ಸೋಲಾರ್ ಪ್ಯಾನೆಲ್ ನಿರ್ವಹಣೆ ಸೂರ್ಯನದಲ್ಲ !
Team Udayavani, Mar 26, 2018, 6:35 PM IST
ಬಹುತೇಕ ಮನೆಗಳಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಸಿದ ನಂತರ ಮತ್ತೆ ಅವುಗಳನ್ನು “ನೋಡಿಕೊಳ್ಳುವ’ ವಿಚಾರ ಇಲ್ಲ. ಇಷ್ಟೆಲ್ಲಾ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿಲ್ಲ ಎಂಬ ಭಾವನೆಯೂ ಧಾರಾಳ. ವಾಸ್ತವವಾಗಿ, ಸೋಲಾರ್ ಸೆಲ್‌ಗಳ ಕಾರ್ಯಕ್ಷಮತೆಯೇ ಅವುಗಳ ಸಾಮರ್ಥ್ಯಕ್ಕೆ ತಕ್ಕುದಾಗಿಲ್ಲ ಎನ್ನಲಾಗುತ್ತದೆ. ಅದರ ಜೊತೆ ಮೇಂಟನೆನ್ಸ್ ಇಲ್ಲದಿದ್ದರೆ ಗೋವಿಂದ, ಗೋವಿಂದ ! ಇನ್ನೂ ಒಂದು ಸಮಸ್ಯೆ ಇದೆ. ಸಾಮಾನ್ಯವಾಗಿ ಮನೆಗೆ ಮೇಲಿನ
ಕಾರ್ಯಕ್ಷಮತೆಗೆ ಧೂಳು!
ವಾಸ್ತವವಾಗಿ, ಧೂಳಿನ ಪದರ ಸೋಲಾರ್ ಪ್ಯಾನೆಲ್‌ನ ಮೇಲೆ ಹರಡಿ ಕುಳಿತುಕೊಳ್ಳುವುದರಿಂದ ಅದರ “ಎಫಿಶಿಯೆನ್ಸಿ’ಯಲ್ಲಿ
ಸಾಕಷ್ಟು ದೊಡ್ಡ ಪ್ರಮಾಣದಲ್ಲಿಯೇ ಏರಿಳಿತವಾಗುತ್ತದೆ. ಇದನ್ನು ಹೋಗಲಾಡಿಸಿಕೊಳ್ಳಲು ನಿಯುಮಿತವಾಗಿ ಅದರ ಮೇಲ್ಮೆ„ಯನ್ನು ಸ್ವತ್ಛಗೊಳಿಸುವ ಕೆಲಸವನ್ನು ಮಾಡುತ್ತಿರ ಬೇಕಾಗುತ್ತದೆ. ಸಾಗರ ತಾಲ್ಲೂಕಿನಲ್ಲಿ ಅಕ್ಕಿ ಗಿರಣಿಯ ಮೇಲೆ ಅಳವಡಿಸಲಾದ ಸೋಲಾರ್ ಪ್ಯಾನೆಲ್‌ಗಳಿಗೆ ಇಲ್ಲಿಂದ ಹೊಮ್ಮುವ ಧೂಳು ದೊಡ್ಡ ಸಮಸ್ಯೆ. ಹೆದ್ದಾರಿಗಳ ಪಕ್ಕದಲ್ಲಿ ಇರುವ ರೂಫ್ಟಾಪ್ ಸೋಲಾರ್ ವ್ಯವಸ್ಥೆಗಳಲ್ಲಿ ರಸ್ತೆಯ ಮೇಲಿನ ಧೂಳಿನ ಕಾರಣದಿಂದ ತಿಂಗಳೊಪ್ಪತ್ತಿನಲ್ಲಿಯೇ ಪ್ಯಾನೆಲ್ ಕಾರ್ಯಕ್ಷಮತೆ ಕುಸಿಯುವುದು ನಮ್ಮಲ್ಲಿ ಕಂಡುಬರುವ ಸಾಮಾನ್ಯ ಬೆಳವಣಿಗೆ.
