![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, May 4, 2020, 2:31 PM IST
ವಾಟ್ಸ್ ಆ್ಯಪ್ ಬಳಕೆದಾರರಿಗೆ, ಅಲ್ಲಿ ಬಳಸುವ ಸ್ಟಿಕ್ಕರ್‌ಗಳ ಪರಿಚಯ ಇದ್ದೇ ಇರುತ್ತದೆ. ಚಾಟ್ ಮಾಡುವಾಗ, ಸಂದರ್ಭಾನುಸಾರವಾಗಿ ಬಳಸುವ ಸ್ಟಿಕ್ಕರ್‌ಗಳ ಸಂತೆಯೇ ಇಂಟರ್ ನೆಟ್ಟಿನಲ್ಲಿದೆ. ಈ ಸ್ಟಿಕ್ಕರ್‌ಗಳನ್ನು ತಾವೇ ತಯಾರಿಸುವ ಹಾಗಿದ್ದರೆ ಚೆನ್ನಾಗಿತ್ತು ಎನ್ನುವವರಿಗೆಂದೇ, “ಸ್ಟಿಕ್ಕರ್ ಮೇಕರ್’ ಎನ್ನುವ ಒಂದು ಆ್ಯಪ್ ಇದೆ.
ಎಮೋಜಿಗಳ ಬದಲಾಗಿ, ಈ ಸ್ಟಿಕ್ಕರ್ ಗಳನ್ನು ಬಳಸಬಹುದು. ಮೊದಲಿಗೆ, “ಕ್ರಿಯೇಟ್ ನ್ಯೂ ಸ್ಟಿಕ್ಕರ್‌ಪ್ಯಾಕ್’ ಆಯ್ಕೆಯನ್ನು ಆರಿಸಿಕೊಳ್ಳಬೇಕು. ನಂತರ, ನಿಮ್ಮ ಸ್ಮಾರ್ಟ್‌ಫೋನಿನಲ್ಲಿರುವ ಯಾವುದೇ ಫೋಟೊ ಇಂಪೋರ್ಟ್ ಮಾಡಿಕೊಳ್ಳಬೇಕು. ಅದರಲ್ಲಿರುವ ಯಾವುದೇ ವಸ್ತು, ಆಕೃತಿಯನ್ನು ಸ್ಟಿಕ್ಕರ್ ಆಗಿ ಮಾಡಬೇಕಿದೆ, ಎಂದಿಟ್ಟುಕೊಳ್ಳೋಣ. ಇಡೀ ಫೋಟೋದಲ್ಲಿ, ಅಷ್ಟು ಭಾಗವನ್ನು ಮಾತ್ರ ಕಟ್ ಮಾಡಲು ಹಲವು ಟೂಲ್‌ಗಳು ಈ ಆ್ಯಪ್‌ನಲ್ಲಿವೆ. ನಂತರ ಆ ಸ್ಟಿಕ್ಕರ್ ಅನ್ನು ಸೇವ್ ಮಾಡಿ. ಅದು ಪ್ಯಾಕ್‌ನಲ್ಲಿ ಸೇವ್ ಆಗುತ್ತದೆ. ಪ್ಯಾಕ್‌ನಲ್ಲಿ ಕನಿಷ್ಠ ಮೂರು ಸ್ಟಿಕ್ಕರ್ ಗಳು, ಗರಿಷ್ಠ 30 ಸ್ಟಿಕ್ಕರ್ ಗಳನ್ನು ಸೇವ್ ಮಾಡಬಹುದಾಗಿದೆ.
ಅಂದರೆ ಒಂದು ಅಥವಾ ಎರಡು ಸ್ಟಿಕ್ಕರ್ ಮಾಡಲಾ ಗುವುದಿಲ್ಲ. ಮೂರು ರೂಪಿಸಲೇಬೇಕು. ನಂತರ ಈ ಪ್ಯಾಕ್ ಅನ್ನು ವಾಟ್ಸ್ ಆ್ಯಪ್‌ಗೆ ಕಳಿಸುವ ಆಯ್ಕೆಯನ್ನು ಒತ್ತಿದರೆ, ಸ್ಟಿಕ್ಕರ್ ನಿಮ್ಮ ವಾಟ್ಸ್ ಆ್ಯಪ್ ಖಾತೆಗೆ ಬಂದು ಬೀಳುತ್ತದೆ. ಮುಂದಿನ ಬಾರಿ ಚಾಟ್ ಮಾಡುವ ಸಂದರ್ಭದಲ್ಲಿ, ನೀವು ತಯಾರಿಸಿದ ಸ್ಟಿಕ್ಕರ್‌ಗಳು ಬಳಕೆಗೆ ಸಿದ್ಧವಾಗಿರುತ್ತವೆ. ಈ ರೀತಿಯಾಗಿ ನಿಮ್ಮದೇ ಫೋಟೊ ಅನ್ನು ಸ್ಟಿಕ್ಕರ್ ಆಗಿಸಿ ಬಳಸಬಹುದು. ವಿಡಿಯೊ ಕೊಂಡಿ-tinyurl.com/ya77l3mn
You seem to have an Ad Blocker on.
To continue reading, please turn it off or whitelist Udayavani.