ಬಸವಣ್ಣನ ಹೋಟ್ಲಲ್ಲಿದೆ ಸ್ಪೆಶಲ್‌ ತುಪ್ಪದ ಇಡ್ಲಿ


Team Udayavani, Jul 8, 2019, 5:00 AM IST

n-4

ಜೋಳದ ರೊಟ್ಟಿ, ಕೆಂಪ್‌ ಚಟ್ನಿ, ಒಗ್ಗರಣೆ ಮಂಡಕ್ಕಿಗೆ ಹೆಸರಾದ ರಾಯಚೂರಲ್ಲಿ ತುಪ್ಪದ ಇಡ್ಲಿಯೂ ಸಿಗುತ್ತೆ. ಅದೂ ಕಡಿಮೆ ದರದಲ್ಲಿ ಅಂದ್ರೆ ನಂಬಲೇಬೇಕು. ರಾಯಚೂರು ನಗರದ ನೇತಾಜಿ ರಸ್ತೆ (ಸರಾಫ್ ಬಜಾರ ರಸ್ತೆ)ಗೆ ಬಂದು ಗೀತಾ ಮಂದಿರ ಕ್ರಾಸ್‌ನಲ್ಲಿ
ನಿಂತ್ರೆ ಬಸವ ಟಿಫ‌ನ್‌ ಸೆಂಟರ್‌ ಕಾಣುತ್ತೆ. ಗೊತ್ತಾಗ್ಲಿಲ್ಲ ಅಂದ್ರೆ ಮಿರ್ಚಿ ಬಸವರಾಜು ಹೋಟೆಲ್‌ ಯಾವುದು ಅಂದ್ರೆ ಜನ ತೋರಿಸುತ್ತಾರೆ. ನೋಡಲಿಕ್ಕೆ ಪುಟ್ಟದಾಗಿ ಕಾಣುವ ಈ ಹೋಟೆಲ್‌ನಲ್ಲಿ ಶುಚಿ, ರುಚಿಗೆ ಆದ್ಯತೆ ನೀಡಲಾಗಿದೆ.

ಬೆಳಗ್ಗೆ ಮತ್ತು ಸಂಜೆ ಗ್ರಾಹಕರು ಹೆಚ್ಚಿರುತ್ತಾರೆ. ಇಲ್ಲಿ ತಿಂಡಿಯನ್ನು ಮೊದಲೇ ಸಿದಟಛಿಪಡಿಸಿಟ್ಟಿರುವುದಿಲ್ಲ. ಗ್ರಾಹಕರ ಸಂಖ್ಯೆಗೆ ಅನುಗುಣವಾಗಿ ತಕ್ಷಣ ತಯಾರಿಸಿ ಕೊಡ್ತಾರೆ. ರಾಯಚೂರಿನ ಹಲವು ಕಡೆ ಇಡ್ಲಿ, ಇತರೆ ತಿಂಡಿ ಸಿಗುತ್ತದೆಯಾದ್ರೂ, ತುಪ್ಪದ ಇಡ್ಲಿಯನ್ನು ಯಾರೂ ಮಾಡಲ್ಲ. ಹೀಗಾಗಿ, ಗ್ರಾಹಕರು ಮಿರ್ಚಿ ಬಸಣ್ಣನ ಹೋಟೆಲ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಬರ್ತಾರೆ.

