ಮಾರುಕಟ್ಟೆಯಲ್ಲಿ ಕ್ರೇಜ್ ಹುಟ್ಟಿಸಿದ ಟಾಟಾ ಹ್ಯಾರಿಯರ್!
Team Udayavani, Feb 25, 2019, 12:30 AM IST
ನೋಡಲು ದಢೂತಿ ಆಕಾರ, ಪವರ್ ಸಖತ್, ಭರ್ಜರಿ ಫೀಚರ್.. ! ಇಷ್ಟಿದ್ದರೆ ಸಾಕು. ಈಗಿನ ಜಮಾನಾದಲ್ಲಿ ಜನ ಕಾರು ಕೊಳ್ಳಲು ಮುಗಿಬೀಳುತ್ತಾರೆ. ಎಸ್‌ಯುವಿಗಳು ಬಿಸಿ ದೋಸೆಯಂತೆ ಮಾರಾಟವಾಗುತ್ತಿರುವ ಈ ದಿನಗಳಲ್ಲಿ ಟಾಟಾ ಕೂಡ ಮತ್ತೂಂದು ಕಾರನ್ನು ಜನವರಿಯಲ್ಲಿ ಮಾರುಕಟ್ಟೆಗೆ ಬಿಟ್ಟಿದ್ದು, ಕ್ರೇಜ್ ಹುಟ್ಟಿಸಿದೆ.
ಟಾಟಾ ಹ್ಯಾರಿಯರ್‌ನ ವಿನ್ಯಾಸ ಹೇಳಿಕೇಳಿ ಟಾಟಾದ ಕಂಪನಿ ಲ್ಯಾಂಡ್‌ರೋವರ್ ಅನ್ನು ಹೋಲುತ್ತದೆ. ಟಾಟಾದ ನೂತನ ವಿನ್ಯಾಸ ಮಾದರಿ ಒಮೆಗಾ ಆರ್ಕ್ ಅಡಿ ಹ್ಯಾರಿಯರ್ ಅನ್ನು ವಿನ್ಯಾಸ ಮಾಡಲಾಗಿದೆ. ಲ್ಯಾಂಡ್‌ರೋವರ್ ಡಿ8 ಮಾದರಿ ಚಾಸಿಯನ್ನು ಇದು ಹೊಂದಿದ್ದು, ರಸ್ತೆಯಲ್ಲಿ ಅದ್ಭುತ ದೃಢತೆ, ಆರಾಮದಾಯಕ ಸವಾರಿಯನ್ನು ತಂದು ಕೊಡುತ್ತದೆ.
ಕಣ್ಸೆಳೆವ ಕಾರು
ಸದ್ಯ ಮಾರುಕಟ್ಟೆಯಲ್ಲಿರುವ ಮಧ್ಯಮ ಗಾತ್ರದ ಎಲ್ಲ ಎಸ್‌ಯುವಿಗಳಿಗಿಂತ ಟಾಟಾ ಹ್ಯಾರಿಯರ್ ದೊಡ್ಡದು ಮತ್ತು ತನ್ನ ಗಾತ್ರದಿಂದಾಗಿ ರಸ್ತೆಯಲ್ಲಿ ಕಣ್ಸೆಳೆಯುವಂತಿದೆ. ನೆಕ್ಸಾನ್‌ನ ಯಶಸ್ಸು, ಟಾಟಾ ಹ್ಯಾರಿಯರ್‌ನಲ್ಲೂ ರೂಪಿತವಾಗಿದೆ. ಟಾಟಾ ಹಿಂದಿನ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಿದ ಮಾದರಿ ವಾಹನದ ರೀತಿಯಲ್ಲೇ ಹ್ಯಾರಿಯರ್ ಕೂಡ ಇದ್ದು, ಜನರನ್ನು ಆಕರ್ಷಿಸಲು ಕಾರಣವಾಗಿದೆ. ಮುಂಭಾಗ ಎಲ್ಲ ಕಾರಿನಂತೆ ಇಲ್ಲ. ಬದಲಿಗೆ ಯುರೋಪಿಯನ್ ಮಾದರಿಯಲ್ಲಿದೆ. ಮೇಲ್ಭಾಗದಲ್ಲಿ ಅತಿ ಶಕ್ತಿಶಾಲಿ ಡೇ ಟೈಂ ರನ್ನಿಂಗ್ ಲೈಟ್‌ಗಳನ್ನೂ, ಕೆಳಭಾಗದಲ್ಲಿ ಅತಿ ಪ್ರಖರ ಬೆಳಕು ಬೀಳುವ ಕ್ಸೆನಾನ್ ಲೈಟ್‌ಗಳನ್ನೂ ಹೊಂದಿದೆ. ಹಿಂಭಾಗ ದೊಡ್ಡ ಕಾರಿನ ಫೀಲ್ ನೀಡುವಂತೆ ಇದ್ದು, ಮಡ್‌ಗಾರ್ಡ್ ಶೇಪಿಂಗ್ ಮೇಲೆ ಕಪ್ಪು ಫೈಬರ್ ಪಟ್ಟಿ, ಹಿಂಭಾಗ 3 ಎಲ್‌ಇಡಿ ಸೇರಿದಂತೆ ನಾಲ್ಕು ಬ್ರೇಕ್ ಲೈಟ್‌ಗಳು, ನೀರು ಹಾಯಿಸುವ ವ್ಯವಸ್ಥೆಯ ವೈಪರ್, ಡಿಫಾಗರ್ ವ್ಯವಸ್ಥೆ, ಇದೆ. 4598 ಎಂ.ಎಂ. ಉದ್ದ, 1894 ಎಂ.ಎಂ ಅಗಲ, 1706 ಎಂ.ಎಂ. ಎತ್ತರದ ಈ ಕಾರು 205 ಎಂ.ಎಂ. ಗ್ರೌಂಡ್ ಕ್ಲಿಯರೆನ್ಸ್ , 2741 ಎಂ.ಎಂ. ವೀಲ್‌ಬೇಸ್ ಹೊಂದಿದೆ. 425 ಲೀಟರ್‌ನ ಭರ್ಜರಿ ಬೂಟ್ ಸ್ಪೇಸ್ ಹೊಂದಿದ್ದು, ಟೂರಿಂಗ್‌ಗೆ ಕೂಡ ಉತ್ತಮವಾಗಿದೆ.
ಒಳಾಂಗಣ ವಿನ್ಯಾಸ
ಹ್ಯಾರಿಯರ್ ಒಳಾಂಗಣ ಲಕ್ಸುರಿಯಾಗಿದ್ದು, ನೋಡಿದರೆ 25 ಲಕ್ಷ ರೂ. ಮಿಕ್ಕಿ ಬೆಲೆಯ ಕಾರು ಇರಬಹುದೇ ಎಂಬ ಸಂಶಯ ಬಾರದೇ ಇರದು. ಇದಕ್ಕೆ ಕಾರಣ, ಜೀಪ್ ಕಂಪಾಸ್‌ಗಿಂತಲೂ ಹೆಚ್ಚು ಶ್ರೀಮಂತಿಕೆ ಇರುವ ಒಳಾಂಗಣ. ಆಕರ್ಷಕ ಮರದ ರೀತಿ ಫಿನಿಶಿಂಗ್ ಇರುವ ಡ್ಯಾಶ್‌ಬೋರ್ಡ್, ಬಿಳಿ ಎಲ್‌ಇಡಿ ಹೊಂದಿರುವ ಮೀಟರ್‌ಗಳು, 8.8 ಇಂಚಿನ ಟಚ್‌ಸ್ಕ್ರೀನ್ ಇರುವ ಇನ್ಫೋಎಂಟರ್‌ಟೈನ್‌ಮೆಂಟ್ ಸಿಸ್ಟಂ, ಇದಕ್ಕೆ ಪೂರಕವಾಗಿ ಒಟ್ಟು 9 (4 ಸ್ಪೀಕರ್‌ಗಳು, 4 ಟ್ವೀಟರ್‌ಗಳು, 1 ಸಬ್‌ವೂಫರ್) ಸ್ಪೀಕರ್ಗಳನ್ನು ಹೊಂದಿದೆ. ಇನ್ಫೋಎಂಟರ್‌ಟೈನ್‌ಮೆಂಟ್ ವ್ಯವಸ್ಥೆಯನ್ನು ಫೋನ್‌ಗೆ ಲಿಂಕ್ ಮಾಡುವಂತೆ ಇದ್ದು, ಪ್ರತ್ಯೇಕ ಸಾಫ್ಟ್ವೇರ್ ಮೂಲಕ ಅದನ್ನು ನಿರ್ವಹಿಸಬಹುದು. ಬ್ಲೂಟೂತ್, ಟೈಮರ್, ರಿಯರ್ ಪಾರ್ಕಿಂಗ್ ಸೆನ್ಸರ್, ಜತೆಗೆ ರೈನ್ ಸೆನ್ಸಿಂಗ್ ವೈಪರ್ಗಳು ಇದರಲ್ಲಿವೆ. 5 ಜನ ಆರಾಮವಾಗಿ ಇದರಲ್ಲಿ ಕೂರಬಹುದಾಗಿದೆ.
