ಸಕ್ಕರೆ ವಿಶ್ಯ ಬೇಡವೋ ಶಿಶ್ಯ
Team Udayavani, Nov 26, 2018, 6:00 AM IST
ಕಬ್ಬಿಗೆ ಬೆಂಬಲ ಬೆಲೆ ನೀಡಿಕೆಯ ವಿಷಯವಾಗಿ ರೈತರಿಗೆ ಪದೇ ಪದೆ ಅನ್ಯಾಯವಾಗುತ್ತಿದೆ. ಸಕ್ಕರೆಯ ಬೆಲೆ ಕೆ.ಜಿಗೆ 50ರೂ. ದಾಟಿದರೂ ಕಬ್ಬು ಬೆಳೆಗಾರರಿಗೆ ಏನೂ ಲಾಭವಿಲ್ಲ ಅನ್ನೋದು ಒಪ್ಪಲೇ ಬೇಕಾದ ಕಹಿ ಸತ್ಯ
ಸಕ್ಕರೆ ಗಲಾಟೆ ಆಗಲೇ ಶುರುವಾಗಿದೆ. ಕಬ್ಬನ್ನು ನಂಬಿದ ರೈತರಿಗೆ ಸಿಹಿಗಿಂತ ಕಹಿ ಅನುಭವವೇ ಹೆಚ್ಚು. ಪ್ರತಿ ವರ್ಷ ಊರ ದೇವರ ಜಾತ್ರೆಯಂತೆಯೇ ಈ ಪ್ರತಿಭಟನೆಗಳು ವರ್ಷಕ್ಕೊಂದು ಸಲ ನಡೆಯುತ್ತಿವೆ.ಸರ್ಕಾರ ಚಾಮರಾಜನಗರ, ಮಂಡ್ಯ ಕಡೆ ಟನ್‌ಗೆ 2, 750 ಚಿಲ್ಲರೆ ಕೊಡಬೇಕು ಎಂದು ಸರ್ಕಾರ ಹೇಳಿದೆ. ಉತ್ತರ ಕರ್ನಾಟಕದಲ್ಲಿ ಇದಕ್ಕಿಂತ ಸ್ವಲ್ಪ ಜಾಸ್ತಿ ಬೆಲೆ ಇಟ್ಟಿದೆ. ಆದರೂ, ಈ ತೀರ್ಮಾನಗಳು ರೈತರಿಗೆ ಸಹಿಯಾಗಿ ಕಾಣುತ್ತಿಲ್ಲ. ಏಕೆಂದರೆ, ಸಕ್ಕರೆ ಕಾರ್ಖಾನೆ ಮಾಲೀಕರೆ ಸಕ್ಕರೆ ಪಾಲಿಸಿಗಳನ್ನು ಮಾಡುವುದರಿಂದ ಅನೇಕ ಯಡವಟ್ಟುಗಳು ಆಗುತ್ತವೆ ಅನುಮಾನ ಇದ್ದೇ ಇದೆ.
ಒಂದು ಪಕ್ಷ ರೈತರು ಸಕ್ಕರೆ ಮೇಲೆ ಮುನಿಸಿಕೊಂಡು- ಬೆಲ್ಲದ ಕಡೆಗೆ ವಾಲಿದರೆ ಏನಾಗುತ್ತೆ? ರಾಜ್ಯದಲ್ಲಿ ಸುಮಾರು 20ಲಕ್ಷ ಕಬ್ಬನ್ನು ನಂಬಿದ್ದಾರೆ. 10ಲಕ್ಷ ಹೆಚ್ಚು ಎಕರೆಯಲ್ಲಿ ಕಬ್ಬು ಬೆಳೆಯಾಗುತ್ತಿದೆ. ಆದರೆ ಕಬ್ಬಿನ ಬೆಲೆ ರೈತರಿಗೆ ತೃಪ್ತಿ ಕೊಟ್ಟಿಲ್ಲ. ಈ ಕಾರಣಕ್ಕೆ ಸಕ್ಕರೆ ಕಹಿ ಕಹಿ ಎನಿಸುತ್ತಿದೆ.
