ಬ್ಯಾಂಕ್‌ ಖಾತೆ ಇರೋರು ಇವೆಲ್ಲ ತಿಳ್ಕಳಿ


Team Udayavani, Jun 19, 2017, 6:10 PM IST

bank.jpg

ಬ್ಯಾಂಕಿಗೆ ಹೋದರೆ ಆರ್‌ಜಿಟಿಎಸ್‌, ನೆಫಾr?
ಹೀಗೆ ಪ್ರಶ್ನೆ ಕೇಳುತ್ತಾರೆ. ಸಾಮಾನ್ಯವಾಗಿ ಚೆಕ್‌ ಹಾಕೋದು, ಚಲನ್‌ ಬರೆದು ಹಣ ತುಂಬೋರು ಹೆಚ್ಚೆಂದರೆ ಇಂಟರ್‌ನೆಟ್‌ ಬ್ಯಾಂಕಿಂಗ್‌ ಮಾಡಿಕೊಂಡಿರೋರಿಗೆ ಇದು ಹೊಸ ಪದಗಳು. ಪ್ರತಿ ದಿನ ಇಲ್ಲಿಂದ ಅಲ್ಲಿಗೆ ಅಲ್ಲಿಂದ ಇಲ್ಲಿಗೆ ಹಣ ಹಾಕುತ್ತಾ, ವ್ಯವಹಾರ ಮಾಡುವವರಿಗಾದರೆ ಇವೆಲ್ಲ ಪರಿಚಿತಪದಗಳು. ಆರ್‌ಟಿಜಿಎಸ್‌, ನೆಫೆrಲ್ಲಾ ಬ್ಯಾಂಕ್‌ಗಳು ಗ್ರಾಹಕರಿಗೆ ಕೊಟ್ಟ ಸೌಲಭ್ಯಗಳು. ಈ ಸೌಲಭ್ಯಗಳು ಗ್ರಾಹಕನಿಗೆ ಎಷ್ಟು ನೆರವಾಗಿವೆಯೆಂದರೆ, ನಾವು ದೇಶದ ಯಾವುದೇ ಬ್ಯಾಂಕಿನಲ್ಲಿರುವ ಖಾತೆದಾರರಿಗೆ ಬೇಕಾದರೂ ಹಣ ಕಳುಹಿಸಬಹುದು. ಅದಕ್ಕೆ ಅವಶ್ಯಕವಾಗಿ ತಿಳಿದಿರಬೇಕಾದದ್ದು ಆ ಖಾತೆದಾರನ ಹೆಸರು, ಆತನ ಖಾತೆ ಸಂಖ್ಯೆ, ಬ್ಯಾಂಕಿನ ಹೆಸರು ಮತ್ತು ಐಎಫ್ಎಸ್‌ ಕೋಡ್‌. ಇಷ್ಟಿದ್ದರೆ ದುಡ್ಡು ಲಂಕೆಯಿಂದ ಹಾರಿದ ಹನುಮಂತನಂತೆ ಹಾರುತ್ತದೆ. 

ಆರ್‌ಟಿಜಿಎಸ್‌ ಮತ್ತು ಎನ್‌ಇಎಫ್ಟಿ
ಒಂದು ಬ್ಯಾಂಕಿನಿಂದ ಯಾವುದೇ ಊರಿನ ಇನ್ನೊಂದು ಬ್ಯಾಂಕಿಗೆ, ಉದಾಹರಣೆಗೆ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದಿಂದ ಎಚ್‌ಡಿಎಫ್ಸಿ ಬ್ಯಾಂಕ್‌ ಶಾಖೆಗೆ ಹಣ ವರ್ಗಾಯಿಸಬೇಕಿದ್ದಲ್ಲಿ ಮೇಲಿನ ಸೌಲಭ್ಯಗಳು ಬಳಕೆಗೆ ಬರುತ್ತವೆ. ಬ್ಯಾಂಕಲ್ಲಿ ಖಾತೆ ಹೊಂದಿರುವ ಪ್ರತಿಯೊಬ್ಬರೂ ಇವು ಅಪರಿಚಿತ ಶಬ್ದ ಎನ್ನಲಾಗುವುದಿಲ್ಲ.  ಹಾಗಾದರೆ ಇದರ ಅರ್ಥವೇನು? ಈ ಸೌಲಭ್ಯ ಬಳಸಿಕೊಳ್ಳಲು ಏನು ಮಾಡಬೇಕು? ಇದಕ್ಕೆ ಶುಲ್ಕ ವಾಗುತ್ತದೆಯೇ? ಇವೆಲ್ಲ ನಿಮಗೆ ಗೊತ್ತಿದ್ದರೆ ಒಳ್ಳೆಯದು.

