ಮನೆಯಲ್ಲಿ ಅಕ್ವೇರಿಯಂ, ಸಾಕು ಹಕ್ಕಿಗಳ ಸಹವಾಸ ಬೇಡ…
Team Udayavani, Mar 13, 2017, 12:07 PM IST
ಯಾವುದೇ ಕಾರಣಕ್ಕೂ ಮೀನಿನ ತೊಟ್ಟಿಯನ್ನು ಅಥವಾ ಮೀನಿರುವ ನೀರಿನ ಬಟ್ಟಲು ಗಾಜಿನ ಗಿಂಡಿಗಳನ್ನು ಮಲಗುವ ಕೋಣೆಯಲ್ಲಿ ಇಟ್ಟುಕೊಳ್ಳಬೇಡಿ. ಮಲಗುವ ಕೋಣೆಯಲ್ಲಿ ಎಡಬಿಡದೆ ಓಡಾಡುತ್ತಾ ಗಾಜಿನ ಗೋಡೆಗೆ ಮೂತಿ ಬಡಿದುಕೊಳ್ಳುತ್ತಾ ದಿಕ್ಕು ತಪ್ಪುವ ಮೀನುಗಳು ಮಲಗಿದ ಮಂದಿಯ ಸ್ವಾಸ್ಥ್ಯಕ್ಕೆ ಶುಭಲಕ್ಷಣಗಳಾಗಿರುವುದಿಲ್ಲ.
ಮನೆಯ ಸೊಬಗಿಗೆ ಎಂದು ನಾವು ಅಕ್ವೇರಿಯಂ (ಮತ್ಸ್ಯ ಪೆಟ್ಟಿಗೆ) ಅಥವಾ ಗಿಣಿ, ಪಾರಿವಾಳ, ನವಿಲು, ಗುಬ್ಬಿ ಇತ್ಯಾದಿ ಹಕ್ಕಿಗಳನ್ನು ಇಟ್ಟು ಆರೈಕೆ ಮಾಡುವುದನ್ನು ಗಮನಿಸುತ್ತೇವೆ. ಅಕ್ವೇರಿಯಂ ಇಟ್ಟು ಬಣ್ಣ ಬಣ್ಣದ ಅವುಗಳ ಹೊರ ಮೈ ಚೆಲ್ಲಿ, ತೆವಳುತ್ತ, ಈಜುತ್ತಾ ನಾವು ಹೊರಬರಲಾರದ ಗಾಜಿನ ಗೋಡೆಗಳಿಗೆ ಢಿಕ್ಕಿ ಕೊಡುತ್ತಾ, ಮೂತಿ ಬಡಿಯುತ್ತಾ ಮೂತಿ ಉರುಟುರುಟಾಗಿ ಸುತ್ತ ಓಡಾಡುವ ಮೀನುಗಳು ಕಣ್ಣಿಗೆ ಆಹ್ಲಾದವನ್ನು ಕೊಡುತ್ತವೆ.
ಆದರೆ ಯಾವುದೇ ಕಾರಣಕ್ಕೂ ಮೀನಿನ ತೊಟ್ಟಿಯನ್ನು ಅಥವಾ ಮೀನಿರುವ ನೀರಿನ ಬಟ್ಟಲು ಗಾಜಿನ ಗಿಂಡಿಗಳನ್ನು ಮಲಗುವ ಕೋಣೆಯಲ್ಲಿ ಮಾತ್ರ ಇಟ್ಟುಕೊಳ್ಳಬೇಡಿ. ಮಲಗುವ ಕೋಣೆಯಲ್ಲಿ ಎಡಬಿಡದೆ ಓಡಾಡುತ್ತಾ ಗಾಜಿನ ಗೋಡೆಗೆ ಮೂತಿ ಬಡಿದುಕೊಳ್ಳುತ್ತಾ ದಿಕ್ಕು ತಪ್ಪುವ ಮೀನುಗಳು ಮಲಗಿದ ಮಂದಿಯ ಸ್ವಾಸ್ಥ್ಯಕ್ಕೆ ಶುಭಲಕ್ಷಣಗಳಾಗಿರುವುದಿಲ್ಲ. ಜೊತೆಗೆ ಮಲಗುವ ಕೋಣೆಯಲ್ಲಿ ನೀರನ್ನು ತುಂಬಿಕೊಂಡ ಯಾವುದೇ ಪಾತ್ರೆಗಳು ತೊಟ್ಟಿಗಳು ಜಾಡಿಗಳು ಗಿಂಡಿಗಳು ಅಶುಭಸೂಚಕಗಳಾಗಿದೆ. ಇದಕ್ಕೆ ಕಾರಣ ಮಲಗಿರುವ ಸಂದರ್ಭದಲ್ಲಿ ಇರುವ ಸುಪ್ತಾವಸ್ಥೆಗೂ ನೀರಿನ ಕಾರಣವಾದ ಜಲತತ್ವಕ್ಕೂ ಒಂದು ಇನ್ನೊಂದನ್ನು ಬೇಧಿಸಿ ಅಶುಭ ಸ್ಪಂದನಗಳನ್ನು ಮನೆಯ ಯಜಮಾನರಿಗೆ ತಂದಿಡುವ ಅಂಶಗಳಾಗಿವೆ.
