ಕಬ್ಬು ಕಟಾವು ಯಂತ್ರ
Team Udayavani, May 27, 2019, 6:00 AM IST
ಕೃಷಿ ಕಾರ್ಮಿಕರ ಕೊರತೆಯ ನೀಗಿಸಲು ಕಂಪನಿಗಳು ಕೃಷಿ ಯಂತ್ರೋಪಕರಣಗಳನ್ನು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಇಂಥ ಒಂದು ವಿಶೇಷ ಅವಿಷ್ಕಾರವಾಗಿ ನಿವ್ ಹಾಲಂಡ್, ಜಾನ್ ಡೀರೆ(ಎಲ್‌ಟಿ) ಮತ್ತು ಶಕ್ತಿಮಾನ್ ಸೇರಿದಂತೆ ಹಲವಾರು ಕಂಪನಿಗಳು ಕಬ್ಬು ಕಟಾವು ಯಂತ್ರಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವುದು ರೈತರಿಗೆ, ಸಕ್ಕರೆ ಕಾರ್ಖಾನೆಗಳಿಗೆ ಆಶಾಕಿರಣವಾಗಿ ಹೊರಹೊಮ್ಮಿದೆ.
ಕಬ್ಬು ಕಟಾವು ಯಂತ್ರದ ಪ್ರಯೋಜನಗಳು
1) ಬೇಗ ಬೇಗ ಮತ್ತು ತಾಜಾ ಕಬ್ಬು ಕಾರ್ಖಾನೆಗೆ ಪೂರೈಕೆಯಾಗುತ್ತದೆ. ಇದರಿಂದ ಕಾರ್ಖಾನೆಯಲ್ಲಿ ಸಕ್ಕರೆ ಉತ್ಪಾದನೆ ಜಾಸ್ತಿಯಾಗುತ್ತದೆ.
2) ಕಬ್ಬಿನ ಜೊತೆಯಿರುವ ಒಣ ಮತ್ತು ಹಸಿ ರವದಿಯು ಸಣ್ಣ-ಸಣ್ಣ ತುಂಡುಗಳಾಗಿ ಮರಳಿ ಭೂಮಿಗೆ ಸೇರ್ಪಡೆಯಾಗಿ ಕೆಲವೇ ದಿನಗಳಲ್ಲಿ ಸಾವಯವ ಗೊಬ್ಬರವಾಗಿ ಪರಿವರ್ತನೆಯಾಗಿ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಬೃಹತ್ ಪ್ರಮಾಣದ ಆಳುಗಳ ಕೊರತೆಯಿಂದ ಮುಕ್ತಿ.
3) ಕುಳೆ ಕಬ್ಬು ಕಾಯುವ ರೈತರಿಗೆ ಕೋಲಿ(ಕಟಾವಾಗದೆ ಉಳಿದ ಕಬ್ಬು) ಸವರುವಿಕೆ ಕಾರ್ಯದಿಂದ ಮುಕ್ತಿ.
ಜಮೀನಿಗೆ ಸಮಾನಾಂತರವಾಗಿ ಕಬ್ಬು ಕಟಾವು ಮಾಡುವುದರಿಂದ ಯಾವುದೇ ರೀತಿಯ ಕಬ್ಬು(ಕೋಲಿ) ಉಳಿಯುವುದಿಲ್ಲ. ಈ ಕಬ್ಬಿನಲ್ಲಿ ಗಣನೀಯ ಪ್ರಮಾಣದಲ್ಲಿ ಸಕ್ಕರೆ ಅಂಶವಿರುವುದು ಗಮನಾರ್ಹ.
4) ರಾತ್ರಿ ಸಮಯದಲ್ಲಿಯೂ ಸಹ ಉತ್ತಮ ಬೆಳಕಿನ ಸಹಾಯದಿಂದ ಕಬ್ಬು ಕಟಾವು ಕಾರ್ಯ ಕೈಗೊಳ್ಳಬಹುದು.
ಈ ಕಬ್ಬು ಕಟಾವು ಯಂತ್ರಗಳು ತೇವಾಂಶವಿರದ ಕಬ್ಬಿನ ಪ್ಲಾಟ್‌ಗಳಲ್ಲಿ ಮಾತ್ರ ಕಬ್ಬು ಕಟಾವು ಕಾರ್ಯ ಕೈಗೊಳ್ಳುವುದರಿಂದ ಕಾರ್ಖಾನೆಗಳಿಗೆ ಹೆಚ್ಚುವರಿ ಸಕ್ಕರೆ ಪ್ರಮಾಣ ಪ್ರಾಪ್ತಿಯಾಗುತ್ತದೆ.
-ಬಸವರಾಜ ಶಿವಪ್ಪಾ ಗಿರಗಾಂವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.