ತೆರಿಗೆ 5 ತಪ್ಪುಗಳು
Team Udayavani, Jun 3, 2019, 6:00 AM IST
ತೆರಿಗೆ ಪಾವತಿದಾರರು ರಿಟರ್ನ್ ಸಲ್ಲಿಸುವಾಗ ಕೆಲವೊಂದು ಅಂಶಗಳನ್ನು ಬಿಟ್ಟುಬಿಡುತ್ತಾರೆ. ಇದರಿಂದಾಗುವ ಅಡ್ಡ ಪರಿಣಾಮ ಹೀಗೀಗಿವೆ.
1 ಮನೆಯವರ ಹೆಸರಲ್ಲಿ ಹೂಡಿಕೆ
ಮನೆ ಯಜಮಾನನ ವರಮಾನದ ದುಡ್ಡಿನಲ್ಲಿ ಹೆಂಡತಿ ಅಥವಾ ಮಕ್ಕಳ ಹೆಸರಿನಲ್ಲಿ ಠೇವಣಿ/ ಬೇರಾವುದೇ ಹೂಡಿಕೆ ಮಾಡಿ, ಅವುಗಳಿಂದ ಬರುವ ಬಡ್ಡಿ ಅಥವಾ ಇತರೆ ವರಮಾನ ಎಷ್ಟೇ ಇರಲಿ, ಅದನ್ನು ಯಜಮಾನನ ತೆರಿಗೆ ರಿಟರ್ನ್ಸ್ನಲ್ಲಿ ತೋರಿಸಬೇಕು. ಎಷ್ಟೋ ಮಂದಿ, ನನ್ನ ಮಗಳು ಬೇಕಾದಷ್ಟು ವರಮಾನ ಹೊಂದಿಲ್ಲ, ಆದ ಕಾರಣ ಅದನ್ನು ತೋರಿಸಬೇಕಿಲ್ಲ ಅಂದು ಕೊಂಡಿರುತ್ತಾರೆ. ಆದರೆ ಇದು ಸರಿಯಲ್ಲ. ಯಜಮಾನ ತೆರಿಗೆದಾರನಾಗಿದ್ದು, ಆತನ ಪತ್ನಿ ಮತ್ತು ಮಕ್ಕಳ ಹೆಸರಲ್ಲಿ ಆತ ಮಾಡಿರಬಹುದಾದ ಹೂಡಿಕೆಯಿಂದ ಬರುವ ಇಳುವರಿಯನ್ನು ಯಜಮಾನ ತನ್ನ ತೆರಿಗೆ ರಿಟರ್ನಿನಲ್ಲಿ ಘೋಷಿಸಿಸತಕ್ಕದ್ದು ಮತ್ತು ಅದಕ್ಕೆ ತಕ್ಕುದಾದ ತೆರಿಗೆ ಪಾವತಿಸತಕ್ಕದ್ದು. ಇನ್ನೊಂದು ವಿಚಾರ. ಗರಿಷ್ಠ ಎರಡು ಮಕ್ಕಳಿಗೆ ವಾರ್ಷಿಕ ತಲಾ ರೂ:1500-00 ವಿನಾಯಿತಿ ಕ್ಲೈಮು ಮಾಡುವುದಕ್ಕೂ ತೆರಿಗೆದಾರ ಅಪ್ಪನಿಗೆ ಅವಕಾಶವಿರುತ್ತದೆ.