ಅಕ್ವೇರಿಯಂ ಜಾಡಿಯನ್ನು ಹೊರ ದಿವಾನಖಾನೆಯಲ್ಲಿ ಇರಿಸಬಹುದು. ಹೊಸದಾಗಿ ಮದುವೆಯಾದ ದಂಪತಿಗಳಿಗೆ ಕೂಡಾ ಈ ರೀತಿಯ ಅಕ್ವೇರಿಯಂ ಜೋಡಣೆ ಉತ್ತಮ. ಮದುವೆಯಾಗಬೇಕಾದ ದಾಂಪತ್ಯ ಆಕಾಂಕ್ಷಿಗಳಿಗೂ ಇದು ಒಳ್ಳೆಯದು. ಹೀಗಿರುವ ಅಕ್ವೇರಿಯಂನಲ್ಲಿ ಪೂರ್ತಿ ಕಡುಗಪ್ಪು ಬಣ್ಣದ ಮೀನುಗಳಿರದಂತೆ ನೋಡಿಕೊಳ್ಳಿ. ಬಂಗಾರದ ಬಣ್ಣ ನಸುನೀಲಿ, ನಸುಗೆಂಪು, ಬಿಳಿ-ಕಪ್ಪುಗಳು ಪಟ್ಟೆ ಪಟ್ಟೆ ಇರುವ ಮೀನುಗಳು ಆಲದೆಲೆಯಾಕಾರದ ವಜ್ರದ ಸ್ವರೂಪದಲ್ಲಿರುವ ಆಕಾರದ ಮೀನುಗಳು ಅತ್ಯುತ್ಸಾಹದಿಂದ ಪುಟಿಯುವಂತೆ ಕತ್ತು ಮೂತಿ ಕೊಂಕಿಸುತ್ತಾ ಓಡಾಡುವಂತಿರಲಿ.
ಸೂರ್ಯ ಬರುವ ಮುನ್ನ ಆಹಾರವನ್ನು ಹಾಕುವ ಪದ್ಧತಿ ತಪ್ಪಿರಲಿ. ಮುಂಜಾನ ಸೂರ್ಯ ಬಂದಾಗಲೇ ಆಹಾರದ ಗೋಲಿಗಳು ಅಕ್ವೇರಿಯಂ ಒಳಗೆ ಮೀನುಗಳಿಗೆ ನೀಡುವ ಅಭ್ಯಾಸ ಇರಲಿ. ಒಳಗಿನ ನೀರು ನಸು ನೀಲಿಯನ್ನು ಹಳದಿ ಛಾಯೆಯ ಬೆಳಕಲ್ಲಿ ಹೊಂದುವಂತೆ ಪ್ರತಿಫಲಿಸುವಂತಾಗಲಿ. ಹೊರಸೂಸುವಂತ ರೀತಿಯಲ್ಲಿ ಇರಲಿ. ಇದರಿಂದ ಮನೆಯೊಳಗಿನ ಸ್ನೇಹಪೂರ್ಣ ಪರಸ್ಪರರನ್ನು ಅರಿಯುವ ನಿಟ್ಟಿನ ವಿಚಾರದಲ್ಲಿ ಒಂದು ಆದ್ರìತೆ ನಿರ್ಮಾಣಗೊಳ್ಳಲು
ಸಹಾಯವಾಗುತ್ತದೆ.
ಇನ್ನು ಹಕ್ಕಿಗಳ ವಿಷಯಕ್ಕೆ ಬಂದಾಗ ಬಂಧನಕ್ಕೆ ತಳ್ಳಿಕೊಂಡ ಹಕ್ಕಿಗಳು ಮನೆಯೊಳಗಡೆ ಇರಲೇ ಬಾರದು. ಗುಬ್ಬಿಗಳ ವಿಷಯದಲ್ಲಿ ಬಂಧನವೆಂಬುದು ನಿರ್ಮಾಣವಾಗದಿದ್ದರೂ, ಹಾರಾಡಿಕೊಂಡಿರುವ ಗುಬ್ಬಿಗಳು ಕೂಡಾ ಮನೆಯಲ್ಲಿ ಗೂಡು ಕಟ್ಟುವುದು ಬೇಡ. ಏಕೆಂದರೆ, ಗುಬ್ಬಿಗಳು ತಮ್ಮ ಆಹಾರವಾದ ಕೀಟಗಳನ್ನು ಮನೆಯೊಳಗೆ ತಂದು ಕೊಂದು ತಿನ್ನುವ ಅದರ ಭೋಜನ ವಿಶೇಷ ಸಂಭವಿಸಕೂಡದು. ಗುಬ್ಬಿಗಳನ್ನು ಈ ವಿಷಯದಲ್ಲಿ ಮನುಷ್ಯ ಪ್ರಯತ್ನಗಳೊಡನೆ ಈ
ನೆಲೆಯಲ್ಲಿ ನಿಯಂತ್ರಿಸಲಾಗದು. ಈ ಕಾರಣದಿಂದಾಗಿ ಗುಬ್ಬಿಗಳು ಮನೆಯೊಳಗಡೆ ನಿಷಿದ್ದವೇ ಆಗಿದೆ. ಉಳಿದಂತೆ ಗಿಣಿ, ಲವ್ ಬರ್ಡ್ಸ್, ಪಾರಿವಾಳಗಳು ಸಹಾ ಮನೆಯೊಳಗೆ ತಮ್ಮ ವಸತಿಯನ್ನು ನಿರ್ಮಿಸಿಕೊಳ್ಳುವುದು ಬೇಡ. ಜೊತೆಗೆ ಪಂಜರವೊಂದನ್ನು ನಿರ್ಮಿಸಿ ರೆಕ್ಕೆಗಳನ್ನು ಸಂಯೋಜಿಸಿಕೊಂಡ ಇವುಗಳ ಅಸಹಾಯಕ ಸೆರೆವಾಸಬೇಡ.
ಮೊ: 8147824707
– ಅನಂತಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.