ಶೇರುಗಳು ಶೇರುಗಳು ಇಕ್ವಿಟ್ವಿಟಿ ಫಂಡುಗಳು
Team Udayavani, Apr 3, 2017, 4:53 PM IST
ಬ್ಯಾಂಕ್ ದರಗಳಿಗಿಂತ ಜಾಸ್ತಿ ಪ್ರತಿಫಲ ನೀಡುವ ಹೂಡಿಕೆಗಳು ಯಾವುದಿವೆ ಎನ್ನುವ ಶೋಧವನ್ನು ಹಲವರು ಮಾಡುತ್ತಾ ಇರುತ್ತಾರೆ. ನಮಗೆ ಥಟ್ ಅಂತ ಜ್ಞಾಪಕಕ್ಕೆ ಬರುವುದು ಇಕ್ವಿಟಿಯಲ್ಲಿನ ಹೂಡಿಕೆ. ಇಕ್ವಿಟಿ ಅಥವಾ ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿದರೆ ಹೆಚ್ಚಿನ ಪ್ರತಿಫಲವೇನೋ ಬರಬಹುದು. ಆದರೆ ಅದರಲ್ಲಿ ಯಾವುದೇ ಗ್ಯಾರಂಟಿ ಇರುವುದಿಲ್ಲ. ಉತ್ತಮ ಪ್ರತಿಫಲದ ಬದಲು ಕೆಲವೊಮ್ಮೆ ನಷ್ಟ ಕೂಡಾ ಸಂಭವಿಸಬಹುದು. ಎಲ್ಲವೂ ಶೇರುಗಳ ಮಾರುಕಟ್ಟೆ ಬೆಲೆಯನ್ನು ಹೊಂದಿಕೊಂಡಂತೆ ಇವೆ. ಮಾರುಕಟ್ಟೆ ಏರಿದರೆ ಲಾಭವಾದೀತು, ಬದಲಾಗಿ ಮಾರುಕಟ್ಟೆ ಇಳಿದರೆ ನಷ್ಟವಾದೀತು.
ನಮ್ಮಲ್ಲಿ ಬಹಳಷ್ಟು ಜನರು ಹೂಡಿಕೆಯೆಂದರೆ ಬ್ಯಾಂಕಿಗೆ ಹೋಗಿ ಎಫ್ಡಿ ಮಾಡುವುದನ್ನು ಮಾತ್ರ ಮಾಡುತ್ತಾರೆ. ಅದು ಭದ್ರ ಹಾಗೂ ನಿರ್ದಿಷ್ಟ ಪ್ರತಿಫಲವನ್ನು ನಿಗದಿತ ಸಮಯಕ್ಕೆ ಸರಿಯಾಗಿ ನೀಡುತ್ತಾ ಹೋಗುವುದೇನೋ ಹೌದು. ಆದರೆ ಎಫ್ಡಿಗಳಲ್ಲಿ ಸಿಗುವ ಪ್ರತಿಫಲ
ಅಷ್ಟೇನೂ ಆಕರ್ಷಕವಾಗಿ ಇರುವುದಿಲ್ಲ. ಸಧ್ಯದ ಪರಿಸ್ಥಿತಿಯಲ್ಲಿ ನೋಡಿದರಂತೂ ಬಡ್ಡಿದರಗಳು ಕೆಳಕ್ಕೆ ಇಳಿಯುತ್ತಾ ಬಂದಿದ್ದು ಈಗ ಶೇ.7ರ ಆಸುಪಾಸಿನಲ್ಲಿ ನಿಂತಿದೆ. ಬೆಲೆಯೇರಿಕೆಯ ದೃಷ್ಟಿಯಿಂದ ನೋಡಿದರೆ ಅದು ಎಲ್ಲಿಗೂ ಸಾಲದು. ಬೆಲೆಯೇರಿಕೆ ಕಡಿಮೆಯಾದಲ್ಲಿ ಬ್ಯಾಂಕ್ ಬಡ್ಡಿ ದರಗಳು ಇನ್ನಷ್ಟೂ ಕಡಿಮೆಯಾದಾವು. ಹಾಗಾಗಿ ಯಾವತ್ತಿನ ಕಾಲಕ್ಕೂ ಬಡ್ಡಿ ದರಗಳು ನಮಗೆ
ಆಕರ್ಷಕವೆಂದು ಕಾಣಿಸುವುದಿಲ್ಲ.