2 ಬಡ್ಡಿ ಘೋಷಿಸಲ್ಲ
ಬ್ಯಾಂಕಿನಲ್ಲಿರುವ ಎಫ್.ಡಿ. ಆರ್.ಡಿ ಅಥವಾ ಇನ್ನಾವುದೇ ಬಡ್ಡಿ ದುಡಿಯುವ ಠೇವಣಿಗಳಿದ್ದರೆ ವಾರ್ಷಿಕವಾಗಿ ಅದರಿಂದ ಬರುವ ವರಮಾನವಿದ್ದರೆ ಮತ್ತು ಅದು ಹತ್ತು ಸಾವಿರದ ಒಳಗಡೆ ಇದ್ದರೆ ಅದನ್ನು ತೆರಿಗೆ ರಿಟರ್ನಿನಲ್ಲಿ ಘೋಷಿಸಬೇಕಿಲ್ಲ, ವಿನಾಯಿತಿ ಇದೆ ಎಂದು ಅನೇಕರು ಭಾವಿಸಿದ್ದಾರೆ. ಆದರೆ ಇದು ತಪ್ಪು. ವರಮಾನತೆರಿಗೆ ಕಾಯಿದೆಯ ವಿಧಿ 80 ಟಿ.ಟಿ.ಎ. ಅಡಿಯಲ್ಲಿ ಹೇಳಿರುವಂತೆ ಬ್ಯಾಂಕಿನಲ್ಲಿ ಒಬ್ಬ ವ್ಯಕ್ತಿ ಹೊಂದಿರುವ ಉಳಿತಾಯ ಖಾತೆಯಲ್ಲಿ ಜಮೆಯಾಗಬಹುದಾದ ಬಡ್ಡಿ ಹತ್ತುಸಾವಿರದ ಒಳಗಿದ್ದರೆ ಅದಕ್ಕೆ ಮಾತ್ರ ವಿನಾಯಿತಿ ಇದೆ. ಇದಕ್ಕೆ ಹೊರತಾಗಿ ಮಿಕ್ಕುಳಿದ ಬಡ್ಡಿ ಆದಾಯವನ್ನು ವರಮಾನ ಎಂದು ಘೋಷಿಸಬೇಕು ಮತ್ತು ಅದು ತೆರಿಗೆಯೋಗ್ಯವಾದದ್ದು. ಉಳಿತಾಯ ಖಾತೆಯಲ್ಲಿ ಜಮೆಯಾದ ಬಡ್ಡಿಯನ್ನೂ ವರಮಾನಕ್ಕೆ ಸೇರಿಸಿಕೊಂಡು ನಂತರದಲ್ಲಿ ಅದನ್ನು ಡಿಡಕ್ಷನ್ ಅಡಿಯಲ್ಲಿ ಕಳೆಯುವುದು ಉತ್ತಮ ಮತ್ತು ಸೂಕ್ತ ನಿರ್ಧಾರ ಎನ್ನಬಹುದು.
3 ಇದು ಮರೀಬೇಡಿ
ಬ್ಯಾಂಕುಗಳು ನಿಮ್ಮ ಡಿಪಾಜಿಟ್ ಗಳ ಮೇಲಿನ ಬಡ್ಡಿಗೆ ಮೂಲದಲ್ಲಿ ಶೇ:10 ಕಡಿತಗೊಳಿಸಿರುವುದನ್ನೇ ಪರಿಪೂರ್ಣ ತೆರಿಗೆಯಲ್ಲ. ಏಕೆಂದರೆ, ವ್ಯಕ್ತಿಗತವಾಗಿ ಒಬ್ಬ ವ್ಯಕ್ತಿಗೆ ಇರುವ ಆದಾಯದ ಗಾತ್ರಕ್ಕೆ ಅನುಗುಣವಾಗಿ ಅನ್ವಯವಾಗುವ ತೆರಿಗೆಯ ಶೇಕಡಾವಾರು ನಿಷ್ಪತ್ತಿಯೂ ವ್ಯತ್ಯಯವಾಗುತ್ತದೆ. ಅದು ಶೇ:10ರಿಂದ 30ರ ತನಕವೂ ಇರುತ್ತದೆ. ಹೀಗಿರುವಾಗ ಬ್ಯಾಂಕಿನವರು ಮೂಲದಲ್ಲಿ ಕಡಿತ ಮಾಡಿದ್ದಷ್ಟೇ ತೆರಿಗೆ, ಅದನ್ನು ರಿಟರ್ನ್ಸ್ನಲ್ಲಿ ಘೋಫಿಸಬೇಕಿಲ್ಲ ಎಂಬುದು ತಪ್ಪು ಕಲ್ಪನೆ. ಅಲ್ಲದೇ ರಿಟರ್ನ್ಸ್ನಲ್ಲಿ ಘೋಷಿಸಿ, ಬ್ಯಾಂಕಿನವರು ಮೂಲದಲ್ಲಿ ಕಡಿತಗೊಳಿಸಿದ ತೆರಿಗೆಯನ್ನು ರೀಫಂಡ್‌ಗೆ ಅವಕಾಶು ಉಂಟು.
