ಕೃಷಿಯ ಉತ್ಪಾದಕತೆ ಹೆಚ್ಚಳಕ್ಕೆ ತಂತ್ರಜ್ಞಾನದ ಸಾಧನಗಳು


Team Udayavani, May 8, 2017, 4:53 PM IST

sadana.jpg

ಕೋಲಾರದ ಹುತ್ತೂರಿನ ರಾಜೇಂದ್ರ ಪ್ರಸಾದರ ಎರಡು ಎಕರೆ ಹೊಲವನ್ನು ಜಾಂಡಿಟ್ರಾìಕ್ಟರ್ಸ ಸತತವಾಗಿ ಉಳುಮೆ ಮಾಡಿ ಮುಗಿಸಿತು. ಕೆಲವೇ ದಿನಗಳಲ್ಲಿ ಆ ಹೊಲ ಟೊಮೆಟೊ ಬೆಳೆಸಲು ತಯಾರಾಯಿತು. 

ಇದರಲ್ಲೇನು ವಿಶೇಷ? ಎರಡು ವರ್ಷಗಳ ಮುಂಚೆ, ಇದೇ ಕೆಲಸವೆಂದರೆ ರಾಜೇಂದ್ರಪ್ರಸಾದರಿಗೆ ದೊಡ್ಡ ತಲೆನೋವು. ಆಗಿನ ಪರಿಸ್ಥಿತಿಗೆ ಹೋಲಿಸಿದರೆ, ಈಗ ಹೊಲದ ಉಳುಮೆ ಸುಲಭವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ಮುಗಿಯಿತು. ಯಾಕೆ ಎಂದು ಪ್ರಶ್ನಿಸಿದರೆ ಅವರ ಉತ್ತರ: ಆಗ ನಮ್ಮೂರಿನ ಒಬ್ಬರ ಟ್ರಾಕ್ಟರ್‌ ಬಾಡಿಗೆಗೆ ತರಿಸುತ್ತಿ¨ªೆ. ನನ್ನಹೊಲದ ಉಳುಮೆಗೆ ಆಗುತ್ತಿದ್ದ ಖರ್ಚು ಬರೋಬ್ಬರಿ 6,000ರೂಪಾಯಿ. ಈಗ ಗೋಲ್ಡಾಮಾóìಕ್ಟರನು °ಮೊಬೈಲ್‌ನಲ್ಲೇ ಬುಕ್‌ ಮಾಡಬಹುದು. ಬರೇ 2,000ರೂ. ಖರ್ಚಿನಲ್ಲಿ ನನ್ನಹೊಲದ ಉಳುಮೆ ಆಗಿಹೋಯ್ತು. 

ಅಭಿಲಾಷ್‌ ತಿರುಪತಿ ಮತ್ತು ಕಾರ್ತಿಕ್‌ ರವೀಂದ್ರನಾಥ್‌ ಮೂರು ವರುಷ ಮುಂಚೆ ಸ್ಥಾಪಿಸಿದ ಹೊಸ ಕಂಪೆನಿ (ಸ್ಟಾರ್ಟ್‌ ಅಪ…) ಗೋಲ್ಡ… ಫಾರ್ಮ್. ಅವರ ಹನಿ ಬೀ ಎಂಬ ಹೆಸರಿನ ಮೊಬೈಲ… ಆ್ಯಪ್‌, ಕೃಷಿ ಉಪಕರಣಗಳನ್ನು (ಟ್ರಾಕ್ಟರ್‌, ಪವರ್‌ ಟಿಲ್ಲರ್‌, ಸ್ಪ್ರೆಯರ್‌, ಹಾರ್ವೆಸ್ಟರ್‌ ಜೆಸಿಬಿ ಇತ್ಯಾದಿ) ರೈತರು ಬಾಡಿಗೆಗೆ ಪಡೆಯುವುದನ್ನು ಬಹಳ ಸುಲಭವಾಗಿಸಿದೆ. ಇದರ ಮೂಲಕ ಕೃಷಿ ಉಪಕರಣಗಳ ಮುಂಗಡ ಕಾದಿರಿಸುವಿಕೆ, ಒದಗಣೆ, ರವಾನೆ ಹಾಗೂ ಬಳಕೆಯ ಮೇಲುಸ್ತುವಾರಿ ಸುಲಭ ಸಾಧ್ಯವಾಗಿದೆ. ನಗರಗಳಲ್ಲಿ ಉಬರ್‌ ಮತ್ತು ಓಲಾ ಕಂಪೆನಿಗಳು ಕಾರು ಹಾಗೂ ರಿûಾಗಳ ಸೇವೆ ಒದಗಿಸುತ್ತಿವೆ. ಅದೇ ರೀತಿಯಲ್ಲಿ ಕೃಷಿ ಉಪಕರಣಗಳ ಸೇವೆ ಒದಗಿಸಬೇಕೆಂಬುದು ನಮ್ಮ ಆಸೆ. ಈಗ ಹಳ್ಳಿಗಳಲ್ಲಿ ಕೃಷಿ ಉಪಕರಣ ಬಾಡಿಗೆಗೆ ಕೊಡುವವರ ಶುಲ್ಕಕ್ಕಿಂತ ಕಡಿಮೆ ಶುಲ್ಕದಲ್ಲಿ ಅವನ್ನು ಬಾಡಿಗೆಗೆ ಕೊಡಬೇಕೆಂಬುದು ನಮ್ಮ ಆಶಯ ಎನ್ನುತ್ತಾರೆ ಅಭಿಲಾಷ್‌. 

