ಬದುಕು ಬದಲಿಸಿದ ಸ್ತ್ರಿ ಶಕ್ತಿ
Team Udayavani, Mar 15, 2021, 6:09 PM IST
“ಕೃಷಿಯೊಂದನ್ನೇ ನಂಬಿಕೊಂಡು ಜೀವನ ನಡೆಸೋದು ಕಷ್ಟ. ಸಣ್ಣ ಪುಟ್ಟ ಬ್ಯುಸಿನೆಸ್‌ಮಾಡಬೇಕು. ನನ್ನನ್ನೇ ನೋಡಿ. ದೊಡ್ಡಕುಟುಂಬದ ನಿರ್ವಹಣೆ ಸಾಧ್ಯವಾಗಿದ್ದು , ನಾನುಉದ್ದಿಮೆ ಮಾಡಿದ ಮೇಲೆಯೇ’- ಸಾವಿತ್ರಿಕೊಡ್ಲಿಯವರ ಮಾತಲ್ಲಿ ಆತ್ಮವಿಶ್ವಾಸ ತುಳುಕುತ್ತದೆ.
ಸಾವಿತ್ರಿ ಸೋಮಪ್ಪ ಕೊಡ್ಲಿ ಕುಂದಗೋಳ ತಾಲೂಕಿನ ರಾಮಾಪುರ ಗ್ರಾಮದವರು. ಇರುವ ಎರಡು ಎಕರೆ ಜಮೀನಿನಲ್ಲಿ ಸಂಸಾರ ತೂಗಬೇಕು. 2000 ಸಾವಿರ ಇಸವಿಯಲ್ಲಿ, ಸ್ತ್ರೀಶಕ್ತಿ ಸಂಘ ಕಟ್ಟಿದರು. ಜಗದಾಂಬ ಮಹಿಳಾಸ್ವಸಹಾಯ ಸಂಘ ಕಟ್ಟಿದರು. ಅದು 12ಮಹಿಳೆಯರ ತಂಡ. ಕೃಷಿಯ ಜೊತೆಹೈನುಗಾರಿಕೆ ಸೇರಿದರೆ ಆರ್ಥಿಕವಾಗಿ ಮಹಿಳೆಯರು ಬಲಾಡ್ಯರಾಗಬಹುದು ಎಂಬಉದ್ದೇಶದಿಂದ ಬ್ಯಾಂಕ್ ಲೋನ್ ಕೊಡಿಸಿದರು. ಮನೆ ಮನೆಗೂ ಹಸು ,ಎಮ್ಮೆ ಬಂದವು. ಹಾಲಿನ ಉತ್ಪಾದನೆ ಗಣನೀಯವಾಗಿ ಹೆಚ್ಚಿತು.ಹಾಲಿನ ಡೇರಿ ಶುರುವಾಯ್ತು: ಆದರೆ, ಹಾಲು ಕೊಳ್ಳುವವರೇ ಇಲ್ಲ! “ಹೋಟೆಲ್ ನವರು ಎಮ್ಮೆಹಾಲು ಒಯ್ಯುತ್ತಿದ್ದರು. ಆಕಳ ಹಾಲುಬಿಟ್ಟೋಗ್ತಿದ್ದರು. ಬ್ಯಾಂಕ್ ಸಾಲ ಬರ್ತಿ ಮಾಡ್ಲಿಕ್ಕೆರೊಕ್ಕ ಬರೊವಲ್ಲದು’! ಇಂಥ ಸಂದರ್ಭದಲ್ಲಿರಾಮಾಪುರದಲ್ಲಿ ಹಾಲಿನ ಡೇರಿ ಮಾಡುವ ಆಲೋಚನೆ ಸಾವಿತ್ರಿಯವರಿಗೆ ಬಂತು.
