ಸ್ವದೇಶಿ ಟಿವಿ ಸ್ವಿಚ್ ಒತ್ತೋಣ…
ಚೀನಾದ ಕಲರ್ ಟಿವಿಗಳ ಕನಸು ಭಗ್ನ
Team Udayavani, Aug 10, 2020, 3:47 PM IST
ನಾವು ಎಲ್‌ಇಡಿಗೆ ಸಜ್ಜಾದಾಗ ಚೀನಾ ತ್ರೀಡಿ ಎಂದಿತ್ತು. ನಾವು ತ್ರೀಡಿಗೆ ಟೊಂಕ ಕಟ್ಟಿದಾಗ ಅವರು ಸ್ಮಾರ್ಟ್ ಟಿವಿಗಳಿಂದ ರಂಜಿಸಲು ಬಂದರು. ನಾವು ಸ್ಮಾರ್ಟ್ ಆದಾಗ, ಪ್ರೈಸ್ ವಾರ್ ಘೋಷಿಸಿ, ಅರ್ಧ ರೇಟಿಗೆ ಉತ್ಪನ್ನಗಳನ್ನು ಕೊಟ್ಟರು. ಆದರೆ, ಈಗ ಚೀನಾದ ಕಲರ್ ಟಿವಿಗಳ ಆಮದಿಗೆ ಕೇಂದ್ರ ಸರ್ಕಾರ ನಿರ್ಬಂಧದ ಬಿಸಿಮುಟ್ಟಿಸಿದೆ. ಇದರಿಂದ, ಸ್ವದೇಶಿ ಬ್ರ್ಯಾಂಡ್‌ಗಳಿಗೆ ಮರುಜೀವ ಸಿಕ್ಕಂತಾಗಿದೆ…
ಮೇಡ್ ಇನ್ ಚೀನಾ! ಕೇವಲ ಭಾರತ ಮಾತ್ರವೇ ಅಲ್ಲ, ಜಗತ್ತಿನ ಹಲವು ದೇಶಗಳ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್‌ಗಳನ್ನು ಚೀನೀ ಉತ್ಪನ್ನಗಳು ನಿದ್ದೆಗೆಡಿಸಿದ್ದು ಸುಳ್ಳಲ್ಲ. ಕ್ವಾಲಿಟಿಯಲ್ಲಿ ಏನೂ ಅಲ್ಲದಿದ್ದರೂ, ಅವು ಮೈಮಾಟದಿಂದಲೇ ಆಕರ್ಷಿಸಿ, ಬಹುದೊಡ್ಡ ಮಾರುಕಟ್ಟೆಗಳನ್ನು ಕಬಳಿಸಿದ್ದವು. 2010ರ ಆರಂಭದಿಂದಲೇ ಭಾರತದ ಟಿವಿ ಬ್ರ್ಯಾಂಡ್‌ಗಳು ಚೀನೀ ಕಂಪನಿಗಳ ಮುಂದೆ ಕೊಂಚ ಮಂಕಾಗಿದ್ದವು. ಅಲ್ಲಿಯತನಕ ಭಾರತೀಯ ಮಾರುಕಟ್ಟೆಯಲ್ಲಿ ಒನಿಡಾ, ಬಿಪಿಎಲ್, ವಿಡಿಯೊಕಾನ್ ಅಗ್ರಪಂಕ್ತಿಯಲ್ಲಿದ್ದವು. ಇವರೆಲ್ಲ ಟ್ಯೂಬುಲರ್ ಟಿವಿಯ ಶಿಖರವೇರಿದ್ದಾಗ, ಚೀನಾ, ಜಪಾನ್, ದ. ಕೊರಿಯಾಗಳಿಂದ ಎಲ್‌ಸಿಡಿ ಟಿವಿಗಳು ಬಂದವು. ಭಾರತದ ಪ್ಲಾಂಟ್‌ಗಳಲ್ಲಿ ರಾಶಿ ರಾಶಿ ಇದ್ದ ಟ್ಯೂಬುಲರ್ ಟಿವಿಗಳನ್ನು ಕೊಳ್ಳುವವರೇ ಇಲ್ಲವಾದರು. ವಿದೇಶಿ ಟಿವಿಗಳಿಗೆ ಪೈಪೋಟಿಯಾಗಿ ಭಾರತದ ಟಿವಿ ತಯಾರಕರು ಎಲ್‌ಸಿಡಿ ಟಿವಿ ತಯಾರಿಕೆಗೆ ಮುಂದಾದರು.
