ಕೃಷಿರಂಗ: ಬವಣೆಗಳು ಹಲವು ಪರಿಹಾರಗಳು ಕೆಲವು! 


Team Udayavani, May 22, 2017, 12:54 PM IST

krishiranga.jpg

ಕೃಷಿರಂಗದ ಬಗ್ಗೆ ಈಗ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಭಾರೀ ಒಲವು ತೋರಿಸುತ್ತಿವೆ. ಇದಕ್ಕೆ ಕೆಲವು ಪ್ರಧಾನ ಕಾರಣಗಳಿವೆ.

ಮೊದಲನೆಯದಾಗಿ, ಇಂದಿಗೂ ಶೇಕಡಾ 50 ಜನರ ವಾಸ ಹಳ್ಳಿಗಳÇÉೇ. ಕೃಷಿರಂಗ ಅಭಿವೃದ್ಧಿ ಹೊಂದಿದರೆ ಅದರಿಂದ ನೇರವಾಗಿ ಲಾಭವಾಗುವುದು ಹಳ್ಳಿಗರಿಗೆ. ಎರಡನೆಯದಾಗಿ, ಬೆಂಬಿಡದ ಬರಗಾಲದಿಂದಾಗಿ ಗ್ರಾಮೀಣ ಭಾಗದ ಜನರು ಕಂಗೆಟ್ಟು ಹೋಗಿ¨ªಾರೆ (ಭಾರೀ ಶ್ರೀಮಂತರಾದ ಕೃಷಿಕರನ್ನು ಹೊರತುಪಡಿಸಿ). ಈ ಪರಿಸ್ಥಿತಿಯಲ್ಲಿ, ಗ್ರಾಮೀಣ ಪ್ರದೇಶದಲ್ಲಿ ಹೂಡಿಕೆ ಮಾಡಿದ ಪ್ರತಿಯೊಂದು ರೂಪಾಯಿಯಿಂದ ಅಲ್ಲಿನವರಿಗೆ ಹೆಚ್ಚಿನ ಅನುಕೂಲವಾಗುತ್ತದೆ.

ಮೂರನೆಯದಾಗಿ, ಕೃಷಿರಂಗ ಹಾಗೂ ಗ್ರಾಮೀಣ ಪ್ರದೇಶಗಳು ಸಮೃದ್ಧವಾದರೆ, ಅದರಿಂದಾಗಿ ನಗರಗಳಿಗೆ ವಲಸೆಯ ಒತ್ತಡ ಕಡಿಮೆಯಾಗುತ್ತದೆ. ಗ್ರಾಮಗಳೇ ಸಣ್ಣಪಟ್ಟಣಗಳಾಗಿ ಬೆಳೆದರೆ, ಗ್ರಾಮವಾಸಿಗಳು ನಗರಗಳಿಗೆ ವಲಸೆ ಹೋಗುವುದು ಕಡಿಮೆಯಾಗಲಿದೆ.  ಆದ್ದರಿಂದಲೇ, ಕೇಂದ್ರ ಸರಕಾರವು 2022ರ ಹೊತ್ತಿಗೆ ಗ್ರಾಮೀಣ ಜನರ ಆದಾಯವನ್ನು ಇಮ್ಮಡಿಗೊಳಿಸುವ ಮಂತ್ರ ಪಠಿಸುತ್ತಿದೆ. ಅದಕ್ಕಾಗಿ, ಕೃಷಿ ಉತ್ಪನ್ನಗಳ ಖರೀದಿ ಮತ್ತು ವಿತರಣೆಯ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸುವತ್ತ ಹೆಜ್ಜೆಯಿಟ್ಟಿದೆ. 