ಆರ್‌ಟಿಜಿಎಸ್‌ನ ಪೂರ್ಣ ನಾಮದೇಯ ರಿಯಲ್‌ ಟೈಮ್‌ ಗ್ರಾಸ್‌ ಸೆಟ್ಲಮೆಂಟ್‌ ಅಂತ. ಅಂದರೆ ಯಾವುದೇ ಸಮಯದ ವಿಳಂಬವಿಲ್ಲದೇ ಪೈಪುಗಳಲ್ಲಿ ನೀರು ಹರಿಯುವಂತೆ ನಿರಂತರವಾಗಿ ಒಂದು ಬ್ಯಾಂಕಿನಿಂದ ಇನ್ನೊಂದು ಬ್ಯಾಂಕಿಗೆ ರಿಸರ್ವ್‌ಬ್ಯಾಂಕ್‌ ಮೂಲಕ ಹಣ ಸಂದೇಶದ ರವಾನೆಯ ವ್ಯವಸ್ಥೆ ಇದು. ವಾರದ ದಿನಗಳಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4-30 ರವರೆಗೆ ಅವ್ಯಾಹತವಾಗಿ ಹಣದ ಸಂದೇಶ ರವಾನೆಯಾಗುತ್ತಲೇ ಇರುತ್ತದೆ. ಶನಿವಾರ ಬೆಳಗ್ಗೆ 9 ರಿಂದ ಮಧ್ಯಾಹ್ನ 2 ರವರೆಗೆ ಇದರ ಸದುಪಯೋಗ ಪಡೆಯಬಹುದು. ಈ ಸೌಲಭ್ಯವನ್ನು ಬ್ಯಾಂಕುಗಳು ತಮ್ಮ ತಮ್ಮ ನಡುವಿನ ವ್ಯವಹಾರದ ವಿಲೇವಾರಿಗೂ ಬಳಸಿಕೊಳ್ಳುತ್ತಿದ್ದರೂ ಪ್ರತಿಶತ 89ರಷ್ಟು ವಹಿವಾಟು ಗ್ರಾಹಕರಿಗೆ ಸಂಬಂಧಿಸಿದ್ದಾಗಿದೆ. ಆದರೆ ಈ ಸೌಲಭ್ಯ ಎರಡು ಲಕ್ಷ ರೂಪಾಯಿಗೂ ಮೀರಿದ ದೊಡ್ಡಮೊತ್ತದ ಹಣ ವರ್ಗಾವಣೆಗೆ ಮಾತ್ರ ಸೀಮಿತವಾಗಿರುವುದರಿಂದ ದೊಡ್ಡ, ದೊಡ್ಡ ವ್ಯವಹಾರಸ್ಥರಿಗೆ ಇದರಿಂದ ಬಹುಪಯೋಗ. 