ಅಪಾರ ಸಂಖ್ಯೆಯಲ್ಲಿ ಎಲ್ ಸಿಡಿ ಟಿವಿಗಳನ್ನು ಮಾರುಕಟ್ಟೆಗೆ ಬಿಟ್ಟರು. ಅದೇ ಹೊತ್ತಿಗೆ ಚೀನಾ ಎಲ್‌ಇಡಿ ಟಿವಿಗಳಿಂದ ಮೋಡಿ ಮಾಡುತ್ತಾ ಬಂತು. ಚೀನಾ ಅಬ್ಬರದ ಹವಾದಲ್ಲಿ, ಭಾರತದ ಎಲ್‌ಸಿಡಿ ಹಳ್ಳ ಹಿಡಿಯಿತು. ನಾವು ಎಲ್‌ಇಡಿಗೆ ಸಜ್ಜಾದಾಗ ಚೀನಾ ತ್ರೀಡಿ ಎಂದಿತ್ತು. ನಾವು ತ್ರೀಡಿಗೆ ಟೊಂಕ ಕಟ್ಟಿದಾಗ ಅವರು ಸ್ಮಾರ್ಟ್ ಟಿವಿಗಳಿಂದ ರಂಜಿಸಲು ಬಂದರು. ನಾವು ಸ್ಮಾರ್ಟ್ ಆದಾಗ, ಪ್ರೈಸ್ ವಾರ್ ಘೋಷಿಸಿ, ಅರ್ಧ ರೇಟಿಗೆ ಉತ್ಪನ್ನಗಳನ್ನು ಕೊಟ್ಟರು. ಗುಣಮಟ್ಟದಲ್ಲಿ ಚೀನೀ ಟಿವಿಗಳಿಗಿಂತ ಅತ್ಯುತ್ತಮವಾಗಿದ್ದ ನಮ್ಮ ಸ್ವದೇಶಿ ಬ್ರ್ಯಾಂಡ್ ಗಳನ್ನು, ನಮ್ಮೊಳಗಿನ ವಿದೇಶಿ ಮೋಹವೇ ಸೋಲಿಸಿತ್ತು.
ಮುಗಿದ ಚೀನಾ ಆಟ : ಗಾಲ್ವಾನ್ ಘರ್ಷಣೆ ಕಾರಣದಿಂದ, ಕೇಂದ್ರ ಸರ್ಕಾರ ಚೀನಾ ಕಲರ್ ಟಿವಿಗಳನ್ನು ನಿರ್ಬಂಧಿತ ಆಮದು ಉತ್ಪನ್ನಗಳ ಪಟ್ಟಿಗೆ ಸೇರಿಸಿದೆ. ಚೀನಾದೊಂದಿಗೆ ವಿದೇಶಿ ಟಿವಿ ಬ್ರ್ಯಾಂಡ್‌ಗಳಿಗೂ ಈ ಹೊಡೆತ ಬಿದ್ದಿದೆ. 36 ಸೆಂ.ಮೀ.ನಿಂದ 105 ಸೆಂ. ಮೀ.ವರೆಗಿನ ಲಿಕ್ವಿಡ್ ಕ್ರಿಸ್ಟಲ್ ಡಿಸ್ ಪ್ಲೇ (ಎಲ್ ಸಿಡಿ) ಟಿವಿಗಳಿಗೆ ಈ ಆಪತ್ತು ಎದುರಾಗಿದೆ. ಪ್ರೀಮಿಯಂ ಟಿವಿ ಬ್ರ್ಯಾಂಡ್ ಗಳಾದ ಸೋನಿ, ಸ್ಯಾಮ್‌ಸಂಗ್, ಎಲ್‌ಜಿ; ಕೈಗೆಟಕುವ ದರದ ಟಿವಿ ಉತ್ಪನ್ನಗಳಾದ ಶಿಯೋಮಿ, ವಿಯು, ಟಿಸಿಎಲ್ ಅಲ್ಲದೆ ಇವೆರಡೂ ಶ್ರೇಣಿಯಿಂದ ಆಕರ್ಷಿಸಿದ್ದ ರಿಯಲ್ ಮಿ ಮತ್ತು ನೋಕಿಯಾ ಕಲರ್ ಟಿವಿಗಳಿಗೂ ಆಮದು ನಿರ್ಬಂಧದ ಬಿಸಿ ತಟ್ಟಿದೆ. ಒಪ್ಪೋ, ಒನ್ ಪ್ಲಸ್ ಟಿವಿಗಳಿಗೂ ಹೊಡೆತ ಬಿದ್ದಿದೆ.
