ಶರಾವತಿ ಹೊಳೆಸಾಲಿನಲ್ಲಿ ಹೊನ್ನೆ ಕಾಂತಿಘಮ!
Team Udayavani, Nov 23, 2020, 9:31 PM IST
ಅಲ್ಲಲ್ಲಿ ಭೋರ್ಗರೆವ ಝರಿಗಳು. ಸುತ್ತಲೂ ಅಡಕೆ, ತೆಂಗಿನ ತೋಟ. ಮಧ್ಯೆ ಅಲ್ಲಲ್ಲಿ ಮನೆಗಳು. ತಂತ್ರಜ್ಞಾನ ಮುಂದುವರಿದರೂ ಇಲ್ಲಿಮೊಬೈಲ್‌ಗಳಿಗೆ ನೆಟ್ವರ್ಕ್‌ನ ಹಂಗಿಲ್ಲ… ಉತ್ತರಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಶರಾವತಿಯ ಎಡದಂಡೆಯಲ್ಲಿರುವ ಮಾಗೋಡು ಗ್ರಾಮವನ್ನು ಹೀಗೆ ವರ್ಣಿಸಬಹುದು.
ಕೃಷಿ ಹಿನ್ನೆಲೆಯಿಂದ ಬಂದ ಇಲ್ಲಿನಎಂ.ಪಿ.ಹೆಗಡೆ ಮತ್ತು ವಿನಯ್ ಹೆಗಡೆ ಸಹೋದರರು “ರಚನಾ ಹೋಮ್ ಇಂಡಸ್ಟ್ರಿ’ ಸ್ಥಾಪಿಸಿ,ಕಳೆದಎರಡು ವರ್ಷಗಳಿಂದ ಹೊನ್ನೆಎಣ್ಣೆಯಿಂದ ಸೋಪ್ ತಯಾರಿಸುವಉದ್ಯಮವನ್ನು ಆರಂಭಿಸಿದ್ದಾರೆ. ಆಮೂಲಕ ಸ್ವದೇಶಿ ಉತ್ಪನ್ನ ತಯಾರಿಗೆ ನಾಂದಿ ಹಾಡಿದ್ದಾರೆ.
ಸ್ವಾವಲಂಬನೆಯೇ ಮಂತ್ರ : ಮಾಗೋಡಿನ ತಿಮ್ಮಣ್ಣ ಹೆಗಡೆ ಅವರ ಹೊನ್ನೆ ಎಣ್ಣೆ ಘಟಕದಲ್ಲಿಪ್ರತಿವರ್ಷ 8-10 ಸಾವಿರ ಲೀ.ಹೊನ್ನೆಎಣ್ಣೆ ಉತ್ಪಾದನೆಯಾಗುತ್ತಿತ್ತು.ಅದರಲ್ಲಿ ವರ್ಷಕ್ಕೆ3000 ಲೀ. ಎಣ್ಣೆದೂರದ ಬೆಲ್ಜಿಯಂಗೆ ರಫ್ತಾಗುತ್ತಿತ್ತು. ಅದುಕೂಡಾಕೇವಲ ಮಸಾಜ್‌ಗಳಿಗಾಗಿ!ವಿದೇಶಗಳಲ್ಲಿ ಚರ್ಮದ ರಕ್ಷಣೆಯ ಉದ್ದೇಶದಿಂದ ಹೊನ್ನೆ ಎಣ್ಣೆಯನ್ನು ಬಳಸುತ್ತಾರೆ ಎಂದ ಮೇಲೆ ನಮ್ಮಲ್ಲೂ ಯಾಕೆ ಇದರ ಉಪಯೋಗ ಪಡೆಯಬಾರದು ಎಂದು ಎಂ.ಪಿ.ಹೆಗಡೆ ಯೋಚಿಸಿದರು.
2016ರಲ್ಲಿ ಶಿವಮೊಗ್ಗದ ಜೆಎನ್‌ಯು ಜೈವಿಕಘಟಕದಲ್ಲಿ ಸೋಪ್ ತಯಾರಿಕಾ ತರಬೇತಿಪಡೆದ ಬಳಿಕ ಆವಿಷ್ಕಾರವನ್ನು ಪ್ರಾರಂಭಿಸಿದರು.ಎರಡು ವರ್ಷ ಸತತ ಪ್ರಯೋಗ ನಡೆಸಿಸೋಪ್ ತಯಾರಿಕೆಯಲ್ಲಿ ಯಶಸ್ವಿಯೂ ಆದರು. ಪ್ರಯೋಗಾಲಯದ ವರದಿಗಳೂಉತ್ತಮ ಫಲಿತಾಂಶ ನೀಡಿದವು. ಪರಿಣಾಮ, 2018ರ ಆಗಸ್ಟ್ ನಲ್ಲಿ “ಹೊನ್ನೆಕಾಂತಿ’ ಹೆಸರಿನ ಐದು ಬಗೆಯ ಸೋಪ್ ಮಾರುಕಟ್ಟೆಗೆ ಪ್ರವೇಶಿಸಿತು.
