ಪಾರಿಖ್‌ಗೆ ತಾರೀಫ್

ಪದ್ಮಶ್ರೀ ಪುರಸ್ಕೃತ ತರಕಾರಿ ಕೃಷಿಕ

Team Udayavani, Jan 27, 2020, 6:02 AM IST

parkh-tari

ಜಗದೀಶ್‌ ಪಾರಿಖ್‌ ಬೆಳೆಯುವ ಹೂಕೋಸುಗಳ ಸರಾಸರಿ ತೂಕ 15 ಕೆ.ಜಿ ಮತ್ತು ಚೀನಿಕಾಯಿಗಳ ಸರಾಸರಿ ತೂಕ 86 ಕೆ.ಜಿ! ಅವರ ತೋಟದ ಹೀರೆಕಾಯಿಗಳ ಉದ್ದ 7 ಅಡಿ!

ಜನವರಿ 2019ರ ಆರಂಭದಲ್ಲಿ ಅದೊಂದು ದಿನ ಕೃಷಿಕ ಜಗದೀಶ್‌ ಪಾರಿಖ್‌ ಅವರಿಗೆ ರಾಷ್ಟ್ರಪತಿ ಭವನದಿಂದ ಫೋನ್‌ ಕರೆ ಬಂತು: ಅವರು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂಬ ಸಂಭ್ರಮದ ಸುದ್ದಿ ತಿಳಿಸಿತು. ರಾಜಸ್ಥಾನದ ಸಿರ್ಕ ಜಿಲ್ಲೆಯ ಅಜಿತ್‌ಘರ್‌ ಗ್ರಾಮದ 72 ವರ್ಷ ವಯಸ್ಸಿನ ಅಪ್ಪಟ ಸಾವಯವ ಕೃಷಿಕ ಜಗದೀಶ್‌ ಪಾರಿಖ್‌ ಕಳೆದ ಐದು ದಶಕಗಳಿಂದ ಭಾರೀ ಗಾತ್ರದ ಹಾಗೂ ಪೋಷಕಾಂಶಭರಿತ ಸಾವಯವ ತರಕಾರಿ ಬೆಳೆಯುವ ರೈತನೆಂದು ಸುದ್ದಿ ಮಾಡಿದ್ದಾರೆ.

ಅವರು ಬೆಳೆಯುವ ಹೂಕೋಸುಗಳ ಸರಾಸರಿ ತೂಕ 15 ಕೆ.ಜಿ ಮತ್ತು ಚೀನಿಕಾಯಿಗಳ ಸರಾಸರಿ ತೂಕ 86 ಕೆ.ಜಿ! ಅವರ ತೋಟದ ಹೀರೆಕಾಯಿಗಳ ಉದ್ದ 7 ಅಡಿ (ಸಾಮಾನ್ಯ ಹೀರೆಕಾಯಿಗಳ ಉದ್ದ 1.5 ಅಡಿ), ಬದನೆಗಳ ಉದ್ದ 3 ಅಡಿ, ಎಲೆಕೋಸುಗಳ ತೂಕ 8 ಕೆ.ಜಿ. ಇಂಥ ತರಕಾರಿಗಳನ್ನು ಬೆಳೆಸಲು ನಾನು ಯಾವುದೇ ರಹಸ್ಯ ಪೋಷಕಾಂಶಗಳನ್ನು ಬಳಸುವುದಿಲ್ಲ ಎನ್ನುತ್ತಾರೆ ಜಗದೀಶ್‌ ಪಾರಿಖ್‌. ಅವರ ಹೂಕೋಸಿನ ತಳಿಗೆ ರಾಷ್ಟ್ರೀಯ ಅನುಶೋಧನಾ ಪ್ರತಿಷ್ಠಾನದಿಂದ ಪ್ರಶಸ್ತಿ ಲಭಿಸಿದೆ. “ಅಜಿತ್‌ಘರ್‌ ತಳಿ’ ಎಂದು ಅವರು ಹೆಸರಿಸಿರುವ ಆ ತಳಿಗೆ 2001ರಲ್ಲಿ ಪೇಟೆಂಟ್‌ ಕೂಡ ಪಡೆದಿದ್ದಾರೆ.