ಮತ್ತೆ ಸ್ವದೇಶಿ ದರ್ಬಾರ್ : ಚೀನಾ ಟಿವಿಗಳು ಎಷ್ಟೇ ಗುದ್ದಾಟಕ್ಕೆ ನಿಂತರೂ ಸ್ವದೇಶಿ ಬ್ರ್ಯಾಂಡ್‌ಒನಿಡಾ ಟಿವಿಯ “ಕೋಡು’ ಮುರಿಯಲಿಲ್ಲ. ಟಿವಿಯಲ್ಲದೆ ಒನಿಡಾ ವಾಷಿಂಗ್ ಮಶೀನ್, ಮೈಕ್ರೋ ಓವನ್‌ಗೆ ಕಾಲಿಟ್ಟಾಗಲೂ ಭಾರತೀಯರು ಅಪ್ಪಿಕೊಂಡರು. ಚೀನಾ
ಟಿವಿಗಳಿಗೂ ಒನಿಡಾ ಪ್ರತಿ ಹೆಜ್ಜೆಯಲ್ಲಿ ಟಕ್ಕರ್ ಕೊಟ್ಟಿದೆ. 24 ಇಂಚಿನಿಂದ 64 ಇಂಚಿನವರೆಗೆ, ಆಂಡ್ರಾಯ್ಡ್ ನಿಂದ ಗೂಗಲ್ ಸ್ಮಾರ್ಟ್‌ವರೆಗೆ ಹಲವು ಫೀಚರ್ ಒಳಗೊಂಡು ಒನಿಡಾ ಮುನ್ನುಗ್ಗುತ್ತಿದೆ. ಸ್ವದೇಶಿ ಟಿವಿ ಬ್ರ್ಯಾಂಡ್ ಗಳಿಗೆ ಆರ್ಥಿಕ ನೀತಿಗಳು ಸಡಿಲಗೊಂಡಿರುವುದರಿಂದ ವಿಡಿಯೊಕಾನ್, ಬಿಪಿಎಲ್ ತಮ್ಮೆಲ್ಲ ತೊಡಕುಗಳನ್ನು ನಿವಾರಿಸಿಕೊಂಡು ಮತ್ತೆ ಮಾರುಕಟ್ಟೆ ಆಳುವ ನಿರೀಕ್ಷೆ ಇದೆ. ಅಗ್ಗದ ದರದಲ್ಲಿ ಟಿವಿ ಉತ್ಪಾದಿಸಬೇಕೆನ್ನುವ ರಿಲೈಯನ್ಸ್ ರಿಕನೆಕ್ಟ್ ಕನಸಿಗೂ (32 ಇಂಚಿನ ಸ್ಮಾರ್ಟ್ ಟಿವಿಯನ್ನು ಕೇವಲ 5999 ರೂ.ಗೆ ಕೊಡಲು ನಿರ್ಧರಿಸಿತ್ತು) ಇನ್ನು ರೆಕ್ಕೆ ಮೂಡಲಿವೆ.
