ಸ್ಥಿರ ದೂರವಾಣಿಯ ಅಸ್ಥಿರ ಕ್ಷಣಗಳು


Team Udayavani, Oct 22, 2018, 12:39 PM IST

grahakara-vedike2.jpg

ಎರಡು ವರ್ಷಗಳ ಈ ಕಡೆ ಪದೇಪದೆ ಸ್ಥಿರ ದೂರವಾಣಿಯ ಭವಿಷ್ಯದ ಬಗ್ಗೆ ಚಿಂತೆ ಮೂಡುತ್ತಿದೆ. ಈಗಿನ ವಾತಾವರಣವನ್ನು ಗಮನಿಸಿದರೆ ಪೇಜರ್‌, ಎಸ್‌ಟಿಡಿ ಬೂತ್‌, ಶೆಲ್‌ ಟಾರ್ಚ್‌, ಆರ್ಕುಟ್‌ ಮಾದರಿಯಲ್ಲಿ ಸ್ಥಿರ ದೂರವಾಣಿಯೂ ಮಾಯವಾಗುವ ದಿನ ದೂರವಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ. ಭಾರತದ ದೂರವಾಣಿ ನಿಯಂತ್ರಣ ಪ್ರಾಧಿಕಾರ ಟ್ರಾಯ್‌ನ ಅಂಕಿ-ಅಂಶಗಳು ಹೇಳುವುದೂ ಇದೇ ಪ್ರತಿಪಾದನೆಯನ್ನು.

 ಜುಲೈ 2018ಕ್ಕೆ ಅನ್ವಯಿಸುವಂತೆ ಟ್ರಾಯ್‌ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲೀಗ 1157.04 ಮಿಲಿಯನ್‌ ನಿಸ್ತಂತು ದೂರವಾಣಿ ಗ್ರಾಹಕರಿದ್ದಾರೆ. ಒಂದು ತಿಂಗಳಲ್ಲಿ ಈ ಕ್ಷೇತ್ರದಲ್ಲಿ ಶೇ.0.92ರ ಬೆಳವಣಿಗೆಯಾಗಿದೆ. ಇದೇ ವೇಳೆ ಶೇ. 0.55ರಷ್ಟು ಚಂದಾದಾರರನ್ನು ಕಳಕೊಂಡು ವೈರ್‌ ಮೂಲಕ ಸಂಪರ್ಕ ಕೊಡಲಾಗಿರುವ ಸ್ಥಿರ ದೂರವಾಣಿ ಗ್ರಾಹಕರ ಸಂಖ್ಯೆ ಕೇವಲ 22.27 ಮಿಲಿಯನ್‌ಗೆ ಇಳಿದಿದೆ. ತಂತು ದೂರವಾಣಿ ಮಾರುಕಟ್ಟೆ ಶೇ. 0.48ರ ಪ್ರಮಾಣದಲ್ಲಿ ಕುಸಿದಿದೆ.

