ಮತ್ತೆ ಬಾ ಎಂದು ಕರೆಯುತ್ತೆ ಮಧು ಒಗ್ಗರಣೆ ಮಂಡಕ್ಕಿ

Team Udayavani, Jul 15, 2019, 5:02 AM IST

hotel

ಹರಿಹರದಿಂದ ಶಿವಮೊಗ್ಗಕ್ಕೆ ಹೋಗುವಾಗ, ಮಲೆಬೆನ್ನೂರು ದಾಟಿದರೆ ಕೋಮಾರನಹಳ್ಳಿ ಸಿಗುತ್ತದೆ. ಈ ಗ್ರಾಮಕ್ಕೆ ಎಂಟ್ರಿ ಕೊಟ್ರೆ ಸಾಕು; ಅಲ್ಲಿ ಸಾಲು ಸಾಲಾಗಿ ಕಾರುಗಳು ನಿಂತಿರುವ ದೃಶ್ಯ ಕಾಣುತ್ತದೆ. ಹಾಗೇ ಮುಂದೆ ಸಾಗಿದರೆ, ಮೆಣಸಿನ ಕಾಯಿ ಬಜ್ಜಿ, ಮಂಡಕ್ಕಿ ಒಗ್ಗರಣೆಯ ವಾಸನೆ ಮೂಗಿಗೆ ಬಡಿಯುತ್ತೆ. ನಾಮಫ‌ಲಕವಿಲ್ಲದ ಜಂಗ್‌ಶೀಟ್‌ ಹಾಕಿದ ಒಂದು ಪುಟ್ಟ ಮಳಿಗೆ ಮುಂದೆ ಜನ ನಿಂತಿರುವುದು, ಮತ್ತಷ್ಟು ಜನ ಕೂತು ಮಿರ್ಚಿ ಮಂಡಕ್ಕಿ ಸೇವಿಸುತ್ತಿರುವುದು ಕಾಣುತ್ತೆ. ಅಲ್ಲಿ ಒಬ್ರು ಟೀ ಶರ್ಟ್‌ ಲುಂಗಿ ಕಟ್ಟಿಕೊಂಡು ಜನರಿಗೆ ಬಿಸಿ ಬಿಸಿ ಒಗ್ಗರಣೆ ಮಂಡಕ್ಕಿ ವಿತರಿಸುತ್ತಿರುತ್ತಾರೆ. ಅವರೇ ಮಧು, ಈ ಹೋಟೆಲ್‌ನ ಮಾಲೀಕರು.

ಕೋಮಾರನಹಳ್ಳಿಯವರೇ ಆದ ಸೀತಾರಾಮಾಚಾರ್‌, 35 ವರ್ಷಗಳ ಹಿಂದೆ ಈ ಹೋಟೆಲ್‌ ಆರಂಭಿಸಿದ್ರು. ಈಗ ಅವರ ಮಗ ಕೆ.ಎಸ್‌.ಮಧುಸೂದನ್‌ ಈ ಹೋಟೆಲಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಈ ಹೋಟೆಲ್‌ಗೆ ನಾಮಫ‌ಲಕವಿಲ್ಲದ ಕಾರಣ, ಹೊಸದಾಗಿ ಹೋಗುವವರು ಮಧು ಮಂಡಕ್ಕಿ ಹೋಟೆಲ್‌ ಯಾವುದು ಎಂದು ಕೇಳಿದರೆ ತೋರಿಸುತ್ತಾರೆ. ದಾವಣಗೆರೆಯಿಂದ ಶಿವಮೊಗ್ಗಕ್ಕೆ ಆಗ್ಗಾಗ್ಗೆ ಓಡಾಡುವವರು ಮಧು ಹೋಟೆಲ್‌ನಲ್ಲಿ ಒಂದು ಮಿರ್ಚಿನಾದ್ರೂ ತಿಂದು ಹೋಗುವುದನ್ನು ಮರೆಯಲ್ಲ. ಮಾಜಿ ಸಿಎಂ ಯಡಿಯೂರಪ್ಪ, ಈಶ್ವರಪ್ಪ ಹೀಗೆ ಹಲವು ರಾಜಕಾರಣಿಗಳು, ಸಿನಿಮಾ ನಟರು, ಪತ್ರಕರ್ತರು, ನೌಕರರು, ಪ್ರವಾಸಿಗರು ಮಧು ಮಂಡಕ್ಕಿಯ ರುಚಿಗೆ ಮನಸೋತಿದ್ದಾರೆ.