ಬ್ಯಾಂಕ್ ದರಗಳಿಗಿಂತ ಜಾಸ್ತಿ ಪ್ರತಿಫಲ ನೀಡುವ ಹೂಡಿಕೆಗಳು ಯಾವುದಿವೆ ಎನ್ನುವ ಶೋಧವನ್ನು ಹಲವರು ಮಾಡುತ್ತಾ ಇರುತ್ತಾರೆ. ನಮಗೆ ಥಟ್ ಅಂತ ಜ್ಞಾಪಕಕ್ಕೆ ಬರುವುದು ಇಕ್ವಿಟಿಯಲ್ಲಿನ ಹೂಡಿಕೆ. ಇಕ್ವಿಟಿ ಅಥವಾ ಶೇರು ಮಾರುಕಟ್ಟೆಯಲ್ಲಿ ಹೂಡಿದರೆ
ಹೆಚ್ಚಿನ ಪ್ರತಿಫಲವೇನೋ ಬರಬಹುದು. ಆದರೆ ಅದರಲ್ಲಿ ಯಾವುದೇ ಗ್ಯಾರಂಟಿ ಇರುವುದಿಲ್ಲ. ಉತ್ತಮ ಪ್ರತಿಫಲದ ಬದಲು ಕೆಲವೊಮ್ಮೆ ನಷ್ಟ ಕೂಡಾ ಸಂಭವಿಸಬಹುದು. ಎಲ್ಲವೂ ಶೇರುಗಳ ಮಾರುಕಟ್ಟೆ ಬೆಲೆಯನ್ನು ಹೊಂದಿಕೊಂಡಂತೆ ಇವೆ. ಮಾರುಕಟ್ಟೆ
ಏರಿದರೆ ಲಾಭವಾದೀತು, ಬದಲಾಗಿ ಮಾರುಕಟ್ಟೆ ಇಳಿದರೆ ನಷ್ಟವಾದೀತು.
ಅಂತಹ ಸಂದರ್ಭದಲ್ಲಿ ಮ್ಯೂಚುವಲ… ಫಂಡುಗಳ ಮೂಲಕ ಇಕ್ವಿಟಿಯಲ್ಲಿ ಹೂಡಿಕೆ ಮಾಡುತ್ತಾರೆ. ಹಲವಾರು ಹೂಡಿಕೆದಾರರ ದುಡ್ಡನ್ನು ಒಗ್ಗೂಡಿಸಿ ಒಂದು ಫಂಡ್ ಮಾಡಿಕೊಂಡು ಅದನ್ನು ತಜ್ಞರು ತಮ್ಮ ಅನುಭವದ ಅನುಸಾರ ಹೂಡಿಕೊಂಡಿ ಉತ್ತಮ ಪ್ರತಿಫಲಕ್ಕಾಗಿ ಶ್ರಮಿಸುತ್ತಾರೆ. ಇಂತಹ ಇಕ್ವಿಟಿ ಫಂಡುಗಳು ಇತ್ತೀಚೆಗೆ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿವೆ. ಇಕ್ವಿಟಿ ಫಂಡು
ಹೆಸರೇ ಸೂಚಿಸುವಂತೆ ಇಕ್ವಿಟಿ ಫಂಡುಗಳು ಬಹುತೇಕ ಶೇರುಗಳಲ್ಲಿ ಹೂಡುವ ಮ್ಯೂಚುವಲ್ ಫಂಡುಗಳು. ಯಾವರೀತಿಯ ಇಕ್ವಿಟಿ ಅಥವಾ ಶೇರುಗಳ ಮೇಲೆ ಹೂಡಿಕೆ ನಡೆಸುತ್ತದೆ ಎನ್ನುವುದನ್ನು ಹೊಂದಿಕೊಂಡು ಇಕ್ವಿಟಿ ಫಂಡುಗಳನ್ನು ಹಲವಾರು ರೀತಿಯಲ್ಲಿ ವಿಂಗಡಿಸಬಹುದಾಗಿದೆ. ಅವುಗಳ ಹೆಸರು ಮತ್ತು ಅವುಗಳು ಹೂಡುವ ಕಂಪೆನಿಗಳ ವಿವರಗಳು ಈ ಕೆಳಗಿನಂತೆ:
1. Large cap : ದೊಡªಗಾತ್ರದ ಕಂಪೆನಿಗಳು.
2. Mid cap: ಮಧ್ಯಮಗಾತ್ರದ ಕಂಪೆನಿಗಳು.
3. Small cap: ಸಣ್ಣಗಾತ್ರದ ಕಂಪೆನಿಗಳು
4. Large & mid cap ದೊಡ್ಡ ಮತ್ತು
ಮಧ್ಯಮಗಾತ್ರದ ಕಂಪೆನಿಗಳು.