ಎನ್‌ಇಎಫ್ಟಿ 
 ನ್ಯಾಷನಲ್‌ ಎಲೆಕ್ಟ್ರಾನಿಕ್‌ ಫ‌ಂಡ್ಸ್‌ ಟ್ರಾನ್ಸಫ‌ರ್‌ ಇದರ ಚಿಕ್ಕ ರೂಪ. ಇದರ ಉಪಯುಕ್ತತೆಯೆಂದರೆ ಒಂದು ರೂಪಾಯಿಂದ ಗರಿಷ್ಟ ಎಷ್ಟು ಹಣವನ್ನಾದರೂ ಈ ವ್ಯವಸ್ಥೆಯ ಮೂಲಕ ಕಳುಹಿಸಬಹುದಾಗಿದೆ. ಈ ವ್ಯವಸ್ಥೆಯ ಲೋಪವೆಂದರೆ ನೀವು ಹಣ ಕಳುಹಿಸಿದ ದಿನವೇ ಇನ್ನೊಂದು ಬ್ಯಾಂಕಿನ ಖಾತೆಗೆ ಹಣ ಜಮಾವಾಗುವ ಖಾತ್ರಿ ಇಲ್ಲ. ಗರಿಷ್ಟ 24 ಗಂಟೆಯಷ್ಟು ಸಮಯ ತೆಗೆದುಕೊಳ್ಳಬಹುದು. ತುರ್ತಾಗಿ ಹಣ ಪೂರೈಸಲು ಇದರಿಂದ ಅಸಾಧ್ಯ.  ಒಂದು ಬ್ಯಾಂಕಿನಿಂದ ಇನ್ನೊಂದು ಬ್ಯಾಂಕಿನ ಯಾವುದೇ ಶಾಖೆಗೆ ಹಣ ರವಾನೆಯು ಬ್ಯಾಚ್‌ಗಳಲ್ಲಿ ನಿರ್ದಿಷ್ಟ ಸಮಯದಲ್ಲಿ ಮಾತ್ರ ನಡೆಯುತ್ತದೆ. ಅಂದರೆ ವಾರದ ದಿನಗಳಲ್ಲಿ ಗಂಟೆಗೊಮ್ಮೆಯಂತೆ ದಿನಕ್ಕೆ ಹನ್ನೆರಡು ಬಾರಿ  ಬೆಳಗ್ಗೆ 8 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಹಾಗೂ ಶನಿವಾರ ಆರು ಬಾರಿ ಗಂಟೆಗೊಮ್ಮೆ, ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಣ ವರ್ಗಾವಣೆಯಾಗುತ್ತದೆ. ಹಾಗಿದ್ದೂ ಇದಕ್ಕೆ ತಗಲುವ ಖರ್ಚು ಮತ್ತು ಸಮಯದ ದೃಷ್ಟಿಯಲ್ಲಿ ಡಿಡಿ ಗಿಂತ ಇದು ತುಂಬಾ ಅನುಕೂಲಕರ. ಜುಲೈ2014ರ ಅಂಕಿಅಂಶದ ಪ್ರಕಾರ 71.67 ಮಿಲಿಯನ್ನಷ್ಟು ವ್ಯವಹಾರ ಇದರ ಮೂಲಕ ನಡೆದಿದೆ.

ಈ ವ್ಯವಸ್ಥೆಯಲ್ಲಿ ಒಂದು ಬ್ಯಾಂಕಿನಿಂದ ಬೇರೊಂದು ಬ್ಯಾಂಕಿಗೆ ಹಣ ಕಳುಹಿಸಲು ನಿಮ್ಮ ಬಳಿಯಲ್ಲಿ ಇರಬೇಕಾದ ಮಾಹಿತಿಗಳೆಂದರೆ; 

ನೀವು ಯಾರಿಗೆ ಹಣ ಕಳುಸಬೇಕೋ ಅವರ ಬ್ಯಾಂಕಿನ ಹೆಸರು, ಬ್ಯಾಂಕಿನ ಶಾಖೆ ಇರುವ ಊರಿನ ಹೆಸರು, ಆತನ ಖಾತೆ ಸಂಖ್ಯೆ( ಈಗ ಹೆಚ್ಚಿನ ಬ್ಯಾಂಕುಗಳು ಕೋರ್‌ ಬ್ಯಾಂಕಿಂಗ್‌ ವ್ಯವಸ್ಥೆಗೆ ಒಳಪಟ್ಟಿರುವುದರಿಂದ ಹಳೆ ಖಾತೆ ಸಂಖ್ಯೆಯ ಬದಲು ಹೊಸ ಖಾತೆ ಸಂಖ್ಯೆ ಕೇಳಿ ಪಡೆಯುತ್ತವೆ) ಐಎಫ್ಎಸ್‌ಸಿ ಸಂಖ್ಯೆ ಜೊತೆಗೆ ಚೆಕ್‌ ಸೌಲಭ್ಯ ಹೊಂದಿದ್ದರೆ ಒಳ್ಳೆಯದು. ಹಣ ಕಳುಹಿಸುವ ವ್ಯಕ್ತಿಗಳು  ಬ್ಯಾಂಕಿನಲ್ಲಿ ಖಾತೆ ಹೊಂದಿದ್ದರೆ ಉತ್ತಮ ಹಾಗೂ ಸುರಕ್ಷಿತ. 
ಈ ಸೌಲಭ್ಯ ಹೊರತುಪಡಿಸಿ ಒಂದು ಬ್ಯಾಂಕಿನಿಂದ ಅದೇ ಬ್ಯಾಂಕಿನ ಇನ್ನೊಂದು ಶಾಖೆಗೆ ಹಣ ವರ್ಗಾವಣೆ ಮಾಡಲು ಆರ್‌ಟಿಜಿಎಸ್‌ ಅಥವಾ ಎನ್‌ಇಎಫ್ಟಿ ಅವಶ್ಯಕತೆ ಇಲ್ಲ. ಕೋರ್‌ ಬ್ಯಾಂಕ್‌ ವ್ಯವಸ್ಥೆಯ ಮೂಲಕ ತಕ್ಷಣ ಹಣ ರವಾನಿಸಲೂಬಹುದು. 

