ಶಿರಸಿಯ ಸಿಹಿ ಬಾವೀಕೈ ಪೇಡ


Team Udayavani, Jun 25, 2018, 12:13 PM IST

peda.jpg

ಒಂದು ಊರಿನ ಹೆಸರಿನ ಮೂಲಕ ಇಂದು ಮನೆಮಾತದ ಸವಿ ಇದು. ಇಡೀ ಕುಟುಂಬದ ಆಸರೆಯ ಜೊತೆಗೆ ಹೈನುಗಾರಿಕೆಗೆ ಉತ್ತೇಜಿಸುವ ಕಾರ್ಯವನ್ನೂ ಮಾಡಿದೆ. ಬಾವೀಕೈ ಪೇಡ ಅಂದರೆ ಊರವರಿಗೂ, ಪರರಿಗೂ ಇಷ್ಟ. ಅದರಲ್ಲೂ ಕೇಸರಿ ಪೇಡಾಕ್ಕೇ ಗ್ರಾಹಕರು ಹೆಚ್ಚು.

ಗೋವಾ, ಮುಂಬೈ ಅಥವಾ ಹೊರ ರಾಜ್ಯಗಳಿಂದ  ಉತ್ತರ ಕನ್ನಡದ ಪ್ರವಾಸಿ ತಾಣಗಳ ವೀಕ್ಷಣೆಗೆ, ಶಿರಸಿಗೆ ನಿರಂತರವಾಗಿ ಪ್ರವಾಸಿಗಳು ಬರುತ್ತಾರೆ. ಅಮೇರಿಕ, ಮಲೇಶಿಯಾ, ಕೆನಡಾ, ಅಬುದಾಬಿ, ಬೆಂಗಳೂರು, ಮಂಗಳೂರು, ಧಾರವಾಡ… ಹೀಗೆ ವಿವಿಧೆಡೆಯಿಂದ ಶಿರಸಿಗೆ ಬಂದವರೆಲ್ಲಾ ಕೇಳುವ ತಿನಿಸಿನ ಹೆಸರೇ – ಬಾವಿಕೈ ಪೇಡಾ !

ನಿಜ. ಒಂದು ಊರಿನ ಹೆಸರಿನ ಮೂಲಕ ಇಂದು ಮನೆಮಾತದ ಸವಿ ಇದು. ಇಡೀ ಕುಟುಂಬದ ಆಸರೆಯ ಜೊತೆಗೆ ಹೈನುಗಾರಿಕೆಗೆ ಉತ್ತೇಜಿಸುವ ಕಾರ್ಯವನ್ನೂ ಮಾಡಿದೆ. ಬಾವೀಕೈ ಪೇಡ ಅಂದರೆ ಊರವರಿಗೂ, ಪರರಿಗೂ ಇಷ್ಟ. ಅದರಲ್ಲೂ ಕೇಸರಿ ಪೇಡಾಕ್ಕೆ ಗ್ರಾಹಕರು ಹೆಚ್ಚು.

ಸುಮಾರು ನಾಲ್ಕು ದಶಕಗಳ ಹಿಂದಿನ ಮಾತು. ಶಿರಸಿ ತಾಲೂಕಿನ ಬಾವೀಕೈನ ಮಂಜುನಾಥ ಹೆಗಡೆ ಅವರ ಮನೆಯಲ್ಲಿ  ದೊಡ್ಡ ಸೊರಟಿ ಎಮ್ಮೆಯ ಜೊತೆ ಜಾನುವಾರುಗಳ ದಂಡೇ ಇತ್ತು. ಮನೆಯಲ್ಲಿ ಎಷ್ಟು ಬಳಸಿದರೂ ಹಾಲು ಹಾಲು ಉಳಿಯುತ್ತಿತ್ತು. ಆದಿನಗಳಲ್ಲಿ ಇಂದಿನಂತೆ ಹಾಲು ಖರೀದಿಸುವ ಕೇಂದ್ರಗಳು ಇರಲಿಲ್ಲ.  ಹೆಚ್ಚಾಗುವ ಹಾಲನ್ನು ಏನು ಮಾಡಬೇಕು ಎಂದು ಗೋಳಿ ರಾಜಾರಾಮ ಭಟ್ಟ ಅವರಲ್ಲಿ ಮಂಜುನಾಥ ಹೆಗಡೆ ಪ್ರಸ್ತಾಪಿಸಿದರು. ಖೋವಾ ಮಾಡಿ ಪೇಟೆಗೆ ಕೊಡಬಹುದಲ್ಲ ಎಂದು ಭಟ್ಟರು ಸಲಹೆ ಕೊಟ್ಟರು. ದಿನಕ್ಕೆ 25- 30 ಲೀಟರ್‌ ಹಾಲು ಹೆಚ್ಚಳ ಆಗುವಾಗ ಇವರಿಗೂ ಏನಾದರೂ ಮಾಡುವ ಹಾಗೂ ಆದಾಯ ಮಾಡಿಕೊಳ್ಳುವ ತುಡಿತ ಹೆಚ್ಚಿತು.