5. Mid & small cap: ಮಧ್ಯಮ ಮತ್ತು
ಸಣ್ಣಗಾತ್ರದ ಕಂಪೆನಿಗಳು
6. multi-cap: ಎಲ್ಲಾಗಾತ್ರದ ಕಂಪೆನಿಗಳು.
7. Thematic (Infrastructure,
Pharma, Banking,IT etc.)-,
ಫಾರ್ಮಾ, ಬ್ಯಾಂಕಿಂಗ್,ಐಟಿ ಇತ್ಯಾದಿ ಕ್ಷೇತ್ರದ
ಕಂಪೆನಿಗಳು
8. Tax saving (E.L.S.S): 80 ಇ: 80
ಅ ಅಡಿಯಲ್ಲಿ ಕರ ಉಳಿತಾಯ ಸೌಲಭ್ಯವುಳ್ಳ
ಇಕ್ವಿಟಿಆಧಾರಿತ ಫಂಡುಗಳು.
9. International fund: ದೇಶಿ
ಕಂಪೆನಿಗಳು.
ಗ್ರೋಥ್/ಡಿವಿಡೆಂಡ್
ಎಲ್ಲಾ ಫಂಡುಗಳಂತೆ ಈ ಫಂಡುಗಳಲ್ಲೂ ಗ್ರೋಥ್ ಮತ್ತು ಡಿವಿಡೆಂಡ್ ಆಯ್ಕೆಗಳಿರುತ್ತವೆ. ಒಂದು ಫಂಡು ಬೆಳೆಯುತ್ತಾ ಹೋದಾಗ, ಆ ಬೆಳವಣಿಗೆಯ ಒಂದು ಭಾಗವನ್ನುಡಿವಿಡೆಂಡ್ ರೂಪದಲ್ಲಿ ಹೂಡಿಕೆದಾರರಿಗೆ ನೀಡಬಹುದು ಅಥವಾ ಆ ಭಾಗವನ್ನು ಹಾಗೆಯೇ
ಫಂಡಿನಲ್ಲಿ ಮುಂದಕ್ಕೆ ಬೆಳೆಯಬಿಡಬಹುದು. ವಾರ್ಷಿಕ ಆದಾಯ ಬೇಕಾದವರು ಡಿವಿಡೆಂಡ್ ಆಯ್ಕೆಯನ್ನೂ ದಿರ್ಘಕಾಲಿಕ ಬೆಳವಣಿಗೆ ಬೇಕಾದವರು ಗ್ರೋಥ್ ಆಯ್ಕೆಯನ್ನೂ ಆಯ್ದುಕೊಳ್ಳಬಹುದು. ಅದು ಬಿಟ್ಟರೆ ಪ್ರತಿಫಲದ ದೃಷ್ಟಿಯಲ್ಲಿ ಎರಡಕ್ಕೂ ಬೇರೆ ವ್ಯತ್ಯಾಸ ಇರದು. ಡೆಟ್ ಫಂಡುಗಳಂತೆ ಇವುಗಳ ಡಿವಿಡೆಂಡಿನ ಮೇಲೆ ಮೂಲದಲ್ಲಿ ಡಿವಿಡೆಂಡ್ ಡಿಸ್ಟ್ರಿಬ್ಯೂಶನ್ ಟ್ಯಾಕ್ಸ್ (ಡಿಡಿಟಿ) ಇರದು. ಅಷ್ಟೇ ಅಲ್ಲದೆ ಹೂಡಿಕೆದಾರರ ಕೈಯಲ್ಲೂ ಈ ಡಿವಿಡೆಂಡುಗಳು ಸಂಪೂರ್ಣವಾಗಿ ಕರಮುಕ್ತವಾಗಿರುತ್ತದೆ.