ಹಾಲಿನ ಡೇರಿ ಆರಂಭಿಸಲು ಬೇಕಾದ ದಾಖಲಾತಿಗಳಿಗಾಗಿ ಕೆಎಂಎಫ್ ನ ಕಚೇರಿಗಳಿಗೆ ಅಲೆದಾಟ ಶುರು ಮಾಡಿದರು. “ಹೆಣ್ಮಕ್ಕಳು ಇವರೇನು ಮಾಡ್ತಾರೆ’ಎಂಬ ಉದಾಸೀನ ಊರಿನ ಗಂಡುಮಕ್ಕಳದು. ಇದಾವು ದಕ್ಕೂ ತಲೆಕೆಡಿಸಿ ಕೊಳ್ಳದ ಸಾವಿತ್ರಿಯವರ ತಂಡ,2004 ರಲ್ಲಿ ಹಾಲಿನ ಡೇರಿ ಆರಂಭಿಸಿಯೇ ಬಿಟ್ಟಿತು. 15 ಲೀಟರ್ ಹಾಲಿನ ವಹಿವಾಟಿನಿಂದ ಶುರುವಾದಸಂಘ, ಇಂದು 300 ಲೀಟರ್ ಹಾಲನ್ನು ಪ್ರತಿದಿನ ಕೊಳ್ಳುತ್ತಿದೆ. 200 ಸದಸ್ಯರಿದ್ದಾರೆ. ಅಂದು ನಗಾಡಿದ್ದ, ಗಂಡಸರೇ ಇಂದು ಸಂಘದ ಸದಸ್ಯರು! 2005ರಲ್ಲಿ ಧಾರವಾಡದ ರುಡ್ ಸೆಟ್ ಸಂಸ್ಥೆಹೊಲಿಗೆ ತರಬೇತಿ ಏರ್ಪಡಿಸಿತ್ತು. 20 ದಿನಗಳ ಹೊಲಿಗೆ ತರಬೇತಿಗೆ ಹೋದ ಸಾವಿತ್ರಿಯವರಿಗೆ ಸಣ್ಣ ಉದ್ಯಮ ನಡೆಸುತ್ತಿದ್ದ ಇತರೆ ಮಹಿಳೆಯರಪರಿಚಯವಾಯಿತು. ಅವರಂತೆಯೇ ತಾನೂಉದ್ಯಮಿಯಾಗಬೇಕೆಂಬ ಕನಸು ಕಂಡರು. ತರಬೇತಿಯ ನಂತರ ಹೊಲಿಗೆ ಯಂತ್ರ ಕೊಂಡುಊರಿನ ಹೆಣ್ಣು ಮಕ್ಕಳ ಬಟ್ಟೆ ಹೊಲಿಯಲು ಶುರು ಮಾಡಿದರು. ಬಟ್ಟೆ ಹೊಲಿಸಲು ಜನರೇನೋ
ಬಂದರು. ಆದರೆ ಕಾಸು ತರಲಿಲ್ಲ; ಸಾಲ ಹೇಳಿದರು. ಹತ್ತು ವರ್ಷ ಇದೇ ಜಂಜಾಟದಲ್ಲೇದಿನಗಳು ಕಳೆದವು. ಹೊಲ-ಹೊಲಿಗೆ ಎರಡೂ ಕೈಹಿಡಿಯಲಿಲ್ಲ. ಊರು ಬಿಟ್ಟು ಹೋಗಿ ವ್ಯಾಪಾರವಹಿವಾಟು ಮಾಡುವುದು ಆಗದ ಮಾತು.ಊರಲ್ಲೇ ಇದ್ದು ಏನು ಮಾಡಬಹುದು ಎಂದುಹುಡುಕಾಡುವಾಗ, ಅಗರಬತ್ತಿಯನ್ನು ಗೃಹಉದ್ಯಮವಾಗಿ ಕೈಗೊಳ್ಳಬಹುದು ಎಂಬ ಮಾಹಿತಿಸಿಕ್ಕಿತು. 2016ರಲ್ಲಿ ಅಗರಬತ್ತಿ ಉದ್ಯಮ ಆರಂಭಿಸಲು ನಿಶ್ಚಯಿಸಿದರು.
ಸರ್ಕಾರದ ಯೋಜನೆಯೊಂದರ ಮೂಲಕ 2 ಲಕ್ಷ ರೂ.ಗಳ ಬಡ್ಡಿ ರಹಿತ “ಕಿರು ಸಾಲ’ ದೊರೆಯಿತು. ಇತರೆ ಅಗರಬತ್ತಿ ಕಾರ್ಖಾನೆಗಳಿಗೆಎಡತಾಕಿ ಮಾಹಿತಿ ಸಂಗ್ರಹಿಸಿದರು. 5 ಲಕ್ಷರೂಪಾಯಿಗಳ ಬಂಡವಾಳ ತೊಡಗಿಸಿ ಯಾಂತ್ರೀಕೃತ ಅಗರಬತ್ತಿ ತಯಾರಿಕಾ ಘಟಕಆರಂಭಿಸಿದರು. ಸೈಕಲ್ ಬ್ರಾಂಡ್ ಅಗರಬತ್ತಿಕಂಪನಿಯ ಜೊತೆ ಒಪ್ಪಂದ ಮಾಡಿಕೊಂಡು, ದೊಡ್ಡ ಪ್ರಮಾಣದಲ್ಲಿ ಅಗರಬತ್ತಿ ಉತ್ಪಾದನೆ ಶುರು ಮಾಡಿದರು. ಪ್ರತಿ ವರ್ಷ 18 ಲಕ್ಷ ರೂಪಾಯಿ ಮೌಲ್ಯದ ಅಗರಬತ್ತಿ ವಹಿವಾಟು ನಡೆಸುತ್ತಾರೆ.
