ಉಕ್ಕಿನ ಮನೆ
Team Udayavani, Mar 13, 2017, 12:10 PM IST
ಮನೆ ಕಟ್ಟುವಾಗ ಇಲ್ಲವೇ ನಂತರ ಕೆಲವೊಮ್ಮೆ ಯಾವುದಾದರೂ ಒಂದು ಆಧಾರ ಸರಿಯಿಲ್ಲವೇನೋ ಎಂಬ ಸಂಶಯ ಬರುತ್ತದೆ. ಹೀಗೆ ಒಂದೆರೆಡು ದಿನ ನಿದ್ದೆ ಕೆಡಿಸಿದ ನಂತರ ಏನಾದರೂ ಒಂದು ಹೆಚ್ಚುವರಿಯಾದ ಆಧಾರ ಕಲ್ಪಿಸೋಣವೇ? ಎಂಬ ಉಪಾಯ ಹೊಳೆದಾಗ ತಕ್ಷಣ ಮನಸ್ಸಿಗೆ ಬರುವುದೇ ಸ್ಟೀಲ್ ಸಪೋರ್ಟ್. ಉಕ್ಕಿನ ಆಧಾರಗಳು ತೆಳ್ಳಗಿದ್ದರೂ ಬಲು ಗಟ್ಟಿಯಾಗಿದ್ದು, ಹೆಚ್ಚಿಗೆ ಸ್ಥಳವನ್ನು ತೆಗೆದುಕೊಳ್ಳದೆ ತಮ್ಮ ಕಾರ್ಯವನ್ನು ಯಷಸ್ವಿಯಾಗಿ ನಿರ್ವಹಿಸಬಲ್ಲವು. ಕಾಂಕ್ರಿಟ್‌ಗೆ ಇರುವ ಕೆಲ ಮಿತಿಗಳು ಉಕ್ಕಿಗೆ ಇಲ್ಲ. ಹೊಸದಾಗಿ ಆರ್‌ಸಿಸಿ ಆಧಾರ ಕಲ್ಪಿಸಬೇಕೆಂದರೆ ಅದು ಹಳೆಯದರೊಂದಿಗೆ ಸರಿಯಾಗಿ ಬೆಸೆಯುತ್ತದೋ ಇಲ್ಲವೋ ಎಂಬ ಗುಮಾನಿ ಇರುತ್ತದೆ. ಆದರೆ ಉಕ್ಕಿನ ಪೈಪ್ ಇಲ್ಲವೇ ಚಾನಲ್‌ಗಳನ್ನು ಎಕ್ಸ್ ಪ್ಯಾಂಡಿಂಗ್ ಆ್ಯಂಕರ್ ಬೋಲ್ಟ್‌ಗಳ ಸಯಾಯದಿಂದ ಆರ್‌ಸಿಸಿ ಕಟ್ಟಡಗಳಲ್ಲಿ ಯಶಸ್ವಿಯಾಗಿ ಸೇರಿಸಬಹುದು.
ಬಾಲ್ಕನಿ ಕಿರಿಕಿರಿ
ಗೋಡೆಯಿಂದ ನಿರಾಯಾಸವಾಗಿ ಹೊರಚಾಚಿದಂತಿರುವ ಕ್ಯಾಂಟಿಲಿವರ್ ಆರ್‌ಸಿಸಿ ಸ್ಲಾಬ್‌ಗಳನ್ನು ಸ್ವಲ್ಪ ನಿಷ್ಕಾಳಜಿಯಿಂದ ಮಾಡಿದರೆ, ಅದು ನಾಲ್ಕಾರು ಮಿಲಿಮೀಟರ್ ಬಾಗಿದಂತೆ ಕಾಣಬಹುದು. ಆಗ ನಮಗೆ ಈ ಬಾಗು ಹೆಚ್ಚಾದರೆ? ಹೊರಚಾಚಿರುವ ಬಾಲ್ಕನಿ ಹಲಗೆ ಮುರಿದು ಬಿದ್ದರೆ? ಎಂಬೆಲ್ಲ ಸಂಶಯಗಳು ಬರುವುದು ಸಹಜ. ಸಾಮಾನ್ಯವಾಗಿ ಹೊರ ಚಾಚುಗಳಿಗೆ ಉಕ್ಕಿನ ಕಂಬಿ ಮೇಲು ಪದರದಲ್ಲಿ ಬರುವುದರಿಂದ, ಕಾಂಕ್ರಿಟ್ ಹಾಕುವಾಗ ಅದನ್ನು ಕೆಳಕ್ಕೆ ದಬ್ಬಿಹಾಕಿ ಅದು ನಿಷ್ಕಿ$›ಯವಾಗುವಂತೆ ಮಾಡುವುದು ಅಷ್ಟೇನೂ ಅಪರೂಪವಲ್ಲ. ಹಾಗಾಗಿ ಎಲ್ಲಕ್ಕಿಂತ ಆರ್‌ಸಿಸಿ ಬಾಲ್ಕನಿಗಳಿಗೆ ಹೆಚ್ಚುವರಿಯಾದ ಆಧಾರವನ್ನು ಕೊಡಬೇಕೆಂದು ಯೋಚಿಸುವುದು ಸಾಮಾನ್ಯ ಹಾಗೂ ನಾವು ಸ್ವಲ್ಪ ಗಮನಿಸಿ ನೋಡಿದರೆ, ಕಡೇ ಪಕ್ಷ ಹತ್ತಕ್ಕೆ ಒಂದು ಕಟ್ಟಡದಲ್ಲಾದರೂ ಈ ಮಾದರಿಯ ಹೆಚ್ಚುವರಿ ಆಧಾರ ನೀಡಿರುವುದನ್ನು ನಾವು ಕಾಣಬಹುದು.