ಓಪನ್‌ಎಂಡೆಡ್
ಇವು ಬಹುತೇಕ ಓಪನ್ ಎಂಡೆಡ್ ಅಥವಾ ಒಂದು ನಿಗದಿತ ಅಂತ್ಯವಿಲ್ಲದ ನಿರಂತರ ಫಂಡುಗಳು. ಫಂಡ್ ಸೇರಲು ಇಚ್ಚಿಸುವವರು ಪ್ರಚಲಿತ ಮಾರುಕಟ್ಟೆ ಮೌಲ್ಯ ಅಥವಾ ನೆಟ್‌ಅಸೆಟ್ ವ್ಯಾಲ್ಯೂ (ಎನ್‌ಎ) ಬೆಲೆಗೆ ಫಂಡಿನಲ್ಲಿ ಯುನಿಟ್ಸ್ ಕೊಳ್ಳಬೇಕು ಹಾಗೂ
ಹೊರಬರಲಿಚ್ಚಿಸುವವರು ಪ್ರಚಲಿತ ಎನ್‌ಎ ಬೆಲೆಗೆ ಯುನಿಟ್ಸ್‌ಅನ್ನು ಫಂಡ್ ಹೌಸಿಗೇ ಮಾರಿ (ರಿಡೆಮನ್) ಹೊರಬರಬಹುದು. ಫಂಡುಗಳು ನಿರಂತರ. ಪೆನಾಲ್ಟಿ ಇಕ್ವಿಟಿ ಫಂಡುಗಳಲ್ಲಿ 1 ವರ್ಷದ ಕನಿಷ್ಠ ಹೂಡಿಕಾ ಅವಧಿಯ ನಿಯಮದೆ. ಆ ಮೊದಲು
ಹೊರಬರಲು ಇಚ್ಚಿಸುವವರು ಆ ಮೌಲ್ಯದ ಶೇ.1ರಷ್ಟು ತಪ್ಪುದಂಡ/ಪೆನಾಲ್ಟಿ ಕಟ್ಟಿ ಹೊರಬರಬೇಕು. 1 ವರ್ಷ ಮೀರಿದ ಹೂಡಿಕೆಗಳಿಗೆ ಹೊರಬರುವಾಗ ತಪ್ಪುದಂಡಇರುವುದಿಲ್ಲ.
ರಿಸ್ಕ್
ಇಕ್ವಿಟಿ ಫಂಡುಗಳು ಮೂಲತಃ ರಿಸ್ಕಿ. ಇವು ಶೇರು ಮಾರುಕಟ್ಟೆಯಲ್ಲಿ ಹೂಡುವ ಫಂಡುಗಳಾದ ಕಾರಣ ಮಾರುಕಟ್ಟೆಯ ಏರಿಳಿತಗಳ ಅಪಾಯ ಈ ಫಂಡುಗಳ ಮೇಲೂ ಇವೆ. ಆದರೂ ಒಂದು ಫಂಡ್ ಹೌಸ್ ನಿರ್ವಹಣೆ ಮಾಡುವ ಕಾರಣ ಒಂದು ಕಾರ್ಯತತ್ಪರ ನಿರ್ವಹಣೆಯ ಸೂತ್ರ ಇವುಗಳಲ್ಲಿ ಕಾಣಬಹುದು. ಲಕ್ಷಾಂತರ ಜನರು ಒಟ್ಟು ಗೂಡಿ ನಡೆಸುವ ಈ ಫಂಡುಗಳಲ್ಲಿ ಎಲ್ಲರ ರಿಸ್ಕಾಗಳೂ
ಸಮಾನವಾಗಿ ಹಂಚಿಹೋಗುತ್ತದೆ. ಈ ಕಾರಣಗಳಿಗೆ ಮ್ಯೂಚುವಲ್ ಫಂಡುಗಳನ್ನು ಹಾಡಿಹೊಗಳಲಾಗುತ್ತದೆ. ಆದರೆ ಮ್ಯೂಚುವಲ್ ಫಂಡುಗಳಲ್ಲೂ ಎಷ್ಟೋಡಬ್ಟಾ ಫಂಡುಗಳು ಮಾರುಕಟ್ಟೆಯಲ್ಲಿ ಜೀವಂತವಾಗಿ ಇವೆ. ಅಳೆದೂ ಸುರಿದೂ ನೋಡಿ ಸಾಕಷ್ಟು ಚಿಂತನೆಯ
ಬಳಿಕವೇ ಉತ್ತಮ ಸಾಧನೆಯ ದಾಖಲೆ ಇರುವ, ಉತ್ತಮ ಸ್ಟಾರ್‌ರೇಟಿಂಗ್ ಇರುವ ಫಂಡುಗಳಲ್ಲಿಯೇ ಹೂಡಿಕೆ ಮಾಡಬೇಕು. ವರ್ಷಕ್ಕೊಮ್ಮೆಯಾದರೂ ನಮ್ಮ ಫಂಡುಗಳ ಪಟ್ಟಿಯನ್ನು ಪರಿಶೀಲಿಸಿ ಪರಿಷ್ಕರಣೆ ಮಾಡಬೇಕು. ಇಕ್ವಿಟಿ ಫಂಡ್‌ಎಂದರೆ ಹಾಗೇ ಸುಮ್ಮನೇ ಹೂಡಿಕೆ ಮಾಡಿ ಮರೆತು ಬಿಡುವ ಬಾಬ್ತು ಅಲ್ಲ.