2013ರಿಂದೀಚೆಗೆ ಅಭಿಲಾಷ್‌ ಮತ್ತು ಕಾರ್ತಿಕ್‌ ರೈತರ ಹೊಲಗಳಿಗೆ ಹೋದದ್ದು ಹಲವು ಸಲ – ಅವರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲಿಕ್ಕಾಗಿ. ತಮ್ಮ ಅಧ್ಯಯನದ ಆಧಾರದಿಂದ ಅವರು ರೂಪಿಸಿದ್ದು ಹನಿ ಬೀ. ರೈತರು ಇದನ್ನು ಬಳಸುವುದು ಹೇಗೆ? ಮೊದಲಾಗಿ ಗೋಲ್ಡ… ಫಾರ್ಮ್ ಕಂಪೆನಿಯ ವೆಬ… ಸೈಟಿನಿಂದ ಅಥವಾ ಗೂಗಲ… ಪ್ಲೇಸ್ಟೋರಿನಿಂದ ಹನಿ ಬೀ ಆ್ಯಪ್‌ ಅನ್ನು ರೈತರು ತಮ್ಮ ಸ್ಮಾರ್ಟ್‌ ಫೋನುಗಳಿಗೆ ಇಳಿಸಿಕೊಳ್ಳಬೇಕು. ಅನಂತರ, ಹನಿ ಬೀಯಲ್ಲಿ ತಮ್ಮ ಹೆಸರು ಮತ್ತು ಮೊಬೈಲ… ಫೋನ್‌ ನಂಬರ್‌ ದಾಖಲಿಸಿ, ತಮಗೆ ಬೇಕಾದ ಕೃಷಿ ಉಪಕರಣ ಸೂಚಿಸಬೇಕು (ನಿರ್ದಿಷ್ಟ ದಿನ, ಅವಧಿ ಮತ್ತು ಸಮಯ ನಮೂದಿಸಬೇಕು.) ಬಳಿಕ ಆನ್‌-ಲೈನಿನಲ್ಲಿ ಮುಂಗಡ ಶುಲ್ಕ ಪಾವತಿಸಿದರೆ, ಹನಿ ಬೀ ಕೃಷಿ ಉಪಕರಣವನ್ನು ಕಾದಿರಿಸುತ್ತದೆ.  ಗೋಲ್ಡ… ಫಾರ್ಮಿನ ಸಂಪರ್ಕ ಮಳಿಗೆಗಳಲ್ಲಿ ಕಂಪೆನಿಯ ಪ್ರತಿನಿಧಿಗಳ ಬಳಿ ಈ-ವಾಲೆಟ… ಇರುತ್ತದೆ; ಇದರ ಮೂಲಕವೂ ಗೋಲ್ಡ… ಫಾರ್ಮಿಗೆ ನೇರವಾಗಿ ಶುಲ್ಕ ಪಾವತಿಸಬಹುದು. ಕಂಪೆನಿಯ ಕಾಲ…-ಸೆಂಟರಿನ ಮೂಲಕವೂ ಕೃಷಿ ಉಪಕರಣಗಳನ್ನು ಕಾಯ್ದಿರಿಸಬಹುದು. 