ಇತರೆಡೆ ಸ್ಟೀಲ್ ಸಪೋರ್ಟ್
ಕೆಲವೊಮ್ಮೆ ದೊಡ್ಡ ಹಾಲ್ ಇಲ್ಲವೇ ಇತರೆ ವಿಶಾಲವಾದ ಕೋಣೆಯಲ್ಲಿ ಸ್ಲಾ$Âಬ್ ಸ್ವಲ್ಪ ಬಾಗಿದಂತೆ ಕಂಡರೆ, ಆಗಲೂ ನಾವು ಮೊರೆ ಹೋಗುವುದು ಹೆಚ್ಚುವರಿ ಉಕ್ಕಿನ ಆಧಾರಗಳಿಗೆ. ಅದೇ ರೀತಿಯಲ್ಲಿ, ಗೋಡೆಗಳನ್ನು ತೆಗೆದಾಗಲೂ, ಅವುಗಳು ಹೊರುತ್ತಿದ್ದ ಭಾರ ಇತರೆ ಮೂಲಗಳ ಮೂಲಕ ಅಂದರೆ ಪರ್ಯಾಯವಾಗಿ ನೀಡುವ ಉಕ್ಕಿನ ಕಂಬ ಹಾಗೂ ತೊಲೆಗಳ ಮೂಲಕ ಪಾಯಕ್ಕೆ ತಲುಪುವಂತೆ ಮಾಡಬೇಕಾಗುತ್ತದೆ. ಮನೆ ಆಲೆóàಷನ್ ಮಾಡುವಾಗ ಎಲ್ಲೆಡೆ ಗೋಡೆಗಳನ್ನು ಕಟ್ಟಲು ಆಗದ ಕಾರಣ, ಕಣ್ಣಿಗೆ ಹೆಚ್ಚು ಬೀಳದೆ, ಹಿನ್ನೆಲೆಯಲ್ಲೇ ಯಶಸ್ವಿಯಾಗಿ ಕಾರ್ಯನಿರ್ವಹಿಸಬಲ್ಲ, ಈ ಉಕ್ಕಿನ ಆಧಾರಗಳನ್ನು ಬಳಸುವುದು ಜನಪ್ರಿಯವಾಗಿದೆ.
ಉಕ್ಕಿನ ಆಧಾರದ ಲೆಕ್ಕಾಚಾರ
ಸಿಮೆಂಟ್ ಕಾಂಕ್ರಿಟ್‌ಗೆ ಹೋಲಿಸಿದರೆ, ಉಕ್ಕು ಸುಮಾರು ಮೂವತ್ತು ಪಟ್ಟು ಹೆಚ್ಚು ಗಟ್ಟಿಮುಟ್ಟಾಗಿದ್ದು, ಸಾಮಾನ್ಯವಾಗಿ ಠೊಳ್ಳು ಅಂದರೆ ಪೈಪ್ ಇಲ್ಲವೆ ಚಾನೆಲ್ -ಐ ಸೆಕ್ಷನ್‌ಗಳ ಆಕಾರದಲ್ಲಿ ಆಧಾರಗಳನ್ನು ನೀಡಲಾಗುತ್ತದೆ. ಆರ್‌ಸಿಸಿಯಂತೆ ಇವು ಭರ್ತಿಯಾಗಿರದೆ ಉಕ್ಕು ಎಲ್ಲಿ ಬೇಕೋ ಅಲ್ಲಿ ಮಾತ್ರ ಇದ್ದು ಅಂದರೆ ಸಾಮಾನ್ಯವಾಗಿ ಆಯಾ ಆಕಾರದ ಹೊರಮೈಯಲ್ಲಿ ದಪ್ಪಗಿದ್ದು, ಉತ್ತರೆಡೆ ಸ್ವಲ್ಪ ತೆಳ್ಳಗಿರುವುದರ ಮೂಲಕ ಇವು ಹೆಚ್ಚು ಭಾರ ಇರುವುದಿಲ್ಲ.