ಐಎಫ್ಎಸ್‌ಸಿ 
ಇದಕ್ಕೂ ಮೊದಲು ನೀವು ಐಎಫ್ಎಸ್‌ಸಿ ಕೋಡ್‌ ಅಂದರೇನು ಅಂತ ತಿಳಿದು ಕೊಳ್ಳಬೇಕು.  ಭಾರತೀಯ ರಿಸರ್ವ್‌ ಬ್ಯಾಂಕಿನ ಆದೇಶದಂತೆ ಪ್ರತಿಯೊಂದು ಬ್ಯಾಂಕು ಸಹ ತನ್ನ ಶಾಖೆಗಳಿಗೆ ಹನ್ನೊಂದು ಸಂಖ್ಯೆಗಳುಳ್ಳ ಇಂಡಿಯನ್‌ ಫೈನಾನ್ಸಿಯಲ್‌ ಸಿಸ್ಟಂ ಕೋಡ್‌ (ಐಎಫ್ಎಸ್‌ಸಿ) ಒಂದನ್ನು ನಿಗದಿಪಡಿಸಬೇಕು.  ಪ್ರತಿಯೊಂದು ಬ್ಯಾಂಕುಗಳ ಪ್ರತಿ ಶಾಖೆಗೂ ಈ ರೀತಿ ಒಂದು ಗುರುತಿನ ಸಂಖ್ಯೆ ಇರುತ್ತದೆ. ಬೇರೆ ಬೇರೆ ಬ್ಯಾಂಕುಗಳಿಗೆ ಹಣ ಸಂದಾಯವಾಗುವಾಗ ಈ ಕೋಡ್‌ ಸಂಖ್ಯೆಯ ಮೂಲಕ ಸಂಬಂಧಿಸಿದ ಶಾಖೆಯನ್ನು ಗುರುತಿಸಿ ರಿಸರ್ವ್‌ ಬ್ಯಾಂಕಿನ ಇ-ಕ್ಲಿಯರಿಂಗ್‌ ಮೂಲಕ ಸಂಬಂಧಿಸಿದ ಗ್ರಾಹಕರ ಖಾತೆಗಳಿಗೆ ಹಣ ಜಮಾ ಆಗುತ್ತದೆ.

ನಂಬರ್‌ ತಪ್ಪಾಗಿದ್ದರೆ
ಆರ್‌ಟಿಜಿಎಸ್‌ ಅಥವಾ ಎನ್‌ಇಎಫ್ಟಿ ಮೂಲಕ ಕಳುಹಿಸಿದ ಹಣ ಯಾವುದೇ ಕಾರಣಗಳಿಂದ (ಉದಾಹರಣೆ ಖಾತೆ ಸಂಖ್ಯೆ ತಪ್ಪಿದ್ದಲ್ಲಿ, ಖಾತೆ ಮುಕ್ತಾಯವಾಗಿದ್ದಲ್ಲಿ) ವಾಪಸಾದಲ್ಲಿ ಅದು ಯಾರು ಹಣ ಕಳುಹಿಸುತ್ತಾರೋ  ಅವರ ಖಾತೆಗೆ ಮರುಪಾವತಿಯಾಗುತ್ತದೆ. ಒಂದೊಮ್ಮೆ ಈ ಬಗ್ಗೆ ದೂರುಗಳಿದ್ದಲ್ಲಿ ಸಂಬಂಧಿಸಿದ ಬ್ಯಾಂಕುಗಳನ್ನು ಸಂಪರ್ಕಿಸಬೇಕು. 

