ಸೂಪರ್ ಫಾಸ್ಟ್ ಬಿಲ್ಲಿಂಗ್

ರಿಟೇಲ್‌ ಉದ್ಯಮದಲ್ಲಿ ಗ್ರಾಹಕನೇ ಕಿಂಗ್‌

Team Udayavani, Jul 29, 2019, 8:56 AM IST

sale

ಇನ್ನೊಂದು ವರ್ಷ ಕಳೆಯುವುದರೊಳಗೆ, ಅಂದರೆ 2020ಕ್ಕೆ ಭಾರತದಲ್ಲಿ ರಿಟೇಲ್‌, ಸುಮಾರು 90 ಲಕ್ಷ ಕೋಟಿ ರೂ.ನ ಬೃಹತ್‌ ಉದ್ಯಮವಾಗಲಿದೆ. ನಮ್ಮ ದೇಶದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ)ದ ಶೇ.10 ಮತ್ತು ಉದ್ಯೋಗಗಳಲ್ಲಿ ಶೇ.8ರಷ್ಟನ್ನೂ ರಿಟೇಲ್‌ ಉದ್ಯಮ ನೀಡುತ್ತಿದೆ. ಕೇಂದ್ರ ಸರ್ಕಾರವು ಜಿಎಸ್‌ಟಿ ಅನುಷ್ಠಾನ, ದೇಶಿ ಬಂಡವಾಳ ಹೂಡಿಕೆ ಮೊದಲಾದ ಕ್ರಮಗಳಿಂದ, ದೇಶದಲ್ಲಿ ರಿಟೇಲ್‌ ಉದ್ಯಮದ ಬೆಳವಣಿಗೆಗೆ ಪೋ›ತ್ಸಾಹ ನೀಡುತ್ತಿದೆ. ಮಹಾನಗರಗಳು ಮಾತ್ರವಲ್ಲದೆ, ಎರಡನೆಯ ಮತ್ತು ಮೂರನೆಯ ಶ್ರೇಣಿಯ ನಗರಗಳಲ್ಲೂ ಮಾಲ್‌ ಸಂಸ್ಕೃತಿ ಮತ್ತು ಇ-ಕಾಮರ್ಸ್‌ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ಸಾಂಪ್ರದಾಯಿಕ ಅಂಗಡಿ, ಡಿಪಾರ್ಟ್‌ಮೆಂಟ್‌ ಸ್ಟೋರ್, ಇತ್ಯಾದಿಗಳು ಮುಚ್ಚಿ ಹೋಗಬಹುದೇನೋ ಎನ್ನುವ ಆತಂಕವಿದೆ. ಆದರೆ, ಭಾರತದಲ್ಲಿರುವ ರಿಟೇಲ್‌ ಉದ್ಯಮದಲ್ಲಿ ಶೇ.93 ಅಸಂಘಟಿತ ವಲಯದಲ್ಲಿ ಇದ್ದರೆ, ಶೇ.7 ಮಾತ್ರ ಸಂಘಟಿತ ವಲಯದಲ್ಲಿವೆ.

ರಿಟೇಲ್‌ ಉದ್ಯಮದಲ್ಲಿ ಮಾಹಿತಿ ತಂತ್ರಜ್ಞಾನ, ಆಟೋಮೇಷನ್‌, ಆರ್ಟಿಶಿಯಲ್‌ ಇಂಟೆಲಿಜೆನ್ಸ್‌, ಮೆಶೀನ್‌ ಲರ್ನಿಂಗ್‌ ಮೊದಲಾದ ತಂತ್ರಜ್ಞಾನಗಳನ್ನು ಭಾರತದ ರಿಟೇಲ್‌ ಉದ್ಯಮ ಕೂಡಾ ಬಳಸಲು ಪ್ರಾರಂಭಿಸಿದೆ. ಬಾರ್‌ಕೋಡ್‌, ದಾಸ್ತಾನು ನಿರ್ವಹಣೆ, ಹೊಸ ವಸ್ತು ಖರೀದಿ, ಬಿಲ್ಲಿಂಗ್‌, ಪಾಯಿಂಟ್‌ ಆಫ್ ಸೇಲ್‌, ಮೊದಲಾದ ತಂತ್ರಜ್ಞಾನ ಮತ್ತು ತಂತ್ರಾಂಶದ ಬಳಕೆಯನ್ನು ಮಹಾನಗರಗಳು ಮಾತ್ರವಲ್ಲದೆ ಎರಡನೆ ಮತ್ತು ಮೂರನೆಯ ಶ್ರೇಣಿಯ ನಗರಗಳಲ್ಲಿರುವ ರಿಟೇಲ್‌ ಮಳಿಗೆಗಳಲ್ಲಿ ಕೂಡಾ
ನೋಡಬಹುದಾಗಿದೆ. ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌, ಭೀಮ್‌ ನಂತಹ ವ್ಯಾಲೆಟ್‌ಗಳ ಬಳಕೆ, ಮೊಬೈಲ್‌ ವಾಣಿಜ್ಯ, ಆನ್‌ಲೈನ್‌ ಪೇಮೆಂಟ್‌, ಹೀಗೆ ವಿವಿಧ ಸೌಲಭ್ಯಗಳು ಈಗಾಗಲೇ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ
ಜನಪ್ರಿಯವಾಗುತ್ತಿವೆ.