ಪ್ರತಿಫಲ ಹೇಗೆ?
ಇಕ್ವಿಟಿ ಫಂಡುಗಳ ಪ್ರತಿಫಲ ಬಹುತೇಕ ಶೇರು ಮಾರುಕಟ್ಟೆಯ ಪ್ರತಿಫಲವನ್ನು ಹೋಲುತ್ತದೆ. ಕಳೆದ ಕೆಲ ವರ್ಷಗಳಲ್ಲಿ ಏರಿದಂತೆ
ಮಾರುಕಟ್ಟೆ ಏರುವಾಗ ಇಕ್ವಿಟಿ ಫಂಡುಗಳು ಉತ್ತಮ ಪ್ರತಿಫಲ ಕೊಡುತ್ತವೆ. 2007ರಲ್ಲಿ ನೆಲಕಚ್ಚಿದಂತೆ ಮಾರುಕಟ್ಟೆ ಕುಸಿದಾಗ
ಇಕ್ವಿಟಿ ಫಂಡುಗಳು ನಷ್ಟವನ್ನು ನಮ್ಮತಲೆಯ ಮೇಲೆ ಹೊರಿಸುತ್ತದೆ. ಆದರೂ ಒಂದು ದೀರ್ಘಕಾಲದ (5-10 ವರ್ಷ) ಸರಾಸರಿ
ದೃಷ್ಟಿಯಿಂದ ನೋಡಿದರೆ ಇಕ್ವಿಟಿ ಫಂಡುಗಳು ಉತ್ತಮ ಪ್ರತಿಫಲ ನೀಡಿದ್ದನ್ನು ಕಾಣಬಹುದು. ಕೆಳಗಿನ ಟೇಬಲ್‌ನಲ್ಲಿ
ಉದಾಹರಣೆಗಾಗಿ ಕೆಲವೊಂದು ತರಗತಿಗಳ ಸರಾಸರಿ ಪ್ರತಿಫಲಗಳ ಪಟ್ಟಿ ಮಾಡಲಾಗಿದೆ.