ಒಎನ್‌ಜಿಸಿ ನೌಕರಿ ಬಿಟ್ಟರು: ಹತ್ತನೇ ವಯಸ್ಸಿನಲ್ಲಿ 1957ರಲ್ಲಿ ಪಾರಿಖ್‌ ಅವರ ಕೃಷಿ ಒಡನಾಟ ಶುರು. “ಮುಂಜಾನೆ ಐದು ಗಂಟೆಗೇ ಎದ್ದು, ತಂದೆ ಮತ್ತು ಮಾವಂದಿರೊಂದಿಗೆ ಹೋಗಿ, ತರಕಾರಿ ಮಾರಾಟಕ್ಕಾಗಿ ಕೂರುತ್ತಿದ್ದೆ. ಮುಂದೆ ಹತ್ತು ವರ್ಷ ದಿನ ಬೆಳಗಾದರೆ ಇದೇ ಕೆಲಸ. ವರ್ಷಗಳು ದಾಟಿದಂತೆ ತರಕಾರಿ ಬೆಳೆಸುವ ಬಗ್ಗೆ ಕುತೂಹಲ ಹೆಚ್ಚಿತು’ ಎಂದು ನೆನಪು ಮಾಡಿಕೊಳ್ಳುತ್ತಾರೆ ಅವರು.

ಯಶಸ್ಸಿಗೆ ಮೂರು ಕಾರಣಗಳು: ಜಗದೀಶ್‌ ಪಾರಿಖ್‌ ಅವರ ಯಶಸ್ಸಿನ ಹಿಂದೆ ಮೂರು ಕಾರಣಗಳು ಇವೆಯಂತೆ: ಉತ್ತಮ ದೇಸಿ ಬೀಜಗಳು, ಎಲ್ಲ ಕೃಷಿಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡುವುದು. ಸಸಿಗಳಿಗೆ ಅಗತ್ಯವಿದ್ದಾಗ ಮಾತ್ರ ನೀರೆರೆಯುವುದು. ಸಸಿಗಳ ಬೆಳವಣಿಗೆ ಗಮನಿಸಿ ಮೂರು ದಿನಗಳಿಗೊಮ್ಮೆ ನೀರೆರೆಯುತ್ತೇನೆ ಅನ್ನುತ್ತಾರವರು. ರೈತರು, ತಾವು ಬೆಳೆಸಿದ ಸಸಿಗಳ ಬೀಜಗಳನ್ನೇ ಮುಂದಿನ ಹಂಗಾಮಿನಲ್ಲಿ ಬಿತ್ತಬೇಕು ಎಂಬುದು ಅವರ ಸಲಹೆ. ಸಸಿಯಿಂದ ಸಸಿಗೆ ಎರಡು ಅಡಿ ಅಂತರ ಮತ್ತು ಏರುಮಡಿಯಿಂದ ಏರುಮಡಿಗೆ 1.5 ಅಡಿ ಅಂತರದಲ್ಲಿ ತರಕಾರಿ ಸಸಿ ಬೆಳೆಸುತ್ತಾರೆ ಪಾರಿಖ್‌. ಇದರಿಂದಾಗಿ ಅಜಿತ್‌ಘರ್‌ ಒಣಪ್ರದೇಶವಾಗಿದ್ದರೂ ಅವರಿಗೆ ನೀರಿನ ಕೊರತೆ ಉಂಟಾಗಿಲ್ಲ.