ಸದ್ಯ ಕೋಲಾರ ಜಿಲ್ಲೆಯಲ್ಲಿ 48 ಮತ್ತು ಗದಗ ಜಿಲ್ಲೆಯಲ್ಲಿ 28 ಟ್ರಾಕ್ಟರ್‌ ಮಾಲೀಕರ ಜೊತೆ ಗೋಲ್ಡ… ಫಾರ್ಮ್ ಒಪ್ಪಂದ ಮಾಡಿಕೊಂಡಿದೆ. ಅದರ ಪ್ರಕಾರ ಟ್ರಾಕ್ಟರ್‌ ಸೇವೆಯನ್ನು ಹನಿ ಬೀ ಮೂಲಕ ರೈತರಿಗೆ ಒದಗಿಸುತ್ತಿದೆ. ಹನಿ ಬೀಯಲ್ಲಿ ಜಿಪಿಎಲ್‌ ವ್ಯವಸ್ಥೆ ಅಳವಡಿಸಲಾಗಿದೆ. ಇದರಿಂದಾಗಿ, ಯಾವ ಜಮೀನಿನಲ್ಲಿ ಕೆಲಸ ಮಾಡಲಾಯಿತು ಎಂಬುದು ಕರಾರುವಾಕ್ಕಾಗಿ ದಾಖಲು.  ಬಳಕೆಯಾದ ಡೀಸೆಲ್‌ ಎಷ್ಟು? ಟ್ರಾಕ್ಟರ್‌ರನ್ನು ಬಳಸಿದ ಕಾಲಾವಧಿ ಎಷ್ಟು? ಇವನ್ನೆಲ್ಲ ಹನಿ ಬೀ ಲೆಕ್ಕ ಹಾಕುತ್ತದೆ. ಹೊಲದ ಕೆಲಸ ಮುಗಿದಾಗ, ಇದು ಗೋಲ್ಡ… ಫಾರ್ಮಿನ ಸರ್ವರನ್ನು ಸಂಪರ್ಕಿಸಿ, ಬಿಲ್‌ ಮುದ್ರಿಸುತ್ತದೆ. ಟ್ರಾಕ್ಟರ್‌ ಮಾಲೀಕರಿಗೆ ಇದರಿಂದೇನು ಲಾಭ? ಅವರಿಗೆ ನಿರಂತರವಾಗಿ ಕೆಲಸ ಸಿಗುತ್ತದೆ. 

ಪೀಡೆಕೀಟಗಳ ಹಾವಳಿ ನಮ್ಮ ದೇಶದ ರೈತರು ಎದುರಿಸುವ ಇನ್ನೊಂದು ಗಂಭೀರ ಸಮಸ್ಯೆ. ಇದರ ಪರಿಹಾರಕ್ಕಾಗಿ 2011ರಿಂದ ಕಾರ್ಯಾಚರಿಸುತ್ತಿರುವ ಕಂಪೆನಿ ಬಾರಿಕ್ಸ್‌ ಅಗ್ರೋ ಸರ್ವಿಸಸ್‌. ಇದರ ಕಚೇರಿ ಇರುವುದು ಬೆಂಗಳೂರಿನ ಪೀಣ್ಯದಲ್ಲಿ. ಇದರ ಸ್ಥಾಪಕರು ಲೋಕೇಶ್‌ ಮಕಮ…. ಆಹಾರದ ಬೆಳೆಗಳ ಕೀಟನಾಶಕಗಳಿಗೆ ಬದಲಿವಸ್ತು ಸಂಶೋಧಿಸಿ ರೈತರಿಗೆ ಮಾರಾಟ ಮಾಡಬೇಕೆಂಬ ಉದ್ದೇಶದಿಂದ ಈ ಕಂಪೆನಿ ಸ್ಥಾಪಿಸಿದರು. ಜೂನ್‌ 2013ರಲ್ಲಿ ರೂ. 20 ಲಕ್ಷ$ ಮೂಲಧನದ ಮೂಲಕ ಇದಕ್ಕೆ ಬೆಂಬಲ ನೀಡಿದ್ದು ಸೆಂಟರ್‌ ಫಾರ್‌ ಇನ್ನೋವೇಷನ್‌ ಇನ್‌-ಕ್ಯುಬೇಷನ… ಆಂಡ್‌ ಎಂಟರ್‌-ಪ್ರೀನರ್‌-ಷಿಪ್‌ ಎಂಬ ಸಂಸ್ಥೆ.

