ಫೇಸ್‌ ವಾರ್‌ 


Team Udayavani, Mar 18, 2019, 12:30 AM IST

s-11.jpg

ಎಲೆಕ್ಷನ್‌ ಬರುತ್ತಿದ್ದ ಹಾಗೆಯೇ ಚುನಾವಣಾ ಅಖಾಡಗಳು ಕಳೆಕಟ್ಟಿ, ಅಭ್ಯರ್ಥಿಗಳ ಮಧ್ಯೆ ಪೈಪೋಟಿ ಶುರುವಾಗಿದೆ.  ಸೋಷಿಯಲ್‌ ಮೀಡಿಯಾ ಕೂಡ ಬಿಸಿಯೇರಿದೆ. ಅಲ್ಲೊಂದು ವರ್ಚುವಲ್‌ ವಾರ್‌ ಶುರುವಾಗಿದೆ. ಇದನ್ನು ನಿಯಂತ್ರಿಸಲು ಒಂದು “ಭೌತಿಕ ವಾರ್‌ ರೂಮ್‌’ ಅನ್ನು ಫೇಸ್‌ಬುಕ್‌ ಸ್ಥಾಪಿಸಲು ಹೊರಟಿದೆ. ಇದೇ ರೀತಿಯ ವಾರ್‌ ರೂಮ್‌ ಅನ್ನು  ಅಮೆರಿಕ ಚುನಾವಣೆ ವೇಳೆಯೂ ಸ್ಥಾಪಿಸಲಾಗಿತ್ತು. ಕೇಂಬ್ರಿಜ್‌ ಅನಾಲಿಟಿಕಾದಂತಹ ಸಂಸ್ಥೆಗಳು ಈ ವಾರ್‌ ರೂಮ್‌ನಲ್ಲೂ ತಮ್ಮ ಕೈಚಳಕ ತೋರಿಸಿದ್ದವು.  

ಈ ವಾರ್‌ ರೂಮ್‌, ಕ್ಯಾಲಿಫೋರ್ನಿಯಾ ಹಾಗೂ ಸಿಂಗಾಪುರದಲ್ಲಿರುವ ಕೇಂದ್ರ ಕಚೇರಿಯ ಜೊತೆಗೆ ಸಹಭಾಗಿತ್ವ ಸಾಧಿಸಲಿದೆ. ಇದರಿಂದಾಗಿ ಚುನಾವಣಾ ಆಯೋಗದ ಜೊತೆಗೂ ಫೇಸ್‌ಬುಕ್‌ ನಿರಂತರವಾಗಿ ಸಂಪರ್ಕದಲ್ಲಿರಬಹುದಾಗಿದೆ ಎಂದು ಫೇಸ್‌ಬುಕ್‌ನ ಭಾರತ ಮತ್ತು ದಕ್ಷಿಣ ಏಷ್ಯಾದ ಸಾರ್ವಜನಿಕ ನೀತಿ ವಿಭಾಗದ ನಿರ್ದೇಶಕ ಶಿವನಾಥ್‌ ತುಕ್ರಾಲ್‌ ಹೇಳಿದ್ದಾರೆ.

ಈ ಹಿಂದಿನ ಚುನಾವಣೆ ವೇಳೆ ತನ್ನ ಪ್ಲಾಟ್‌ಫಾರಂನಲ್ಲಿ ಅಕ್ರಮ ನಡೆಯದಂತೆ ತಡೆಯಲು ಫೇಸ್‌ಬುಕ್‌ ಯಶಸ್ವಿಯಾಗಿರಲಿಲ್ಲ. ಇದಕ್ಕೆ ಭಾರಿ ಆಕ್ಷೇಪವೂ ಕೇಳಿಬಂದಿತ್ತು. ಕೇಂಬ್ರಿಜ್‌ ಅನಾಲಿಟಿಕಾ ಪ್ರಕರಣದಲ್ಲಿ ಭಾರತದ ಚುನಾವಣೆಯಲ್ಲೂ ಅಕ್ರಮ ನಡೆದಿರುವ ಶಂಕೆ, ವರದಿ ಹರಿದಾಡಿದ್ದವು. ಹೀಗಾಗಿ, ಭಾರತದಲ್ಲಿ ಫೇಸ್‌ಬುಕ್‌ ಮೇಲೆ ಈಬಾರಿ ಒತ್ತಡ ಹೆಚ್ಚಿದೆ.  ಅಮೆರಿಕದಲ್ಲಿ ಹೇಗೆ ಕೆಲಸ ಮಾಡಿತ್ತೋ ಅದೇ ರೀತಿಯಲ್ಲೇ ಇಲ್ಲೂ ಕಾರ್ಯನಿರ್ವಹಿಸಲಿದೆ.