ಒಂದು ಸೂಪರ್‌ ಮಾರುಕಟ್ಟೆಗೆ ಹೋಗಿ ಅಗತ್ಯ ವಸ್ತುಗಳನ್ನು ಖರೀದಿಸುವಾಗ, ಗ್ರಾಹಕನಿಗೆ ಹೇಗೆ ಹೆಚ್ಚು ಸೌಲಭ್ಯಗಳನ್ನು ನೀಡಬಹುದು ಮತ್ತು ಸಮಯವನ್ನು ಹೇಗೆ ಉಳಿತಾಯ ಮಾಡಬಹುದು ಎಂದು ತಿಳಿಸಲು
ರಿಟೇಲ್‌ ಉದ್ಯಮ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ.
ಇದರಿಂದಾಗಿ, ಮುಂಬರುವ ದಿನಗಳಲ್ಲಿ ಭಾರತದಲ್ಲಿ ಮಾಲ್‌ಗ‌ಳು. ಸೂಪರ್‌ ಮಾರ್ಕೆಟ್‌ ಗಳು, ದೊಡ್ಡ ಡಿಪಾರ್ಟಮೆಂಟ್‌ ಸ್ಟೋರ್‌ಗಳು, ಗ್ರಾಹಕರಿಗೆ ಹೊಸ ಸೌಲಭ್ಯ ಮತ್ತು ಸೇವೆಗಳನ್ನು ನೀಡಲು ಪ್ರಾರಂಭಿಸುತ್ತವೆ.

ರಿಟೇಲ್‌ ಮಳಿಗೆಯಲ್ಲಿ ವಿವಿಧ ಉತ್ಪನ್ನಗಳನ್ನು ಆಕರ್ಷಕವಾಗಿ ಜೋಡಿಸಿಟ್ಟಿರುವ ಸ್ಟೋರ್‌ ಸೆಲ್ಫ್ಗಳು, ಮುಂಬರುವ ದಿನಗಳಲ್ಲಿ ಗ್ರಾಹಕರಿಗೆ ಮಾಹಿತಿ ನೀಡುವ ಕೆಲಸವನ್ನು ಮಾಡಲಿವೆ. ಉದಾಹರಣೆಗೆ, ನಾವು ಒಂದು ಕೆ.ಜಿ ಅಕ್ಕಿಯ ಪ್ಯಾಕ್‌ ಕೈಗೆತ್ತಿಕೊಂಡರೆ, ಆ ಪ್ಯಾಕ್‌ನಲ್ಲಿರುವ ಅಕ್ಕಿಯನ್ನು ಯಾವ ರಾಜ್ಯ ಅಥವಾ ಊರಿನಲ್ಲಿ ಮತ್ತು ಯಾವ ತಿಂಗಳು, ವರ್ಷದಲ್ಲಿ ಬೆಳೆಯಲಾಗಿದೆ, ಅಕ್ಕಿಯನ್ನು ಯಾವಾಗ ಪ್ಯಾಕ್‌ ಮಾಡಲಾಗಿದೆ, ಅನ್ನ ಮಾಡಲು ಎಷ್ಟು ಪ್ರಮಾಣದ ನೀರು ಬಳಸಬೇಕು, ಮುಂತಾದ ಹತ್ತು ಹಲವು
ವಿವರಗಳನ್ನು ಡಿಜಿಟಲ್‌ ಸ್ಕ್ರೀನ್‌ ಮೂಲಕ ನಮಗೆ ನೀಡುವ ಸ್ಟೋರ್‌ ಸೆಲ್ಫ್ಗಳಿರುತ್ತವೆ. ಈಗ ನಮಗೆ ಬೇಕಾದ ವಸ್ತುಗಳನ್ನು ಶಾಪಿಂಗ್‌ ಕಾರ್ಟ್‌ಗೆ ಹಾಕಿಕೊಂಡು, ನಂತರ ಬಿಲ್ಲಿಂಗ್‌ ಕೌಂಟರ್‌ಗೆ ಬರಬೇಕು. ಅಲ್ಲಿ ಬಾರ್‌ಕೋಡ್‌ ಸ್ಕ್ಯಾನರ್‌ ಮತ್ತು ಬಿಲ್ಲಿಂಗ್‌ ತಂತ್ರಾಂಶ ಬಳಸಿ, ನಾವು ಖರೀದಿಸಿದ ವಸ್ತುಗಳ ಬಿಲ್‌ ಮಾಡುತ್ತಾರೆ. ನಗದು ಅಥವಾ ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ ಮೂಲಕ ಬಿಲ್‌ನ ಮೊತ್ತ ಪಾವತಿಸಿ, ನಾವು ಖರೀದಿಸಿದ ವಸ್ತುಗಳೊಡನೆ ಮಳಿಗೆಯನಿರ್ಗಮನ ದ್ವಾರಕ್ಕೆ ಬರುತ್ತೇವೆ. ಅಲ್ಲಿರುವ ಸೆಕ್ಯೂರಿಟಿ ನಾವು ಖರೀದಿಸಿದ ವಸ್ತುಗಳು ಮತ್ತು ಬಿಲ್‌ ಪಾವತಿ ಮಾಡಿರುವುದನ್ನು ಖಚಿತ ಪಡಿಸಿಕೊಂಡು, ನಮಗೆ ಹೊರಗೆ ಹೋಗಲು ಅನುಮತಿಸುತ್ತಾನೆ.