ಮೈಕ್ರೋಮ್ಯಾಕ್ಸ್, ಇಂಟೆಕ್ಸ್ ಸೇರಿದಂತೆ ನೂತನ ಬ್ರ್ಯಾಂಡ್ “ಎನ್‌ವಿವೈ’ ಹೊಸ ಫೀಚರ್ ಮೂಲಕ ಸಾಕಷ್ಟು ಭರವಸೆ ಹುಟ್ಟಿಸಿವೆ. ಇವುಗಳ ಎಚ್‌ಡಿ- ಎಲ್‌ಇಡಿ ಪರದೆಗಳು, ಸುಧಾರಿತ ತಂತ್ರಜ್ಞಾನಗಳು ಯಾವ ಚೀನೀ ಬ್ರ್ಯಾಂಡ್ ಗಳಿಗೂ ಕಡಿಮೆ ಇಲ್ಲ.
ಸ್ವಾವಲಂಬಿಗೆ ಸಕಾಲ… : ವಿದೇಶಿ ಉತ್ಪನ್ನಗಳ ಮೈಮಾಟಕ್ಕೆ ಸೋತು, ನಮ್ಮದೇ ನೆಲದ ಉತ್ಪನ್ನಗಳನ್ನು ಮೂಲೆಗುಂಪು ಮಾಡುವ ಮನಃಸ್ಥಿತಿ ಈಗ ಶರವೇಗದಲ್ಲಿ ಬದಲಾಗುತ್ತಿದೆ. ವಿಶೇಷವಾಗಿ ನಿರ್ಬಂಧ, ತೆರಿಗೆ ಬರೆಗಳಿಂದ ನರಳುತ್ತಿರುವ ಚೀನಾ ಬ್ರ್ಯಾಂಡ್ ಗಳಿಗೆ, ಭಾರತದಲ್ಲಿ ಮಾರುಕಟ್ಟೆ ಸಿಗುವುದೇ ಅನುಮಾನವಾಗಿದೆ. ಟಿವಿರಂಗದಲ್ಲೂ ಆತ್ಮನಿರ್ಭರ ಭಾರತ ಕಟ್ಟಲು ಇದೇ ಪ್ರಶಸ್ತ ಕಾಲ. ಚೀನಾ ಟಿವಿಗಳನ್ನು ಆಫ್ ಮಾಡುವ ಸ್ವಿಚ್ ಕೂಡ ನಮ್ಮ ಕೈಯಲ್ಲೇ ಇದೆ.
ಭಾರತೀಯರಿಗೇ ಅವಕಾಶ : ಕೇಂದ್ರ ಸರ್ಕಾರವೇನೋ ಕಲರ್ ಟಿವಿ ಆಮದನ್ನು ನಿರ್ಬಂಧದ ಪಟ್ಟಿಗೆ ಸೇರಿಸಿದೆ. ಆದರೆ, ಚೀನಾದ ಶಿಯೋಮಿ ಸೇರಿದಂತೆ ಜಪಾನಿನ ಸೋನಿ, ದಕ್ಷಿಣ ಕೊರಿಯಾದ ಎಲ್.ಜಿ., ಸ್ಯಾಮ್‌ಸಂಗ್ ಭಾರತದಲ್ಲಿ ಈಗಾಗಲೇ ಉತ್ಪಾದನಾ ಘಟಕ ತೆರೆದಿವೆ. ಆದರೆ, ಇದರಿಂದ ಚಿಂತೆಗೆಡಬೇಕಿಲ್ಲ. ಈ ಪ್ಲ್ಯಾಂಟ್‌ಗಳು ಬಳಸಿಕೊಳ್ಳುವ ನೆಲ, ನೀರು, ವಿದ್ಯುತ್ ಶುಲ್ಕವಲ್ಲದೆ, ಕೇಂದ್ರ ಸರ್ಕಾರಕ್ಕೆ ಜಿಎಸ್‌ಟಿಯನ್ನೂ ತೆರಬೇಕಾಗುತ್ತದೆ. ಇಲ್ಲಿನ ಕೆಲಸಗಾರರನ್ನೇ ಬಳಸಿಕೊಳ್ಳಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.