ಶ್ರೀಧರ ಸಂಭ್ರಮ

Team Udayavani, Jan 21, 2019, 12:30 AM IST

tonde4-copy-copy.jpg

ಶಿರಸಿಯ ಕಬ್ಬೆ ಗ್ರಾಮದ ಶ್ರೀಧರ ಗಂಗೇಮತ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಗಾಗಿ ಹಳ್ಳಿ ಹಳ್ಳಿಗೆ ಓಡಾಡುತ್ತಿದ್ದರು. ಅಲ್ಲಿನ ಕೃಷಿ, ರೈತರ ಪಾಡು, ಮಾರುಕಟ್ಟೆಯ ಸ್ಥಿತಿಗತಿ ಎಲ್ಲವನ್ನೂ ಗಮನಿಸಿ, ನಾನೂ ಏಕೆ ಕೃಷಿಕನಾಗಬಾರದು ಅಂತ ಕೃಷಿ ಕೆಲಸಕ್ಕೆ ಇಳಿದೇ ಬಿಟ್ಟರು.  ಈಗ ನೋಡಿ, ಪ್ರತಿವಾರ ತರಕಾರಿ ಬೆಳೆ ತೆಗೆಯುತ್ತಾ ಖುಷಿಯಾಗಿದ್ದಾರೆ. 

ಶಿರಸಿಯಿಂದ ಎಂಟು ಕಿ.ಮೀ ದೂರದಲ್ಲಿ  ಕಬ್ಬೆ ಅನ್ನೋ ಊರು ಇದೆ. ಅಲ್ಲಿರುವ ಒಂದೂವರೆ ಎಕರೆ ಜಮೀನಿನಲ್ಲಿ ಇವರು ತೊಂಡೆ ಕೃಷಿ ಮಾಡುತ್ತಿದ್ದಾರೆ. ಇದರ ಜೊತೆ ಜೊತೆಗೇ ಸೊಪ್ಪು, ಇತರೆ ತರಕಾರಿಗಳೂ ಇವೆ. 

ಇವರಲ್ಲಿ 54 ತೊಂಡೆ ಬಳ್ಳಿಗಳಿವೆ. ಇದರಿಂದ ವಾರಕ್ಕೆ  ನಾಲ್ಕು ಸಾವಿರ ಸಿಗುತ್ತಿದೆ. ಬೆಂಡೆ ಕಾಯನ್ನು ಕೊಯ್ದು, ಎಳೆಯದರಲ್ಲೇ ಅದನ್ನು ಮಾರಾಟ ಮಾಡುತ್ತಾರೆ. 

ಶ್ರೀಧರ ತರಕಾರಿ ಬೆಳೆಯಲು ಭೂಮಿ ಸಿದ್ಧಗೊಳಿಸಿದ ಬಗೆಯೂ ವಿಶಿಷ್ಟವಾಗಿತ್ತು. ಮೊದಲು ಅದು ಹೇಗೆಂದರೆ,  ಎರಡೂವರೆ ಅಡಿ ಆಳದ ಗುಂಡಿ ತೋಡಿ, ಗೊಬ್ಬರ, ಸೊಪ್ಪು ಹಾಕಿ ತೊಂಡೆ ಬೆಳೆಯಲು ಆರಂಭಿಸಿದರು. ತಿಂಗಳಲ್ಲೇ ವಾರಕ್ಕೆ ಕೆ.ಜಿ ತೊಂಡೆ ಕಾಯಿ ಕೋಯ್ದ ಇವರೀಗ ಈಗ ತೊಂಡೆ ಶ್ರೀಧರ ಅಂತಲೇ ಹೆಸರಾಗಿದ್ದಾರೆ.  ವಾರಕ್ಕೆ ಮೂವತ್ತರಿಂದ ನಲವತ್ತು ಕೆಜಿ ತೊಂಡೆಕಾಯಿ ದೊರೆಯುತ್ತಿದೆ. ಒಂದು ಕೆ.ಜಿ ತೊಂಡೆಕಾಯಿಗೆ ನಲವತ್ತು ರೂಪಾಯಿ ಸಿಗುತ್ತಿದೆ. ಇದಕ್ಕಾಗಿ ನಿರ್ವಹಣೆ, ಹನಿ ನೀರಾವರಿ, ಗೊಬ್ಬರ ಸೇರಿ 3 ಸಾವಿರ ರೂ. ಖರ್ಚು. ಉಳಿದ ಮೂರು ವಾರದ ಆದಾಯ ಲಾಭ ಎನ್ನುತ್ತಾರೆ ಶ್ರೀಧರ.

ತರಕಾರಿ ಬೆಳೆಯ ವಿಸ್ತಾರದ ಕನಸು ಹೊತ್ತು ಕೆಲಸ ಮಾಡುತ್ತಿರುವ ಶ್ರೀಧರ, ಮನೆಯ ಹಿಂಭಾಗದಲ್ಲಿಯೇ ಮಲ್ಲಿಗೆ ಗಿಡವನ್ನು ನೆಟ್ಟಿದ್ದು, ಅವರಲ್ಲಿ ಕೂಡಾ ಹೂ ಅರಳಿ ನಿಂತಿದೆ. ಮಲ್ಲಿಗೆ ಕೊಯ್ಲು ಮಾಡಿ ದಿನವೂ  ಹತ್ತು ಮಾರು ಮಾರಾಟ ಮಾಡುತ್ತಿದ್ದಾರೆ. ಒಂದು ಮಾರು ಹೂವಿಗೆ ಹದಿನೈದು ರೂಪಾಯಿ  ಸಿಗುತ್ತಿದೆ.  ಪತ್ನಿ ನಿರ್ಮಲಾ, ಮನೆ ಮಕ್ಕಳು ಮಲ್ಲಿಗೆ ಮಾಲೆ ಮಾಡಲು ಸಹಕಾರ ನೀಡುತ್ತಿದ್ದಾರೆ. ಕೃಷಿ ಭೂಮಿಯಲ್ಲಿ ಗಂಡ ಹೆಂಡತಿ ಶ್ರಮವಹಿಸಿ ದುಡಿಯುವದಲ್ಲದೇ ಮಾರಾಟಕ್ಕೆ ಶಿರಸಿ ಪೇಟೆಗೆ ಬಂದು ಗ್ರಾಹಕ ಇದ್ದಲ್ಲೇ ಕೊಟ್ಟು ಹೋಗುತ್ತಾರೆ. ವಾರಕ್ಕೆ ಎರಡು, ಮೂರು ದಿನ 

ವ್ಯಾಟ್ಸ್‌ ಅಪ್‌ ಗಳಲ್ಲಿ ಮೆಸೇಜ್‌ ಹಾಕಿ, ಅಗತ್ಯವುಳ್ಳವರ ಬೇಡಿಕೆಯನ್ನು ಪೂರೈಸುತ್ತಾರೆ.ಕುಟುಂಬಕ್ಕೆ ತರಕಾರಿ ಹೂವು ಬದುಕು ಅರಳಿಸಿದೆ. ಶಿರಸಿ ಸೀಮೆ ಗ್ರಾಹಕರ ಮನೆಗೇ ತಲುಪಿಸಲು 9731550279 ಮೆಸೇಜ್‌ ಮಾಡಿದರೂ ತರಕಾರಿ ಜೊತೆ ಶ್ರೀಧರ ಹಾಜರ್‌ ಆಗುತ್ತಾರೆ.

– ರಾಘವೇಂದ್ರ ಬೆಟ್ಟಕೊಪ್ಪ

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.