ಎಲ್ಲವೂ ಬಿಸಿಬಿಸಿ:
ಒಂದು ತಪ್ಪಲೆಯಲ್ಲಿ ಒಗ್ಗರಣೆ ಮಂಡಕ್ಕಿ ಮಾಡಿದ್ರೆ ಒಂದು ಗಂಟೆಯಲ್ಲಿ ಖಾಲಿಯಾಗಿರುತ್ತದೆ. ಯಾವುದನ್ನೂ ಮೊದಲೇ ಸಿದ್ಧಪಡಿಸಿ ಇಟ್ಟಿರುವುದಿಲ್ಲ. ಗ್ರಾಹಕರನ್ನು ನೋಡಿಕೊಂಡು ಆಗಲೇ ಸಿದ್ಧಪಡಿಸಿಕೊಡುತ್ತಾರೆ. ದಿನಕ್ಕೆ ಎಷ್ಟು ಮಂಡಕ್ಕಿ ಖಾಲಿ ಯಾಗುತ್ತೆ ಎಂಬುದನ್ನು ಇವರು ಈವರೆಗೂ ಲೆಕ್ಕ ಇಟ್ಟಿಲ್ಲ. ವಾರ ಪೂರ್ತಿ ಹೋಟೆಲ್‌ ತೆರೆದೇ ಇರುವುದರಿಂದ ತಿಂಡಿ ಸಿಕ್ಕೇ ಸಿಗುತ್ತೆ ಎಂಬ ನಂಬಿಕೆ ಮೇಲೆ ಜನ ಬರುತ್ತಾರೆ. ಮಂಡಕ್ಕಿ ಒಗ್ಗರಣೆ, ಅವಲಕ್ಕಿ ಒಗ್ಗರಣೆ ಜೊತೆ ಮೆಣಸಿನಕಾಯಿ ಬಜ್ಜಿ ಅಥವಾ ಪಕೋಡಾ ತಿಂದು ಒಂದು ಕಪ್‌ ಟೀ ಕುಡಿದ್ರೆ ಅಲ್ಲಿಗೆ ಒಂದೊತ್ತಿನ ಊಟ ಮುಗಿದಂತೆ. ನರ್ಗೀಸ್‌, ಚೌಚೌ(ಸೇವ್‌) ಕೂಡ ಇಲ್ಲಿ ಸಿಗುತ್ತೆ. ಮಂಡಕ್ಕಿ-ಅವಲಕ್ಕಿ ಒಗ್ಗರಣೆಯನ್ನು ಮೊಸರಿನೊಂದಿಗೆ ತಿಂದರೆ ಅದರ ರುಚಿಯೇ ಬೇರೆ. ಮಧು ಅವರೊಂದಿಗೆ ನಾಲ್ಕೈದು ಮಂದಿ ಕೆಲಸ ಮಾಡುತ್ತಾರೆ. ಬಜ್ಜಿ ಕರಿಯುವುದು, ಮಂಡಕ್ಕಿ ಒಗ್ಗರಣೆ ಹಾಕುವುದು ಹೀಗೆ ಎಲ್ಲರೂ ಒಂದೊಂದು ಕೆಲಸ ಮಾಡುತ್ತಾರೆ. ಸಾಮಾನ್ಯ ಹೋಟೆಲ್‌ಗ‌ಳಂತೆ ಕುರ್ಚಿ, ಟೇಬಲ್‌ಗ‌ಳಿಲ್ಲದ ಮಧು ಹೋಟೆಲ್‌, ಮಂಡಕ್ಕಿ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ.

ಹೋಟೆಲ್‌ನ ಸಮಯ:
ಬೆಳಗ್ಗೆ 5.30ಕ್ಕೆ ಪ್ರಾರಂಭವಾದ್ರೆ ರಾತ್ರಿ 9 ಗಂಟೆವರೆಗೆ ತೆರೆದಿರುತ್ತದೆ. ಊರ ಹಬ್ಬ ಇದ್ರೆ ಮಾತ್ರ ರಜೆ.

ಹೋಟೆಲ್‌ ವಿಳಾಸ:
ಕೋಮಾರನಹಳ್ಳಿ ಗ್ರಾಮ, ಹರಿಹರ ತಾಲೂಕು, ಶಿವಮೊಗ್ಗ ಮುಖ್ಯರಸ್ತೆಯಲ್ಲಿ ಮಲೇಬೆನ್ನೂರು ಹೋಬಳಿ ಕೇಂದ್ರದಿಂದ 2 ಕಿ.ಮೀ. ಸಾಗಿದರೆ ಬಲಭಾಗದಲ್ಲಿ ಇದೆ.

ದೊರೆಯುವ ತಿಂಡಿಗಳು:
ಖಾರಾ (ಸೇವ್‌), ಮಂಡಕ್ಕಿ ಖಾರಾ, ಒಗ್ಗರಣೆ ಮಂಡಕ್ಕಿ, ಒಗ್ಗರಣೆ ಅವಲಕ್ಕಿ, ಮೆಣಸಿನ ಕಾಯಿ (ಮಿರ್ಚಿ), ಈರುಳ್ಳಿ ಬಜ್ಜಿ, ಟೀ… ಹೀಗೆ ಮೂರು ನಾಲ್ಕು ಬಗೆಯ ತಿಂಡಿ ಸಿಗುತ್ತದೆ. ಮಂಡಕ್ಕಿ ಒಗ್ಗರಣೆ, ಮಿರ್ಚಿ, ಟೀ ಮೂರೂ ಸೇರಿ 30 ರೂ., ಮಂಡಕ್ಕಿ ಒಗ್ಗರಣೆ, ಅವಲಕ್ಕಿ ಒಗ್ಗರಣೆ ಪ್ಲೇಟ್‌ಗೆ ದರ 20 ರೂ.. ಸಿಂಗಲ್‌ ಬಜ್ಜಿ, ಟೀಗೆ ತಲಾ 5 ರೂ.

– ಭೋಗೇಶ ಆರ್‌.ಮೇಲುಕುಂಟೆ

– ಫೋಟೋ ಕೃಪೆ: ಕೆ.ಎಂ.ಶ್ರೀವತ್ಸಾ.

ಟಾಪ್ ನ್ಯೂಸ್

ಆಯನೂರು ಮಂಜುನಾಥ್

Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Ravishankar

Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ

YouTuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಆಯನೂರು ಮಂಜುನಾಥ್

Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Ravishankar

Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ

YouTuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.