ಈ ಕಾರಣದಿಂದ ಇವುಗಳ ಬೆಲೆಯೂ ಕಡಿಮೆ ಇರುತ್ತದೆ. ಆದರೆ ಈ ತೆಳ್ಳಗಿನ ಆಕಾರ ಕೆಲವೊಮ್ಮೆ ಅದರ ಮಿತಿಯೂ ಆಗಬಹುದು. ತೀರ ತೆಳ್ಳಗೆ ಹಾಗೂ ಉದ್ದಕ್ಕೆ ಇದ್ದರೆ, ಅದು ಭಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದುದರಿಂದ ಉಕ್ಕಿನ ಆಧಾರಗಳನ್ನು ನೀಡುವ ಮೊದಲು ನುರಿತ ಆರ್ಕಿಟೆಕ್ಟ್ ಇಂಜಿನಿಯರ್‌ಗಳ ಸಹಾಯದಿಂದ ಮೇಲಿನಿಂದ ಬರುವ ಬಾರ ಹಾಗೂ ಆಧಾರದ ಉದ್ದ ನೋಡಿಕೊಂಡು ಸೂಕ್ತ ಗಾತ್ರವನ್ನು ನಿರ್ಧರಿಸಬೇಕಾಗುತ್ತದೆ.
ಉಕ್ಕಿನ ಭೀಮ್ ಇಡುವ ವಿಧಾನ
ಈ ಮೊದಲೇ ಬಾರಹೊರುತ್ತಿರುವ ಸ್ಲಾ$Âಬ್ ಕೆಳಗೊಂದು ಸ್ಟೀಲ್ ಭೀಮ್ ಇಟ್ಟಾಕ್ಷಣ ಅದು ತನ್ನಿಂದ ತಾನೇ ಎಲ್ಲ ಭಾರವನ್ನೂ ಹೊರಲು ಶುರುಮಾಡುವುದಿಲ್ಲ. ಅದನ್ನು ಸೂಕ್ತ ತಯಾರಿಯೊಂದಿಗೆ ಇಡಬೇಕಾಗುತ್ತದೆ. ಉಕ್ಕಿನ ಗರ್ಡರ್ ಇಲ್ಲ ಚಾನೆಲ್‌ಗಳಿಂದ ಮಾಡಿದ ಬಾಕ್ಸ್ ಸೆಕ್ಷನ್ ಗೋಡೆಯ ಮೇಲೆ ಬರುತ್ತಿದ್ದರೆ, ಗೋಡೆಯ ಮೇಲೆ ಕಡೇಪಕ್ಷ ನಾಲ್ಕು ಇಂಚಿನಷ್ಟು ಕಾಂಕ್ರಿಟ್ ಹಾಕಿ, ಅದು ಕ್ಯೂರ್ ಆದಮೇಲೆ ಗರ್ಡರ್ ಇಡುವುದು ಉತ್ತಮ. ಇದು ಹೆಚ್ಚು ವೇಳೆ ತೆಗೆದುಕೊಳ್ಳುತ್ತದೆ ಎಂದೆನಿಸಿದರೆ, ಕೆಳಗೊಂದು ಉಕ್ಕಿನ ಪ್ಲೇಟ್ ಇಟ್ಟು ನಂತರ ಗರ್ಡರ್ ಇಡುವುದು ಉತ್ತಮ. ಹೀಗೆ ಇಟ್ಟ ಪ್ಲೇಟ್ ಕೆಳಗೆ ಉಕ್ಕಿನ ಬೆಣೆಗಳನ್ನು, ಇಲ್ಲವೆ ಪಾ$Éಟ್‌ಗಳನ್ನು ಗಟ್ಟಿಯಾಗಿ ಹೊಡೆದು, ಗರ್ಡರ್ ಸೂರಿನೊಂದಿಗೆ ಧನಾತ್ಮಕವಾದ ಸಂಪರ್ಕ ಹೊಂದಿದೆ ಎಂದು ಖಾತರಿ ಪಡಿಸಿಕೊಳ್ಳಬೇಕು.
