ಸ್ಟೂಡೆಂಟ್ ಲೋನ್ ಸಮಾಚಾರ; ವಿದ್ಯಾರ್ಥಿ ಸಾಲದ ಹೊರೆ ಇಳಿಸುವ ಮಾರ್ಗಗಳು
Team Udayavani, Jul 20, 2020, 3:05 PM IST
ವಿದ್ಯಾರ್ಥಿ ಲೋನ್ ಪಡೆದು ಓದುತ್ತಾ ಈಗ ಕಡೆಯ ವರ್ಷದಲ್ಲಿರುವವರು, ಆತಂಕದಲ್ಲಿದ್ದಾರೆ. ಕೋವಿಡ್ ಕಾರಣಕ್ಕೆ ಪರೀಕ್ಷೆ ನಡೆಯದೆ, ಭವಿಷ್ಯ ಅತಂತ್ರವಾದರೆ
ಎಂಬುದು ಚಿಂತೆಗೆ ಕಾರಣ. ಅಂಥವರು ವಿದ್ಯಾರ್ಥಿ ಲೋನ್‌ನ ಹೊರೆಯನ್ನು ಯಾವ ರೀತಿ ಕಡಿಮೆ ಮಾಡಿಕೊಳ್ಳಬಹುದು?
ಉನ್ನತ ಶಿಕ್ಷಣ ದುಬಾರಿಯಾಗಿದೆ. ಖಾಸಗಿ ವಿದ್ಯಾಸಂಸ್ಥೆಗಳ ಶುಲ್ಕ, ವಿದೇಶಿ ವಿಶ್ವ ವಿದ್ಯಾಲಯದಲ್ಲಿನ ಶಿಕ್ಷಣವೂ ಗಗನ ಕುಸುಮವಾಗಿದೆ. ಆದಾಗ್ಯೂ, ಮಹತ್ವಾಕಾಂಕ್ಷಿ ವಿದ್ಯಾರ್ಥಿ ಗಳು ಸ್ಟೂಡೆಂಟ್ ಲೋನ್ ಸಹಾಯದಿಂದ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಸ್ಟೂಡೆಂಟ್ ಲೋನ್ ಬಲದಿಂದ ಉತ್ತಮ
ದರ್ಜೆಯ ಕಾಲೇಜಿನಲ್ಲಿ ತಮ್ಮಿಚ್ಛೆಯ ವಿಭಾಗದಲ್ಲಿ ಸೀಟು ಪಡೆದು, ಉದ್ಯೋಗ ಹಿಡಿದು, ಸಾಲ ತೀರಿಸುವ ಯೋಜನೆ ಅನೇಕರದ್ದು. ಹೆತ್ತವರಿಗೆ ಹೊರೆ ಯಾಗದೇ ಉನ್ನತ ಶಿಕ್ಷಣ ಪೂರೈಸಲಿಚ್ಛಿ ಸುವವರಿಗೆ, ಸ್ಟೂಡೆಂಟ್ ಲೋನ್ ವರದಾನವಿದ್ದಂತೆ. ಅವರಲ್ಲಿ ಒಂದು ವರ್ಗದ ಮಂದಿ ಸದ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸ್ಟೂಡೆಂಟ್ ಲೋನ್ ಪಡೆದು ಓದುತ್ತಾ, ಈಗ ಕಡೆಯ ವರ್ಷಕ್ಕೆ ಬಂದಿರುವವರು, ಸದ್ಯದ ಲಾಕ್‌ಡೌನ್ ಪರಿಸ್ಥಿತಿಯಿಂದಾಗಿ ಯೋಚನೆಗೀಡಾಗಿದ್ದಾರೆ. ಅಂತಿಮ ಪರೀಕ್ಷೆ ನಡೆಯದಿರುವುದು, ಜೊತೆಗೆ ಉದ್ಯೋಗದ ಬಗ್ಗೆಯೂ ಅನಿಶ್ಚಿತತೆ ಇರು ವುದು ಅದಕ್ಕೆ ಕಾರಣ. ಈಗಾಗಲೇ ಪದವಿ ಪಡೆದವರೂ, ಉದ್ಯೋಗಾವಕಾಶಗಳು ಸ್ಥಗಿತ ಗೊಂಡಿರು ವುದರಿಂದ ಈ ಸಾಲಿಗೆ ಸೇರಿದ್ದಾರೆ. ಇಂಥ ಸಂದರ್ಭದಲ್ಲಿ ಸಾಲದ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಮಾರ್ಗಗಳು ಇಲ್ಲಿವೆ.