14 ಮಾರ್ಚ್‌ 2017ರಂದು, ಗ್ರಾಹಕ ವ್ಯವಹಾರ, ಆಹಾರ ಮತ್ತು ಪಡಿತರ ವಿತರಣೆಯ ಉಪಸಚಿವ ಆರ್‌.ಸಿ. ಚೌಧರಿ ಅವರು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಉತ್ತರ ಇದನ್ನು ಖಚಿತ ಪಡಿಸಿದೆ. ದೇಶದ ಉಗ್ರಾಣಗಳಲ್ಲಿ ತುಂಬಿರುವ ಸುರûಾ ಆಹಾರ ಧಾನ್ಯ ಸಂಗ್ರಹದ (ಬಫ‌ರ್‌ ಸ್ಟಾಕ್‌) ದಕ್ಷ ನಿರ್ವಹಣೆಗಾಗಿ ಖಾಸಗಿ ಏಜೆನ್ಸಿಯೊಂದನ್ನು ನೇಮಿಸಲಾಗುವುದು ಎಂದು ಅವರು ತಿಳಿಸಿದರು. ಆಹಾರಧಾನ್ಯಗಳ ಖರೀದಿ, ಸಂಗ್ರಹ, ಮೇಲುಸ್ತುವಾರಿ ಮತ್ತು ವಿಲೇವಾರಿ ಕೂಡ ಅದೇ ಏಜೆನ್ಸಿಯ ಜವಾಬ್ದಾರಿ ಆಗಿರುತ್ತದೆ ಎಂಬುದು ಅವರು ನೀಡಿದ ಮಾಹಿತಿ. 

ಭಾರತದ ಆಹಾರ ನಿಗಮದ ಉಗ್ರಾಣಗಳ ಶೇಖರಣಾ ಸಾಮರ್ಥ್ಯ ಸಾಕಷ್ಟಿಲ್ಲ. ಹಾಗಾಗಿ, ಕೇಂದ್ರ ಸರಕಾರದ 30,000 ದಶಲಕ್ಷ ಟನ್‌ ಆಹಾರ ಸಂಗ್ರಹದ ಶೇಕಡಾ 30ರಷ್ಟು ಹಾಳಾಗಿ ಹೋಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಈ ಬೇಜವಾಬ್ದಾರಿಯಿಂದಾಗಿ ಆಕ್ರೋಶಗೊಂಡ ಸುಪ್ರೀಂ ಕೋರ್ಟ್‌, ಕೇಂದ್ರ ಸರಕಾರಕ್ಕೆ ಖಡಕ್‌ ಆದೇಶ ನೀಡಿತು. ಇದರ ಪರಿಣಾಮವಾಗಿ, 2007ರ ಉಗ್ರಾಣ ಅಭಿವೃದ್ಧಿ ಮತ್ತು ನಿಯಂತ್ರಣ ಕಾಯಿದೆಯನ್ನು 25 ಅಕ್ಟೋಬರ್‌ 2010ರಂದು ಕೇಂದ್ರ ಸರಕಾರ ಜಾರಿ ಮಾಡಿತು.   

ಇದರಿಂದಾಗಿ ರೈತರಿಗೆ ಹಲವು ಅನುಕೂಲಗಳಿವೆ. ರೈತರು ತಮ್ಮ ಫ‌ಸಲನ್ನು ಹತ್ತಿರದ ಅಧಿಕೃತ ಉಗ್ರಾಣಕ್ಕೆ ಒಯ್ಯಬೇಕು. ಆ ಉಗ್ರಾಣದ ಅಧಿಕಾರಿಗಳು ರೈತರು ತಂದ ಧಾನ್ಯವನ್ನು (ಗೋಧಿ, ಭತ್ತ, ಉದ್ದು, ಹೆಸರು ಇತ್ಯಾದಿ) ಗ್ರೇಡಿಂಗ್‌ ಮಾಡುತ್ತಾರೆ. ಆ ಧಾನ್ಯದ ಹೆಸರು, ತೂಕ ಮತ್ತು ಗ್ರೇಡ್‌ ನಮೂದಿಸಿ ಒಂದು ರಶೀದಿ ಕೊಡುತ್ತಾರೆ. ಈ ರಶೀದಿಯು ಒಂದು ಚೆಕ್‌ ಇದ್ದಂತೆ. ರೈತರು ಇದನ್ನು ಬ್ಯಾಂಕಿಗೆ ಅಥವಾ ಧಾನ್ಯ ವ್ಯಾಪಾರಿಗೆ ಕೊಟ್ಟು, ಅದರ ಬದಲಾಗಿ ಹಣ ಪಡೆಯಬಹುದು. ಈ ರಶೀದಿ ಖರೀದಿಸಿದ ಧಾನ್ಯದ ವ್ಯಾಪಾರಿ, ಹತ್ತಿರದ ಉಗ್ರಾಣಕ್ಕೆ ಅದನ್ನು ಸಲ್ಲಿಸಿ, ಅದರಲ್ಲಿ ನಮೂದಿಸಿದ ತೂಕ ಮತ್ತು ಗ್ರೇಡಿನ ಧಾನ್ಯ ಪಡೆಯಬಹುದು.  