ಮಾರುಕಟ್ಟೆ ಕುಸಿದಿದ್ದಾಗ ಶೇರುಗಳನ್ನೂ, ಇಕ್ವಿಟಿ ಫಂಡುಗಳನ್ನೂ ಕೊಳ್ಳುವುದು ಉತ್ತಮ ಸಮಯ. ಏಕೆಂದರೆ ಆ ಹಂತದಿಂದ ಉತ್ತಮ ಏರಿಕೆಯನ್ನು ಭವಿಷ್ಯತ್ತಿನಲ್ಲಿ ಕಾಣಬಹುದು. ಆದರೆ ಬಹುತೇಕ ಮಂದಿ ಮಾರುಕಟ್ಟೆ ಉಚ್ಛಾ†ಯದಲ್ಲಿ ವಿಜೃಂಭಿಸುತ್ತಿರುವಾಗಲೇ ಇಕ್ವಿಟಿಯನ್ನು ಪ್ರವೇಶ ಮಾಡುತ್ತಾರೆ. ಮಾರುಕಟ್ಟೆ ಕುಸಿದಾಗ ನಿರಾಶೆಗೊಂಡು ನಷ್ಟಕ್ಕೆ ಮಾರಿ ಹೊರಬರುತ್ತಾರೆ. ಇದುಜನ ಸಾಮಾನ್ಯರು ಮಾಡುವ ಅತಿ ದೊಡªತಪ್ಪು. ಸುಮಾರು 10 ವರ್ಷಗಳಿಗೊಮ್ಮೆ ಬರುವ ಮಹಾಕುಸಿತಗಳನ್ನು ಮಾರುಕಟ್ಟೆ ಪ್ರವೇಶಕ್ಕೆ ಬಳಸಿಕೊಳ್ಳುವುದು ಜಾಣತನ. ನೇರವಾಗಿ ಅಲ್ಲದಿದ್ದರೆ ಇಕ್ವಿಟಿ ಫಂಡುಗಳ ಮೂಲಕವಾದರೂ ಸರಿ. ಕೆಲವರು ಮಾರುಕಟ್ಟೆಯಲ್ಲಿ ಪ್ರತಿತಿಂಗಳು ಎಂಬಂತೆ ಎಸ್‌ಐಪಿ ಮೂಲಕ ಶಿಸ್ತುಬದ್ಧವಾಗಿ ಹೂಡುತ್ತಾರೆ.
ಎಸ್‌ಐಪಿ ಪದ್ಧತಿಯಲ್ಲಿ ಒಬ್ಟಾತ ಹೂಡಿಕೆದಾರ ನಿಯತಕಾಲಿಕವಾಗಿ ಪ್ರತಿ ತಿಂಗಳು ಅಥವಾ ಪ್ರತಿ ವಾರ ಒಂದು ನಿಗದಿತ ಮೊತ್ತವನ್ನು ಹೂಡುತ್ತಾ ಹೋಗುತ್ತಾನೆ. ಈ ಪದ್ಧತಿಯಲ್ಲಿ ಒಂದು ರೀತಿಯ ಸರಾಸರಿ ಬೆಲೆಯಲ್ಲಿ ಹೂಡಿಕೆ ಮಾಡಿದಂತಾಗುತ್ತದೆ. ಮಾರುಕಟ್ಟೆಯ ಏರಿಳಿತದ ವಿವಿಧ ಹಂತಗಳಲ್ಲಿ ಹೂಡಿಕೆ ನಡೆದು ಬೇರೆ ಬೇರೆ ಬೆಲೆಗಳಲ್ಲಿ ಖರೀದಿ ನಡೆಯುತ್ತದೆ. ಒಂದು ಸರಾಸರಿ ಮಟ್ಟದಲ್ಲಿ ಹೂಡಿಕೆ ನಡೆಯುವ ಕಾರಣ ಇದರಲ್ಲಿ ಅಪಾಯ ಕಡಿಮೆ. ಅತಿಯಾದ ಲಾಭವೂ ಬರಲಾರದು ಅತಿಯಾದ ನಷ್ಟವೂ ಬರಲಾರದು. ಮಾರುಕಟ್ಟೆಯ ಗ್ರಹಗತಿಯನ್ನು ಅಷ್ಟಾಗಿ ಅನುಸರಿಸಿ ಜಾಣ್ಮೆಯಿಂದ ಹೂಡಿಕೆ ಮಾಡಲಾರದವರು ಈ ಎಸ್‌ಐಪಿ ಪದ್ಧತಿಯಲ್ಲಿ ಹೂಡಿಕೆಯನ್ನು ಆರಂಭಿಸುವುದು ಉತ್ತಮ.