ಸುಮ್ಮನೆ ಲೆಕ್ಕ ಹಾಕೋಣ…
ರಾಜ್ಯದಲ್ಲಿ ಒಟ್ಟಾರೆ ಕಬ್ಬಿನ ಬೆಳೆ ವರ್ಷಕ್ಕೆ 3.5ಕೋಟಿ ಟನ್. ಇದರಲ್ಲಿ 25ಲಕ್ಷ ಟನ್ ಬಿತ್ತನೆ ಬೀಜಕ್ಕೆ ಹೋಗುತ್ತದೆ. 70ಲಕ್ಷ ಟನ್ ಬೆಲ್ಲಕ್ಕೆ ಮೀಸಲು. ಮಿಕ್ಕಿದ 2 ಕೋಟಿ ಚಿಲ್ಲರೆ ಟನ್ ಸಕ್ಕರೆಗೆ ಬೇಕೇ ಬೇಕು. ಆದರೆ ಬೆಲೆ ಮಾತ್ರ ಅಷ್ಟೇ… ಟನ್ ಕಬ್ಬಿಗೆ 2700 ಅಂತ ಇಟ್ಟು ಕೊಂಡರೂ, ಸಾಗಾಣಿಕ ವೆಚ್ಚ 500 ರುಪಾಯಿಗಳನ್ನು ತೆಗೆದರೆ ಕೈಗೆ ಸಿಗುವುದು 2200. ಅಂದರೆ ಟನ್ ಮೇಲೆ 50ರೂ. ರೈತರಿಗೆ ಲಾಸು. ಇದನ್ನೇ ಆಲೇ ಮನೆ ಕಡೆಗೆ ಕಳುಹಿಸಿದರೆ ಕನಿಷ್ಠ 3ರಿಂದ 3.5ಸಾವಿರ ಗ್ಯಾರಂಟಿ ಸಿಗುತ್ತದೆ. ಕಾರ್ಖಾನೆ ಮುಂದೆ ನಿಂತು ಅಡ್ವಾನ್ಸ್ ಕೇಳ್ಳೋ ಹಾಗಿಲ್ಲ. ಕಬ್ಬು ಇಳಿಸಿ ಟವಲ್ ಒದರುವ ಹೊತ್ತಿಗೆ ಹಣ ಸಿಗುತ್ತಿದೆ. ಕಳೆದ ವರ್ಷದಿಂದ ನಿಜವಾಗಲೂ ರೈತರ ಕೈಹಿಡಿಯುತ್ತಿರುವುದು ಇದೇ ಬೆಲ್ಲ. ಮಂಡ್ಯ ಸುತ್ತಮುತ್ತಲೇ ಸುಮಾರು 2 ಸಾವಿರಕ್ಕೂ ಹೆಚ್ಚು ಆಲೆಮನೆಗಳಿವೆ. ಶೇ.90ರಷ್ಟು ಆಲೆ ಮನೆಗಳು ಕಬ್ಬು ಅರೆಯವ ಕಾಯಕ ಮಾಡುತ್ತಿವೆ. ಬಕೆಟ್ ಬೆಲ್ಲ, ಕುರಿಕಾಲು ಅಚ್ಚು, ಅಚ್ಚು, ಬಾಕ್ಸ್ ಬೆಲ್ಲ, ಉಂಡೆ ಬೆಲ್ಲಾ ಹೀಗೆ ಹಲವು ವಿಧಗಳಿವೆ. ಇದರಲ್ಲಿ ಬಕೆಟ್ ಬೆಲ್ಲಕ್ಕಷ್ಟೇ ಸ್ವಲ್ಪ ಬೆಲೆ ಕಡಿಮೆ. ಉಳಿದವಕ್ಕೆ ಹೆಚ್ಚು.
ಬೆಲ್ಲದ ಲೆಕ್ಕಾಚಾರ ಹೀಗೆ…
ರಾಜ್ಯದಲ್ಲಿ ಅಂದಾಜು 56 ಸಕ್ಕರೆ ಕಾರ್ಖಾನೆಗಳಿವೆ. ಪ್ರತಿವರ್ಷಕ್ಕೆ ಇದಕ್ಕೆ ಕನಿಷ್ಠ 3ಸಾವಿರ ಟನ್ ಕಬ್ಬು ಬೇಕೇಬೇಕು. ನೀ ಕೊಡೆ ನಾ ಬಿಡೆ ಅನ್ನೋ ಹಠ ಮುಂದುವರೆದರೆ, ರೈತರು ಬೆಲ್ಲದ ಕಡೆ ಮುಖ ಮಾಡಿದರೆ ಗತಿ ಏನು? ಆಗ ಸಕ್ಕರೆ ಬೆಲೆ ಏನಾಗಬಹುದು? ಸುಮ್ಮನೆ ಲೆಕ್ಕ ಮಾಡೋಣ.