1 ಮುಂದೂಡಿಕೆ
ಆರ್‌ಬಿಐ ಸಲಹೆಯಂತೆ, ಲಾಕ್ ಡೌನ್ ಸಮಯದಲ್ಲಿ ಎಲ್ಲಾ ಬಗೆಯ ಇಎಂಐ ಕಂತುಗಳನ್ನು ಮುಂದೂಡುವ ಸವಲತ್ತನ್ನು ಹಣಕಾಸು ಸಂಸ್ಥೆಗಳು
ಗ್ರಾಹಕರಿಗೆ ನೀಡಿವೆ. ಕೆಲವೊಂದು ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ಪದವಿ ಶಿಕ್ಷಣ ಪೂರ್ತಿಗೊಳಿಸಿದ ನಂತರದ 6 ತಿಂಗಳ ಕಾಲ ವಿನಾಯಿತಿಯನ್ನು
ನೀಡಲಾಗಿದೆ. ಆದರೆ ಅಷ್ಟು ಸಮ ಯಕ್ಕೆ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಬಡ್ಡಿ ಪಾವತಿಸುವುದರಿಂದ, ಮುಂದೆ ಉಳಿಯುವ ಬಾಕಿಗೆ ಹೆಚ್ಚಿನ ಮೊತ್ತ
ಸೇರುವುದನ್ನು ತಡೆಗಟ್ಟಬಹುದು.
2 ಮರು ರಚನೆ
ಸಾಲ ನೀಡಿದ ಸಂಸ್ಥೆಯನ್ನು ಸಂಪರ್ಕಿಸಿ, ಸಾಲ ಮರುಪಾವತಿ ವಿಧಾನದಲ್ಲಿ ಮಾರ್ಪಾಡು ಮಾಡಿಕೊಳ್ಳಲು ಮನವಿ ಸಲ್ಲಿಸಬಹುದು. ಸಂಸ್ಥೆಗಳು
ನಿಷ್ಠಾವಂತ ಗ್ರಾಹಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಹೆಚ್ಚುವರಿ ಸೌಲಭ್ಯಗಳನ್ನು ನೀಡುವ ಸಾಮರ್ಥ್ಯ ಪಡೆದಿರುತ್ತವೆ. ಕ್ರೆಡಿಟ್ ಸ್ಕೋರ್ ಹೆಚ್ಚಿರುವ ಗ್ರಾಹಕರಿಗೂ ಇದು ಅನ್ವಯವಾಗುತ್ತದೆ. ಸದ್ಯ ಸ್ವಲ್ಪ ಕಾಲ ಮರುಪಾವತಿ ಸಾಧ್ಯವಾಗುವುದಿಲ್ಲ ಎನ್ನುವವರು, ಸಾಲ ಮರುಪಾವತಿ ಅವಧಿಯನ್ನು
ಹೆಚ್ಚಿಸಿಕೊಳ್ಳಬಹುದು, ಇಲ್ಲವೇ ಸ್ಟೆಪ್ ಅಪ್ ಲೋನ್‌ಗೆ ಬದಲಾಯಿಸಿ ಕೊಳ್ಳಬಹುದು.