ಕುಸಿತವೇ ಸ್ಥಿರ!
ಕುಸಿತದ ವೇಗ ತೀರಾ ಕಡಿಮೆಯಿದೆ ಎಂಬುದು ಸತ್ಯವಲ್ಲ. ಮೊಬೈಲ್‌ ದೂರವಾಣಿಗಳ ಮನ್ವಂತರದ ನಂತರ ಸ್ಥಿರ ದೂರವಾಣಿಗಳನ್ನು ವಾಪಸು ಮಾಡುವವರ ಸಂಖ್ಯೆ 2010ರ ವೇಳೆಯಿಂದಲೇ ವಿಪರೀತವಾಗಿತ್ತು. ಈಗ ಉಳಿದಿರುವವರು ಸ್ಥಿರ ದೂರವಾಣಿ ಬಿಡಲಾಗದ ಅನಿವಾರ್ಯತೆ ಹೊಂದಿದವರು. ಚಂದಾದಾರರ ಸಾಂದ್ರತೆಯನ್ನು ನೋಡಿದರೆ ಈ ಅಂಶ ವ್ಯಕ್ತವಾಗುತ್ತದೆ. ಬೇರೆ ಪರ್ಯಾಯಗಳನ್ನು ಕಂಡುಕೊಳ್ಳಬಹುದಾದ ನಗರಗಳಲ್ಲಿ ತಂತು ದೂರವಾಣಿ ಸಾಂದ್ರತೆ ಶೇ.85.61ರಷ್ಟಿದೆ. ಉಳಿದ ಶೇ. 14.39 ಗ್ರಾಮಾಂತರದ ಪಾಲು. ಉದಾಹರಣೆಗೆ, ನಗರಗಳಲ್ಲಿರುವ ಸರ್ಕಾರಿ ಇಲಾಖೆಯಂಥ ವ್ಯವಸ್ಥೆಗಳು ಈಗಲೂ ಬಿಲ್‌ ಆಧಾರಿತ ಸ್ಥಿರ ದೂರವಾಣಿಯನ್ನು ಅಪ್ಪಿಕೊಂಡಿವೆ.

  ಸ್ಥಿರ ದೂರವಾಣಿ ಕುರಿತ ಅಂಕಿ- ಅಂಶ ಕೂಡ ತಪ್ಪುದಾರಿಗೆ ಎಳೆಯುವಂಥದ್ದು. ದೂರವಾಣಿ ಎಂದರೆ ಕರೆ ಮಾಡುವುದು ಎಂಬ ಮೂಲಭೂತ ಅಂಶವನ್ನು ಈಗಿನ ಸ್ಥಿರ ದೂರವಾಣಿ ಚಂದಾದಾರರು ನಂಬಿಲ್ಲ. 22.57 ಮಿಲಿಯನ್‌ ಗ್ರಾಹಕರಲ್ಲಿ 17.95 ಮಿಲಿಯನ್‌ ಬ್ರಾಡ್‌ಬ್ಯಾಂಡ್‌ ಗ್ರಾಹಕರಿದ್ದಾರೆ. ಸ್ಥಿರ ದೂರವಾಣಿಯನ್ನು ಉಳಿಸುವಲ್ಲಿ ಬ್ರಾಡ್‌ಬ್ಯಾಂಡ್‌ ಪ್ರಮುಖ ಅಂಶವಾಗಿದೆ. ಮೆಟ್ರೋ ನಗರಗಳಲ್ಲಿ ಲೈನ್‌ ವ್ಯವಸ್ಥೆಯ ಮೂಲಕ ರಿಲಯನ್ಸ್‌, ವೊಡಾಫೋನ್‌, ಟಾಟಾ ಮೊದಲಾದವರು ಅನಿಯಮಿತ ಕರೆ, ಡಾಟಾಗಳ ಸ್ಥಿರ ದೂರವಾಣಿ ಒದಗಿಸುತ್ತಿದ್ದಾರೆ. ಟಾಟಾ ಶೇ. 8.43ರಷ್ಟು, ರಿಲಯನ್ಸ್‌ 3.85, ವೊಡಾಫೋನ್‌ 1.08, ಭಾರತಿ ಏರ್‌ಟೆಲ್‌ 17.8, ಕ್ವಾಡ್ರಮ್‌ ಕೂಡ ಶೇ. 1.07ರ ಪ್ರಮಾಣದ ಮಾರುಕಟ್ಟೆ ಹೊಂದಲು ಈ ಅಂಶವೇ ಕಾರಣ.
  ಉಳಿದ ದೊಡ್ಡ ಪ್ರಮಾಣದ ಮಾರುಕಟ್ಟೆಯನ್ನು ಬಿಎಸ್‌ಎನ್‌ಎಲ್‌, ಎಂಟಿಎನ್‌ಎಲ್‌ ಹೊಂದಿದ್ದರೂ ಅವುಗಳ ಮಾರುಕಟ್ಟೆ ಕುಸಿಯಲು ಅವುಗಳ ಸೇವಾ ಗುಣಮಟ್ಟದಲ್ಲಿ ಕುಸಿತ ಕಾಣುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ. ಮಾತು, ಇಂಟರ್ನೆಟ್‌, ಡಿಟಿಎಚ್‌ ಮೊದಲಾದ ವಿದ್ಯುನ್ಮಾನ ಸೇವೆಗಳನ್ನು ಅತ್ಯುತ್ತಮ ಗುಣಮಟ್ಟ, ವೇಗಗಳಲ್ಲಿ ಕೊಡಲು ಸಾಧ್ಯವಿರುವ ವೈರ್‌ ತಾಂತ್ರಿಕತೆಯನ್ನು ಖಾಸಗಿಯವರು ಬಳಸಿಕೊಳ್ಳುತ್ತಿರುವುದರಿಂದ ಅವರ ಮಾರುಕಟ್ಟೆ ವಿಸ್ತರಿಸುತ್ತಿದೆ. ಇದಕ್ಕೆ ನೆಲದೊಳಗಿನ ವೈರ್‌ ಅಳವಡಿಕೆಯಲ್ಲಿ ಒಂದಿನಿತೂ ವ್ಯತ್ಯಯ ಆಗಿರಬಾರದು. ಬಿಎಸ್‌ಎನ್‌ಎಲ್‌ ಎಫ್ಟಿಟಿಎಚ್‌ ಎಂದು ಖಾಸಗಿಯವರ ಜೊತೆ ಸವಾಲಿಗೆ ನಿಂತರೂ ಅವರ ಸೇವೆಯ ಬಗ್ಗೆ ಮೂಡಿರುವ ಅನುಮಾನ ಅವರ ಮಾರುಕಟ್ಟೆಯನ್ನು ಪ್ರಭಾಸುತ್ತಿದೆ.

