ಮನೆಯ ಅಂದಕೆ ಕುಸುರಿ ಕೆಲಸ


Team Udayavani, May 14, 2018, 2:38 PM IST

anda.jpg

ಬದುಕಲ್ಲಿ ಮನೆಕಟ್ಟೋದು ಒಂದೇ ಸಲ. ಹಾಗಾಗಿ, ಅದನ್ನು ಬಹಳ ಚೆನ್ನಾಗಿ, ಅಂದವಾಗಿ ಕಟ್ಟಿಬಿಡೋಣ ಅಂತಲೇ ಎಲ್ಲರೂ ಸೂರು ಕಟ್ಟುವ ಕಾಯಕಕ್ಕೆ ಕೈ ಹಾಕುವುದು. ನೋಡೋಕೆ ಬಹಳ ಚೆನ್ನಾಗಿರಬೇಕು ಅನ್ನೋ ಮಂತ್ರ ತಲೆಯಲ್ಲಿ ಇರುವುದರಿಂದ ಕೂಡಿಸಿಟ್ಟ ಬಜೆಟ್‌ ಬಹುಬೇಗನೆ ಖಾಲಿಯಾಗಿಬಿಡುತ್ತದೆ. ಮುಂದೇನು ಅನ್ನೋ ಪರಿಸ್ಥಿತಿ ಎದುರಾಗುತ್ತದೆ. ಫಿನಿಶಿಂಗ್‌ ವೇಳೆ ಕೈಯಲ್ಲಿ ದುಡ್ಡು ಇರದ ಪರಿಸ್ಥಿತಿ ಎದುರಿಸುವ ಮಂದಿಗೇನು ಕಡಿಮೆ ಇಲ್ಲ.  ಮನೆ ಚೆನ್ನಾಗಿ ಕಾಣಬೇಕು ಅನ್ನೋ ಮೂಲ ಉದ್ದೇಶ ಪೂರೈಸಲು ಕ್ರಾಫ್ಟ್ ವರ್ಕ್‌, ಅಂದರೆ ಕುಸುರಿ ಕೆಲಸ ಮುಖ್ಯಪಾತ್ರವಹಿಸುತ್ತದೆ. ಎಲ್ಲಿ ಬೇಕೋ ಅಲ್ಲಷ್ಟೇ ಮಾಡಿದರೆ, ಕಡಿಮೆ ಖರ್ಚಿನಲ್ಲಿ ಮನೆಗೆ ವಿಶೇಷ ಮೆರುಗು ಬರುತ್ತದೆ. 

ಕುಸುರಿ ಕೆಲಸ ಎಲ್ಲೆಲ್ಲಿ ಬೇಕು?
ಮನೆಯ ಮುಂಭಾಗದ ಕಾಂಪೌಂಡ್‌ ಗೋಡೆಯಿಂದ ಹಿಡಿದು, ಬಾಲ್ಕನಿಯ ರೇಲಿಂಗ್‌ವರೆಗೆ ವಿವಿಧ ಸ್ಥಳಗಳಲ್ಲಿ ವಿವಿಧ ರೀತಿಯ ಕುಸುರಿ ಕೆಲಸವನ್ನು ಮಾಡಬಹುದು. ಸಾಮಾನ್ಯ ಕೆಲಸಕ್ಕೆ ಹೋಲಿಸಿದರೆ ಕುಸುರಿ ಕೆಲಸ ದುಬಾರಿಯೇ ಆಗಿರುತ್ತದೆ ಅನ್ನೋದು ತಿಳಿದಿರಲಿ.  ಆದರೆ ಇದು ಕೆಲ ಜಾಗಗಳಲ್ಲಿ ಅನಿವಾರ್ಯವಾಗಿದ್ದು, ಮಾಡಲೇ ಬೇಕಾಗುತ್ತದೆ. ಒಂದು ಮನೆಯಿಂದ ಮತ್ತೂಂದು ಮನೆಯನ್ನು ಪ್ರತ್ಯೇಕವಾಗಿ ಗುರುತಿಸಲು ಕುಸುರಿ ಕೆಲಸ ಸಹಕಾರಿ. ಹೀಗಾಗಲು ಮುಖ್ಯ ಕಾರಣ- ನಮ್ಮ ಕಣ್ಣು ಯಾವುದು ವಿಶೇಷವಾಗಿ ಕಾಣಿಸುತ್ತದೋ ಅದನ್ನೇ ಮೊದಲು ಗಮನಿಸುವುದು.  ಗೇಟಿಗೆ ಚಿಲಕವನ್ನು ಸ್ವಲ್ಪ ಕಲಾತ್ಮಕವಾಗಿ ಮಾಡಿದರೆ, ಜನ ಚಿಲಕ ಎಲ್ಲಿ? ಎಂದು ತಡಕಾಡುವ ಅಗತ್ಯ ಇರುವುದಿಲ್ಲ. ಅದೇ ರೀತಿಯಲ್ಲಿ ಕೈಪಿಡಿಗಳೂ ಒಂದಷ್ಟು ಕುಸುರಿ ಕೆಲಸದವಾಗಿದ್ದರೆ, ಸುಲಭದಲ್ಲಿ ಕಾಣುತ್ತವೆ.  ಕೆಲವೊಮ್ಮೆ ಮೊದಲ ಮಹಡಿಗೆ ಹೋಗುವ ಬಾಗಿಲು ಹಾಗೂ ಮೆಟ್ಟಿಲು, ಕೋಣೆಯ ಬಾಗಿಲು ಅಕ್ಕಪಕ್ಕದಲ್ಲೇ ಇದ್ದರೆ, ಯಾವುದು ಕೆಳಮನೆಯ ಮುಖ್ಯ ಬಾಗಿಲು ಎಂದು ಸುಲಭದಲ್ಲಿ ತಿಳಿಯದು.  ಅದಕ್ಕೊಂದಷ್ಟು ಕುಸುರಿ ಕೆಲಸ ಮಾಡಿಸಿದರೆ, ನೋಡಿದ ಕೂಡಲೆ ಅದು ಮುಖ್ಯದ್ವಾರ ಎಂದು ತಿಳಿದು ಹೋಗುತ್ತದೆ. 