ಸೆಗಣಿ- ಸಿಪ್ಪೆ- ಎಲೆ: ಸಾವಯವ ಗೊಬ್ಬರ ತಯಾರಿ ವಿಧಾನದ ಬಗ್ಗೆ ಅವರು ನೀಡುವ ಮಾಹಿತಿ ಹೀಗಿದೆ- “ನನ್ನ ಜಮೀನಿನಲ್ಲಿ 10 x 6 x 3 ಅಡಿ ಅಳತೆಯ ಹೊಂಡ ಮಾಡಿದ್ದೇನೆ. ಇದರಲ್ಲಿ 10 ಸೆಂ.ಮೀ. ದಪ್ಪಕ್ಕೆ ಪ್ರಾಣಿಗಳ ಸೆಗಣಿ ಸಂಗ್ರಹಿಸುತ್ತೇನೆ. ಅದರ ಮೇಲೆ ಸೌತೆಕಾಯಿ ಸಿಪ್ಪೆ, ಬೇವಿನ ಎಲೆಗಳು ಮತ್ತು ಇತರ ಎಲೆಗಳನ್ನು ಹರಡುತ್ತೇನೆ. ಇದನ್ನು ಹಾಗೆಯೇ ಬಿಟ್ಟರೆ 15 ದಿನಗಳಲ್ಲಿ ಗೊಬ್ಬರ ತಯಾರು’. ಈ ಗೊಬ್ಬರ, ಸಸಿಗಳಿಗೆ ಉತ್ತಮ ಪೋಷಕ. ಮಾತ್ರವಲ್ಲ, ಇದಕ್ಕೆ ಯಾವುದೇ ವೆಚ್ಚವಿಲ್ಲ. ಸಸಿಗಳಿಗೆ ರೋಗ ಬಂದಾಗ ಹತೋಟಿಗಾಗಿ ರಾಸಾಯನಿಕಗಳನ್ನು ಪ್ರಯೋಗಿಸುವುದು ಬಹಳ ದುಬಾರಿ ಎನ್ನುವುದು ಪಾರಿಖ್‌ರ ಅಭಿಪ್ರಾಯ.

ಮಾರುಕಟ್ಟೆ ವಿಸ್ತರಣಾ ತಂತ್ರಗಳು: ಜಗದೀಶ್‌ ಪಾರಿಖ್‌ ಬೆಳೆಸಿದ ತರಕಾರಿಗಳು ಸುಲಭವಾಗಿ ಮಾರಾಟವಾಗುತ್ತಿಲ್ಲ. ಈ ಸಮಸ್ಯೆಗೆ ಅವರು ಕಂಡುಕೊಂಡ ಪರಿಹಾರ: ಕಡಿಮೆ ಬೆಲೆಗೆ ತರಕಾರಿಗಳನ್ನು ಮಾರುವುದು. ಉದಾಹರಣೆಗೆ, ಎಲೆಕೋಸಿನ ಮಾರುಕಟ್ಟೆ ಬೆಲೆ ಕಿಲೋಗೆ 40ರೂ. ಇದ್ದಾಗ, ಪಾರಿಖ್‌ ಕಿಲೋಗೆ 15ರೂ. ಬೆಲೆಗೆ ಮಾರುತ್ತಾರೆ. ಹಾಗಿದ್ದೂ ತರಕಾರಿ ಮಾರಾಟದಿಂದ ಪಾರಿಖ್‌ ಗಳಿಸುವ ಆದಾಯ ವರ್ಷಕ್ಕೆ 13 ಲಕ್ಷ ರೂ. ತಾವು ಬೆಳೆಸುವ ತರಕಾರಿಗಳ ಮಾರುಕಟ್ಟೆಯನ್ನು ವೃದ್ಧಿಸಿಕೊಳ್ಳಲು ಪಾರಿಖರು ರೈತರಿಗೆ ತರಬೇತಿ ಮತ್ತು ಉಚಿತ ಬೀಜ ವಿತರಣೆಯಂಥ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುತ್ತಾರೆ.

ಸಾವಯವ ಕೃಷಿ ರಾಕೆಟ್‌ ವಿಜ್ಞಾನವೇನಲ್ಲ. ಸ್ವಲ್ಪ ಹೆಚ್ಚು ಶ್ರಮ, ಗಮನ ಮತ್ತು ಸಹನೆ ಇದ್ದರೆ ಯಾರು ಬೇಕಾದರೂ ಯಶಸ್ಸು ಪಡೆಯಬಹುದು.
-ಜಗದೀಶ್‌ ಪಾರಿಖ್‌

* ಅಡ್ಡೂರು ಕೃಷ್ಣ ರಾವ್‌

ಟಾಪ್ ನ್ಯೂಸ್

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

4-siruguppa

Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್‌; ಎತ್ತು ಸಾವು

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.