ವಿದೇಶಗಳಲ್ಲೂ ಇದು ಪಳೆಯುಳಿಕೆ!
ಸ್ಥಿರ ದೂರವಾಣಿಗಳ ಆಯುಷ್ಯ ಮುಗಿಯಿತೇ ಎಂಬ ಚರ್ಚೆ ಇಂದು ನಿನ್ನೆಯದಲ್ಲ. 2013ರಿಂದಲೇ ಇಂಥದೊಂದು ಮಾತುಕತೆ ನಡೆಯುತ್ತಲೇ ಇದೆ. ಅಷ್ಟಕ್ಕೂ ಸ್ಥಿರ ದೂರವಾಣಿಗಳ ಕ್ಷೇತ್ರ ಅಸ್ಥಿತ್ವದ ಹೋರಾಟದಲ್ಲಿರುವ ವಿದ್ಯಮಾನ ಕೇವಲ ಭಾರತಕ್ಕೆ ಸೀಮಿತವಾದುದೂ ಅಲ್ಲ. ಇವತ್ತು ಅಮೆರಿಕಾ, ಯುರೋಪ್‌ಗ್ಳಲ್ಲಿ ಶೇ.75 ದೂರವಾಣಿ ಗ್ರಾಹಕರು ನಿಸ್ತಂತು ತಂತ್ರಜ್ಞಾನವನ್ನು ಅವಲಂಬಿಸಿದ್ದಾರೆ. ಕೆಲವು ಯುರೋಪಿಯನ್‌ ದೇಶಗಳು ಶೇ.100 ನಿಸ್ತಂತು ದೂರವಾಣಿ ಚಂದಾದಾರರ ಟೆಲಿ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ಹೊಂದಿವೆ. ಇಂಗ್ಲೆಂಡ್‌ನ‌ ಬಿಟಿ ಕಂಪನಿ ಅಕ್ಷರಶಃ ಸ್ಥಿರ ದೂರವಾಣಿ ಸೇವೆಯನ್ನು ಸ್ಥಗಿತಗೊಳಿಸಿ ಎಫ್ಟಿಟಿಎಚ್‌ನಂತ ಸೇವೆಯನ್ನು ಕೊಡಲು ಮುಂದಾಗಿದೆ.