ನೂರಾರು ಕಿ.ಮೀ ದುಡ್ಡು ಓಡಾಡೋದು ಹೀಗೆ
ಇಲ್ಲಿ ದುಡ್ಡು ಹಾಕಿದರೆ ನೂರಾರು ಕಿ.ಮೀ ದಾಟುವುದು ಹೇಗೆ?  ನೀವು ಹಾಕಿದ ದುಡ್ಡು ನೇರವಾಗಿ ಆರ್‌ಬಿಐ ಗ್ರಿಡ್‌ಗೆ ಹೋಗುತ್ತದೆ. ಆರ್‌ಬಿಐನಲ್ಲಿ ಎಲ್ಲಾ ಬ್ಯಾಂಕ್‌ಗಳ ಅಕೌಂಟ್‌ ಇರುತ್ತದೆ.  ಆಯಾ ಬ್ಯಾಂಕಿನ ಐಡೆಂಟಿಟಿ ಕೋಡ್‌ ಅಂದರೆ ಐಎಫ್ಎಸ್‌ಸಿ ಕೋಡ್‌ ಪ್ರಕಾರ ಬ್ಯಾಂಕ್‌ನ ಕರೆಂಟ್‌ ಅಕೌಂಟ್‌ಗೆ ಜಮೆಯಾಗುತ್ತದೆ.  ಅಲ್ಲಿಂದ ಬ್ಯಾಂಕ್‌ಗಳು ತಮ್ಮ ಗ್ರಾಹಕರ ಖಾತೆಗೆ ಹಾಕುತ್ತವೆ. ಇದು ನಿರಂತರವಾಗಿ ನಡೆಯುವ ಕ್ರಿಯೆ.  ಇಲ್ಲಿ ಗೊತ್ತಿರಬೇಕಾದ ಅಂಶವೆಂದರೆ ನೀವು ಹಾಕುವ ಹಣ ಮಾತ್ರ ಫಿಸಿಕಲ್‌. ಮತ್ಯಾವ ಹಣವು ಕೂಡ ಫಿಸಿಕಲ್‌ ಆಗಿ ವರ್ಗಾವಣೆ ಆಗುವುದಿಲ್ಲ. ಎಲ್ಲವೂ ಎಲೆಕ್ಟ್ರಾನಿಕ್‌ ಕ್ಲಿಯರಿಂಗ್‌.  ಅದೇ ಬ್ಯಾಂಕಿನ ಇನ್ನೊಂದು ಬ್ರಾಂಚಿಗೆ ಹಣ ಹಾಕಬೇಕಾದರೆ ಆರ್‌ಬಿಐ ಗ್ರಿಡ್‌ನೆರವು ಬೇಕಿಲ್ಲ. ಕೋರ್‌ ಬ್ಯಾಂಕಿಂಗ್‌ ಆದ್ದರಿಂದ ಅಲ್ಲಿಂದಲೇ ನೇರ ಹಣ ತುಂಬಬಹುದು. 

– ಆರ್‌ಕೆ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

1-crick

T20; ಸ್ಯಾಮ್ಸನ್‌ ಸತತ 2ನೇ ಶತಕ:ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಅಮೋಘ ಜಯ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

1-pro

Pro Kabaddi: ಜೈಪುರ್‌ ಮೇಲೆ ಪಾಟ್ನಾ ಸವಾರಿ

ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ ಪ್ರಕರಣ: ಪೊಲೀಸ್‌ ಕ್ರಮಕ್ಕೆ ಕೇರಳ ಸಿಎಂ ಸೂಚನೆ

ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ ಪ್ರಕರಣ: ಪೊಲೀಸ್‌ ಕ್ರಮಕ್ಕೆ ಕೇರಳ ಸಿಎಂ ಸೂಚನೆ

Mangaluru: ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್‌

Mangaluru: ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

1-crick

T20; ಸ್ಯಾಮ್ಸನ್‌ ಸತತ 2ನೇ ಶತಕ:ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಅಮೋಘ ಜಯ

Manipal: ಸವಾಲು ಮೆಟ್ಟಿ ನಿಂತಾಗ ಸುಸ್ಥಿರ ಜೀವನ: ಡಾ| ಜಗದೀಶ್‌

Manipal: ಸವಾಲು ಮೆಟ್ಟಿ ನಿಂತಾಗ ಸುಸ್ಥಿರ ಜೀವನ: ಡಾ| ಜಗದೀಶ್‌

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.