ಎಸ್‌ಎಂಎಸ್ ಪಂಪ್‌ಸೆಟ್
Team Udayavani, Sep 11, 2017, 7:00 AM IST
ಅಂತರ್ಜಲ ಬರಿದಾಗುತ್ತಿದೆ. ವ್ಯವಸಾಯವನ್ನೇ ನಂಬಿ ಬದುಕುವ ಬಹುತೇಕ ಕುಟುಂಬಗಳು ಹತಾಶವಾಗುತ್ತಿವೆ. ಆದರೆ ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ. ರೈತರ ಇಂಥ ಎಲ್ಲಾ ಸಮಸ್ಯೆಗಳಿಗೆ “ಮೊಬಿಟೆಕ್’ ಎನ್ನುವ ಸಂಸ್ಥೆ ವೈಜ್ಞಾನಿಕವಾಗಿ ಪರಿಹಾರ ಕಂಡು ಹುಡುಕಿದೆ.
ಏನಿದು ಪರಿಹಾರ?
, ಅತೀ ಕಡಿಮೆ ನೀರು ಹಾಗೂ ಅತೀ ಕಡಿಮೆ ಖರ್ಚು ಮಾಡಿ ಸಮೃದ್ಧಿಯ ಬೆಳೆ ತೆಗೆಯುವ “ಸ್ವಯಂ ಚಾಲಿತ ನೀರಾವರಿ ಯೋಜನೆ’ಯಾಗಿದೆ. ಈ ಯೋಜನೆಯನ್ನು ಅತೀ ಸಣ್ಣ ಹಿಡುವಳಿದಾರರಿಂದ ಹಿಡಿದು, ದೊಡ್ಡ ಪ್ರಮಾಣದ ರೈತರು ಕೂಡ ಅಳವಡಿಸಿಕೊಳ್ಳಬಹುದು.
ಪಂಪ್‌ಸೆಟ್‌ಗೆ 5 ಎಚ್.ಪಿ. ಮೋಟಾರ್ ಹಾಗೂ ಸ್ಟಿರ್ಚರ್ ಬಾಕ್ಸ್ ಅಳವಡಿಸಬೇಕು. ಮೋಟಾರ್ ಚಾಲನೆಗೆ ಹಾಗೂ ಸ್ಥಗಿತಗೊಳಿಸಲು, ಎಸ್‌ಎಂಎಸ್ ಕೊಟ್ಟ ತಕ್ಷಣ ಮೋಟಾರ್ ಚಾಲೂ ಆಗುತ್ತದೆ ಅಥವಾ ಸ್ಥಗಿತಗೊಂಡಿದೆ ಅಂತಲೂ ಮೊಬೈಲ್‌ಗೆ ಸಂದೇಶ ಬರುತ್ತದೆ. ಯಾವ ಭಾಷೆಯಿಂದ ಬೇಕಾದರೂ ಎಸ್‌ಎಂಎಸ್ ಕಳಿಸಬಹುದು.
ಭೂಮಿಗೆ ನೀರುಣಿಸಲು, ಭೂಮಿಯ ವಿಸ್ತೀರ್ಣಕ್ಕನುಗುಣವಾಗಿ ಒಂದರಿಂದ ನಾಲ್ಕು ಇಂಚು ಪೈಪ್ ಅಳವಡಿಸಬೇಕು.
ಒಂದು ಎಕರೆ ಜಮೀನಿಗೆ ಕನಿಷ್ಠ ಮೂರು ವಾಲ್ಟ್ ಆದರೂ ಪೈಪ್‌ಗೆ ಜೋಡಿಸಬೇಕು. ಬೆಳೆಯುವ ಬೆಳೆ, ಹಣ್ಣಿನ ಗಿಡಗಳು, ತರಕಾರಿ, ತೋಟಗಾರಿಕೆ ಬೆಳೆಗಳಿಗನುಗುಣವಾಗಿ ಪೈಪ್ ಹಾಗೂ ವಾಲ್ಟ್‌ಗಳ ಗಾತ್ರ ನಿರ್ಧರಿಸಬೇಕಾಗುತ್ತದೆ. ವಾಲ್ಟ್ ನಿಯಂತ್ರಿಸಲು ಕನಿಷ್ಠ 24 ವೋಲ್ಟ್ ವಿದ್ಯುತ್ ಸಾಕಾಗುತ್ತದೆ. ಈ ತಂತ್ರಜ್ಞಾನದಲ್ಲಿ “ಸೊಲಿನೋಲ್ಟ್’ ಕವಾಟುಗಳನ್ನು ಅಳವಡಿಸಿರುವುದರಿಂದ ನೀರು ಚಾಲನೆ ಅಥವಾ ಸ್ಥಗಿತಗೊಂಡಾಗ ಮಾತ್ರವಲ್ಲ, ಫಿಲ್ಟರ್ ಬ್ಲಾಕ್ ಆದರೂ ತಕ್ಷಣ ಸಂದೇಶ ಬರುತ್ತದೆ. ಈ ಯೋಜನೆಯಲ್ಲಿ ಟೈಮರ್ ಅಳವಡಿಸಿಕೊಳ್ಳುವ ಸವಲತ್ತು ಇರುವುದರಿಂದ ಮೋಟಾರು ನಿಗದಿಪಡಿಸಿದ ಸಮಯದಲ್ಲಿ ತಾನಾಗಿ ಚಾಲನೆಯಾಗಿ ಹಾಗೂ ಸ್ಥಗಿತಗೊಳ್ಳುತ್ತದೆ.
