ಓದುವಾಗ ಕಾತರ ಮುಗಿದಾಗ ನಿಟ್ಟುಸಿರು!


Team Udayavani, Apr 23, 2018, 11:52 AM IST

oduvaga.jpg

ಈಗ ಎಂದಲ್ಲ, ಮೊದಲಿನಿಂದಲೂ ಅದೊಂದು ಹುಚ್ಚು; ಯಾರಾದರೂ ಓದ್ತಾ ಇದ್ದರೆ ಅವರಿಗೆ ಕಿರಿಕಿರಿಯಾಗುತ್ತದೆ ಅಂತ ಗೊತ್ತಿದ್ದರೂ ಅದರ ಮುಖಪುಟ ಇಣುಕಿ ನೋಡುವುದು ನನ್ನ ಚಾಳಿಯಾಗಿತ್ತು. ಬಹುಶಃ ಊರಿಗೆ ಹೋಗುವಾಗ ಚಿರಿಪಿರಿ ಮಾತಾಡ್ತಾನೆ ಅಂತ ಅಣ್ಣ ತೆಗೆದುಕೊಟ್ಟ “ಬಾಲಮಂಗಳ’ ಮೊದಲ ಪುಸ್ತಕ.ಅಲ್ಲಿಂದ ಶುರು. ಇದೊಂದು ಅಧ್ಯಾಯ, ಇನ್ನೊಂದು ಪುಟ, ಹಾಗೆ, ಅಂತ ಹೇಳಿ ರಾತ್ರಿಯಿಡೀ ದೀಪ ಉರಿಸಿದ ನೆನಪು ಹಲವಿದೆ.

ಪುಸ್ತಕಗಳನ್ನು ಕೊಂಡು ಕೊಂಡು ಪೇರಿಸಿಟ್ಟರೂ ಈಗಲೂ ಹೊಸ ಪುಸ್ತಕ ಕಂಡಾಗ ಕಿಸೆ ಮರೆತುಹೋಗಿ, ಮನಸು ಆಸೆಬುರುಕ ಮಗುವಾಗುತ್ತದೆ. ‘ಇವನಿಷ್ಟು ಓದುವುದು ಯಾಕೆಂದರೆ ಜೀವನ ಎದುರಿಸಲು ಭಯವಾಗಿ, ಅದಕ್ಕೇ ಪಲಾಯನ’ ಅಂತೊಬ್ಬರು ಅಂದಿದ್ದರು. ಇರಬಹುದೇನೋ! ಪುಸ್ತಕವೊಂದ ಬಿಡಿಸಿ, ಪುಟಗಳ ಆಘ್ರಾಣಿಸಿ, ಕಣ್ಣು ಮುಚ್ಚಿ, ಮತ್ತನಾಗಿ ,ಮುನ್ನುಡಿ ಹಾರಿಸಿ ಮೊದಲ ಪುಟ ತೆರೆದರೆ ಹೊಸದೊಂದು ಲೋಕಕ್ಕೆ ಪ್ರವೇಶವಾಗುತ್ತದಲ್ಲ 
ಅದು ಯಾವ ಸಾಹಸಕ್ಕೆ ಕಮ್ಮಿ?

ಈಗ ಬಿಡಿ, ಕುಳಿತಲ್ಲೇ ಸಾವಿರಾರು ಪುಸ್ತಕ ಇಳಿಸಿಕೊಳ್ಳಬಲ್ಲ ಕಿಂಡಲ್ ಬಂದಿದೆ. ಆದರೂ ಪುಟ ತಿರುಗಿಸುವಾಗಿನ ಚರ್ರ ಎಂಬ ಶಬ್ದ; ನಡುವೆ ಇಟ್ಟ. ಯಾವುದೋ ಪೇಪರ್‌ ಚೂರು ಬುಕ್‌ ಮಾರ್ಕ್‌, ಯಾರೋ ಗೀಚಿದ ಸಾಲು ಇವೆಲ್ಲ ಅನುಭವದ ಭಾಗವಾಗುತ್ತದೆ; ನೆನಪು ಗಟ್ಟಿಯಾಗುತ್ತದೆ. ಕನ್ನಡದಲ್ಲಿ ಶುದ್ಧ ಹಾರರ್‌ ಸಾಹಿತ್ಯ ಇನ್ನೂ ಮರೀಚಿಕೆಯೇ ಆಗಿದೆ. ಅದು ಗಂಭೀರವಲ್ಲ ಅನ್ನುವ ಅಸಡ್ಡೆಯೇ ಕಾರಣವಾ? ಗೊತ್ತಿಲ್ಲ.

