಕ(ಇಂಡಿಯನ್ ಸೂಪರ್ ಲೀಗ್)
ಬೆಂಗಳೂರು ಯೋಧಾಸ್- ಕುಸ್ತಿ ತಂಡದ ಮಾಲೀಕ(ಪ್ರೊ ರೆಸ್ಲಿಂಗ್ ಲೀಗ್)
ಅಜಯ್ ದೇವಗನ್
ಸ್ಟಂಟ್ ನಟನಾಗಿ ಸಿನಿಮಾರಂಗಕ್ಕೆ ಕಾಲಿಟ್ಟ ಅಜಯ್ ದೇವಗನ್, ಗಾಡ್‌ಫಾದರ್ ನೆರವಿಲ್ಲದೆ ನಾಯಕನಾದುದರ ಹಿಂದೆ ಅದಮ್ಯ ಆತ್ಮವಿಶ್ವಾಸದ ಕಥೆ ಇದೆ. ಸಿನಿಮಾರಂಗದಲ್ಲಿ ನಾಯಕನಾಗಿದ್ದೇ ಹೆಚ್ಚೆಂದು ಸುಮ್ಮನೆ ಕೂರಲಿಲ್ಲ. ಸಿನಿಮಾರಂಗಕ್ಕೆ ಸಂಬಂಧಿಸಿದ ಹಲವು ಉದ್ಯಮಗಳನ್ನು ಅವರು ನಡೆಸುತ್ತಿದ್ದಾರೆ.
ಚರಣಕ ಸೌರ ಪ್ರಾಜೆಕ್ಟ್- ಹೂಡಿಕೆದಾರ
ಅಜಯ್ ದೇವಗನ್ ಫಿಲಮ್ಸ್- ಸಿನಿಮಾ ನಿರ್ಮಾಣ ಸಂಸ್ಥೆ
ಎನ್‌ವೈ ವಿಎಫ್ಎಕ್ಸ್‌ವಾಲಾ- ಗ್ರಾಫಿಕ್ಸ್ ಸಂಸ್ಥೆ ಮಾಲೀಕ
ಎನ್‌ವೈ ಸಿನೆಮಾಸ್- ಮಲ್ಟಿಪ್ಲೆಕ್ಸ್
ಹೃತಿಕ್ ರೋಷನ್
ನಾನಾ ಕಾರಣಗಳಿಗೆ ವಿವಾದದಲ್ಲಿದ್ದ ಬಾಲಿವುಡ್ ನಟ ಹೃತಿಕ್ ಹ್ಯಾಂಡ್‌ಸಮ್ ನಟ ಎನ್ನುವುದರಲ್ಲಿ ಅನುಮಾನವಿಲ್ಲ. ಸದಾ ತಮ್ಮನ್ನು ತಾವು ಫಿಟ್ ಆಗಿರಿಸಿಕೊಳ್ಳುವ ಈ ನಟ ಫಿಟ್‌ನೆಸ್‌ಗೆ ಸಂಬಂಧಿಸಿದ ಉದ್ಯಮಗಳಲ್ಲಿ ಹಣ ಹೂಡಿರುವುದು ಅಚ್ಚರಿಯೇನಲ್ಲ.
ಎಚ್‌ಆರ್‌ಎಕ್ಸ್- ಫ್ಯಾಷನ್ ಬ್ರ್ಯಾಂಡ್
ಕ್ಯೂರ್‌ಫಿಟ್- ಫಿಟ್‌ನೆಸ್ ಜಿಮ್‌ನಲ್ಲಿ ಪಾಲುದಾರ
ಜಾನ್ ಅಬ್ರಾಹಂ
ಬಾಲಿವುಡ್‌ನ ರ್‍ಯಾಂಕ್ ಸ್ಟೂಡೆಂಟ್ ಎಂದೇ ಹೆಸರಾಗಿರುವ ಜಾನ್ ಅರ್ಥಶಾಸ್ತ್ರ ಪ್ರವೀಣ. ಫುಟ್‌ಬಾಲ್ ಮತ್ತು ಬೈಕ್ ಕ್ರೇಝ್ ಹೊಂದಿರುವ ಈ ನಟ ಫುಟ್‌ಬಾಲ್ ಕ್ರೀಡೆಯ ಅಭಿಮಾನಿ.
