ಸ್ಮಾರ್ಟ್ ಲೈಟ್
Team Udayavani, Mar 16, 2020, 5:02 AM IST
ಸ್ಮಾರ್ಟ್‌ಫೋನ್, ಸ್ಮಾರ್ಟ್ ಟಿ.ವಿ. ಸ್ಮಾರ್ಟ್ ಫ್ರಿಜ್, ಸ್ಮಾರ್ಟ್ ವಾಚ್ ಹೀಗೆ ಸ್ಮಾರ್ಟ್ ಗ್ಯಾಜೆಟ್‌ಗಳ ಪಟ್ಟಿ ಸಾಗುತ್ತಲೇ ಹೋಗುತ್ತದೆ. ಎಲೆಕ್ಟ್ರಾನಿಕ್ ಉಪಕರಣಗಳು “ಸ್ಮಾರ್ಟ್’ ಎಂಬ ವಿಶೇಷಣ ಹೊತ್ತುಕೊಂಡೇ ಮಾರುಕಟ್ಟೆಗೆ ಬರುತ್ತಿವೆ. ಒಂದು ಕಂಪನಿ ಸ್ಮಾರ್ಟ್ ವಿಶೇಷಣದ ಅಡಿ ಒಂದು ಉತ್ಪನ್ನ ಬಿಡುಗಡೆ ಮಾಡಿದ ಕೂಡಲೆ, ಮಿಕ್ಕ ಸಂಸ್ಥೆಗಳೂ ಅದೇ ರೀತಿಯ ಉತ್ಪನ್ನವನ್ನು ತಯಾರಿಸಿ “ಸ್ಮಾರ್ಟ್’ ಎಂಬ ವಿಶೇಷಣದ ಅಡಿಯಲ್ಲೇ ನೀಡದೆ ಬೇರೆ ದಾರಿಯಿಲ್ಲ ಎನ್ನುವ ಪರಿಸ್ಥಿತಿ ಇದೆ. ಇಂದಿನ ದಿನದಲ್ಲಿ ಜನಪ್ರಿಯಗೊಳ್ಳುತ್ತಿರುವ ಮತ್ತೂಂದು ಸ್ಮಾರ್ಟ್ ಉಪಕರಣ “ಸ್ಮಾರ್ಟ್ ಬಲ್ಬ್’. ಸಾಂಪ್ರದಾಯಿಕ ಬಲ್ಬ್ಗಳನ್ನು ನಿಯಂತ್ರಿಸಲು ಗೋಡೆ ಮೇಲೆ ಸ್ವಿಚ್ ಅಳವಡಿಸಿರಲಾಗುತ್ತದೆ. ಅದನ್ನು ಒತ್ತುವ ಮೂಲಕ ಬಳಕೆದಾರ ಬಲ್ಬ್ಅನ್ನು ಉರಿಸುತ್ತಿದ್ದೆವು ಮತ್ತು ಆರಿಸುತ್ತಿದ್ದೆವು. ಇದೀಗ ಸ್ಮಾರ್ಟ್ ಬಲ್ಬ್ಅನ್ನು ಸ್ಮಾರ್ಟ್‌ಫೋನ್ ಬಳಸಿಯೇ ನಿಯಂತ್ರಿಸಬಹುದಾಗಿದೆ. ಮನೆಯ ಹೊರಗಡೆ ಇದ್ದರೂ ಫೋನ್ ಬಳಸಿ ಮನೆಯೊಳಗಿನ ಲೈಟನ್ನು ಆರಿಸಬಹುದಾಗಿದೆ.
ಅವುಗಳ ಉಪಯೋಗವೇನು?
ಸುಲಭ ನಿಯಂತ್ರಣ- ಸ್ಮಾರ್ಟ್‌ಫೋನಿನಲ್ಲಿ ಆಯಾ ಬಲ್ಬ್ ತಯಾರಕ ಸಂಸ್ಥೆಯ ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ನಂತರ ತಾವು ಎಲ್ಲಿದ್ದರೂ ಮನೆಯ ಬಲ್ಬನ್ನು ನಿಯಂತ್ರಿಸಬಹುದು. ಓಡಾಡಲು ಕಷ್ಟ ಪಡುವ ವೃದ್ಧರು ಅಥವಾ ರೋಗಿಗಳು ಮನೆಯಲ್ಲಿದ್ದರೆ, ಅವರಿಗೆ ಕುಳಿತಲ್ಲಿಂದಲೇ ಲೈಟ್ ಉರಿಸಲು/ ಆರಿಸಲು ಇದು ತುಂಬಾ ಸಹಾಯಕ.