3 ರೀ ಫೈನಾನ್ಸಿಂಗ್
ರೀ ಫೈನಾನ್ಸಿಂಗ್ ಎಂದರೆ, ಗ್ರಾಹಕ ತೆಗೆದುಕೊಂಡಿರುವ ಸಾಲದ ಮೊತ್ತಕ್ಕೆ ಕಡಿಮೆ ಪ್ರಮಾಣದ ಬಡ್ಡಿ ವಿಧಿಸುವ ಮತ್ತೂಂದು ಸಂಸ್ಥೆಗೆ ಸ್ವಿಚ್ ಆಗುವುದು. ಇದರಿಂದ ಇಎಂಐ ಹೊರೆ ಕಡಿಮೆಯಾಗುತ್ತದೆ. ಒಂದು ಸಂಸ್ಥೆಯಿಂದ ಮತ್ತೂಂದು ಸಂಸ್ಥೆಗೆ ಸ್ವಿಚ್ ಆಗುವುದು ಸುಲಭವಲ್ಲ, ಆದ್ದರಿಂದ ಅನಿವಾರ್ಯ
ಸಂದರ್ಭದಲ್ಲಿ ಈ ನಡೆಗೆ ಮುಂದಾಗಬಹುದು. ರೀ ಫೈನಾನ್ಸಿಂಗ್ ಮಾಡಲು ಶುಲ್ಕವನ್ನೂ ನೀಡಬೇಕಾಗುತ್ತದೆ. ಹಾಗಾಗಿ ಗ್ರಾಹಕರು ವಿಚಾರ ಮಾಡಿ ಮುಂದುವರಿಯಬೇಕು.
4 ಶೂರಿಟಿ
ಮೇಲೆ ನೀಡಲಾದ ಆಯ್ಕೆಗಳು ಫಲಕಾರಿಯಾಗದಿದ್ದರೆ, ಮನೆಯವರನ್ನು ಸಂಪರ್ಕಿಸಿ ನೆರವನ್ನು ಕೋರಬಹುದು. ಕುಟುಂಬ ಸದಸ್ಯರು ಯಾರಾದರೂ ಮನೆ ಸಾಲವನ್ನು ಪಡೆದಿದ್ದರೆ, ಅದೇ ಸಾಲದ ಮೇಲೆ ಹೆಚ್ಚುವರಿಯಾಗಿ ಒಂದಷ್ಟು ಮೊತ್ತವನ್ನು ಸಾಲವಾಗಿ ಪಡೆದುಕೊಳ್ಳಬಹುದು. ಆ ಹಣವನ್ನು ಶಿಕ್ಷಣ ಸಾಲ ತೀರಿಸಲು ಬಳಸ ಬಹುದು. ಶಿಕ್ಷಣ ಸಾಲವನ್ನು ತೀರಿಸಲೆಂದೇ ವೈಯಕ್ತಿಕ ಸಾಲ ಪಡೆಯುವುದಕ್ಕಿಂತ, ಮೇಲಿನದ್ದು ಒಳ್ಳೆಯ ಮಾರ್ಗ.
5 ಅಸೆಟ್‌ಗಳ ಬಳಕೆ
ಇವೆಲ್ಲ ಮಾರ್ಗ ಹಿಡಿದಾಗಲೂ ಪ್ರಯೋಜನ ಆಗಲಿಲ್ಲ ಅಂದರೆ- ಅಂತಿಮವಾಗಿ ಉಳಿದಿರುವ ದಾರಿ ಎಂದರೆ ಎಫ್ಡಿ, ಮ್ಯೂಚುವಲ್ ಫಂಡ್, ಚಿನ್ನ ಅಥವಾ ಪ್ರಾಪರ್ಟಿಯಂಥ ಅಸೆಟ್‌ಗಳನ್ನು ಶಿಕ್ಷಣ ಸಾಲ ಮರುಪಾವತಿಗೆ ಬಳಸಿ ಕೊಳ್ಳುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.