ಸ್ವಾಮೀಜಿಗಳ ಕೃಷಿ ಪ್ರೀತಿ, ಎಂಟು ಬೋರವೆಲ್‌ನಿಂದ ನಿಂಬೆ ಉಳಿಸಿದವರು
Team Udayavani, May 22, 2017, 12:47 PM IST
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಕರಿಭಂಟನಾಳ ಗ್ರಾಮದ ಹಿರೇಮಠದ ಶಿವಕುಮಾರ ಸ್ವಾಮೀಜಿಯವರು ಧಾರ್ಮಿಕ ಕಾರ್ಯದೊಂದಿಗೆ ನಿಂಬೆ ಬೇಸಾಯದಲ್ಲಿಯೂ ಸೈ ಎನಿಸಿಕೊಂಡಿದ್ದಾರೆ.
ಕುಡಿಯಲು ನೀರಿಲ್ಲದೆ ಪರದಾಡುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಕೃಷಿಗೆ ನೀರು ಹೊಂದಿಸುವುದು ದೊಡ್ಡ ಸವಾಲು. ಬೆಳೆ ಉಳಿಸಿಕೊಳ್ಳಲು ಕಳೆದ ಎರಡು ತಿಂಗಳಿನಿಂದ ಬೇರೆಯವರ ತೋಟಗಳಿಂದ 6 ಬೋರ್‌ವೆಲ್ ಹಾಗೂ ಎರಡು ಬಾವಿಗಳಿಂದ ಸುಮಾರು ಒಂದರಿಂದ ಮೂರು ಕಿ.ಮೀ. ದೂರದಿಂದ ಹೆಚ್‌ಪಿ ಮೋಟಾರ್ ಮೂಲಕ ಕನಿಷ್ಟ ಒಂದೊಂದು ಬೋರ್‌ವೆಲ್‌ನಿಂದ ನಿತ್ಯ ಅರ್ಧ ಗಂಟೆ ನೀರು ಹರಿಸಿ ಮಠಕ್ಕೆ ಸಂಬಂಧಿಸಿದ ನಾಲ್ಕು ಎಕರೆ ಜಮೀನಿನಲ್ಲಿ ನಿತ್ಯ 30ರಿಂದ 40 ಗಿಡಗಳಿಗೆ ನೀರು ಹರಿಸಿ ನಿಂಬೆ ಫಸಲನ್ನು ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ. ಕಳೆದ ವರ್ಷದ ಹಿಂದೆ ತಮ್ಮ ಮಠದ ಹಿಂದೆ ವಿಜಯಪುರದ ಸಿದ್ದೇಶ್ವರ ಸ್ವಾಮೀಜಿಗಳನ್ನು ಆಹ್ವಾನಿಸಿ ಅವರ ಸಮ್ಮುಖದಲ್ಲಿ ಸಾವಿರಾರು ಜನರಿಗೆ ಸಾವಿರಾರು ಸಸಿಗಳನ್ನು ಕೊಡಿಸಿ ಅವರಿಂದ “ಹಸಿರು ಪ್ರೀತಿಸುವ ಸ್ವಾಮಿಗಳು’ ಎಂದು ಕರೆಸಿಕೊಂಡಿದ್ದಾರೆ.
ಉತ್ತಮ ವಾಗ್ಮಿಗಳು, ಸಂಘಟಕರು, ಭಕ್ತರ ಕಾಮಧೇನು ಎಂದೇ ಕರೆಸಿಕೊಂಡಿರುವ ಸ್ವಾಮೀಜಿ ಕಳೆದ 17 ವರ್ಷಗಳ ಹಿಂದೆ ನಿಂಬೆ ಬೇಸಾಯ ಮಾಡಿದ್ದ ತೋಟವನ್ನು ಸ್ವಾಮೀಜಿಗಳು ಕಳೆದ 9 ವರ್ಷಗಳ ಹಿಂದೆ 9 ಎಕರೆ ಜಮೀನನ್ನು ಕೇವಲ 11 ಲಕ್ಷ ರೂ.ಗಳಿಗೆ ಖರೀದಿಸಿ ಉಳಿದ ಐದು ಎಕರೆಯಲ್ಲಿ ಒಣಬೇಸಾಯ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ನಿಂಬೆ ಫಸಲು ಕೊಡುತ್ತಿವೆ. ತೋಟದಲ್ಲಿದ್ದ ಮೂರು ಇಂಚು ಎರಡು ಬೋರ್‌ವೆಲ್‌ಗಳು ಕಳೆದ ಎರಡು ತಿಂಗಳುಗಳ ಹಿಂದೆಯಷ್ಟೇ ನೀರು ಕಡಿಮೆಯಾಗಿ ಕೈ ಕೊಟ್ಟಾಗ ಈ ರೀತಿಯಲ್ಲಿ ಬೇರೆಯವರ ತೋಟಗಳಿಂದ ನೀರು ಹರಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಸ್ವಾಮೀಜಿಗಳು.