ಕನ್ನಡದ ಎಲ್ಲೆಗಳು ವಿಸ್ತಾರವಾಗುವ ಸಾಹಿತ್ಯ ಈಗಿನ ತುರ್ತು; ಅದೇ ನೆಲ,ಮಣ್ಣು,ತಳ ಹಿಡ್ಕೊಂಡು ಎಷ್ಟು ದಿನ ಸಾಗಿಸಬಹುದು? ಇವೆಲ್ಲ ಕನಸುಗಳು ನನಸಾಗುವಂತೆ ಒಂದಿಬ್ಬರು ಈಗ ಬರೆಯುತ್ತಿದ್ದಾರೆ ಅದೇ ಸಮಾಧಾನ! ಒಂದು ಪುಸ್ತಕ ಮುಗಿಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟು, ಇನ್ನೊಂದರ ಓದನ್ನು ಶುರುಮಾಡುವ ಮೊದಲಿನ ನಿರ್ವಾತ ಇದೆಯಲ್ಲ ಅದು ಬಹುಶಃ  ಇನ್ನೊಬ್ಬ ಪುಸ್ತಕಪ್ರೇಮಿಗೇ ಅರಿವಾಗಬಹುದೇನೋ? ಪುಸ್ತಕ ಓದುವಾಗ ಕಾತರ, ಮುಗಿದಾಗ ನಿಟ್ಟುಸಿರು, ನೆಮ್ಮದಿ ಬದುಕಿಗಿನ್ನೇನು ಬೇಕು?

* ಪ್ರಶಾಂತ್‌ ಭಟ್‌

ಟಾಪ್ ನ್ಯೂಸ್

arrested

Punjab; ಗುಂಡಿನ ಚಕಮಕಿ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಇಬ್ಬರ ಬಂಧನ

2-ai

Artificial Intelligence: ಎಐ ಯುಗದಲ್ಲಿ ನಾವು ನೀವು?

Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್‌ ಟೈಮ್‌ ಎಷ್ಟು?

Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್‌ ಟೈಮ್‌ ಎಷ್ಟು?

1-bheesh

Chikkamagaluru: 92 ರ ಹರೆಯದಲ್ಲಿ ಬೀದಿಗೆ ಬಿದ್ದ ಜಿಲ್ಲಾ ಬಿಜೆಪಿ ಭೀಷ್ಮ ವಿಟ್ಠಲ ಆಚಾರ್ಯ

adani

Gautam Adani, ಸೋದರಳಿಯ ಸಾಗರ್ ವಿರುದ್ಧ ಲಂಚದ ಆರೋಪ ಇಲ್ಲ: ಅದಾನಿ ಗ್ರೂಪ್

1-bang

Bangladesh: ಚಿನ್ಮಯ್‌ ಕೃಷ್ಣದಾಸ್‌ ಬಂಧನ ಖಂಡಿಸಿ ಪ್ರತಿಭಟನೆ: ವಕೀಲನ ಹ*ತ್ಯೆ

Samantha Ruth Prabhu: ನನ್ನ ಸೆಕೆಂಡ್‌ ಹ್ಯಾಂಡ್‌ ಅಂದ್ರು!: ಸಮಂತಾ ದುಃಖದ ಮಾತು

Samantha Ruth Prabhu: ನನ್ನ ಸೆಕೆಂಡ್‌ ಹ್ಯಾಂಡ್‌ ಅಂದ್ರು!: ಸಮಂತಾ ದುಃಖದ ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

arrested

Punjab; ಗುಂಡಿನ ಚಕಮಕಿ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಇಬ್ಬರ ಬಂಧನ

3-aranthodu

Aranthodu: ವಾಹನ ಡಿಕ್ಕಿ ಹೊಡೆದು ಕಾಡು ಹಂದಿ ಸಾವು

2-ai

Artificial Intelligence: ಎಐ ಯುಗದಲ್ಲಿ ನಾವು ನೀವು?

Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್‌ ಟೈಮ್‌ ಎಷ್ಟು?

Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್‌ ಟೈಮ್‌ ಎಷ್ಟು?

1-bheesh

Chikkamagaluru: 92 ರ ಹರೆಯದಲ್ಲಿ ಬೀದಿಗೆ ಬಿದ್ದ ಜಿಲ್ಲಾ ಬಿಜೆಪಿ ಭೀಷ್ಮ ವಿಟ್ಠಲ ಆಚಾರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.