ಆರಂಭದಲ್ಲಿ ಬಾರಿಕ್ಸ್‌ ಅಗ್ರೋ ಸರ್ವಿಸಸಿನ ವ್ಯವಹಾರ ಕುಂಟುತ್ತಾ ಸಾಗಿತ್ತು. ಯಾಕೆಂದರೆ, ಕೀಟ ಮತ್ತು ರೋಗಗಳಿಂದ ಬೆಳೆಗಳನ್ನು ರಕ್ಷಿಸಲಿಕ್ಕಾಗಿ ರೈತರು ರಾಸಾಯನಿಕ ಪೀಡೆನಾಶಕಗಳನ್ನೇ ಅವಲಂಬಿಸಿ¨ªಾರೆ. ನಮ್ಮ ರೈತರು ನಿರುಪಯೋಗಿ ರಾಸಾಯನಿಕಗಳನ್ನು ಖರೀದಿಸಿ ಹಣ ಹಾಳು ಮಾಡುತ್ತಿ¨ªಾರೆ. ಪೀಡೆ ಕೀಟಗಳು ಕೆಲವು ಕೀಟನಾಶಕಗಳಿಗೆ ಪ್ರತಿರೋಧ ಬೆಳೆಸಿಕೊಂಡಾಗ, ರೈತರು ಮತ್ತೆಮತ್ತೆ ವಿಷರಾಸಾಯನಿಕಗಳನ್ನು ಸಿಂಪಡಿಸುತ್ತಾರೆ; ಇದು ಬಹಳ ಅಪಾಯಕಾರಿ. ಈ ವಿಷರಾಸಾಯನಿಕಗಳಿಗೆ ಬದಲಿವಸ್ತುಗಳು ಇವೆ ಅನ್ನೋದೇ ರೈತರಿಗೆ ಗೊತ್ತಿಲ್ಲ; ಹಾಗಾಗಿ ಅವರು ವಿಷ ರಾಸಾಯನಿಕಗಳನ್ನೇ ಬೆಳೆಗಳಿಗೆ ಸಿಂಪಡಿಸುತ್ತಾರೆ ಎಂದು ವಿವರಿಸುತ್ತಾರೆ ಲೋಕೇಶ್‌ ಮಕಮ…. 