4 ಯೂಟರ್ನ್ ಏಕೆ?
ವಾರ್ಷಿಕ ಎರಡೂವರೆಲಕ್ಷ ರೂಪಾಯಿ ವರಮಾನ ಮೀರುವ ಅರವತ್ತು ವರುಷದ ಒಳಗಿನ ವ್ಯಕ್ತಿ ತೆರಿಗೆ ರಿಟನುì ಸಲ್ಲಿಸಲೇಬೇಕು. ಅದಕ್ಕೆ ಅನ್ವಯವಾಗುವ ತೆರಿಗೆಯನ್ನು ಉದ್ಯೋಗದಾತರು ಕಟಾಯಿಸಿದ್ದಾರೆ, ನಾನು ರಿಟರ್ನಿ ಸಲ್ಲಿಸಬೇಕಿಲ್ಲ ಎಂದು ಭಾವಿಸಿ ಸುಮ್ಮನಿರುವವರ ಸಂಖ್ಯೆ ದೊಡ್ಡದಿದೆ. ಇದು ತಪ್ಪು.
5 ಹೀಗೆಲ್ಲ ಮಾಡಬಾರದು
ಆರ್ಥಿಕ ವರ್ಷದ ನಡುವಿನಲ್ಲಿ ಕೆಲಸವೊಂದನ್ನು ಬಿಟ್ಟು ಬೇರೆ ಕಡೆ ಸೇರಿಕೊಂಡವರಿಗೆ ಇದು ಅನ್ವಯವಾಗುತ್ತದೆ. ಹಳೆಯ ಕಂಪೆನಿ ಪಾವತಿಸಿದ್ದ ಸಂಬಳದ ಮೊತ್ತವನ್ನು ವರ್ಷಾಂತ್ಯದಲ್ಲಿ ತೋರಿಸದೇ, ಕೇವಲ ಹೊಸ ಕಂಪೆನಿಯವರು ಕೊಡುವ ನಮೂನೆ-16 ಬಳಸಿಕೊಂಡು ತೆರಿಗೆ ರಿಟರ್ನ್ ಸಲ್ಲಿಸುವವರೂ ಇದ್ದಾರೆ. ಇದು ಸರಿಯಾದ ಕ್ರಮವಲ್ಲ. ಹಾಗೇನೇ, ಪಬ್ಲಿಕ್ ಪ್ರಾವಿಡೆಂಟ್ ಫಂಡ್, ಇನ್ನಾವುದೇ ಟ್ಯಾಕ್ಸ್ ಫ್ರೀ ಬಾಂಡ್ ಗಳ ಹೂಡಿಕೆಯಿಂದ ಬಂದ ವರಮಾನವನ್ನು ಅನೇಕರು ವರ್ಷಾಂತ್ಯದಲ್ಲಿ ತಮ್ಮ ತೆರಿಗೆ ರಿಟರ್ನಿನಲ್ಲಿ ತೋರಿಸುವುದಿಲ್ಲ. ಹೇಗಿದ್ದರೂ ಅದಕ್ಕೆ ತೆರಿಗೆ ಇಲ್ಲವಲ್ಲ ಅಂದುಕೊಳ್ಳಬೇಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.