“ಹೊನ್ನೆ ಬೆಳೆ ಮೊದಲುಕರ್ನಾಟಕದ ಕರಾವಳಿಯ ಮಂಗಳೂರಿನಿಂದ ಕಾರವಾರದವರೆಗೆ ಸಮುದ್ರದ ಅಂಚಿನಲ್ಲಿ ಹೇರಳವಾಗಿ ಸಿಗುತ್ತಿತ್ತು. ಆದರೆ ಇತ್ತೀಚಿನದಿನಗಳಲ್ಲಿ ಸಮುದ್ರಕೊರೆತ, ಪರಿಸರನಾಶದಿಂದಾಗಿ ಅಲ್ಪಾವಧಿ ಬೆಳೆಯಾಗಿಮಾರ್ಪಟ್ಟಿದೆ. ಈಗ ಭಟ್ಕಳದಿಂದಅಂಕೋಲಾವರೆಗೆ ಮಾತ್ರ ಸಿಗುತ್ತಿದ್ದು,ವರ್ಷಕ್ಕೆ8-10 ಸಾವಿರ ಲೀ. ಎಣ್ಣೆತೆಗೆಯುವಷ್ಟು ಮಾತ್ರ ಲಭ್ಯವಿದೆ. ಹಾಗಾಗಿ ಹೊನ್ನೆ ಬೆಳೆಗೆ ಪರ್ಯಾಯ ಮಾರ್ಗ ಕಂಡುಕೊಳ್ಳುವ ಸವಾಲುಕೂಡಾ ನಮ್ಮ ಮುಂದಿದೆ’ ಎನ್ನುತ್ತಾರೆ ಎಂ.ಪಿ. ಹೆಗಡೆ.
ಹೊರರಾಜ್ಯಗಳಿಗೂ ರಫ್ತು ಸದ್ಯ ಮಾಗೋಡಿನಲ್ಲಿರುವ ಇವರ ಘಟಕದಲ್ಲಿ ವರ್ಷಕ್ಕೆ ಸರಾಸರಿ 25-30 ಸಾವಿರ ಸೋಪ್‌ಗಳು ಉತ್ಪಾದನೆ ಆಗುತ್ತಿವೆ.ಹೊನ್ನೆಎಣ್ಣೆಯನ್ನು ತುಳಸಿ, ಲಿಂಬು,ದಾಸವಾಳ, ಬೇವು, ಅರಿಶಿಣದೊಂದಿಗೆಮೌಲ್ಯವರ್ಧನೆ ಮಾಡಿ ಐದು ವಿಧಧಸೋಪ್ ತಯಾರಿಸುತ್ತಿದ್ದಾರೆ. ಈ ಸೋಪ್ ಗಳು ಹೊನ್ನಾವರ, ಉತ್ತರಕನ್ನಡಮಾತ್ರವಲ್ಲದೇ ಬೆಂಗಳೂರು,ಕೇರಳ, ಆಂಧ್ರಪ್ರದೇಶ, ಗೋವಾ ಮತ್ತು ಮುಂಬೈಗಳಿಗೂ ರಫ್ತಾಗುತ್ತಿವೆ. “ಹೊನ್ನೆಕಾಂತಿ ಸೋಪ್‌ಗಳು ಆರೋಗ್ಯಕ್ಕೆ ಪೂರಕವಾಗಿವೆ.ಕೂದಲಿನ ರಕ್ಷಣೆಗೆ, ತುರಿಕೆಗೆ, ಚರ್ಮ ರಕ್ಷಣೆಗೆ ಇವನ್ನು ಬಳಸಬಹುದು. “ಕಲ್ಪಕಾಂತಿ’ಯನ್ನು ಹೊನ್ನೆಕಾಂತಿ ಉತ್ಪನ್ನಗಳ ಬದಲಾಗಿ ಕೂಡಾ ಬಳಸಬಹುದು. ಗ್ರಾಹಕರಿಂದಲೂ ಉತ್ತಮ ಬೇಡಿಕೆ ಬರುತ್ತಿದೆ. ಎನ್ನುತ್ತಾರೆ ಎಂ.ಪಿ. ಹೆಗಡೆ. ಈ ಸೋದರರು. ಸಂಪರ್ಕಕ್ಕೆ:9113992132, 9480039036.
– ಎಂ.ಎಸ್.ಶೋಭಿತ್, ಮೂಡ್ಕಣಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.