ಕುಸುರಿ ಕೆಲಸವನ್ನು ಮನೆಗೊಂದು ಐಡೆಂಟಿಟಿ ನೀಡಲೂ ಕೂಡ ಬಳಸಬಹುದು. ನಿಮಗೆ ಹಳೆಯ ಕಾಲದ, ಹಳ್ಳಿ ಮನೆಗಳ ವಿನ್ಯಾಸ ಇಷ್ಟವಾಗಿದ್ದರೆ, ಅವುಗಳ ಮರದ ಮುಂಬಾಗಿಲುಗಳಲ್ಲಿ ಇರುವಂತೆ ನಿಲುವು ಪಟ್ಟಿಗೆ ಅಡ್ಡಪಟ್ಟಿ ಕಟ್ಟಿ, ಅದಕ್ಕೆ ಒಂದಷ್ಟು ಹಿತ್ತಾಳೆಯನ್ನು ಬಳಸಿ ಕಲಾತ್ಮಕವಾಗಿ ಸಿಂಗರಿಸಿದರೆ, ಮನೆಗೆ ಬಂದವರಿಗೆ ಖುಷಿಯಾಗುತ್ತದೆ. 

ಮೆಟ್ಟಿಲು ರೇಲಿಂಗ್‌ ಕುಸುರಿ ಕೆಲಸ
ಮೆಟ್ಟಿಲು ಶುರುವಾಗುವ ಮೊದಲ ಮೆಟ್ಟಿಲ ಬಳಿಯೇ ಅದರ ಶುರುವಾತನ್ನು ಸುಲಭವಾಗಿ ಗುರುತಿಹಿಡಿಯುವಂತೆ ಮಾಡಬೇಕು. ಜೊತೆಗೆ ಕೈಗೆ ಆಧಾರವಾಗಿ ಹಿಡಿದುಕೊಳ್ಳಲೂ ಕೂಡ ಒಂದು ನಿಲುವು ಮರವನ್ನು ನೀಡಲಾಗುತ್ತದೆ. ಹೊಸಬರಿಗೆ ಇದು ಅನುಕೂಲಕರವಾಗಿರುವುದರ ಜೊತೆಗೆ ಮನೆ ಮಂದಿಯೂ ಅವಸರದಲ್ಲಿ ಇರುವಾಗ, ಕೈಗೆ ಸುಲಭದಲ್ಲಿ ಸಿಗುವ ಹಾಗೆ ಮಾಡಬೇಕು. ಹೀಗೆ ಮಾಡಿದರೆ ಅದರ ಮೇಲಿರುವ ಕುಸುರಿ ಕೆಲಸ ಮೊದಲು ಕಣ್ಣು ಸೆಳೆದು ನಂತರ ತಂತಾನೇ ಕೈ ಅತ್ತ ಹೋಗುವಂತೆ ಮಾಡುತ್ತದೆ. ಅದೇ ರೀತಿಯಲ್ಲಿ ಮೊದಲ ಮೆಟ್ಟಿಲು ಸ್ವಲ್ಪ ಅಗಲವಾಗಿಯೋ ಇಲ್ಲವೇ ಒಂದಷ್ಟು ಕಲಾತ್ಮಕವಾದ ಕಟಿಂಗ್‌ ಹೊಂದಿದ್ದರೆ, ನೆಲಮಟ್ಟ ಹಾಗೂ ಮೊದಲ ಮೆಟ್ಟಿಲು ಎಂದು ಸುಲಭಲ್ಲಿ ಗೋಚರವಾಗಿ ಕಾಲಿಡಲು ಅನುವು ಮಾಡಿಕೊಡುತ್ತದೆ.