ಭರ್ಜರಿ ಫೀಚರ್
ಸಾಫ್ಟ್ಡ್ರಿಂಕ್ಸ್‌ಗಳನ್ನು ಇಡಲು ಕೋಲ್ಡ್ ಸ್ಟೋರೇಜ್ ವ್ಯವಸ್ಥೆ, ಹಿಂಭಾಗ ಮತ್ತು ಮುಂಭಾಗ ದೊಡ್ಡದಾದ ಆಮ್ ರೆಸ್ಟ್‌ಗಳು, ಹಿಂಭಾಗವೂ ಎ.ಸಿ ವೆಂಟ್‌ಗಳು, ಸ್ಟಾರ್ಟ್/ಸ್ಟಾಪ್ ಬಟನ್, ಲ್ಯಾಪ್‌ಟಾಪ್ ಕೂಡ ಇಡಬಹುದಾದ ಗ್ಲೋವ್‌ಬಾಕ್ಸ್ ಟೇÅ ವಿವಿಧೆಡೆ ನೀರಿನ ಬಾಟಲಿ, ಡ್ರಿಂಕ್ಸ್‌ಗಳನ್ನು ಇಡುವಂತೆ ವ್ಯವಸ್ಥೆಗಳು, ಮೊಬೈಲ್ ಚಾರ್ಜರ್‌ಗಳು ಇವೆ. ಇದರೊಂದಿಗೆ ರಾತ್ರಿ ವಾಹನ ತಿರುಗುವ ವೇಳೆ ಆಟೋಮ್ಯಾಟಿಕ್ ಆಗಿ ಸೈಡ್‌ಲೈಟ್ ಉರಿಯುವ ಸೈಡ್‌ಲ್ಯಾಂಪ ಕಾರ್ನರಿಂಗ್ ಫಂಕ್ಷನ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ವ್ಯವಸ್ಥೆ, 6 ಏರ್‌ಬ್ಯಾಗ್‌ಗಳು ಇವೆ.
ಜಬರ್‌ದಸ್ತ್ ಎಂಜಿನ್
ಟಾಟಾ ಹ್ಯಾರಿಯರ್‌ನಲ್ಲೂ ಫಿಎಟ್‌ನ ಜೀಪ್ ಕಂಪಾಸ್ ಹೊಂದಿರುವ ಎಂಜಿನ್ ಇದೆ. ಕ್ರೋಯೋಟೆಕ್ ಟಬೋìಚಾರ್ಜ್‌ಡ್ , 4 ಸಿಲಿಂಡರ್‌ನ 2.0 ಲೀಟರ್‌ನ ಈ ಡೀಸೆಲ್ ಎಂಜಿನ್ ಭರ್ಜರಿ 140 ಬಿಎಚ್‌ಪಿ ಶಕ್ತಿ ಮತ್ತು 1750ರಿಂದ 2500 ಆರ್‌ಪಿಎಂನಲ್ಲಿ 350 ಟಾರ್ಕ್ ಉತ್ಪಾದಿಸುತ್ತದೆ. ಇದು ಕ್ಲಚ್ ಬಿಟ್ಟ ಕೂಡಲೇ ಚಲಿಸುವ ಭಾರೀ ಸಾಮರ್ಥ್ಯದ ಆಫ್ರೋಡ್ ವಾಹನದ ಫೀಲ್ ನೀಡಬಲ್ಲದು. ಇದರೊಂದಿಗೆ 6 ಸ್ಪೀಡ್ ಗಿಯರ್ ಬಾಕ್ಸ್ ಇದ್ದು ಮೂರು ಮಾದರಿಯಲ್ಲಿ ಹೊಂದಿಸಬಹುದಾದ, ಇಎಸ್‌ಪಿ ಟೆರೈನ್ ಅಸಿಸ್ಟ್ ಸಿಸ್ಟಂ ಹೊಂದಿದೆ. ಇದರಿಂದ ಜಾರು ದಾರಿಯಲ್ಲಿ , ಏರಿನ ದಾರಿಯಲ್ಲಿ ಕಾರು ಜಾರದೆ ದೃಢವಾಗಿ ಚಲಿಸಬಲ್ಲದು. ಇಷ್ಟೇ ಅಲ್ಲದೆ ಕ್ರೂಸ್ ಕಂಟ್ರೋಲ್ ವ್ಯವಸ್ಥೆಯೂ ಇದೆ. ಆದರೆ ಆಟೋಮ್ಯಾಟಿಕ್ ಗಿಯರ್‌ಬಾಕ್ಸ್ ಇದರಲ್ಲಿ ಸದ್ಯ ಬಂದಿಲ್ಲ. ಹಿಂಭಾಗ ಡ್ರಮ್, ಮುಂಭಾಗ ಡಿಸ್ಕ್ ಬ್ರೇಕ್‌ಗಳು, 17 ಇಂಚಿನ ದೊಡ್ಡದಾದ ಅಲಾಯ್‌ವೀಲ್‌ಗಳನ್ನು ಹೊಂದಿದೆ. ಮುಂಭಾಗ ಇಂಡಿಪೆಂಡೆಂಟ್, ಲೋವರ್ ವಿಸೊºàನ್ ಮತ್ತು ಹಿಂಭಾಗ ಸೆಮಿ ಇಂಡಿಪೆಂಡೆಂಟ್ ಶಾಕ್ಸ್ ಮತ್ತು ಆ್ಯಂಟಿ ರೋಲ್‌ಬಾರ್ ಹೊಂದಿದೆ. 50 ಲೀಟರ್‌ನ ಡೀಸೆಲ್ ಟ್ಯಾಂಕ್ ಹೊಂದಿದೆ.