ಕೃಷಿ ಮಾಡುವ ಯುವಕರು ಯಾರ ಹಂಗೂ ಇಲ್ಲದೆ, ಪಟ್ಟಣದಲ್ಲಿಯೇ ವಾಸಿಸಿ, ಬರೀ ಮೊಬೈಲ್ ಆಧಾರದ ಮೇಲೆ ತಮ್ಮ ಜಮೀನನ್ನು ತಾವೇ ನೋಡಿಕೊಳ್ಳುವುದರ ಜೊತೆಗೆ ವ್ಯಕ್ತಿಯ ಆದಾಯವನ್ನು ಕೂಡ ದ್ವಿಗುಣಗೊಳಿಸಬಹುದು.
ಈ ತಂತ್ರಜ್ಞಾನ ಅಳವಡಿಸಲು ಹೊಲದಲ್ಲಿ ಬೆಳೆಯುವ ಬೆಳೆ, ವಿಸ್ತೀರ್ಣಕ್ಕನುಗುಣವನ್ನು ಅವಲಂಬಿಸುತ್ತದೆ. ಕಂಪನಿಯ ನುರಿತ ಕೆಲಸಗಾರರು, ರೈತರ ಮನೆ ಬಾಗಿಲಿಗೆ ಬಂದು, ಯಂತ್ರೋಪಕರಣ ಸ್ಥಾಪಿಸಿ, ಪೈಪ್ ಜೋಡಿಸಿ, ಹೊಲ ಅಥವಾ ತೋಟಕ್ಕೆ ನೀರುಣಿಸಿ, ಗ್ರಾಹಕರಿಗೆ ತೃಪ್ತಿಯಾದ ನಂತರ, ಅವರ ಅಪ್ಪಣೆ ಪಡೆದು ಹಿಂತಿರುಗುತ್ತಾರೆ ಹಾಗೂ ಇಲ್ಲಿ ತಜ್ಞರ ಸೇವೆ ಸದಾ ಲಭ್ಯವಿರುತ್ತದೆ.
ಸ್ವಯಂಚಾಲಿತ ಪಂಪ್‌ಸೆಟ್ ಅಳವಡಿಸುವುದರಿಂದ ದೊರೆಯುವ ಲಾಭ
– ರೈತರು ಕೂಲಿಯಾಳುಗಳ ಮೇಲೆ ಅವಲಂಬಿಸುವ ಅವಶ್ಯವಿಲ್ಲ. ಮನೆಯಲ್ಲಿಯೇ ಕುಳಿತು, ತಮ್ಮ ಹೊಲಗಳಿಗೆ ನೀರುಣಿಸಬಹುದು. ದೂರದ ಅಂತರವಿಲ್ಲದೇ (ಬೇರೆ ಊರಿಗೆ ಹೋದಾಗ, ಆ ಊರಿನಿಂದಲೇ ಮೋಟಾರ್ ಚಾಲನೆ ಹಾಗೂ ಸ್ಥಗಿತಗೊಳಿಸಬಹುದು) ಕಾರ್ಯ ನಿರ್ವಹಿಸಬಹುದು.
– ಟೈಮರ್‌ನಿಂದಾಗಿ ಮಾನವಶಕ್ತಿ ಅವಶ್ಯವಿಲ್ಲ.
– ನೀರಿನ ಮಟ್ಟ ಕಡಿಮೆಯಾದಾಗ ಹಾಗೂ ಅಧಿಕ ವೋಲ್ಟೆàಜ್ ಬಂದಾಗ, ಪಂಪ್‌ಸೆಟ್ ತಾನಾಗಿ ಸ್ಥಗಿತಗೊಳ್ಳುವುದರಿಂದ, ಮೋಟಾರ್ ಸುಟ್ಟು ಹೋಗುವ ಪ್ರಮೇಯವಿಲ್ಲ.
– ಇಂಥ ಯೋಜನೆಗೆ ಸರ್ಕಾರದಿಂದ (ಹನಿ ನೀರಾವರಿಗೆ) ಅನುದಾನ ಕೂಡ ಸಿಗುತ್ತದೆ.
ಸ್ವಯಂಚಾಲಿತ ಹನಿ ನೀರಾವರಿ ಯೋಜನೆ ವಿಚಾರದಲ್ಲಿ ಇನ್ನೂ ಹೆಚ್ಚಿನ ಮಾಹಿತಿಗೆ:
ವಿಕ್ರಮ್ – ಮೊಬೈಲ್ ಸಂಖ್ಯೆ- 9902025538 ಅಥವಾ 7019032558 ಸಂಪರ್ಕಿಸಿ.
-ಯು.ಪಿ.ಪುರಾಣಿಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.