  2004ರಲ್ಲಿ ಅಮೆರಿಕದಲ್ಲಿ ಶೇ.5ರಷ್ಟು ಜನರಲ್ಲಿ ಮಾತ್ರ ಲ್ಯಾಂಡ್‌ಲೈನ್‌ ಇರಲಿಲ್ಲ. 2007ರಲ್ಲಿ ಇದು ಶೇ.16ಕ್ಕೆ ಏರಿತ್ತು. ಮುಂದಿನ 10 ವರ್ಷಗಳಲ್ಲಿ ಯಾವ ಅಮೆರಿಕನ್‌ ಕೂಡ ಸ್ಥಿರ ದೂರವಾಣಿ ಬಳಸದ ದಿನಗಳಾಗಬಹುದು. ಆಸ್ಟ್ರೇಲಿಯಾದಲ್ಲೂ ಇದೇ ಕತೆ. ತಂತು ಸ್ಥಿರ ದೂರವಾಣಿಯ ಮೂಲಕ ಗುಣಮಟ್ಟದ ಸೇವೆ ಕೊಡಬಹುದಾದರೂ ನಿರ್ವಹಣೆಯ ಸವಾಲು ಈ ಸೇವೆ ನೀಡುವುದರಿಂದ ಕಂಪನಿಗಳನ್ನು ದೂರಟ್ಟಿದೆ. ಭಾರತದಲ್ಲಿ ಇಂದಿಗೂ ಬಹುತೇಕ ಗ್ರಾಮೀಣ ಭಾಗದಲ್ಲಿ ಮೊಬೈಲ್‌ ನೆಟ್‌ವರ್ಕ್‌ ಸಂಕೇತಗಳು ದುರ್ಲಭ, ಸಿಕ್ಕರೂ ದುರ್ಬಲ! ಇಂತಹ ಹಲವರಿಗೆ ಬಿಎಸ್‌ಎನ್‌ಎಲ್‌ ಸ್ಥಿರ ದೂರವಾಣಿ ಅನಿವಾರ್ಯವಾಗಿತ್ತು. ಆದರೆ, ಖುದ್ದು ಬಿಎಸ್‌ಎನ್‌ಎಲ್‌ ಕೆಳ ಮಟ್ಟದಲ್ಲಿ ಹೊಸ ಸಿಬ್ಬಂದಿಗಳ ನೇಮಕವನ್ನು ಮಾಡಿಕೊಳ್ಳುತ್ತಿಲ್ಲ. ಕೇಬಲ್‌ಗ‌ಳ ನಿರ್ವಹಣೆ ಅದರ ಕೈಮೀರಿದೆ. ಕೇಂದ್ರದ ಸಹಾಯವಿಲ್ಲದೆ ಹಾಳಾಗಿರುವ ನೆಲದೊಳಗಿನ ಕೇಬಲ್‌ಗ‌ಳನ್ನು ಆಮೂಲಾಗ್ರವಾಗಿ ಬದಲಿಸಲು ಅದಕ್ಕೆ ಸಾಧ್ಯವಿಲ್ಲ. ಬಿಎಸ್‌ಎನ್‌ಎಲ್‌ ನಮ್ಮ ಸಂಸ್ಥೆ ಎಂಬ ಅಭಿಮಾನದ ಹೊರತಾಗಿಯೂ ಜನರಿಗೆ ಸೇವಾ ಗುಣಮಟ್ಟ ತೃಪ್ತಿದಾಯಕ ಅಲ್ಲ ಅಂತಾದರೆ ಅವರು ಅದರಿಂದ ದೂರವಾಗುವ ದಿನಗಳಿವು.