ಮಲ್ಟಿ ಕಲರ್
ಸ್ಮಾರ್ಟ್ ಬಲ್ಬ್ಗಳಲ್ಲಿ ಒಂದೇ ಬಣ್ಣದ್ದು ಮತ್ತು ಹಲವು ಬಣ್ಣಗಳ ಬೆಳಕನ್ನು ಹೊರಸೂಸಬಲ್ಲ ಸಾಮರ್ಥ್ಯ ಇರುವ ಬಲ್ಬ್ಗಳೂ ಇವೆ. ಮಲ್ಟಿ ಕಲರ್ ಬಲ್ಬ್ಗಳಿಗೆ ಬೆಲೆ ಕೊಂಚ ದುಬಾರಿ ಮಲ್ಟಿ ಕಲರ್ ಬಲ್ಬ್ಗಳಿಂದ ತಮಗೆ ಬೇಕೆಂದ ಬಣ್ಣವನ್ನು ಬಳಕೆದಾರ ಆರಿಸಿಕೊಳ್ಳಬಹುದು.
ಆಟೋಮ್ಯಾಟಿಕ್ ಅಡ್ಜಸ್ಟ್‌ಮೆಂಟ್
ಇನ್ನು ಕೆಲ ಬಲ್ಬ್ಗಳು ಬೆಳಗ್ಗೆ ಮತ್ತು ರಾತ್ರಿಯ ವೇಳೆ ತನ್ನಷ್ಟಕ್ಕೇ ಪ್ರಕಾಶವನ್ನು ಹೊಂದಿಸಿಕೊಳ್ಳುತ್ತವೆ. ಬಳಕೆದಾರನ ಕಣ್ಣುಗಳಿಗೆ ತ್ರಾಸವಾಗದಿರಲಿ ಎಂಬ ಕಾರಣಕ್ಕೆ.
ಅಲೆಕ್ಸಾ ಸಂಪರ್ಕ
ಲೈಟ್ ಸ್ವಿಚ್ ಆನ್- ಆಫ್ ಮಾಡುವುದು ಮಾತ್ರವಲ್ಲ, ಬಲ್ಬ್ ಎಷ್ಟು ಪ್ರಮಾಣದ ಬೆಳಕನ್ನು(ತೀವ್ರತೆ) ಬೀರಬೇಕು ಎನ್ನುವುದನ್ನೂ ನಿಯಂತ್ರಿಸಬಹುದಾಗಿದೆ. ಬಳಕೆದಾರರಿಗೆ ಬೇಕೆಂದಾಗ ಮಂದ ಅಥವಾ ಪ್ರಕಾಶಮಾನ ಬೆಳಕನ್ನು ಪಡೆಯಬಹುದಾಗಿದೆ. ಅಲ್ಲದೆ 10 ಲಕ್ಷಕ್ಕೂ ಅಧಿಕ ಶೇಡ್‌ಗಳ ಆಯ್ಕೆಯನ್ನು ಬಳಕೆದಾರರು ಮಾಡಿಕೊಳ್ಳಬಹುದಾಗಿದೆ. ಈ ಬಲ್ಬನ್ನು ಟಾಕ್ ಅಸಿಸ್ಟೆಂಟ್‌ಗಳಾದ, ಅಮೆಝಾನ್‌ನ ಅಲೆಕ್ಸಾ, ಗೂಗಲ್ ಅಸಿಸ್ಟೆಂಟ್ ಜೊತೆ ಸಂಪರ್ಕ ಕಲ್ಪಿಸಬಹುದಾಗಿದೆ. ಅದರಿಂದ ಬಳಕೆದಾರ ತನ್ನ ಸ್ಮಾರ್ಟ್‌ಫೋನ್‌ನಲ್ಲಿ ಬಲ್ಬ್ನ ಆ್ಯಪ್ ತೆರೆದು ಬಟನ್ ಒತ್ತಬೇಕಿಲ್ಲ. ಅಲೆಕ್ಸಾಗೆ ಧ್ವನಿ ಮುಖೇನ ಸೂಚನೆ ನೀಡಿದರಾಯಿತು. ಮಾರುಕಟ್ಟೆಯಲ್ಲಿ ಫಿಲಿಪ್ಸ್, ವಿಪ್ರೊ, ಸಿಸ್ಕಾ, ಶಿಯೋಮಿ ಮತ್ತಿತರ ಕಂಪನಿಗಳು ಸ್ಮಾರ್ಟ್ ಬಲ್ಬ್ ಗಳನ್ನು ನೋಡಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.