ಜೆಎ ಪ್ರೊಡಕ್ಷನ್ಸ್ ಹೌಸ್
ನಾರ್ತ್ ಈಸ್ಟ್ ಫುಟ್‌ಬಾಲ್ ಕ್ಲಬ್ ಮಾಲೀಕ (ಐಎಸ್ ಲೀಗ್)
ಮಲೈಕಾ ಅರೋರಾ
ಹದಿಹರೆಯದವರನ್ನೂ ನಾಚಿಸುವ ನೃತ್ಯಪ್ರತಿಭೆ, ಫಿಟ್‌ನೆಸ್ ಹೊಂದಿರುವ ಮಲೈಕಾ ಅರೋರಾ ಹಲವು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮಲೈಕಾ, ಬಿಪಾಶಾ ಮತ್ತು ಹೃತಿಕ್ ಮಾಜಿ ಪತ್ನಿ ಸುಝಾನ್ ಮೂವರೂ ಜೊತೆಗೂಡಿ ಲೈಫ್ಸ್ಟೈಲ್ ಬ್ರ್ಯಾಂಡ್ ಒಂದನ್ನು ಸ್ಥಾಪಿಸಿರುವುದು ಅವರ ಉದ್ಯಮಶೀಲತೆಗೆ ಹಿಡಿದ ಕೈಗನ್ನಡಿ.
ಎಕ್ಸೀಡ್ ಎಂಟರ್‌ಟೈನ್‌ಮೆಂಟ್- ಮಾರ್ಕೆಟಿಂಗ್ ಸಂಸ್ಥೆಯಲ್ಲಿ ಪಾಲುದಾರಿಕೆ
ಯೋಗ ಸ್ಟುಡಿಯೋ ಝೋರ್ಬಾ- ಮಾಲಕಿ
ದಿ ಲೇಬಲ್ ಲೈಫ್- ಲೈಫ್ಸ್ಟೈಲ್ ಫ್ಯಾಷನ್ ಬ್ರ್ಯಾಂಡ್ ಸಹಸಂಸ್ಥಾಪಕಿ
ಶಿಲ್ಪಾ ಶೆಟ್ಟಿ
ಕ್ರಿಕೆಟ್ ಪ್ರೇಮಿಗಳಿಗೆ ಶಿಲ್ಪಾ ಶೆಟ್ಟಿ ರಾಜಸ್ತಾನ ರಾಯಲ್ಸ್ ತಂಡದ ಮಾಲಕಿಯಾಗಿ ಕ್ರೀಡಾಂಗಣದಲ್ಲಿ ಹುರಿದುಂಬಿಸುತ್ತಿದ್ದುದು ನೆನಪಿದ್ದೇ ಇರುತ್ತದೆ.
ಕ್ರಾನಿಕಲ್ ಬೀಚ್ ಕ್ಲಬ್, ಗೋವಾ- ಹೂಡಿಕೆ
ಮಾಮಾ ಅರ್ತ್- ತಾಯಿ ಮಕ್ಕಳ ಬಳಕೆಯ ವಸ್ತು ತಯಾರಿಕಾ ಸಂಸ್ಥೆಯಲ್ಲಿ ಹೂಡಿಕೆ
ಸುಗಂಧ ದ್ರವ್ಯ ಬ್ರ್ಯಾಂಡ್- ಮಾಲಕಿ
ನಾಗಾರ್ಜುನ
ಹಳೆಯ ನಟನಾದರೂ ಆಗೀಗ ಸಿನಿಮಾಗಳಲ್ಲಿ ಕಾಣಿಸಿಕೊಂಡು ತಮ್ಮ ಛಾಪನ್ನು ಉಳಿಸುತ್ತಿರುವ ನಟ ತೆಲುಗು ನಟ ನಾಗಾರ್ಜುನ. ಅವರು ಬಹಳ ಹಿಂದಿನಿಂದಲೂ ಉದ್ಯಮಗಳನ್ನು ನಡೆಸುತ್ತಿದ್ದವರು.
ಎನ್ ಗ್ರಿಲ್, ಎನ್ ಏಷ್ಯನ್- ರೆಸ್ಟೋರೆಂಟುಗಳು
ಕೇರಳ ಬ್ಲಾಸ್ಟರ್- ಕ್ರಿಕೆಟ್ ತಂಡದಲ್ಲಿ ಪಾಲುದಾರಿಕೆ
ಎನ್ ಕನ್ವೆನನ್ ಸೆಂಟರ್- ಕಾರ್ಪೊರೆಟ್ ಇವೆಂಟ್ ಸಭಾಂಗಣ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.