ಕೋಲಾರದಲ್ಲೂ ವಿದ್ಯಾರ್ಥಿ ಭವನ


Team Udayavani, Jan 1, 2018, 4:41 PM IST

kolara-vidhyarthi.jpg

ವಿದ್ಯಾರ್ಥಿಭವನ್‌ ಗೊತ್ತಲ್ಲ? ಇದು ಬೆಂಗಳೂರಿನ ಗಾಂಧಿಬಜಾರ್‌ನಲ್ಲಿರೋದಲ್ಲ. ಕೋಲಾರದ ಕಾಲೇಜು ವೃತ್ತದಲ್ಲಿರೋ ವಿದ್ಯಾರ್ಥಿ ಭವನ್‌. 
ಕೋಲಾರ ನಗರದ ಜನತೆಗೆ ಯಾವುದೇ ಸೀಸನ್‌ನಲ್ಲಿ  ಸಂಜೆಯ ವೇಳೆ ಬಿಸಿಬಿಸಿ ವಡೆ , ಬೋಂಡಾ ಸಿಗುವುದು ಇಲ್ಲಿ. ನಲವತ್ತೈದು ವರ್ಷಗಳ ಹಿಂದೆ ವಿದ್ಯಾರ್ಥಿ ಭವನ್‌ ಆಗಿದ್ದ ಪುಟ್ಟ ಹೋಟೆಲ್‌ ಈಗ ಪಂಚವಟಿಯಾಗಿ ಬದಲಾಗಿದೆ.

ಆದರೂ, ರುಚಿ-ಶುಚಿ ಗ್ರಾಹಕರ ವಿಶ್ವಾಸಾರ್ಹತೆಯಲ್ಲಿ ಇಂದಿಗೂ ಅದೇ ನಂಬಿಕೆಯನ್ನು ಉಳಿಸಿಕೊಂಡು ಬಂದಿದೆ. 55 ವರ್ಷಗಳ ಹಿಂದೆ ಕೇರಳದ ತ್ರಿಶ್ಯೂರ್‌ನಿಂದ ಕೋಲಾರಕ್ಕೆ ಬಂದವರು ಪರಮೇಶ್ವರಯ್ಯರ್‌. ಅರ್ಚಕ ನಂಬೂದರಿ ಕುಟುಂಬದರಾಗಿದ್ದರೂ ಅವರು ರೈಲ್ವೆಯಲ್ಲಿ ಅಡುಗೆ ಮಾಡುತ್ತಿದ್ದರು. ಕೋಲಾರಕ್ಕೆ ಬಂದಾಗ ಇದೇ ಕಾಲೇಜು ವೃತ್ತದ ಪುಟ್ಟ ಕಟ್ಟಡದಲ್ಲಿ ವಿದ್ಯಾರ್ಥಿ ಭವನ್‌ ಹೋಟೆಲ್‌ ಆರಂಭಿಸಿದರು.

ಕೆಲವೇ ದಿನಗಳಲ್ಲಿ  ಕಟ್ಟಡದ ಬದಲಾವಣೆ ಮಾಡಬೇಕಾಗಿ ಬಂದಿದ್ದರಿಂದ  ಕಾಲೇಜು ವೃತ್ತದಿಂದ ಕಠಾರಿಪಾಳ್ಯದ ಡೂಂಲೈಟ್‌ ವೃತ್ತದ ಬಳಿಗೆ ಹೋಟೆಲ್‌ ಸ್ಥಳಾಂತರ ಮಾಡಲಾಯಿತು. ಆದರೆ ಅಲ್ಲಿ  ಹೆಚ್ಚು ದಿನಗಳ ಕಾಲ ಮುಂದುವರೆಸಲಾಗಲಿಲ್ಲ. ಆಗ ಪರಮೇಶ್ವರಯ್ಯರ್‌ ಬೆಂಗಳೂರಿನ ಎಚ್‌ಎಂಟಿ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿಕೊಂಡರು.  