ಖೋವಾ ಮಾಡಿ ಪೇಟೆಗೆ ಒಯ್ದರೂ ಅಷ್ಟು ದೊಡ್ಡ ಪ್ರಮಾಣದ ಬೇಡಿಕೆ ಸಿಗಲಿಲ್ಲ. ಹಾಲು ಹಾಳಾಗದಂತೆ ಹಾಗೂ ಮಾಡಿದ ಉತ್ಪನ್ನ ಕೂಡ ಉಳಿಸಿಕೊಳ್ಳುವಂತೆ ಪೇಡ ಮಾಡಬೇಕಾದ ಅನಿವಾರ್ಯ ಹೆಚ್ಚಿತು. ಮನೆಗೆ ಬಂದವರೇ ಪತ್ನಿ ಭವಾನಿ ಹೆಗಡೆ ಅವರೊಂದಿಗೆ ಚರ್ಚೆ ಮಾಡಿದರು. ಮಕ್ಕಳೂ ಇವರ ನೆರವಿಗೆ ಬಂದರು.  ಉತ್ತಮ ಗುಣಮಟ್ಟದಲ್ಲಿ ಸ್ವಾದಿಷ್ಟವಾಗಿ ಪೇಡಾ ಸಿದ್ಧಗೊಳಿಸಿ ಮಾರುಕಟ್ಟೆಗೆ ಕಳಿಸುವುದು ಅವರ ಆಲೋಚನೆ ಆಗಿತ್ತು. ವಾರ, ತಿಂಗಳುಗಳ ಕಾಲ ಶ್ರಮವಹಿಸಿ ಒಂದು ಹದ ಕಂಡುಕೊಂಡರು. ಈ ಸಿಹಿತಿಂಡಿಯೇ ಮುಂದೆ ಬಾವೀಕೈ ಪೇಡ ಅಂತ ಹೆಸರಾಯಿತು.

25 ಲೀಟರ್‌ ಹಾಲಿನಿಂದ ಮುಂಜಾನೆ ಸಿದ್ದಗೊಳಿಸಿ, ಸಂಜೆ ತುಡುಗುಣಿ ಬಸ್ಸಿನಲ್ಲಿ ಪೇಟೆಗೆ ಒಯ್ದು ಮಾರಾಟ ಮಾಡಿದರು.  ಅಂದು ಅಂಗಡಿ ಅಂಗಡಿ ಅಲೆದು ಪೇಡಾ ಬೇಕಾ ಎಂದು ಕೇಳುತ್ತಿದ್ದರು ಹೆಗಡೆ. ಆದರೆ ಇಂದು ಅಂಗಡಿಯವರೇ ಪೇಡ ಕೊಡಿ ಎನ್ನುವಷ್ಟು ಜನಪ್ರೀತಿ ಗಳಿಸಿದೆ. ಏಲಕ್ಕಿ ಪೇಡ, ಕೇಸರಿ ಪೇಡ ಇವರ ವೆರೈಟಿ. ಕೊಬ್ಬರಿ ಪೇಡ ಕೂಡ ಮಾಡುತ್ತಿದ್ದ ಕಾಲವೂ ಇತ್ತು. ಕೇಸರಿ, ಸಕ್ಕರೆ, ಹಾಲು ಬಳಸಿ ತಯಾರಿಸುವ ಪೇಡಾ ತಿಂದರೆ ಮತ್ತೆ ತಿನ್ನಿಸಿ ಕೊಳ್ಳುವ ರುಚಿಯಿದೆ.  ಕೇಸರಿ ಪೇಡ ಕೆ.ಜಿಗೆ 320 ರೂ., ಏಲಕ್ಕಿ ಪೇಡಾ 280 ರೂ. ಇದೆ. ಮಕ್ಕಳ ಫ‌ಲಿತಾಂಶ, ಲಕ್ಷಿ$¾à ಪೂಜೆಗಳು ಬಂದರೆ ಬೇಡಿಕೆ ದ್ವಿಗುಣ. ಮೊದಲಿನ ಗುಣಮಟ್ಟವನ್ನೇ ಇಂದು ಮಂಜುನಾಥ ಹೆಗಡೆ ಅವರ ಮಗ ಬಾಲಚಂದ್ರ ಹೆಗಡೆ ಕಾಯ್ದು ಕೊಂಡಿದ್ದಾರೆ. ಈಗ ಯಂತ್ರವನ್ನೂ ಖರೀದಿ ಮಾಡಿರುವುರಿಂದ ಮನೆಯಲ್ಲೇ ಸಿದ್ದಗೊಳಿಸುತ್ತಾರೆ. ಬಾಲಚಂದ್ರ ಅವರ ಪತ್ನಿ ಗಂಗಾಬಾಯಿ, ಮಕ್ಕಳೂ ಸಹಕಾರ ನೀಡುತ್ತಾರೆ.