ಕಿರು ಉದ್ಯಮಗಳು ಅಗತ್ಯ: ಅಗರಬತ್ತಿ ಉದ್ಯಮದ ಜೊತೆಗೆ, ಮೆಣಸಿನ ಕಾಯಿ ಪುಡಿ ತಯಾರಿಕೆ ಕೂಡ ಮಾಡುತ್ತಿದ್ದಾರೆ. ಒಂದೇ ಬಗೆಯ ಬಿಸಿನೆಸ್ ಇದ್ದರೆ ಸಾಲದು. ಮುಖ್ಯಉದ್ಯಮದ ಜೊತೆ ಒಂದೆರೆಡು ಕಿರು ಉದ್ಯಮಗಳು ಜೊತೆಗಿರಬೇಕು. ಹೆಚ್ಚು ಕಡಿಮೆಯಾಗಿಒಂದು ಉದ್ಯಮ ಕೈ ಕಚ್ಚಿದರೂ ಇನ್ನೊಂದು ಕೈಹಿಡಿಯುತ್ತದೆ’ ಸಾವಿತ್ರಿಯವರ ಅನುಭವದ ಮಾತಿದು. ಇವರಿಗೆ ಪತಿ ಸೋಮಪ್ಪ ಕೊಡ್ಲಿಯವರ ಬೆಂಬಲವಿದೆ. ಮಗಳು-ಅಳಿಯ ಕೂಡ ಜೊತೆಗಿದ್ದು ಅಗರಬತ್ತಿ ಉದ್ಯಮ ನೋಡಿಕೊಳ್ಳುತ್ತಿದ್ದಾರೆ. ಹಳ್ಳಿಗಾಡಿನ ಮಹಿಳೆಯರು ಬೂದಿ ಮುಚ್ಚಿದ ಕೆಂಡದಂತೆ. ಮುಚ್ಚಿದ ಬೂದಿಯ ಸರಿಸಿದರೆ ಅವರ ಕ್ರಿಯಾಶೀಲತೆ ಎದ್ದು ಕಾಣುತ್ತದೆ. ಛಲ, ಶ್ರಮ ಮತ್ತು ಬುದ್ಧಿವಂತಿಕೆಯ ಮೂಲಕ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬಹುದು ಎನ್ನುವುದಕ್ಕೆ ಸಾವಿತ್ರಿ ಸಾಕ್ಷಿ.
ಬೀಜ ಸಂರಕ್ಷಣೆಯಲ್ಲೂ ಮುಂದು :
ಬೀಜ ಸಂರಕ್ಷಣೆಯಲ್ಲೂ ಸಾವಿತ್ರಿಯವರು ಮುಂದು. ಸಿರಿಧಾನ್ಯ ಮೂಲದಅಕ್ಕಡಿ ಬೆಳೆಗಳ ಕೃಷಿಯನ್ನು ಮಹಿಳಾ ಸಂಘದ ಮೂಲಕ ಜನಪ್ರಿಯಗೊಳಿಸುತ್ತಿದ್ದಾರೆ. ಮರೆಯಾಗಿದ್ದ ರಾಗಿ, ನವಣೆ, ಬರಗು ಮತ್ತೆ ಮುನ್ನಲೆಗೆ ಬಂದಿವೆ. ಕೈತೋಟಗಳ ಮೂಲಕ ಮಹಿಳಾ ಸಂಘದ ಸದಸ್ಯರುಮನೆಗೆ ಬೇಕಾದ ತರಕಾರಿಗಳನ್ನು ಬೆಳೆದುಕೊಳ್ಳಲು ಉತ್ತೇಜಿಸಲಾಗುತ್ತಿದೆ.ಮಳೆಯಾಶ್ರಿತ ಜಮೀನಿಗೆ ಸೂಕ್ತವಾಗಬಲ್ಲ “ಘನ ಜೀವಾಮೃತ’ ವಿಧಾನವನ್ನುಗ್ರಾಮಸ್ಥರು ಅಳವಡಿಸಿಕೊಂಡಿದ್ದಾರೆ. ಆದಾಯ ಉತ್ಪನ್ನ ಕಾರ್ಯಕ್ರಮಗಳನ್ನು ಮಹಿಳಾ ಸಂಘದ ಸದಸ್ಯರಿಗೆ ಪರಿಚಯಿಸಿದ ಹೆಮ್ಮೆ ಸಾವಿತ್ರಿಯರದು.
ಚಿತ್ರ-ಲೇಖನ: ಜಿ. ಕೃಷ್ಣ ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.