ಲ್ಯಾಂಡ್‌ಲೈನ್‌ ಫೋನ್‌ ವ್ಯಸನ!
ಕೆಲವು ಗ್ರಾಮೀಣ ಗುಡ್ಡಗಾಡು ಪ್ರದೇಶದ ಜನರಿಗೆ ಡಬ್ಲ್ಯುಎಲ್‌ಎಲ್‌ ತಾಂತ್ರಿಕತೆಯ ವಿಲ್‌ ನಿಸ್ತಂತು ಸ್ಥಿರ ದೂರವಾಣಿ ಅನಿವಾರ್ಯ ಸಂಪರ್ಕ ಮಾಧ್ಯಮವಾಗಿತ್ತು. ಇದು ಇರುವವರೆಗೆ ಜನ ಬದಲಿ ಸಂವಹನ ವ್ಯವಸ್ಥೆಗಳತ್ತ ಯೋಚಿಸುತ್ತಲೂ ಇರಲಿಲ್ಲ. ಈಗ ವಿಲ್‌ ಸಿಗ್ನಲ್‌ ಪರವಾನಗಿ ಶುಲ್ಕ ಪಾವತಿಯಿಂದ ಬಿಎಸ್‌ಎನ್‌ಎಲ್‌ ಹಿಂಸರಿದಿರುವುದರಿಂದ ಈ ಸೇವೆ ದೇಶದ ಬಹುತೇಕ ಕಡೆ ಅಂತ್ಯಗೊಂಡಿದೆ. ಜನಕ್ಕೆ ಈಗಲೂ ಸ್ಥಿರ ದೂರವಾಣಿ ಅಗತ್ಯ, ರಿಸೀವರ್‌ ಎತ್ತಿ ಮಾತನಾಡುವುದು, ನಂಬರ್‌ ಡಯಲ್‌ ಮಾಡುವುದು, ರೀ ಡಯಲ್‌ಗ‌ಳಿಗೆಲ್ಲ ಸ್ಥಿರ ದೂರವಾಣಿಯೇ ಚೆನ್ನ ಎನ್ನುವವರಿದ್ದಾರೆ. ಹಿರಿಯ ಜನರು ಮನೆಯಲ್ಲಿದ್ದರೆ ಅವರಿಗೆ ಇದರ ಬಳಕೆ ಸಲೀಸು. ಈ ಹಿನ್ನೆಲೆಯಲ್ಲಿ ಜಿಎಸ್‌ಎಂ ತಂತ್ರಜ್ಞಾನದ ಸ್ಥಿರ ದೂರವಾಣಿ ಬಳಸುವವರ ಸಂಖ್ಯೆ ಹೆಚ್ಚುತ್ತಿದೆ. ಸಿಮ್‌ ಅನ್ನು ಲ್ಯಾಂಡ್‌ಲೈನ್‌ ಫೋನ್‌ಗೆ ಹಾಕಿ ಮಾತನಾಡುವ ಮಾದರಿಯಿದು.

