ಮಣ್ಣು ಹೊನ್ನು ಮೆಶಿನ್ನು : ಉಳುವ ಸಾಧನ
Team Udayavani, May 11, 2020, 11:04 AM IST
ಸಾಂದರ್ಭಿಕ ಚಿತ್ರ
ನೆಲವನ್ನು ಉಳಲು ಬಳಸುವ ನೇಗಿಲು, ಟ್ರ್ಯಾಕ್ಟರ್ ಮತ್ತಿತರ ಉಪಕರಣಗಳನ್ನು, ನಾವೆಲ್ಲರೂ ನೋಡಿದ್ದೇವೆ. ಅವುಗಳ ಸಾಲಿಗೆ ಈ ಉಪಕರಣವೊಂದು ಹೊಸ ಸೇರ್ಪಡೆ.
ಇದರ ವೈಶಿಷ್ಟ್ಯವೆಂದರೆ, ಇದನ್ನು ಒಬ್ಬನೇ ವ್ಯಕ್ತಿ ಬಳಸಬಹುದಾಗಿದೆ. ಕಡಿಮೆ ತೂಕ ಹೊಂದಿರುವುದರಿಂದ, ಕೈಯಲ್ಲಿ ಎತ್ತಿಕೊಂಡು ಬರಬಹುದಾಗಿದೆ. ಕೈತೋಟದ ಕೆಲಸಕ್ಕೆ, ಇದು ಹೇಳಿ ಮಾಡಿಸಿದ ಸಾಧನ.
ಈ ಸಾಧನ, ಕತ್ತರಿಯಂತೆ ಕೆಲಸ ನಿರ್ವಹಿಸುತ್ತದೆ. ಚೂಪಾದ ಬ್ಲೇಡುಗಳಿರುವ ಭಾಗವನ್ನು, ನೆಲದೊಳಕ್ಕೆ ತೂರುವಂತೆ ಕಾಲಲ್ಲಿ ಒತ್ತಬೇಕು. ನಂತರ ಹ್ಯಾಂಡಲ್ ಭಾಗವನ್ನು ಬೋರ್‌ವೆಲ್ ಒತ್ತುವ ಮಾದರಿಯಲ್ಲಿ ಒತ್ತಬೇಕು. ಆಗ, ನೆಲದೊಳಕ್ಕೆ ಊರಿದ್ದ ಬ್ಲೇಡುಗಳು ಮಣ್ಣನ್ನು ಸೀಳಿಕೊಂದು ಮೇಲಕ್ಕೆ ಬಂದುಬಿಡುತ್ತವೆ. ಮತ್ತೆ ಈ ಸಾಧನದ ಜಾಗ ಬದಲಿಸಿ ಬ್ಲೇಡುಗಳನ್ನು ನೆಲದೊಳಕ್ಕೆ ತೂರುವಂತೆ ಕಾಲಿಂದ ಒತ್ತಿ, ಮೇಲಿನ ಕ್ರಮಗಳನ್ನು ಪುನರಾವರ್ತಿಸಬೇಕು. ಈ ಉತ್ಪನ್ನ ಕ್ರಿಯಾಶೀಲತೆಯಿಂದ ಕೂಡಿದೆ ನಿಜ. ಆದರೆ ಮೊದಲೇ ಹೇಳಿದಂತೆ ಈ ಉತ್ಪನ್ನ ಬಳಸಿ ಒಂದಿಡೀ ಜಮೀನನ್ನು ಉತ್ತಬೇಕು ಎಂದಾಗ, ಅದು ಹೆಚ್ಚಿನ ಶ್ರಮ ಮತ್ತು ಸಮಯವನ್ನು ಬೇಡುತ್ತದೆ. ಅಲ್ಲದೆ ಜಮೀನು ಉಳುವಾಗ ಭೂಮಿಯನ್ನು ಹೆಚ್ಚು ಆಳದಲ್ಲಿ ನೇಗಿಲನ್ನು ಊರುತ್ತೇವೆ. ಈ ಉತ್ಪನ್ನದ ಬ್ಲೇಡುಗಳು ತೀವ್ರ ಮಟ್ಟದಲ್ಲಿ ಊರಲ್ಪ ಡುವುದಿಲ್ಲ. ಆದರೆ ಕೈದೋಟಗಳಲ್ಲಿ ಇದರ ಉಪಯೋಗ ಹೆಚ್ಚು. ಸಸಿ ನೆಡಲು, ಬೀಜ ಬಿತ್ತಲು ಸಹಾಯ
ಪಡೆಯಬಹುದು .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hemmadyಸೇವಂತಿಗೆ ತಳಿ ಸಂರಕ್ಷಣೆ: ತೋಟಗಾರಿಕೆ ಅಧಿಕಾರಿಗಳು,ಕೃಷಿ ವಿಜ್ಞಾನಿಗಳಿಂದ ಸ್ಥಳ ಭೇಟಿ
Congress Session: ಬೆಳಗಾವಿ ಕಾಂಗ್ರೆಸ್ ಅಧಿವೇಶನ ಜ.21ಕ್ಕೆ ಮರುನಿಗದಿ
ಎಎನ್‌ಎಫ್‌ಗೆ ಸಿಗದ ನಕ್ಸಲರು ಸಿಎಂಗೆ ಸಿಕ್ಕಿದ್ದು ಹೇಗೆ?: ಶಾಸಕ ಸುನೀಲ್ ಕುಮಾರ್
Sam Konstas: ಇದೇ ಪರಿಸ್ಥಿತಿ ಮರುಕಳಿಸಿದರೆ ಸುಮ್ಮನಿರುವೆ
Successful: ರಾಜ್ಯದ 4,873 ಗ್ರಾಮಗಳು ಬಯಲು ಶೌಚ ಮುಕ್ತ: ಕೇಂದ್ರದ ಮೆಚ್ಚುಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.