ಮುಂಬರುವ ದಿನಗಳಲ್ಲಿ ಈ ಚಿತ್ರ ಪೂರ್ತಿ ಬದಲಾಗುತ್ತದೆ. ನಮಗೆ ಬೇಕಾದ ವಸ್ತುಗಳನ್ನು ಶಾಪಿಂಗ್‌ ಕಾರ್ಟ್‌ಗೆ ಹಾಕುತ್ತಿರುವಂತೆಯೇ, ವಸ್ತುವಿನ ಬಿಲ್‌ ಮಾಡುವ ಸೌಲಭ್ಯವನ್ನು ಕಾರ್ಟ್‌ನಲ್ಲಿಯೇ ನೀಡಲಾಗುತ್ತದೆ. ಬಿಲ್‌ ಪಾವತಿ ಮಾಡಲು ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ ಬಳಸಿ, ಅದೇ ಶಾಪಿಂಗ್‌ ಕಾರ್ಟ್‌ನಲ್ಲಿ ಬಿಲ್‌ ಮೊತ್ತವನ್ನು ಪಾವತಿಸಬಹುದು ಕೂಡಾ. ಇದರಿಂದಾಗಿ, ಗ್ರಾಹಕರಿಗೆ ಬಿಲ್‌ ಆಗುವವರೆಗೆ ಕಾಯುವುದು, ಸೆಕ್ಯೂರಿಟಿ ಚೆಕ್‌ ಮಾಡಿದ ನಂತರ ಮಳಿಗೆಯಿಂದ ಹೊರಗೆ ಹೋಗುವುದು – ಇವುಗಳಿಗೆ ವ್ಯಯಿಸಬೇಕಾದ ಸಮಯದ ಉಳಿತಾಯವಾಗುತ್ತದೆ. ಇಂತಹ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಶಾಪಿಂಗ್‌ ಕಾರ್ಟ್‌ಗಳು ವಿದೇಶಗಳಲ್ಲಿ ಈಗಾಗಲೇ ಜನಪ್ರಿಯವಾಗಿವೆ. ಮುಂಬರುವ ದಿನಗಳಲ್ಲಿ ಈ ವ್ಯವಸ್ಥೆ ಭಾರತದಲ್ಲೂ ಸಾಮಾನ್ಯವಾಗಲಿದೆ.

ಉದಯಶಂಕರ್‌ ಪುರಾಣಿಕ

ಟಾಪ್ ನ್ಯೂಸ್

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

1-a-bb

Pro Kabaddi: ಬೆಂಗಳೂರು ಬುಲ್ಸ್‌ ಗೆ 18ನೇ ಸೋಲು

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

“ರವಿ ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

“CT Ravi ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

1-sq

Squash event: ಭಾರತದ ಅನಾಹತ್‌,ಮಲೇಷ್ಯಾದ ಚಂದರನ್‌ ಚಾಂಪಿಯನ್‌

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.