  ದುಬಾರಿ ವೆಚ್ಚ ಸ್ಥಿರ ದೂರವಾಣಿಯ ಅತಿ ದೊಡ್ಡ ಹರ್ಡಲ್‌. ಬ್ರಾಡ್‌ಬ್ಯಾಂಡ್‌ ಇಲ್ಲದ ಗ್ರಾಹಕನೂ ಸಾಮಾನ್ಯವಾಗಿ ಬ್ರಾಡ್‌ಬ್ಯಾಂಡ್‌ ಬಳಕೆದಾರನಿಗಿಂತ ಹೆಚ್ಚು ಬಿಲ್‌ ಮೊತ್ತ ಪಾವತಿಸುವುದು ವೈಶಿಷ್ಟ! ಒಬ್ಬ ಮಾಜಿ ಬಿಎಸ್‌ಎನ್‌ಎಲ್‌ ಸ್ಥಿರ ದೂರವಾಣಿ ಗ್ರಾಹಕರಿಗೆ ಮಾಸಿಕ ಬಾಡಿಗೆ 180 ರೂ. ಸೇರಿ ಸರಾಸರಿ 600 ರೂ. ಬಿಲ್‌ ಬರುತ್ತಿತ್ತು ಎಂದರೆ, ವರ್ಷಕ್ಕೆ 7,200 ರೂ. ವೆಚ್ಚ. ಈಗ ಅದೇ ಮನುಷ್ಯ ಜಿಎಸ್‌ಎಂ ಆಧಾರಿತ ಲ್ಯಾಂಡ್‌ ಲೈನ್‌ ಬಳಸುತ್ತಿದ್ದಾನೆ. ಬಿಎಸ್‌ಎನ್‌ಎಲ್‌ ಪ್ಲಾನ್‌ ಒಂದರ ಪ್ರಕಾರ, 319 ರೂ.ಗೆ ಮೂರು ತಿಂಗಳು ಯಾವ ನೆಟ್‌ವರ್ಕ್‌ಗೂ ಉಚಿತ ಕರೆ. ರಾತ್ರಿ ಹತ್ತು ಘಂಟೆಯಾಗುವುದನ್ನಾಗಲಿ, ಭಾನುವಾರದ ರಜಾ ಬರುವುದಕ್ಕಾಗಿ ಕಾಯಬೇಕಾಗಿಲ್ಲ! ಅಷ್ಟಾಗಿಯೂ ವರ್ಷದ ಖರ್ಚು ಹೆಚ್ಚು ಕಡಿಮೆ 1,280 ರೂ. ಮಾತ್ರ. ಒಂದು ವರ್ಷಕ್ಕೆ ಬರೋಬ್ಬರಿ 6 ಸಾವಿರ ರೂ.ಗಳ ಉಳಿತಾಯ ಹೆಚ್ಚು ಸೌಲಭ್ಯಗಳ ಸತ ಆಗುವುದಾದರೆ ಜನ ಯಾವುದನ್ನು ಆಶ್ರಯಿಸುತ್ತಾರೆ?

   ಮತ್ತೆ ಮತ್ತೆ ಲ್ಯಾಂಡ್‌ಲೈನ್‌ ಫೋನ್‌ನ ಕನವರಿಕೆಯೇ ಅಸಂಬದ್ಧವಾದುದು. ನಾವು ಕಾಲದ ಚಲನೆಯ ಜೊತೆ ಮುಂದೆ ಸಾಗಲೇಬೇಕು. ನಾವೀಗ ಎಫ್ಟಿಟಿಹೆಚ್‌, ಖಾಸಗಿ ಕೇಬಲ್‌ ಇಂಟರ್ನೆಟ್‌, ಡಿಟಿಎಚ್‌ ಕಾಲದಲ್ಲಿದ್ದೇವೆ. ಈ ಸೇವೆಗಳನ್ನಾದರೂ ಉತ್ತಮವಾಗಿ ಕೊಟ್ಟರೆ ಸಂಪರ್ಕ, ಸಂವಹನ ವ್ಯವಸ್ಥೆ ಸಮಾಧಾನ ತರುತ್ತದೆ. ಇಲ್ಲದಿದ್ದರೆ, “ಹಲೋ, ಹಲೋ… ನನ್ನ ಮಾತು ಕೇಳಿಸುತ್ತಿದೆಯೇ? ನಿಮ್ಮ ಮಾತು ಕಟ್‌ ಕಟ್‌ ಆಗುತ್ತಿದೆ. ಬಹುಶಃ ಸಿಗ್ನಲ್‌ ಸಮಸ್ಯೆ. ಇನ್ನೊಮ್ಮೆ ಕಾಲ್‌ ಮಾಡುತ್ತೇನೆ…’!