ಕಮಾನು ಕುಸುರಿ
ಮನೆ ಒಂದೇ ಆದರೂ ರೂಮು, ಹಾಲು, ಅಡುಗೆ ಮನೆ ಹೀಗೆ ಪ್ರತಿಯೊಂದಕ್ಕೂ ತನ್ನದೇ ಆದ ಖಾಸಗೀತನವಿದೆ. ಕೆಲವರನ್ನು ಮನೆಯ ಹೊರಗಿನಿಂದಲೇ ಸಾಗಹಾಕುವುದು ಇದ್ದರೂ, ಮಿಕ್ಕ ಕೆಲವರನ್ನು ಡೈನಿಂಗ್‌ ರೂಂವರೆಗೂ ಆಹ್ವಾನಿಸುವುದು ಇದ್ದದ್ದೇ. ಆದರೆ ಕೆಲವರು ಕರೆಸಿಕೊಂಡು ಮನೆ ಪ್ರವೇಶಿಸುವುದಿರಲಿ, ನೇರ ಒಳನುಗ್ಗುವುದಕ್ಕೆ ಪ್ರಯತ್ನಿಸುವುದೂ ಉಂಟು.

 ಇಂಥವರನ್ನು ತಡೆಯಲು ಮನೆಯ ಮುಂಬಾಗಿಲಿಗೆ ಒಂದು ಕಲಾತ್ಮಕವಾದ ಗ್ರಿಲ್‌ ಗೇಟ್‌ ಬಳಸಬಹುದು. ಇದು ಬೇಡದವರನ್ನು ಹೊರಗೇ ತಡೆಯುವುದರ ಜೊತೆಗೆ ಸುರಕ್ಷತೆಯ ದೃಷ್ಟಿಯಿಂದಲೂ ಒಳ್ಳೆಯದು.
ಇನ್ನು ಮನೆಯ ಲಿವಿಂಗ್‌ ರೂಮಿಗೆ ಬಂದವರು ಒಂದೇ ಹಾಲಿನ ಭಾಗದಂತಿರುವ ಊಟದ ಕೋಣೆಗೂ ಬರುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದ, ಒಂದಷ್ಟು ವಿಭಜನೆಯನ್ನು ಕಲಾತ್ಮಕವಾಗಿ ಮಾಡಲು ದೊಡ್ಡದಾದ ಕಮಾನು ಮಾಡಿದರೆ, ಎಲ್ಲರಿಗೂ ಯಾವುದು ಲಿವಿಂಗ್‌, ಯಾವುದು ಡೈನಿಂಗ್‌ ಎನ್ನುವುದು ತಿಳಿದು ಬಂದು ನಮ್ಮ ಖಾಸಗಿತನಕ್ಕೆ ಧಕ್ಕೆ ಬರುವುದಿಲ್ಲ. ಲಿವಿಂಗ್‌, ಡೈನಿಂಗ್‌ ವಿಭಜಕವಾಗಿ ಬಳಸುವ ಕಮಾನು ಸುಮಾರು ಏಳು ಅಡಿಗಳ ಎತ್ತರದಿಂದ ಶುರುವಾದರೆ ಒಳಿತು.  ಏಕೆಂದರೆ, ಓಡಾಡುವಾಗ ತಲೆಗೆ ತಗುಲುವುದಿಲ್ಲ.  ಇದರ ಕೆಳಗಿನ ಮಟ್ಟದಲ್ಲೂ ಒಂದಷ್ಟು ವಿಭಜಕದ ರೀತಿಯಲ್ಲಿ, ಓಡಾಡಲು ತೊಂದರೆ ಆಗದಂತೆ ಇರಬೇಕೆಂದಿದ್ದರೆ ಗೋಡೆಗೆ  ಅರ್ಧ ಕಂಬಗಳನ್ನು ಅಂದರೆ ಅರ್ಧ ಮಾತ್ರ ಹೊರಗಿದ್ದು, ಇನ್ನರ್ಧ ಗೋಡೆಯಲ್ಲಿ ಹುದುಗಿರುವಂತೆ ಕಲಾತ್ಮಕವಾಗಿ ಬಳಸಬಹುದು.