ತೋಟದಲ್ಲಿ 400 ಗಿಡಗಳಿದ್ದು. ಒಂದು ವರ್ಷದಲ್ಲಿ 5 ಟ್ರಿಪ್ ಸೆಗಣಿ, ಕುರಿ, ಕೋಳಿ, ಎಲುಬಿನ ಗೊಬ್ಬರ ಹಾಕುತ್ತಾರೆ. ಈ ವರ್ಷ 800 ಟ್ರಿಪ್ ಎರೆ ಮಣ್ಣನ್ನು ಹಾಕಲಾಗಿದೆ. ಯಾವುದೇ ರಾಸಾಯನಿಕ ಗೊಬ್ಬರ ನೀಡಿಲ್ಲ. ವಾರಕ್ಕೊಮ್ಮೆ ನೀರು ಹರಿಸುತ್ತಾರೆ. ಪ್ರತಿ ಗಿಡದಿಂದ ಸುಮಾರು 300 ಕಾಯಿಗಳಿವೆ.
ಡಿಸೆಂಬರ್ ಪ್ರಥಮ ವಾರದಲ್ಲಿ ಅಗತಿ ಮಾಡಿ ವಾರ ಬಿಟ್ಟು ನೀರು ಹರಿಸಲಾಗುವುದು. ಪ್ರತಿ ಗಿಡಕ್ಕೆ 10 ಕೆ.ಜಿ.ಯಂತೆ ಕೊಟ್ಟಿಗೆ ಗೊಬ್ಬರ ಹಾಕಲಾಗುವುದು. ನಂತರ ಜೂನ್ ಪ್ರಥಮ ವಾರದಲ್ಲಿ ಮುಳ್ಳಗತಿ ಮಾಡಿ ಗಿಡದ ಸುತ್ತಲೂ ಬಿದ್ದಿರುವ ತ್ಯಾಜ್ಯವನ್ನು ಅಲ್ಲಿಯೇ ಮುಚ್ಚಿ ಕಡಿಮೆ ಪ್ರಮಾಣದಲ್ಲಿ ಸೆಗಣಿ ಗೊಬ್ಬರ ನೀಡಲಾಗುವುದು. 8 ದಿನಕ್ಕೊಮ್ಮೆ ನೀರನ್ನು ಸ್ಪ್ರೆà ಮೂಲಕ ಹರಿಸಲಾಗುವುದು.