ಅದೇನಿದ್ದರೂ, ಈ ವ್ಯವಸ್ಥೆಯಲ್ಲಿ ಲೋಪದೋಷಗಳಿವೆ. ಉಗ್ರಾಣಗಳನ್ನು ಯಾರು (ರಾಜ್ಯ ಸರಕಾರ ಅಥವಾ ಏಜೆನ್ಸಿ) ಸರ್ಟಿಫೈ ಮಾಡಬೇಕೆಂದು ನಿಯಮಗಳಲ್ಲಿ ತಿಳಿಸಿಲ್ಲ. ಸಾಕಷ್ಟು ಉಗ್ರಾಣಗಳೇ ಇಲ್ಲ. ಅಂದಮೇಲೆ, ಎಲ್ಲ ರೈತರೂ ತಮ್ಮ ಫ‌ಸಲನ್ನು ಅಧಿಕೃತ ಉಗ್ರಾಣಗಳಲ್ಲಿ ಶೇಖರಣೆ ಮಾಡುವಂತಿಲ್ಲ. ಅದಲ್ಲದೆ, ಈ ರಶೀದಿಗಳ ಡಿಜಿಟಲೀಕರಣ ಆಗಿಲ್ಲ. ಹಾಗಾಗಿ, ನಕಲಿ ರಶೀದಿಗಳಿಂದ ಮೋಸವಾಗುವ ಸಾಧ್ಯತೆಗಳಿವೆ. ಹಾಗೂ, ಉಗ್ರಾಣಗಳಲ್ಲಿ ಧಾನ್ಯ ಶೇಖರಣೆ, ಗುಣಮಟ್ಟ ರಕ್ಷಣೆ ಮತ್ತು ಧಾನ್ಯ ವಿಲೇವಾರಿಯಲ್ಲಿ ಬಹಳಷ್ಟು ಸುಧಾರಣೆಗಳು ಆಗಬೇಕಾಗಿವೆ. 

ಈ ನಡುವೆ ಕೆಲವು ಆಶಾದಾಯಕ ಬೆಳವಣಿಗೆಗಳೂ ಆಗಿವೆ. ಅಧಿಕೃತ ಏಜೆನ್ಸಿಯು 1,300 ಉಗ್ರಾಣಗಳನ್ನು ನೋಂದಾಯಿಸಿದೆ. ಇವುಗಳ ಒಟ್ಟು ಶೇಖರಣಾ ಸಾಮರ್ಥ್ಯ 57.80 ಲಕ್ಷ ಟನ್‌. ದ್ವಿದಳ ಧಾನ್ಯಗಳ ಸಂಶೋಧನೆಯಲ್ಲಿ ಭಾಬಾ ಅಣುವಿಜ್ಞಾನ ಸಂಶೋಧನಾ  ಕೇಂದ್ರ (ಬಿ. ಎ. ಆರ್‌. ಸಿ. )ದ ವಿಜ್ಞಾನಿಗಳೂ ಭಾಗವಹಿಸುತ್ತಿ¨ªಾರೆ. ಈವರೆಗೆ 19 ಅಧಿಕ ಇಳುವರಿ ನೀಡುವ ದ್ವಿದಳ ಧಾನ್ಯಗಳ ತಳಿಗಳನ್ನು ಅಭಿವೃದ್ಧಿಪಡಿಸಿ¨ªಾರೆ. ಜನವರಿ 2016ರಲ್ಲಿ ಜಾರಿಯಾದ ಪ್ರಧಾನಮಂತ್ರಿ ಬೆಳೆ ವಿಮಾ ಯೋಜನೆಯಿಂದಾಗಿ ಲಕ್ಷಗಟ್ಟಲೆ ರೈತರ ಫ‌ಸಲು, ವಿಮಾ ರಕ್ಷಣೆಗೆ ಒಳಪಟ್ಟಿದೆ. 

