ಇಲ್ನೋಡಿ ಕಾರ್…
Team Udayavani, Oct 5, 2020, 8:03 PM IST
ಈಗಾಗಲೇ ಕಿಯಾ ಸೆಲ್ಟೋಸ್ ಮೂಲಕ ಮಾರುಕಟ್ಟೆಯಲ್ಲಿ ಜೋರು ಸದ್ದು ಮಾಡುತ್ತಿರುವ ದಕ್ಷಿಣ ಕೊರಿಯಾದ ಕಿಯಾ ಕಂಪನಿ, ಮತ್ತೂಂದು ಎಸ್ಯುವಿಯನ್ನು ಭಾರತದ ರಸ್ತೆಗೆ ಬಿಟ್ಟಿದೆ. ದೇಶದ ಮಧ್ಯಮ ವರ್ಗವನ್ನೂ ಟಾರ್ಗೆಟ್ ಮಾಡಿಕೊಂಡಿರುವ ಕಿಯಾ ಕಂಪನಿ, 10 ಲಕ್ಷದದ ಒಳಗೆ ಉತ್ತಮ ಫೀಚರ್ ಗಳುಳ್ಳ ಪ್ರೀಮಿಯಂ ಎಸ್ಯುವಿ ಖರೀದಿ ಮಾಡಲು ಅವಕಾಶ ಮಾಡಿಕೊಟ್ಟಿದೆ. ಹುಂಡೈ ವೆನ್ಯು, ಫೋರ್ಡ್ ಎಕೋನ್ಪೋರ್ಟ್, ಟಾಟಾ ನಿಕ್ಸೋನ್, ಮಾರುತಿ ಸುಜುಕಿ ವಿಟಾರಾ ಬ್ರೀಝಾಗೆ ಕಿಯಾ ಸೋನೆಟ್ ಸ್ಪರ್ಧೆ ಕೊಟ್ಟಿದೆ. ವಿಶೇಷವೆಂದರೆ ಕಿಯಾ ಸೋನೆಟ್ ಅನ್ನು ಹುಂಡೈ ವೆನ್ಯು ರೀತಿಯಲ್ಲೇ ಅಭಿವೃದಿಟಛಿ ಪಡಿಸಲಾಗಿದೆ. ಆದರೆ, ಫೀಚರ್ಗಳ ಮತ್ತು ವಿನ್ಯಾಸದ ಲೆಕ್ಕಾಚಾರದಲ್ಲಿ ವೆನ್ಯುಗಿಂತ ಒಂದು ಹೆಜ್ಜೆ ಮುಂದೆಯೇ ಇದೆ. ಹೊರಾಂಗಣದಲ್ಲೂ ನ್ಪೋರ್ಟಿ ಡಿಸೈನ್ ಮೂಲಕ ಮನ ಸೆಳೆಯುವಂತಿರುವ ಈ ಕಾರಿನ ಒಳಾಂಗಣವೂ, ಸ್ಟೈಲಿಷ್ ಆಗಿದೆ.
10.25 ಇಂಚಿನ ಇನ್ಫೋಟೈನ್ಮೆಂಟ್, ಡಿಜಿಟಲ್ ಮತ್ತು ಆನ್ಲಾಗ್ ಮಿಶ್ರಿತ ಡಿಸ್ಪ್ಲೇ, ವೈರೆಲಸ್ ಚಾರ್ಜಿಂಗ್ ಪಾಯಿಂಟ್ಗಳ ಫೀಚರ್ಗಳಿವೆ. ಈ ಕಾರಿನ ವಿಶೇಷ ಸನ್ರೂಫ್. ಹಾಗೆಯೇ, ಗಾಳಿಯ ಶುದಿಟಛೀಕರಣ ವ್ಯವಸ್ಥೆಯೂ ಇದ್ದು, ಇದು ಬ್ಯಾಕ್ಟೀರಿಯಾಗಳಿಂದ ರಕ್ಷಣೆ ನೀಡುತ್ತದೆ. ರಿಮೋಟ್ ಸ್ಟಾರ್ಟಿಂಗ್ ಫೀಚರ್, ಫ್ರಂಟ್ ಪಾರ್ಕಿಂಗ್ ಸೆನ್ಸರ್, ಎಲ್ ಇಡಿ ಮೂಡ್ ಲೈಟ್ ಈ ಕಾರಿಗೆ ಬೇರೆಯದ್ದೇ ಮೆರಗು ನೀಡಿವೆ. ಭದ್ರತೆ ದೃಷ್ಟಿಯಲ್ಲಿ ಇದು ಆರು ಏರ್ಬ್ಯಾಗ್ಗಳನ್ನು ಹೊಂದಿದೆ. ವಾಯ್ಸ ಕಂಟ್ರೋಲ್ ವ್ಯವಸ್ಥೆ ಉತ್ತಮವಾಗಿದೆ. ಇದನ್ನು ಬಳಸಿಕೊಂಡೇ ನೆವಿಗೇಶನ್, ಎಸಿಯನ್ನು ನಿಯಂತ್ರಿಸಬಹುದು. ಅಂದಹಾಗೆ ಇದು ಮೂರು ಎಂಜಿನ್ಗಳ ಆಯ್ಕೆಯಲ್ಲಿ ಸಿಗುತ್ತದೆ. 1.0 ಲೀ. ಟರ್ಬೋ ಚಾರ್ಜ್ಡ್ ಪೆಟ್ರೋಲ್, 1.2 ಲೀ.ನ್ಯಾಚುರಲಿ ಆಸ್ಪ್ರೆರ್ಡ್ ಪೆಟ್ರೋಲ್, 1.5 ಲೀ. ಡೀಸೆಲ್ ಎಂಜಿನ್ನಲ್ಲೂ ಸಿಗುತ್ತದೆ.
-ಸಿ.ಜೆ. ಸೋಮಶೇಖರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.