ಕೊನೆ ಮಾತು: ಹೊಸ ಕನೆಕ್ಷನ್‌ ಪ್ರಸಂಗ ಬಿಡಿ, ಬಿಎಸ್‌ಎನ್‌ಎಲ್‌ಗೆ ಈ ಹಿಂದೆ ಸಂಪರ್ಕ ಕೊಟ್ಟಿರುವುದನ್ನು ನಿರ್ವಹಿಸಲೇ ಆಗುತ್ತಿಲ್ಲ. ಈ ರೀತಿ ಸಂಪರ್ಕ ವ್ಯವಸ್ಥೆ ದುರಸ್ತಿ ಮಾಡಲಾಗದ ಹಂತ ತಲುಪಿದವರಿಗಾಗಿ ಅಸೀಮಾ ಎಂಬ ಯೋಜನೆಯನ್ನು ಅದು ಪ್ರಕಟಿಸಿದೆ. ಲ್ಯಾಂಡ್‌ಲೈನ್‌ ಫೋನ್‌ ಸಂಪರ್ಕವನ್ನು ತೆಗೆಸಿಹಾಕಿದರೂ, ಕಾಲ್‌ ಫಾರ್ವಡಿಂಗ್‌ ವ್ಯವಸ್ಥೆ ಅನುಸಾರ ನಾವು ಸೂಚಿಸಿದ ಬಿಎಸ್‌ಎನ್‌ಎಲ್‌ ಅಥವಾ ಇತರ ಸೇವಾದಾತರ ಮೊಬೈಲ್‌ ನಂಬರ್‌ಗೆ ಲ್ಯಾಂಡ್‌ಲೈನ್‌ ನಂಬರ್‌ಗೆ ಕರೆ ಮಾಡಿದ್ದು ಆಟೋಮ್ಯಾಟಿಕ್‌ ಆಗಿ ಫಾರ್ವರ್ಡ್‌ ಆಗುತ್ತದೆ. ಈ ಸೇವೆಗೆ ಬಿಎಸ್‌ಎನ್‌ಎಲ್‌ ನಂಬರ್‌ಗೆ ಫಾರ್ವರ್ಡ್‌ ಆಗಲು ವಾರ್ಷಿಕ 147 ರೂ. ಸೇವಾಶುಲ್ಕ. ಈ ವರ್ಚುವಲ್‌ ಗ್ರಾಹಕರಿಗೆ ಕೂಡ ಬಿಎಸ್‌ಎನ್‌ಎಲ್‌ ಬಿಲ್‌ ಕಳುಹಿಸುತ್ತದೆ. ಸ್ವಾರಸ್ಯ ಎಂದರೆ, ಈ ಗ್ರಾಹಕ ಇದರ ಬದಲು ಇಮೇಲ್‌ ಬಿಲ್‌- ಸಾಫ್ಟ್ಕಾಫಿಯಲ್ಲಿ ಶೂನ್ಯ ವೆಚ್ಚದ ಬಿಲ್‌ ಪಡೆಯಬಹುದು. ಬಿಎಸ್‌ಎನ್‌ಎಲ್‌ ನಿಯಮಗಳ ಪ್ರಕಾರ ಸಾಫ್ಟ್ಬಿಲ್‌ ಮಾತ್ರ ಪಡೆಯುವವರಿಗೆ ಮಾಸಿಕ 10 ರೂ.ಗಳ ಕೊಡುಗೆಯಿದೆ. ಅಂದರೆ 147 ರೂ. ಪಾವತಿಸಿದ ಅಸೀಮಾ ಗ್ರಾಹಕನ ಖಾತೆಯಲ್ಲಿ ವರ್ಷಾಂತ್ಯದಲ್ಲಿ 120 ರೂ. ಇನ್ಸೆಂಟಿವ್‌ ಸೇರ್ಪಡೆಯಾಗಿರುತ್ತದೆ! ಇಂತಹ ಪ್ರಮಾದವನ್ನು ಸರಿಪಡಿಸುವವರು ಯಾರು?
– ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

ಟಾಪ್ ನ್ಯೂಸ್

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.