ಈ ಬೆಳವಣಿಗೆಗಳ ಬಗ್ಗೆ ಹಿರಿಯ ವಿಜ್ಞಾನಿ ಅಶೋಕ್‌ ಗುಲಾಟಿ ಹೀಗೆನ್ನುತ್ತಾರೆ- 2016ರಿಂದೀಚೆಗೆ ಬೆಳೆ ವಿಮೆಯ ಕಂತನ್ನು ಮುಂಗಾರು ಬೆಳೆಗೆ ಶೇಕಡಾ ಎರಡು ಮತ್ತು ಹಿಂಗಾರು ಬೆಳೆಗೆ ಶೇಕಡಾ 1.5 ಎಂದು ನಿಗದಿಪಡಿಸಲಾಗಿದೆ. ಇದರಿಂದಾಗಿ, ಮುಂಗಾರಿನಲ್ಲಿ ಬೆಳೆವಿಮೆಗೆ ಒಳಪಟ್ಟ ಪ್ರದೇಶದಲ್ಲಿ ಭಾರೀ ಹೆಚ್ಚಳವಾಗಿದೆ. ಆದರೆ, ಬೆಳೆ ನಷ್ಟ ಅಂದಾಜಿಸುವ ವಿಧಾನದಲ್ಲಿ ಬದಲಾವಣೆ ಆಗಿಲ್ಲ; ಇದಕ್ಕೆ ಅಗತ್ಯವಾಗಿದ್ದ ಸ್ಮಾರ್ಟ್‌ ಫೋನುಗಳನ್ನು ಹಲವು ರಾಜ್ಯ ಸರಕಾರಗಳು ಖರೀದಿಸಿಯೇ ಇಲ್ಲ. 

ದ್ವಿದಳ ಧಾನ್ಯಗಳನ್ನು ಬೆಳೆಯುವ ರೈತರ ಬವಣೆ ಹೆಚ್ಚಾಗಲು ಇವೆಲ್ಲ ಯೋಜನೆಗಳ ಲೋಪದೋಷಗಳೇ ಕಾರಣ. ನಮ್ಮ ದೇಶದಲ್ಲಿ ದ್ವಿದಳ ಧಾನ್ಯಗಳ ಉತ್ಪಾದನೆ ಹೆಚ್ಚುತ್ತಿದ್ದರೂ ಕಳೆದ ಎರಡು ವರುಷಗಳಲ್ಲಿ ಕೇಂದ್ರ ಸರಕಾರ ಲಕ್ಷಗಟ್ಟಲೆ ಟನ್‌ ದ್ವಿದಳ ಧಾನ್ಯ ಆಮದು ಮಾಡಿಕೊಂಡದ್ದು ಎಲ್ಲದಕ್ಕಿಂತ ಮುಖ್ಯ ಕಾರಣ. ಇನ್ನಾದರೂ ಸರಕಾರ ಈ ಎಲ್ಲ ಲೋಪದೋಷಗಳನ್ನು ಸರಿಪಡಿಸಿ, ದ್ವಿದಳ ಧಾನ್ಯ ಬೆಳೆಗಾರರ ಹಿತ ಕಾಯುತ್ತದೆಂದು ಆಶಿಸೋಣ.

– ಅಡ್ಕೂರು ಕೃಷ್ಣ ರಾವ್‌

ಟಾಪ್ ನ್ಯೂಸ್

2-muddebihala

Muddebihal: ಟ್ರ್ಯಾಕ್ಟರ್-ಟ್ರೇಲರ್‌ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು

Shiggavi-candidate

By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್‌ ಪಠಾಣಗೋ?

Kalinga-King-cobra

King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!

Mysuru-Nirmala

Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’

DKS–HDD-HDK

By Election: ಚನ್ನಪಟ್ಟಣದಲ್ಲಿ ಎಚ್‌.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್‌ ಮೇಕೆದಾಟು ಜಟಾಪಟಿ

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

Paper-Reader

Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

2-muddebihala

Muddebihal: ಟ್ರ್ಯಾಕ್ಟರ್-ಟ್ರೇಲರ್‌ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು

Shiggavi-candidate

By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್‌ ಪಠಾಣಗೋ?

Kalinga-King-cobra

King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!

Mysuru-Nirmala

Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’

DKS–HDD-HDK

By Election: ಚನ್ನಪಟ್ಟಣದಲ್ಲಿ ಎಚ್‌.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್‌ ಮೇಕೆದಾಟು ಜಟಾಪಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.