ಪೇಡಾಕ್ಕೆ ವಿಪರೀತ ಬೇಡಿಕೆ ಇದ್ದರೂ ಶ್ರಮಿಕರ ಹಾಗೂ ಸಮಯದ ಕೊರತೆಯಿಂದ ಮಾಡಲಾಗುವುದಿಲ್ಲ.  ನಾವೇ ತಯಾರಿಸಿ ಗ್ರಾಹಕರಿಗೆ ತಲುಪಿಸುವ ಕೆಲಸವನ್ನೂ ಮಾಡಬೇಕು ಇದೂ ಸಮಸ್ಯೆ ಎನ್ನುತ್ತಾರೆ ಬಾಲಚಂದ್ರ ಹೆಗಡೆ. ಸ್ಥಳೀಯ ಹಾಲು ಮಾರಾಟ ಕೇಂದ್ರದಿಂದಲೂ ಹಾಲು ಖರೀದಿಸಿ ತಂದು ಪೇಡಾ ಸಿದ್ದಗೊಳಿಸುತ್ತಾರೆ. ಇಡೀ ಊರಿಗೂ ಒಂದು ಹೆಮ್ಮೆ ಮೂಡಿಸಿದ್ದಾರೆ.

– ರಾಘವೇಂದ್ರ ಬೆಟ್ಟಕೊಪ್ಪ

ಟಾಪ್ ನ್ಯೂಸ್

Yakahagana-Academy

Mangaluru: ಅಕಾಡೆಮಿ ಯಕ್ಷಗಾನ ಕಲಾವಿದರಿಗೆ ಶಕ್ತಿ ತುಂಬುವ ಕೆಲಸ ಮಾಡಲಿ: ಡಾ.ಶಿವರಾಮ ಶೆಟ್ಟಿ

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

Bengaluru: ಇವಿ ಬೈಕ್‌ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು

Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು

Naxal leader Vikram Gowda Encounter: ಕುದುರೆಮುಖ: ಶೋಧ ಕಾರ್ಯ ಚುರುಕು

Naxal: ಎನ್‌ಕೌಂಟರ್‌ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್‌ ಪತ್ನಿ ಆಕ್ರೋಶ

Naxal: ಎನ್‌ಕೌಂಟರ್‌ಗೆ ಜಾಲತಾಣದಲ್ಲಿ ಮಾಜಿ ನಕ್ಸಲ್‌ ಪತ್ನಿ ಆಕ್ರೋಶ

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

It was not the Wright brothers who invented the airplane, but Rishi Bharadwaj: Governor

Anandiben Patel: ವಿಮಾನ ಅನ್ವೇಷಿಸಿದ್ದು ರೈಟ್‌ ಸೋದರರಲ್ಲ, ಋಷಿ ಭಾರದ್ವಾಜ: ರಾಜ್ಯಪಾಲೆ

A “bomb cyclone” explosion in an American prison soon!

bomb cyclone: ಶೀಘ್ರ ಅಮೆರಿಕ ಕರಾವಳೀಲಿ “ಬಾಂಬ್‌ ಸೈಕ್ಲೋನ್‌’ ಸ್ಫೋಟ!

Manipur: Protest for justice with empty coffins

Manipur: ಖಾಲಿ ಶವಪೆಟ್ಟಿಗೆ ಹಿಡಿದು ನ್ಯಾಯಕ್ಕಾಗಿ ಪ್ರತಿಭಟನೆ

Yakahagana-Academy

Mangaluru: ಅಕಾಡೆಮಿ ಯಕ್ಷಗಾನ ಕಲಾವಿದರಿಗೆ ಶಕ್ತಿ ತುಂಬುವ ಕೆಲಸ ಮಾಡಲಿ: ಡಾ.ಶಿವರಾಮ ಶೆಟ್ಟಿ

Suside-Boy

Kaup: ಉದ್ಯಾವರ: ಮಹಿಳೆ ಮಲಗಿದ ಸ್ಥಿತಿಯಲ್ಲೇ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.