ವರ ಹಿರಿಯ ಮಗ ಉನ್ನಿಕೃಷ್ಣನ್‌, ಕೋಲಾರದಲ್ಲಿಯೇ ರಾಘವೇಂದ್ರ ಹೋಟೆಲ್‌ನಲ್ಲಿ ದಿನಕ್ಕೊಂದು ರೂಪಾಯಿ ಸಂಬಳಕ್ಕೆ ದುಡಿಯಲು ಆರಂಭಿಸಿದರು.  ಹೀಗೆ,  ಹೆಚ್ಚು ದಿನಗಳ ಕಾಲ ಕುಟುಂಬ ನಿರ್ವಹಣೆ ಸಾಧ್ಯವಾಗಲಿಲ್ಲ. ಆಗ, ಪರಮೇಶ್ವರಯ್ಯರ್‌ಗೆ ಪರಿಚಿತರಾಗಿದ್ದ ಕೋಲಾರದ ಬೆಗ್ಲಿ ಗ್ರಾಮದ ಕೆಂಪೇಗೌಡ ಹಾಗೂ ಇನ್ನಿತರ ಐವರು ಸ್ನೇಹಿತರು ತಲಾ ಹತ್ತು ರೂಪಾಯಿ ಬಂಡವಾಳ ಹೂಡಿ ಕಾಲೇಜು ವೃತ್ತದಲ್ಲಿ ಮತ್ತೆ ವಡೆ ಬೋಂಡಾ ಅಂಗಡಿ ಇಡುವಂತೆ ಪ್ರೇರೇಪಿಸಿದರು.

ಇದಕ್ಕೆ ನೆರವಾಗಿದ್ದು ಹಿರಿಯ ಪುತ್ರ ಉನ್ನಿಕೃಷ್ಣನ್‌. ಆರಂಭದಲ್ಲಿ ಐದು ಪೈಸೆಗೆ ಒಂದು ವಡೆಯಂತೆ ಒಂದು ರೂಪಾಯಿಗೆ ಇಪ್ಪತ್ತು ವಡೆಗಳನ್ನು ಮಾರಾಟ ಮಾಡುತ್ತಿದ್ದರು. ಆಗಿನ ಕಾಲಕ್ಕೆ ಕೋಲಾರ ನಗರದಲ್ಲಿ ದಿನನಿತ್ಯವೂ ವಡೆ ಬೋಂಡಾ ಮಾರಾಟ ಮಾಡುವ ಅಂಗಡಿ ಇರಲೇ ಇಲ್ಲ. ಕೋಲಾರದ ಕೋಟೆಗೆ ಕುಟುಂಬವನ್ನು ಸ್ಥಳಾಂತರಿಸಿಕೊಂಡ ಪರಮೇಶ್ವರಯ್ಯರ್‌ ವಡೆ ಬೋಂಡಾ ಅಂಗಡಿಯಲ್ಲಿ ಬಂದ ವರಮಾನದಿಂದಲೇ ಅದೇ ಕಾಲೇಜು ವೃತ್ತದಲ್ಲಿ ಪುನಃ ವಿದ್ಯಾರ್ಥಿ ಭವನ್‌ ಹೆಸರಿನ ಹೋಟೆಲ್‌ ಪುನರಾರಂಭಿಸಿದರು.

ಹತ್ತು ಪೈಸೆಗೆ ಒಂದು ಇಡ್ಲಿ ಮಾರಾಟದ ಕೇಂದ್ರವಾಗಿ ಹೋಟೆಲ್‌ ಆರಂಭವಾಯಿತು. ಇಡ್ಲಿಯ ಜೊತೆಗೆ ಮಸಾಲೆ ವಡೆ ಮತ್ತು ಚಿತ್ರಾನ್ನ ಸೇರಿಕೊಂಡಿತು. ಬೆಳಗ್ಗಿನಿಂದ ವಿದ್ಯಾರ್ಥಿ ಭವನ್‌ ಹೋಟೆಲ್‌, ಸಂಜೆ ಯಥಾ ಪ್ರಕಾರ ವಡೆ ಬೋಂಡಾ ವ್ಯಾಪಾರ.  ಪರಮೇಶ್ವರಯ್ಯರ್‌ ಏಳೆಂಟು ವರ್ಷಗಳ ಹಿಂದೆ ನಿಧನರಾದರು. ಆನಂತರ ಹೋಟೆಲ್‌ ಮತ್ತು ವಡೆ ಬೋಂಡಾ ಅಂಗಡಿಯ ಸಂಪೂರ್ಣ ಜವಾಬ್ದಾರಿಯನ್ನು ಹಿರಿಯ ಪುತ್ರ ಉನ್ನಿಕೃಷ್ಣನ್‌ ಹೊತ್ತುಕೊಂಡಿದ್ದಾರೆ.  

