ಹೊಂಗೆ ಬಿಡಿಸಲು ಸರಳ ಯಂತ್ರ
Team Udayavani, Dec 23, 2019, 4:39 AM IST
ಪೆಟ್ರೋಲಿಯಂ ಇಂಧನ ಬಳಕೆಯಿಂದ ವಾತಾವರಣ ಕಲುಷಿತವಾಗುತ್ತಿದೆ. ಇಂಥ ದಿನಗಳಲ್ಲಿ ಜೈವಿಕ ಇಂಧನಗಳ ಅವಶ್ಯಕತೆ ಹೆಚ್ಚಿದೆ. ಹಿಂದೆ ಮನೆದೀಪಗಳಿಗೆ, ಪಂಜುಗಳಿಗೆ ಬಳಸಲಾಗುತ್ತಿದ್ದ ಇವುಗಳನ್ನು ಇತ್ತೀಚಿನ ವರ್ಷಗಳಲ್ಲಿ ವಾಹನಗಳನ್ನು ಚಲಾಯಿಸಲು ಕೂಡ ಬಳಸಲಾಗುತ್ತಿದೆ. ಆದರೆ, ಕಾಯಿಯ ಬೀಜಗಳನ್ನು ತ್ವರಿತವಾಗಿ ಬಿಡಿಸಲು ಸೂಕ್ತ ಯಂತ್ರಗಳ ಕೊರತೆ ಇದೆ. ಇದನ್ನು ಮನಗಂಡ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ವಿಭಾಗದ ತಂತ್ರಜ್ಞರು ಹೊಂಗೆಬೀಜ ಬೇರ್ಪಡಿಸುವ ಅತ್ಯಾಧುನಿಕ ಯಂತ್ರವೊಂದನ್ನು ಅಭಿವೃದ್ಧಿಪಡಿಸಿದೆ. ಈ ವಿಶ್ವವಿದ್ಯಾಲಯವು ಜೈವಿಕ ಇಂಧನ ಮೂಲಗಳಾದ ಹೊಂಗೆ, ಜತ್ರೋಫ, ಹರಳು, ಬೇವು, ಹಿಪ್ಪೆ, ಸೀಮಾರೂಬ ಬೆಳೆಗಳನ್ನು ಬೆಳೆಯಲು ಮಾಹಿತಿ, ಪ್ರೋತ್ಸಾಹ ನೀಡುತ್ತಿದೆ.
ಇತರ ಜೈವಿಕ ಇಂಧನ ಬೆಳೆಗಳಿಗೆ ಹೋಲಿಸಿದರೆ ಹೊಂಗೆಯ ವ್ಯಾಪ್ತಿ ಹಿರಿದು. ಹಿಂದೆಯೆಲ್ಲ ಕಲ್ಲಿನಿಂದ ಕುಟ್ಟಿ ಬೀಜಗಳನ್ನು ಬೇರ್ಪಡಿಸಿ ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತಿತ್ತು. ಇದಕ್ಕೆ ತಗುಲುವ ಮಾನವ ಶ್ರಮ ಅಪಾರ. ಅದೂ ಅಲ್ಲದೇ ಹೆಚ್ಚಿನ ಪ್ರಮಾಣದ ಬೀಜಗಳನ್ನು ಸಕಾಲದಲ್ಲಿ ಮಾರುಕಟ್ಟೆಗೆ ಕಳಿಸುವುದಕ್ಕೂ ಆಗುತ್ತಿರಲಿಲ್ಲ. ವಿಶ್ವವಿದ್ಯಾಲಯದ ತಂತ್ರಜ್ಞರು ಅಭಿವೃದ್ಧಿಪಡಿಸಿರುವ ಯಂತ್ರದಿಂದ ಒಂದು ತಾಸಿಗೆ 250 ಕೆ.ಜಿ. ಹೊಂಗೆಬೀಜಗಳನ್ನು ಬೇರ್ಪಡಿಸಬಹುದು. ಇದು ಶೇಕಡ 90ರಷ್ಟು ಕಾರ್ಯಕ್ಷಮತೆಯನ್ನು ಹೊಂದಿದೆ. ಯಂತ್ರಕ್ಕೆ ಮೂರು ಹೆಚ್.ಪಿ. ಮೋಟಾರ್ ಅಳವಡಿಸಲಾಗಿದೆ. ಇದನ್ನು ಸಿಂಗಲ್ ಫೇಸ್ ವಿದ್ಯುತ್‌ನಲ್ಲಿಯೂ ಚಲಾಯಿಸಬಹುದು. ಆದ್ದರಿಂದ ಗ್ರಾಮೀಣ ಪ್ರದೇಶದಲ್ಲಿಯೂ ಬಳಸಲು ಅನುಕೂಲ.
ಈ ಯಂತ್ರವನ್ನು ಬಳಸಿ ಅಧಿಕ ಪ್ರಮಾಣದ ಹೊಂಗೆಬೀಜಗಳನ್ನು ಸಕಾಲದಲ್ಲಿ ಮಾರುಕಟ್ಟೆಗೆ ಕಳಿಸಬಹುದು. ನಿರ್ವಹಣೆಯೂ ಸುಲಭ. ಇದರ ಅಂದಾಜು ಬೆಲೆ 70,000 ರೂ.
ಹೆಚ್ಚಿನ ಮಾಹಿತಿಗೆ: 080- 23330153
- ಕುಮಾರ ರೈತ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.