ಆಸ್ಟ್ರೇಲಿಯಾದಲ್ಲಿ ಶೇ. 17.2 ಮನೆಗಳಲ್ಲಿ ಸೋಲಾರ್ ರೂಫ್ಟಾಪ್ ಇದೆ. ಅಲ್ಲಿನ 1.6 ಮಿಲಿಯನ್ ಮನೆಗಳು ಸೂರ್ಯ ಶಿಕಾರಿ ನಡೆಸುತ್ತವೆ. ಅಲ್ಲಿ ಧೂಳಿನ ಸಮಸ್ಯೆ ಕಡಿಮೆ. ವಾಸ್ತವವಾಗಿ ಸೋಲಾರ್ ಪ್ಯಾನೆಲ್ ಮೇಲೆ ಮಂಜು ಬೀಳುವುದು ಸಮಸ್ಯೆಯಲ್ಲ. ಮಂಜು ಕರ್ನಾಟಕ ದಲ್ಲಿ ದೊಡ್ಡ ಪ್ರಮಾಣದಲ್ಲಿಲ್ಲ. ಜೋರು ಇಬ್ಬನಿ ಬೀಳ ಬಹುದಷ್ಟೇ. ಸೋಲಾರ್ ಪ್ಯಾನೆಲ್‌ಗಳನ್ನು ಕನಿಷ್ಠ 15 ಡಿಗ್ರಿ
ಕೋನದಲ್ಲಿ ಇರಿಸಿದಾಗ ಅದರ ಮೇಲೆ ಬೀಳುವ ಮಂಜು, ಇಬ್ಬನಿ ಕೆಳಗೆ ಹರಿಯುವಾಗ ಧೂಳನ್ನು ಸ್ವತ್ಛಗೊಳಿಸುತ್ತದೆ.
ಮಳೆಗಾಲ ನಂಬಿದರೆ ಹರೋಹರ!
ದೊಡ್ಡ ಪ್ರಮಾಣದಲ್ಲಿ ಪ್ಯಾನೆಲ್ ಗಳನ್ನು ಹಾಕಿದಾಗ ಮಂಜನ್ನೋ, ಮಳೆಗಾಲವನ್ನೋ ನಂಬಿಕೊಂಡರೆ ಹರೋಹರ! ಅದನ್ನು ಕ್ಲೀನ್
ಮಾಡುವುದು ಕೂಡ ಉತ್ಪಾದನೆಯ ಒಂದು ಭಾಗ. ಮಾನವ ಶಕ್ತಿ ಬಳಸಿ ಸ್ವಚ್ಛಗೊಳಿಸಬಹುದು. ಅದಕ್ಕೆ ಬೇಕಾದ ಸಲಕರಣೆಗಳು ಮಾರುಕಟ್ಟೆಯಲ್ಲಿ ಲಭ್ಯ. ಅಷ್ಟೇಕೆ, ಯಂತ್ರ ವ್ಯವಸ್ಥೆಯೇ ಇದೆ. ಹೆಲಿಯೋ ಟೆಕ್ಸ್ ಕಂಪನಿ ಪ್ಯಾನೆಲ್ ವಿಸ್ತಾರಕ್ಕೆ ಸೂಕ್ತವಾದ ಸ್ವತ್ಛತಾ
ವ್ಯವಸ್ಥೆಯನ್ನು ಅಳವಡಿಸಿಕೊಡುತ್ತದೆ. ಎವೊಕೋಸ್ ರೋಬೋಟಿಕ್ ಎಂಬ ಕಂಪನಿಯು ಸೋಲಾರ್ ಪ್ಯಾನಲ್‌ಗಳನ್ನು ಸ್ವತ್ಛಗೊಳಿಸಲು ರಾಯ್ ಬಾಟ್ ಎಂಬ ಸ್ವತ್ಛಗೊಳಿಸುವ ರೋಬೋಟ್ ಯಂತ್ರವನ್ನೇ ಪರಿಚಯಿಸಿದೆ. ಪ್ಯಾನೆಲ್ ಮೇಲೆ ಸ್ಪ್ರಿಂಕ್ಲರ್ ನೀರಿನ ಮೂಲಕ ವ್ಯವಸ್ಥಿತವಾಗಿ ಸ್ವತ್ಛಗೊಳಿಸಿಕೊಡುವ ಮತ್ತು ಅದನ್ನು ಹಾಕಿಸಿಕೊಡುವ ಕಂಪನಿಗಳಿವೆ. ನೀರಿಗೆ ಅಭಾವ, ಚಿಂತೆ
ಇಲ್ಲ. ಪ್ಯಾನೆಲ್ ಮೇಲಿನ ಧೂಳು ಕೊಡಹುವ ಭರದ ಗಾಳಿ ಊದುವ ಯಂತ್ರ ವ್ಯವಸ್ಥೆಯನ್ನು ಕೂಡ ಮಾಡಲಾಗುತ್ತದೆ. ಇವೆಲ್ಲ ಮಾದರಿಗಳನ್ನು ವಿವರಿಸುವ ಸೂಕ್ತ ವಿಡಿಯೋಗಳು ಅಂತಜಾìಲದಲ್ಲಿ ಇವೆ. ನೋಡಿ.