ಅಗಸ್ಟ್‌ನಿಂದ ಅಕ್ಟೋಬರ್‌ವರೆಗೆ ಜಿಗಿ ಹಾಗೂ ಕ್ಯಾರ ರೋಗ ಬಂದಲ್ಲಿ ಮಾತ್ರ ಇದಕ್ಕೆ ಕ್ಲೋರೋಪೆರಿಪಾಸ್ 20 ಲೀ. ನೀರಿನಲ್ಲಿ 30 ಗ್ರಾಂ ಸಿಂಪಡಿಸುತ್ತೇವೆ. ನಂತರ 20 ಲೀ ನೀರಿನಲ್ಲಿ 50 ಎಂ.ಎಲ್ ಬೇವಿನ ಎಣ್ಣೆಯನ್ನು ಸಿಂಪಡಿಸಲಾಗುವುದು. ವಾರದಲ್ಲಿ ಎರಡು ಬಾರಿ 10 ಬ್ಯಾಗ ನಿಂಬೆಯನ್ನು ಹರಿಸಲಾಗುವುದು. ಒಂದು ಬ್ಯಾಗ್ ಅಂದರೆ ಸುಮಾರು 1100 ನಿಂಬೆಗಳಿರುತ್ತವೆ. ಹೀಗಾಗಿ ವಾರಕ್ಕೊಮ್ಮೆ 20 ಬ್ಯಾಗಗಳನ್ನು ಹುಬ್ಬಳ್ಳಿ ಮಾರುಕಟ್ಟೆಗೆ ಕಳುಹಿಸಲಾಗುವುದು. ಈಗಾಗಲೇ ಕಳೆದ 9 ವರ್ಷಗಳಿಂದ ಪ್ರತಿ ವರ್ಷ 8 ರಿಂದ 10 ಲಕ್ಷರೂಗಳ ಆದಾಯ ಎಲ್ಲ ಖರ್ಚು ತೆಗೆದು ಬಂದಿದೆ. ಕಳೆದ ವರ್ಷ 14 ಲಕ್ಷ ರೂಗಳ ಆದಾಯ ನಿಂಬೆ ಫಸಲಿನಿಂದ ಸಿಕ್ಕಿದೆ. ಆದರೆ ಈ ಬಾರಿ ನೀರಿನ ಹಾಗೂ ಮಾರುಕಟ್ಟೆ ಸಮಸ್ಯೆಯಿಂದ 3 ಲಕ್ಷ ರೂಗಳ ಆದಾಯ ಮಾತ್ರ ಸಿಕ್ಕಿದೆ ಎನ್ನುತ್ತಾರೆ ಸ್ವಾಮೀಜಿ.
ಇಂದಿನ ಯುವಕರು ಕೇವಲ ಇಂಜಿನಿಯರಿಂಗ್, ವೈದ್ಯಕೀಯ ರಂಗಕ್ಕೆ ತೆರಳದೆ ನಿಷ್ಟೆಯಿಂದ ಕೃಷಿ ಕ್ಷೇತ್ರಕ್ಕೆ ಧಾವಿಸಿದಲ್ಲಿ ಕೃಷಿ ರಂಗವೂ ಕೂಡ ಇವರನ್ನು ಕೈ ಬಿಡದು ಎಂದು ಹೇಳುವ ಇವರು 4 ಎಕರೆ ಭೂಮಿಯಲ್ಲಿ ಖರ್ಚು ತೆಗೆದು ವರುಷಕ್ಕೆ ಹತ್ತರಿಂದ ಹದಿನೈದು ಲಕ್ಷ ರೂ.ಗಳ ಆದಾಯವನ್ನು ನಿಂಬೆ ಬೇಸಾಯದಿಂದ ಪಡೆಯಬಹುದು.
ಸ್ವಾಮೀಜಿಗಳು ಮಠದಲ್ಲಿದ್ದರೆ ತೋಟಕ್ಕೆ ಬಂದು ಗಿಡಗಳನ್ನು ವೀಕ್ಷಣೆ ಮಾಡುತ್ತಾ, ನಿಂಬೆ ಗಿಡಗಳ ಬೇರು ಒಪನ್ ಆದರೆ ಸಿಡಿ ಬರುವ ಹಿನ್ನಲೆಯಲ್ಲಿ ಎರೆ ಮಣ್ಣು ಹಾಕಿ ಮುಚ್ಚಬೇಕು ಎಂದು ಹೇಳುವ ಇವರಿಗೆ ಆ ಕೆಲಸದಲ್ಲಿ ಈರಯ್ಯ, ಮಲ್ಲಯ್ಯ ಹಾಗೂ ಶಿವಶಂಕರ ಸಾಥ್ ನೀಡುತ್ತಾರೆ ಎನ್ನುತ್ತಾರೆ ಸ್ವಾಮೀಜಿಗಳು. ಹೆಚ್ಚಿನ ಮಾಹಿತಿಗೆ;9591949105.
– ಗುರುರಾಜ.ಬ.ಕನ್ನೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Bengaluru: ಮನೆಯ ಮುಂದೆ ಕುಳಿತು ಮೊಬೈಲ್ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!
Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು
Fraud: ಸೈಟ್ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ
Bengaluru: ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.