ಕಂಟೆಂಟ್‌, ನೀತಿ ನಿರೂಪಣೆ, ಕಾನೂನು ಹಾಗೂ ಇತರ ವಿಷಯಗಳ ಮೇಲ್ವಿಚಾರಣೆ ಮಾಡುವುದು ಈ ವಾರ್‌ ರೂಮ್‌ ಉದ್ದೇಶ. ಪ್ರತಿ ವಿಭಾಗಕ್ಕೂ ಒಂದೊಂದು ತಂಡ ಇರಲಿದೆ. ಇವರು ಕಂಟೆಂಟ್‌ಗಳನ್ನು ಕೀ ಟರ್ಮ್ಬೇಸ್‌ ಆಧಾರದಲ್ಲಿ ವಿಂಗಡಿಸಿ, ಫಿಲ್ಟರ್‌ ಮಾಡುತ್ತಾರೆ. ಯಾವುದೇ ಆಕ್ಷೇಪಾರ್ಹ ಕಂಟೆಂಟ್‌ ಕಂಡುಬಂದರೂ ಅಂಥವುಗಳನ್ನು ಅಳಿಸುವುದು, ಖಾತೆಯನ್ನು ನಿರ್ಬಂಧಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಇದು ಕೈಗೊಳ್ಳಲಿದೆ. ಸುಮಾರು 40 ತಂಡಗಳು ಈಗ ಭಾರತದಲ್ಲಿ ಕೆಲಸ ಮಾಡುತ್ತಿವೆ. ಕರ್ನಾಟಕ ವಿಧಾನಸಭೆ ಚುನಾವಣೆಯಿಂದಲೇ ಲೋಕಸಭೆ ಚುನಾವಣೆ ತಯಾರಿ ಪ್ರಕ್ರಿಯೆ ಆರಂಭವಾಗಿತ್ತು. ನಂತರ ಬೇರೆ ಬೇರೆ ವಿಧಾನಸಭೆ ಚುನಾವಣೆಯಲ್ಲಿ ಈ ತಂಡ ಇನ್ನಷ್ಟು ಮೊನಚಾಯಿತು.  ಕೆಲವು ತಂಡಗಳು ಚುನಾವಣಾ ಆಯೋಗದ ಜೊತೆಗೆ ನೇರವಾಗಿ ಸಂಪರ್ಕದಲ್ಲಿ ಇರಲಿವೆ. ಚುನಾವಣಾ ಆಯೋಗ ಕಂಡುಕೊಂಡ ಕೆಲವು ವಿಷಯಗಳನ್ನು ಈ ತಂಡ ಗುರುತಿಸಿ, ಅವುಗಳನ್ನು ನಿಯಂತ್ರಿಸಲಿದೆಯಂತೆ. 

ಯುಟ್ಯೂಬ್‌ ಸಂಗೀತ
ಸಂಗೀತ ಕೇಳಬೇಕು ಅಂದರೆ, ಅಮೇಜಾನ್‌, ಆ್ಯಪಲ್‌ ಮ್ಯೂಸಿಕ್‌, ಗಾನ ಮ್ಯೂಸಿಕ್‌ ಆನ್‌ಲೈನ್‌ ಪ್ಲಾಟ್‌ಫಾರ್ಮ್ ಇದೆ.  ಈಗ ಇದರ ಜೊತೆಗೆ ಯುಟ್ಯೂಬ್‌ ಸೇರಿಕೊಂಡಿದೆ. ಇದು ಪ್ರಪಂಚದ ಎಲ್ಲ ವಿಷಯಗಳ ವಿಡಿಯೋಗಳನ್ನು ಬಿತ್ತರಿಸುತ್ತಿತ್ತು. ಈಗ ತನ್ನದೇ ಆದ ಯುಟ್ಯೂಬ್‌ ಮ್ಯೂಸಿಕ್‌ ಅನ್ನೋ ಕಂಪೆನಿ ತೆರೆದಿದೆ. ಯುಟ್ಯೂಬ್‌ನ ಬಲ ಏನೆಂದರೆ, ತನ್ನಲ್ಲಿರುವ ಅಗಾಧ ಸಂಗೀತ ಭಂಡಾರ. ಇದು ಯಾರ ಬಳಿಯೂ ಇರದಷ್ಟು ಸಂಗೀತವನ್ನು ಇಟ್ಟಕೊಂಡಿರುವುದರಿಂದ ಇತರೆ ಆನ್‌ಲೈನ್‌ ಮ್ಯೂಸಿಕ್‌ ಕಂಪೆನಿಗಳಿಗಿಂತಲೂ ಯುಟ್ಯೂಬ್‌ ಭಿನ್ನ ಎನ್ನಬಹುದು. 

  ಇನ್ನು ಬೆಲೆ ಏನು ದುಭಾರಿ ಇಲ್ಲ. ತಿಂಗಳಿಗೆ ಕೇವಲ 99 ಅಥವಾ ಐದು ಜನ ಒಟ್ಟಿಗೆ ಬಳಸಲು 149ರೂ. ಕೊಡಬೇಕಾಗುತ್ತದೆ.   ಮೂರು ತಿಂಗಳು ಟ್ರಯಲ್‌ಗಾಗಿ ಉಚಿತವಾಗಿ ಸಂಗೀತ ಕೇಳಬಹುದು. ಕೇಳುವ ಸಂಗೀತವನ್ನೆಲ್ಲಾ ಡೌನ್‌ಲೋಡ್‌ ಮಾಡಬಹುದೇ ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಒಟ್ಟಾರೆ, ಅಂತರ್ಜಾಲದ ಸಂಗೀತ ಕೇಳ್ಕೆ ಈ ಮೂಲಕ ಶ್ರೀಮಂತವಾಗುವುದರಲ್ಲಿ ಸಂಶಯವಿಲ್ಲ. ಈಗ ಅಮೇಜಾನ್‌ ಮತ್ತು  ಇತರೆ ಕಂಪೆನಿಗಳು ಯುಟ್ಯೂಬ್‌ ಹೆಜ್ಜೆಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದೆ. ಭಾರತದಲ್ಲಿ ಇದು ತಳವೂರುವ ಎಲ್ಲ ಲಕ್ಷಣಗಳೂ ಇವೆ ಅನ್ನೋ ನಿರೀಕ್ಷೆ ಕೂಡ ಇದೆ. 

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.