ಒಂದು ಎಚ್ಚರಿಕೆ ಮಾತ್ರ ಅಗತ್ಯ. ನೀರು ಹನಿಸುವ ಕೆಲಸ ಬೆಳ್ಳಂಬೆಳಗ್ಗೆ ಅಥವಾ ಸೂರ್ಯಾಸ್ತದ ನಂತರವಾದರೆ ಸೂಕ್ತ. ಸೂರ್ಯನ ರಶ್ಮಿಯಿಂದ ಬಿಸಿಯಾಗಿರುವ ಪ್ಯಾನೆಲ್ ಮೇಲೆ ನೀರು ಹಾಯಿಸಿದಾಗ ಹಲವು ಬಾರಿ ಪ್ಯಾನೆಲ್‌ನಲ್ಲಿ ಬಿರುಕು ಬಿಟ್ಟ ಉದಾಹರಣೆಗಳಿವೆ. ಸೋಲಾರ್ ಪ್ಯಾನೆಲ್ ಗಳನ್ನು ಸ್ವತ್ಛಗೊಳಿಸುವ ಕಿಟ್ ಸಿಗುತ್ತದೆ. ಇದೀಗ ಆನ್‌ಲೈನ್ ನಲ್ಲೂ ಲಭ್ಯವಿದೆ. ಸೋಲಾರ್ ಪ್ಯಾನೆಲ್ ಮೇಲಿನ ಸೂಕ್ಷ್ಮ ಗಾಜಿನ ಪದರಕ್ಕೆ ಏಟು ಬೀಳುವಂತಹ ಸ್ಪಾಂಜ್, ಬ್ರಷ್ ಬಳಕೆಯನ್ನಂತೂ ಮಾಡಬಾರದು. ಪ್ರತಿ ದಿನದ ವಿದ್ಯುತ್ ಉತ್ಪಾದನೆ, ವಾಸ್ತವವಾಗಿ ಆಗಬೇಕಾದ ಯೂನಿಟ್ ಮಾಹಿತಿ ಮತ್ತು ಆ ದಿನದ ವಾತಾವರಣದ ಅಂಕಿಅಂಶ
ಗ್ರಾಹಕನ ಕೈಯಲ್ಲಿರಬೇಕು. ಅದನ್ನು ಆತ ದಿನಂಪ್ರತಿ ದಾಖಲಿಸಿದರೆ ವ್ಯತ್ಯಾಸದ ದಿನಗಳನ್ನು, ಉತ್ಪಾದನೆಯ ಇಳಿತವನ್ನು ಕಂಡುಕೊಳ್ಳಬಹುದು. ಆಗ ಪ್ಯಾನೆಲ್‌ನ ಕಾರ್ಯದಕ್ಷತೆ ಕುಸಿದಿರುವುದು ಕಂಡುಬರುತ್ತದೆ. ಆ ಸಮಸ್ಯೆ ನಿವಾರಣೆಗೆ ಮೊತ್ತಮೊದಲಾಗಿ ಪ್ಯಾನೆಲ್ ಸ್ವತ್ಛಗೊಳಿಸುವ ಕೆಲಸಕ್ಕೆ ಮುಂದಾಗಬೇಕು. ಬೈಕ್ ಸ್ಟಾರ್ಟ್ ಆಗಿಲ್ಲ ಎಂತಾದರೆ ಮೊದಲು ಟ್ಯಾಂಕ್‌ನಲ್ಲಿ ಪೆಟ್ರೋಲ್
ಇದೆಯೇ ಎಂದು ಪರಿಶೀಲಿಸುವುದಿಲ್ಲವೇ, ಹಾಗೆ! ದೇಶಗಳಲ್ಲಿ ಪ್ಯಾನೆಲ್ ಸ್ವತ್ಛಗೊಳಿಸಿಕೊಡುವ ಏಜೆನ್ಸಿಗಳಿವೆ. ವಾರ್ಷಿಕ 150 ಡಾಲರ್ ಅಥವಾ ಘಂಟೆ ಲೆಕ್ಕದಲ್ಲಿ ಇಲ್ಲವೇ ಪ್ಯಾನೆಲ್‌ಗಳ ಲೆಕ್ಕದಲ್ಲಿ 10, 20 ಡಾಲರ್‌ಗಳ ವ್ಯವಹಾರವೂ ಇದೆ.
ಗುರು ಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.