ಕೆಲವೊಮ್ಮೆ ಗರ್ಡರ್ ಮಧ್ಯಭಾಗದಲ್ಲಿ ಸ್ವಲ್ಪ ಬಾಗಿದಂತಿದ್ದರೆ, ಹಾಗೂ ಸ್ಲಾ$Âಬ್ ಹಾಗೂ ಈ ಭೀಮಿನ ಮಧ್ಯೆ ಸಂಧಿ ಕಾಣಿಸಿದರೆ, ಅಲ್ಲಿಯೂ ಬೆಣೆ ಹೊಡೆದು ಸೂರಿನ ಭಾರ ಸೂಕ್ತ ರೀತಿಯಲ್ಲಿ ಗರ್ಡರ್ ಮೇಲೆ ಬರುವಂತೆ ಮಾಡಬೇಕು. ಗರ್ಡರ್‌ಗಳನ್ನು ಇಡುವ ಮೊದಲು, ಅವುಗಳಲ್ಲೇನಾದರೂ ನ್ಯೂನತೆ ಇದ್ದು, ಮೊದಲೇ ಸ್ವಲ್ಪ ಬಾಗಿದಂತೆ ಇದೆಯೇ? ಎಂದು ಪರಿಶೀಲಿಸಬೇಕು. ಹಾಗೇನಾದರೂ ಬಾಗಿದ್ದರೆ, ಈ ಬಾಗು ಕೆಳಗೆ ಕಾಣದಂತೆ ಮಾಡಲು, ಈ ಭಾಗ ಮೇಲೆ ಬರುವಂತೆ ಮಾಡಬೇಕು. ಯಾವುದೇ ಭೀಮ್, ಮೇಲಕ್ಕೆ ಬಾಗಿದಂತಿದ್ದರೆ, ನಮಗೆ ಅದು ಬೀಳಬಹುದು, ಭಾರ ಹೆಚ್ಚಾಯಿತೇನೋ? ಎಂದೆನಿಸುವುದಿಲ್ಲ! ಅದೇ ಕೆಳಕ್ಕೆ ಬಾಗಿದ್ದರೆ, ಮತ್ತದೇ ಗಾಬರಿ ಶುರುವಾಗಬಹುದು!
ಕಾಲಂ ಆಧಾರ
ಕಂಬಗಳು ಎಷ್ಟೇ ಗಟ್ಟಿಮುಟ್ಟಾಗಿದ್ದರೂ ಅವು ಯಶಸ್ವಿಯಾಗಿ ಮೇಲಿನ ಭಾರವನ್ನು ಹೊತ್ತು ಕೆಳಗೆ ಸಾಗಿಸಿದಾಗಲೇ ಅವುಗಳಿಗೆ ವ್ಯಯಿಸಿದ ಖರ್ಚು ಸರಿ ಎಂದೆನಿಸುವುದು. ಸ್ಟೀಲ್ ಕಾಲಂ ಪೈಪ್ ನಿಂದ ಮಾಡಿದ್ದಿರಲಿ ಇಲ್ಲ ಚಾನೆಲ್‌ಗಳನ್ನು ಜೋಡಿಸಿ ಮಾಡಿದ ಚೌಕಾಕಾರದ್ದಿರಲಿ, ಮೇಲೆ ಕೆಳಗೆ ದಪ್ಪನೆಯ ಉಕ್ಕಿನ ಪ್ಲೇಟ್ ಅನ್ನು ಪಾದದಂತೆ ನೀಡಲು ಮರೆಯಬಾರದು. ಹಾಗೆಯೇ ಇವು ಮೇಲಿನ ಸ್ಲಾಬ್‌ಗ ಹಾಗೆಯೇ ಕೆಳಗೆ ಸರಿಯಾಗಿ ಕೂರುವಂತೆ, ಡ್ರಿಲ್ ಮಾಡಿ, ಹಿಗ್ಗುವ ಎಕ್ಸ್ ಪ್ಯಾಂಡಬಲ್ ಆ್ಯಂಕರ್ ಬೋಲ್ಟ್‌ಗಳನ್ನು ಜಡಿದು, ನಂತರ ನಟ್‌ಗಳ ಮೂಲಕ ಬಲವಾದ ಜಾಯಿಂಟ್ ನಿರ್ಮಾಣ ಮಾಡಬೇಕು.
ಮನೆ ಕಟ್ಟುವಾಗ ತಪ್ಪುಗಳಾಗುವುದು ಸಹಜ. ತೀರ ದೊಡ್ಡದಲ್ಲದಿದ್ದರೆ, ಹೆಚ್ಚುವರಿ ಆಧಾರ ನೀಡಿ ಸರಿಪಡಿಸಬಹುದು ಎಂದಾದರೆ, ಸ್ಟೀಲ್ ಸಪೋರ್ಟ್‌ಗಳನ್ನು ನೀಡಿ ನೆಮ್ಮದಿಯಿಂದ ಇರಬಹುದು!
– ಆರ್ಕಿಟೆಕ್ಟ್ ಕೆ. ಜಯರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.