ಮಾನ್ವಿ ತಾಲೂಕಿನ ಹೊಕರಣಿ ಗ್ರಾಮದ ಬಸವರಾಜು, ತಂದೆ ಉದ್ದಾನಪ್ಪ ನಡೆಸುತ್ತಿದ್ದ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ತಂದೆಯ ನಿಧನಾನಂತರ 1980ರಲ್ಲಿ ರಾಯಚೂರಿಗೆ ಬಂದ ಬಸವರಾಜು, ತಳ್ಳುವ ಗಾಡಿಯಲ್ಲಿ ಮಿರ್ಚಿ, ಬಜ್ಜಿ ಮಾರಿಕೊಂಡು ಜೀವನ ಆರಂಭಿಸಿದರು. ನಂತರ 2001ರಲ್ಲಿ ಮಳಿಗೆಯೊಂದನ್ನು ಬಾಡಿಗೆ ಪಡೆದು,
ಬಸವ ಟಿಫ‌ನ್‌ ಸೆಂಟರ್‌ ಹೆಸರಲ್ಲಿ ಹೋಟೆಲ್‌ ನಡೆಸುತ್ತಿದ್ದಾರೆ. ಮೊದಲಿಂದಲೂ ಮಿರ್ಚಿ ಮಾಡುತ್ತಿದ್ದ ಮಾಡುತ್ತಿದ್ದ ಕಾರಣ, ಜನ ಇವರನ್ನು ಮಿರ್ಚಿ ಬಸವರಾಜು ಎಂದೇ ಕರೆಯುತ್ತಾರೆ. ಮೂವರು ಮಕ್ಕಳಿಗೂ ಆಧಾರ ಪಿಯುಸಿ, ಡಿಗ್ರಿ ಮಾಡಿರುವ ಮಲ್ಲಿಕಾರ್ಜುನ್‌, ಬನಶಂಕರ್‌ ಹಾಗೂ ಸುರೇಶ್‌ ಸದ್ಯ, ಬೇರೆ ಉದ್ಯೋಗ ಬಿಟ್ಟು ತಮ್ಮ ತಂದೆ ಜೊತೆ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.

ಸಿಗುವ ಇತರೆ ತಿಂಡಿ: ಬೆಳಗ್ಗೆ ಇಡ್ಲಿ, ಮಸಾಲೆ ವಡೆ, ಪೂರಿ, ಒಗ್ಗರಣೆ ಮಂಡಕ್ಕಿ ಮಾಡಲಾಗುತ್ತದೆ. ಸಂಜೆ ಹೆಚ್ಚುವರಿಯಾಗಿ ಮಿರ್ಚಿ, ಮದ್ದೂರು ವಡೆ ಮಾಡಲಾಗುತ್ತದೆ. ದರ ಕೇವಲ 24 ರೂ.

ಹೋಟೆಲ್‌ ವಿಳಾಸ: ನೇತಾಜಿ ರಸ್ತೆ(ಸರಾಫ್ ಬಜಾರ್‌ ರೋಡ್‌), ಗೀತಾ ಮಂದಿರ ಕ್ರಾಸ್‌ನ ಮೂಲೆಯಲ್ಲಿ, ರಾಯಚೂರು ನಗರ.
ಹೋಟೆಲ್‌ ಸಮಯ: ಬೆಳಗ್ಗೆ 7 ರಿಂದ ಮಧ್ಯಾಹ್ನ 1, ಸಂಜೆ 4ರಿಂದ ರಾತ್ರಿ 10 ರವರೆಗೆ.
ಪ್ರತಿ ಭಾನುವಾರ, ಅಮಾವಾಸ್ಯೆ ದಿನ ರಜೆ.
ಹೋಟೆಲ್‌ನ ವಿಶೇಷ ತಿಂಡಿ: ತುಪ್ಪದ ಇಡ್ಲಿ ಈ ಹೋಟೆಲ್‌ ವಿಶೇಷ, ಇಡ್ಲಿಗೆ ತುಪ್ಪ ಹಾಕಿ, ಜೊತೆಗೆ ಚಟ್ನಿ ಪುಡಿ, ಶೇಂಗಾ ಪುಡಿ ಕೊಡ್ತಾರೆ. ದರ 40 ರೂ.(ಇಡ್ಲಿ ನಾಲ್ಕು)

ಭೋಗೇಶ ಆರ್‌. ಮೇಲುಕುಂಟೆ
ಫೋಟೋ ಕೃಪೆ: ಖಾದರ್‌

ಟಾಪ್ ನ್ಯೂಸ್

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?

1-bbbbb

Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?

DCM-Fadnavis

Assembly Election: ಮಹಾರಾಷ್ಟ್ರಕ್ಕೆ ಫ‌ಡ್ನವೀಸ್‌ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ

ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

BJP: ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

Supriya-Sule

Maha Election: ಡಿಕೆಶಿ ಸೇರಿ ಕಾಂಗ್ರೆಸ್‌ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

courts-s

Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?

1-bbbbb

Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?

DCM-Fadnavis

Assembly Election: ಮಹಾರಾಷ್ಟ್ರಕ್ಕೆ ಫ‌ಡ್ನವೀಸ್‌ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.