ಯಾರಿಗೆ ಬೆಸ್ಟ್ ?
ಕಠಿಣ ಹಾದಿಯಲ್ಲೂ ಆರಾಮದಾಯ ಸವಾರಿಗೆ, ದೊಡ್ಡ ಕಾರು ಬೇಕು, ಸಖತ್ ಪವರ್ ಇರಬೇಕು, ಹೆಚ್ಚು ಸುರಕ್ಷತೆ ಬೇಕು ಎನ್ನುವವರಿಗೆ ಟಾಟಾ ಹ್ಯಾರಿಯರ್ ಅತ್ಯುತ್ತಮ ಆಯ್ಕೆ, ಟಾಟಾ ಗಟ್ಟಿಮುಟ್ಟಾದ ಗಾಡಿಗಳನ್ನು ತಯಾರಿಸುವ ಕಂಪೆನಿಯಾಗಿದ್ದು, ಈಗಾಗಲೇ ಸೇಫ್ಟಿ ರೇಟಿಂಗ್‌ನಲ್ಲಿ ಅತ್ಯುತ್ತಮ ರ್‍ಯಾಂಕಿಂಗ್ ಅನ್ನು ಕಾಯ್ದುಕೊಂಡಿದೆ. ಈ ಕಾರು ಕೂಡ ಗಟ್ಟಿಮುಟ್ಟಾಗಿದೆ. ಬೆಲೆ ಆರಂಭಿಕ 12.69 ಲಕ್ಷ (ಎಕ್ಸ್‌ಷೋರೂಂ ದೆಹಲಿ) ಇಂದ ಆರಂಭಗೊಳ್ಳುತ್ತದೆ. ಒಂದು ಲೆಕ್ಕಾಚಾರ ಪ್ರಕಾರ ಕಡಿಮೆ ಬೆಲೆಗೆ ಅತ್ಯಧಿಕ ಫೀಚರ್ಹೊಂದಿದ ಕಾರು ಇದಾಗಿದ್ದು, ಬಿಡುಗಡೆಯಾದ ಒಂದು ತಿಂಗಳಿನಲ್ಲಿ 500ಕ್ಕೂ ಹೆಚ್ಚು ಕಾರುಗಳು ಮಾರಾಟವಾಗಿವೆ.
ತಾಂತ್ರಿಕತೆ
140 ಎಚ್‌ಪಿ ಎಂಜಿನ್
350 ಎನ್‌ಎಂ ಟಾರ್ಕ್
2741 ಎಂ.ಎಂ. ವೀಲ್‌ಬೇಸ್
205 ಎಂ.ಎಂ. ಗ್ರೌಂಡ್ ಕ್ಲಿಯರೆನ್ಸ್
810 ಎಂ.ಎಂ. ಬೂಟ್‌ಸ್ಪೇಸ್
50 ಲೀ. ಇಂಧನ ಟ್ಯಾಂಕ್
– ಎಕ್ಸ್ ಶೋ ರೂಂ ಬೆಲೆ: 12.69
– ಅಧಿಕ ಫೀಚರ್ ಹೊಂದಿರುವ ಕಾರು
– ಎಲೆಕಾಕ್R ಸ್ಟೆಬಿಲಿಟಿ ವ್ಯವಸ್ಥೆ
– 5 ಜನರಿಗೆ ಕೂರಲು ಆಸನ
– ಈಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್ ಶುರು?
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.