ನಲವತ್ತೈದು ವರ್ಷಗಳಿಂದಲೂ ಸತತವಾಗಿ ಉನ್ನಿಕೃಷ್ಣನ್‌ ವಡೆ, ಬೋಂಡಾ ಹಾಕುತ್ತಿದ್ದಾರೆ.  ಉನ್ನಿಕೃಷ್ಣನ್‌ಗೆ ಸಹೋದರರಾದ ಗೋಪಾಲಕೃಷ್ಣ ಹಾಗೂ ರಾಧಾಕೃಷ್ಣ  ಮತ್ತವರ ಕುಟುಂಬದ ಸದಸ್ಯರು ಸಾಥ್‌ ನೀಡುತ್ತಿದ್ದಾರೆ. ವಿದ್ಯಾರ್ಥಿ ಭವನ್‌ನ  ಇಡ್ಲಿ, ಸಾಂಬಾರ್‌ ತುಂಬಾ ಜನಪ್ರಿಯ. ಕೊಂಚ ಖಾರ ಹತ್ತಿಸುವಂಥ ಸಾಂಬಾರ್‌ನಲ್ಲಿ ಎರಡು ಇಡ್ಲಿಯನ್ನು ಸಂಪೂರ್ಣ ಮುಳುಗಿಸಿ,

ಸಾಂಬಾರ್‌ನಲ್ಲಿ ಇಡ್ಲಿಯನ್ನು ಕಲೆಸುತ್ತಾ ಜೊತೆಗೆ ಉದ್ದಿನ ವಡೆಯನ್ನು ನೆಂಚಿಕೊಂಡು ತಿನ್ನುವುದರ ಮಜವೇ ಬೇರೆ. ಬೆಳಗ್ಗೆ ಆರು ಗಂಟೆಯಿಂದಲೇ ಆರಂಭವಾಗುವ ಇಡ್ಲಿ ಸಾಂಬಾರ್‌ ಸೇವೆಯನ್ನು ಚಪ್ಪರಿಸಿಕೊಂಡು ಎರಡೆರಡು ಸಲ ಸಾಂಬಾರ್‌ ಹಾಕಿಸಿಕೊಂಡು ತಿನ್ನುವ ದೊಡ್ಡ ಗ್ರಾಹಕ ವರ್ಗವೇ ಇದೆ. ಕೋಲಾರವನ್ನು ಹೋರಾಟಗಳ ಜಿಲ್ಲೆ ಎಂದೇ ಕರೆಯುತ್ತಾರೆ. ಈ ಹೋರಾಟಗಳ ಪೈಕಿ ಬಹುತೇಕ ಹೋರಾಟಗಳು ವಿದ್ಯಾರ್ಥಿ ಭವನ್‌ದ ಟೇಬಲ್‌ಗ‌ಳ ಸುತ್ತ ನಡೆದ ಪೂರ್ವಭಾವಿ ಚರ್ಚೆಗಳ ಮೂಲಕವೇ ಆರಂಭವಾಗಿದೆ.   

ಮಾಹಿತಿಗೆ: 9008172735

* ಕೆ.ಎಸ್‌.ಗಣೇಶ್‌

ಟಾಪ್ ನ್ಯೂಸ್

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Perth test: Jasprit Bumrah’s bowling style in doubt: What is the controversy?

Perth test: ಜಸ್ಪ್ರೀತ್‌ ಬುಮ್ರಾ ಬೌಲಿಂಗ್‌ ಶೈಲಿ ಅನುಮಾನ: ಏನಿದು ವಿವಾದ?

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

10-madikeri

Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.