ಒಂದು ಟನ್‌ಕಬ್ಬಿನಿಂದ ಒಂದು ಕ್ವಿಂಟಾಲ್ ಬೆಲ್ಲ ಮಾಡಬಹುದು. ಇದರ ಒಟ್ಟಾರೆ ಖರ್ಚು 800 ರಿಂದ 1000. ಅದೇ ಒಂದು ಟನ್ ಕಬ್ಬಿನಿಂದ 110ಟನ್ ಕೆ.ಜಿ ಸಕ್ಕರೆ ತಯಾರಿಸಬಹುದು. ಒಂದು ಕೆ.ಜಿಗೆ 31ರೂ. (ಟನ್‌ಗೆ 3,100)ಬಂದರೂ ರೈತರಿಗೇನು ಏನು ಬಂತು ಭಾಗ್ಯ? ರಾಜ್ಯದಲ್ಲಿ ಒಟ್ಟಾರೆ 80ಸಾವಿರ ಆಲೆಮನೆಗಳಿವೆ. ವರ್ಷಕ್ಕೆ 70ಲಕ್ಷ ಟನ್ ಬೆಲ್ಲ ತಯಾರು ಮಾಡುತ್ತಿವೆ. ಅದೇ ಒಂದು ಕೆ.ಜಿ ಬೆಲ್ಲದ ಬೆಲೆ 44ರೂ. ಆದರೆ ರೈತರಿಗೆ ಟನ್ ಕಬ್ಬಿಗೆ ಆಲೆಮನೆಯವರು 2,800 ತನಕ ಕೊಡುತ್ತಾರೆ. ಕಳೆದ ವರ್ಷದಿಂದ ಆಲೆಮನೆಯ ಕಬ್ಬಿನ ಬೆಲೆ ಕನಿಷ್ಠ ಎರಡು ಸಾವಿರಕ್ಕಿಂತ ಕಡಿಮೆಯಾಗಿಲ್ಲ ಅನ್ನೋ ಮಾತಿದೆ. ಗುಣಮಟ್ಟದ ಬೆಲ್ಲ ನೀಡಿದರೆ ಬೆಲೆ ಏರಿಕೆ ಮಾಡಬಹುದು. ಇದರಿಂದ ರೈತರಿಗೆ ಟನ್‌ಗೆ 1000ರೂ.ಗೂ ಹೆಚ್ಚಿನ ಲಾಭವಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಆಲೆಮನೆಯನ್ನು ನಡೆಸುವುದು ರೈತರೇ. ಹೀಗಾಗಿ, ಆಲೆಮನೆಗಳಲ್ಲಿ ಕಾರ್ಖಾನೆಗಳಲ್ಲಿರುವಂತೆ ದಬ್ಟಾಳಿಕೆ ಇರುವುದಿಲ್ಲ. ಒಂದು ಟನ್ ಕಬ್ಬು ಬೆಳೆಯಲು ಎರಡು ಸಾವಿರಕ್ಕೂ ಹೆಚ್ಚು ಖರ್ಚುತಗಲುತ್ತದೆ. . ಸಕ್ಕರೆ ಕೆ.ಜಿಗೆ 27ರೂ. ಇದ್ದರೂ ಇದು 50ರೂ. ದಾಟಿದರೂ ರೈತರಿಗೇನು ಲಾಭವಿಲ್ಲ. ಕಾರ್ಖಾನೆಗಳಿಗೆ ಉಪಉತ್ಪನ್ನಗಳಿಂದ ಟನ್‌ಗೆ 3,800ರೂ, ಆದಾಯವಿದ್ದರೂ ಚೌಕಾಸಿ ಮಾಡುತ್ತಾರೆ. ರೈತರಿಗೆ ನ್ಯಾಯವಾಗಿ ಕೊಡಬೇಕಾದ ಹಣ ಕೊಡದೆ ಸತಾಯಿಸುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಈವರೆಗೆ ಅಧಿಕಾರಕ್ಕೆ ಬಂದ ಸರ್ಕಾರಗಳೂ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲಿಲ್ಲ ಅನ್ನೋ ರೈತರ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ.
– ಕೆ.ಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kottigehara: ನಾಯಿ ದಾಳಿಯಿಂದ ಮಗುವಿಗೆ ಗಾಯ
IPL 2024: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್ ಭರಾಟೆ ಬಲು ಜೋರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.