ಹಲವು ವರ್ಷ ಸಂಶೋಧನೆ ನಡೆಸಿ ಬಾರಿಕ್ಸ್‌ ಆಗ್ರೋ ಸರ್ವಿಸಸ್‌ ಪೀಡೆಕೀಟಗಳ ನಿಯಂತ್ರಣಕ್ಕಾಗಿ ಪರಿಸರ ಸ್ನೇಹಿ ಪೀಡೆ ನಾಶಕಗಳನ್ನು ಅಭಿವೃದ್ಧಿಪಡಿಸಿತು. ಇವುಗಳ ವೆಚ್ಚ ಕಡಿಮೆ ಮತ್ತು ಬಳಕೆ ಸುಲಭ.  ಫೆರಮೋನ್‌ ಲೇಪಿತ ಕಾಗದದ ಹಾಳೆ ಅಥವಾ ಸಣ್ಣ ಕನ್‌-ಟೈನರನ್ನು ಗಿಡಗಳ ರೆಂಬೆಗಳಿಗೆ, ತರಕಾರಿಗಳ ಚಪ್ಪರಕ್ಕೆ ಅಥವಾ ನೆಲದಲ್ಲಿ ಊರಿದ ಕೋಲುಗಳಿಗೆ ನೇತಾಡಿಸಿದರಾಯಿತು.  ಈ ಬಗ್ಗೆ ಲೋಕೇಶರ ವಿವರಣೆ ಹೀಗಿದೆ: ಉದಾಹರಣೆಗೆ ಹಣ್ಣಿನ ನೊಣಗಳು ಹಣ್ಣುಗಳಿಗೆ ಶೇ. 80ರಷ್ಟು ಹಾನಿ ಮಾಡುತ್ತವೆ. ಇವನ್ನು ನಿಯಂತ್ರಿಸಲು ಫೆರಮೋನ್‌ ಟ್ರಾಪ್‌ (ವಾಸನಾ ಬಲೆ) ತಯಾರಿಸಿದ್ದೇವೆ. ಇವು ಗಂಡು-ಹಣ್ಣಿನ ನೊಣಗಳನ್ನು ಮಾತ್ರ ಆಕರ್ಷಿಸುತ್ತವೆ; ಇತರ ರೈತಸ್ನೇಹಿ ಕೀಟಗಳಿಗೆ ಮತ್ತು ಗಾಳಿ, ನೀರು, ಮಣ್ಣಿಗೆ ಹಾನಿ ಮಾಡುವುದಿಲ್ಲ. ಇವುಗಳ ಬೆಲೆಯೂ ಕಡಿಮೆ. ಗಂಡು-ಹಣ್ಣಿನ ನೊಣಗಳು ವಾಸನಾ ಬಲೆಗೆ ಆಕರ್ಷಿತವಾಗಿ ಬಂದು ಬಲಿಯಾಗಿ ಸಾಯುವುದರಿಂದ ಸಂತಾನಾಭಿವೃದ್ಧಿ ಕುಂಠಿತವಾಗಿ, ಹಣ್ಣಿನ ನೊಣಗಳ ಸಂಖ್ಯೆ ಕಡಿಮೆಯಾಗುತ್ತದೆ. 

ಈಗ 5,600 ಹಳ್ಳಿಗಳಲ್ಲಿ ಸುಮಾರು ಎರಡು ಲಕ್ಷ$ರೈತರು ಬಾರಿಕ್ಸ… ಆಗ್ರೊ ಸರ್ವೀಸಿನ ಉತ್ಪನ್ನಗಳನ್ನು ಉಪಯೋಗಿಸುತ್ತಿ¨ªಾರೆ. ಸಣ್ಣ ರೈತರಿಗೂ ಹತ್ತಾರು ಎಕರೆ ಜಮೀನಿನ ಮಾಲೀಕರಿಗೂ ನಮ್ಮ ಉತ್ಪನ್ನಗಳಿಂದ ಅನುಕೂಲ. ರಾಸಾಯನಿಕ ಪೀಡೆನಾಶಕಗಳ ಬೆಲೆಗೆ ಹೋಲಿಸಿದಾಗ, ಇವುಗಳ ಬೆಲೆ ಕಡಿಮೆ. ಈ ವಿಧಾನದಲ್ಲಿ ಕೆಲಸಗಾರರು ಯಾವುದೇ ಸಿಂಪಡಣೆ ಮಾಡಲಿಕ್ಕಿಲ್ಲ. ಆ ಖರ್ಚು ರೈತರಿಗೆ ಉಳಿತಾಯ ಇದು ಲೋಕೇಶ್‌ ಮಕಮ… ನೀಡುವ ಮಾಹಿತಿ. 

ಭಾರತದ ಕೃಷಿರಂಗ ಮತ್ತು ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳು ಹತ್ತುಹಲವು. ಇವುಗಳಲ್ಲಿ ಕೆಲವನ್ನಾದರೂ ತಂತ್ರಜ್ಞಾನದ ಸಹಾಯದಿಂದ ಪರಿಹರಿಸಿ, ಕೃಷಿಯ ಉತ್ಪಾದಕತೆ ಹೆಚ್ಚಿಸಲು ಸಾಧ್ಯವೆಂದು ಈ ಎರಡು ಸ್ಟಾರ್ಟ್‌ ಅಪ್‌  ಕಂಪೆನಿಗಳು ತೋರಿಸಿಕೊಟ್ಟಿವೆ.   

– ಅಡ್ಕೂರು ಕೃಷ್ಣರಾವ್

ಟಾಪ್ ನ್ಯೂಸ್

Murder-Represent

Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

ಗೀತಾರ್ಥ ಚಿಂತನೆ 106: ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Murder-Represent

Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ

Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.