ಆದಾಯ ತೆರಿಗೆ
ಇಕ್ವಿಟಿ ಫಂಡುಗಳಿಗೆ ಆದಾಯ ತೆರಿಗೆಯ ಮಟ್ಟಿಗೆ ಬಹಳಷ್ಟು ರಿಯಾಯಿತಿ ನೀಡಲಾಗಿದೆ. ಮೊತ್ತ ಮೊದಲನೆಯದಾಗಿ ಇದರಿಂದ ಬರುವ ಡಿವಿಡೆಂಡ್ ಮೊತ್ತದ ಮೂಲದಲ್ಲಿ (ಡಿಡಿಟಿ) ಇಲ್ಲ. ಹಾಗೂ ಹೂಡಿಕೆದಾರರ ಕೈಯಲ್ಲಿ ಆದಾಯ ತೆರಿಗೆಯೂ ಇಲ್ಲ. ಎರಡನೆಯದಾಗಿ ಈ ಫಂಡುಗಳಲ್ಲಿ ಒಂದು ವರ್ಷ ಮೀರಿದ ಹೂಡಿಕೆಯಿಂದ ಬರುವ ದೀರ್ಘ ಕಾಲಿಕ ಕ್ಯಾಪಿಟಲ್ ಗೈನ್ಸ್ ಆದಾಯವು ಸಂಪೂರ್ಣವಾಗಿ ಕರಮುಕ್ತವಾಗಿದೆ. ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಬರುವ ಅಲ್ಪಕಾಲಿಕ ಕ್ಯಾಪಿಟಲ್ ಗೈನ್ಸ್ ಆದಾಯದ ಮೇಲೆ ಶೇ.15 ಆದಾಯ ತೆರಿಗೆ ಮಾತ್ರ ಇದೆ. (ಮ್ಯೂಚುವಲ್ ಫಂಡುಗಳು ಇವುಗಳ ಮೆಲೆ ಪ್ರತ್ಯೇಕವಾಗಿ ಎಸ್ ಟಿಟಿ ತೆರಿಗೆ ತೆತ್ತಿರುತ್ತಾರೆ) ಮೂರನೆಯದಾಗಿಇಎಲ್‌ಎಸ್‌ಎಸ್ (ಇಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್) ದರ್ಜೆಯ ಇಕ್ವಿಟಿ ಫಂಡುಗಳಿಗೆ ಹೂಡಿಕೆಯ ಆಧಾರದಲ್ಲಿ ಸೆಕ್ಷನ್ 80ಸಿ ಅನುಸಾರ ವಾರ್ಷಿಕ ರೂ. 1,50,000 ಮಿತಿಯೊಳಗೆ ತೆರಿಗೆ ವಿನಾಯಿತಿ ಲಭ್ಯ. ಕಾನೂನು
ಪ್ರಕಾರ ಅಂತಹ ಇಎಲ್‌ಎಸ್‌ಎಸ್ ಫಂಡುಗಳಲ್ಲಿ ಕನಿಷ್ಠ ಶೇ.65 ಇಕ್ವಿಟಿ ಹೂಡಿಕೆ ಇರುತ್ತದೆ ಮತ್ತು ಅವುಗಳಿಗೆ ಕನಿಷ್ಠ 3 ವರ್ಷಗಳ
ಲಾಕ್-ಇನ್‌ಅವಧಿ ಇರುತ್ತದೆ. ಇಂತಹ ಆದಾಯ ತೆರಿಗೆ ವಿನಾಯಿತಿ ಬೇಕಾದವರು ಇಎಲ… ಎಸ್ ಎಸ್ ಹೆಸರಾಂಕಿತ ಮ್ಯೂಚುವಲ… ಫಂಡುಗಳಲ್ಲಿಯೇ ಹೂಡಿಕೆ ಮಾಡಬೇಕು. ಯಾವುದೋ ಫಂಡಿನಲ್ಲಿ ಹೂಡಿಕೆ ಮಾಡಿದರೆ 80ಸಿ ಅನುಸಾರ ಕರವಿನಾಯಿತಿ ಸಿಗಲಾರದು.
ಇಕ್ವಿಟಿ ಫಂಡುಗಳು ಕರವಿನಾಯಿತಿ ದೃಷ್ಟಿಯಿಂದ ಉತ್ತಮ. ಇವುಗಳ ಮೇಲೆ ಉತ್ತಮ ಪ್ರತಿಫಲ ಬರುವುದಾದರೂ ಶೇರು
ಮಾರುಕಟ್ಟೆಯ ಸ್ಥಿತಿಗತಿಗಳನ್ನು ಸಂಪೂರ್ಣವಾಗಿ ಪ್ರತಿಫಲಿಸುವ ಈ ಫಂಡುಗಳ ರಿಸ್ಕ್ಅನ್ನು ಅರಿತು ಜಾಗರೂಕರಾಗಿ ಹೂಡಿಕೆ
ಮಾಡುವುದು ಮುಖ್ಯ.
ಜಯದೇವ ಪ್ರಸಾದ ಮೊಳೆಯಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.