ಮನೆಯ ಮೇಲುಭಾಗ, ಅದರಲ್ಲೂ ಮೊದಲ ಮಹಡಿ ಇದ್ದರೆ ಎಲಿವೇಷನ್‌ ಮೈದುಂಬಿಕೊಂಡಿರುತ್ತದೆ. ಇದನ್ನು ಸಿಂಗರಿಸಿ ಮನೆಯ ಅಂದ ಹೆಚ್ಚಿಸುವುದು ಸುಲಭವಾದರೂ ನೆಲ ಮಹಡಿ ಮನೆಗಳನ್ನು ಕೂಡ ಹೆಚ್ಚು ಎತ್ತರದ್ದು ಎಂದು ಬಿಂಬಿಸಲು ಕೆಲ ಕುಸುರಿ ಕೆಲಸವನ್ನು ಮಾಡಬೇಕಾಗುತ್ತದೆ. ಕೆಲವೊಮ್ಮೆ ಪೆರ್ಗೊಲ, ಆರ್ಚ್‌ಗಳನ್ನು  ಉಪಯೋಗಿಸಿದರೆ,  ಮಿಕ್ಕ ಸಮಯದಲ್ಲಿ ಟೈಲ್ಸ್‌ ಇಲ್ಲವೇ ಇತರೆ ಕ್ಲಾಡಿಂಗ್‌ ವಸ್ತುಗಳನ್ನು ಕಲಾತ್ಮಕವಾಗಿ ಉಪಯೋಗಿಸಿಯೂ ಆ ಒಂದು ಸೌಂದರ್ಯವನ್ನು ಪಡೆಯಬಹುದು. ನಮ್ಮ ನಾಗರೀಕತೆಯಷ್ಟೇ ಪುರಾತನವಾದ ಕುಸುರಿ ಕೆಲಸಕ್ಕೆ ಮುಖ್ಯ ಪ್ರೇರಣೆ ಪ್ರಕೃತಿ ಎಂಬುದರಲ್ಲಿ ಎರಡು ಮಾತಿಲ್ಲ. ಅದರ ಅಧ್ಯಯನ ಮಾಡಿದರೆ ಮನೆ ಸಿಂಗಾರಕ್ಕೆ ಮತ್ತಷ್ಟು ಹೊಸ ಆಲೋಚನೆಗಳು ಬರಬಹುದು. 

ಹೆಚ್ಚಿನ ಮಾತಿಗೆ ಫೋನ್‌ 98441 32826

– ಆರ್ಕಿಟೆಕ್ಟ್ ಕೆ ಜಯರಾಮ್‌

ಟಾಪ್ ನ್ಯೂಸ್

Mangaluru: ಸ್ಪ್ಯಾಮ್ ಕರೆ ಪತ್ತೆಗೆ ಎಐ ತಂತ್ರಜ್ಞಾನ ಬಳಕೆ; ಏರ್‌ಟೆಲ್ ನಿಂದ ಹೊಸ ವ್ಯವಸ್ಥೆ

Mangaluru: Spam Call ಪತ್ತೆಗೆ ಎಐ ತಂತ್ರಜ್ಞಾನ ಬಳಕೆ… ಏರ್‌ಟೆಲ್ ನಿಂದ ಹೊಸ ವ್ಯವಸ್ಥೆ

BBK11: ಮಂಜುಗೆ ʼಥೂ..ʼ ಎಂದು ಉಗಿದ ಮೋಕ್ಷಿತಾ; ದೊಡ್ಮನೆಯಲ್ಲಿ ಜೋರಾಯಿತು ಯೋಗ್ಯತೆ ಮಾತು

BBK11: ಮಂಜುಗೆ ʼಥೂ..ʼ ಎಂದು ಉಗಿದ ಮೋಕ್ಷಿತಾ; ದೊಡ್ಮನೆಯಲ್ಲಿ ಜೋರಾಯಿತು ಯೋಗ್ಯತೆ ಮಾತು

Tragedy: ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 5ವೈದ್ಯರು ಸ್ಥಳದಲ್ಲೇ ಮೃತ್ಯು

Tragedy: ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 5ವೈದ್ಯರು ಸ್ಥಳದಲ್ಲೇ ಮೃತ್ಯು

Road Mishap: ಭೀಕರ ಕಾರು ಅಪಘಾತ; ಖ್ಯಾತ ನಿರ್ದೇಶಕನ ಪುತ್ರ ಸೇರಿ ಇಬ್ಬರು ಮೃತ್ಯು

Road Mishap: ಭೀಕರ ಕಾರು ಅಪಘಾತ; ಖ್ಯಾತ ನಿರ್ದೇಶಕನ ಪುತ್ರ ಸೇರಿ ಇಬ್ಬರು ಮೃತ್ಯು

1-ddssas

Jammu; ವೈಷ್ಣೋದೇವಿ ರೋಪ್‌ವೇ ವಿವಾದ: ಪ್ರತಿಭಟನೆಗಿಳಿದವರು ವಶಕ್ಕೆ, ಎಫ್ಐಆರ್

Naxal BIG

Maoist; 15 ಲಕ್ಷ ರೂ.ಇನಾಮು ಹೊಂದಿದ್ದ ಮಾವೋವಾದಿ ಕಮಾಂಡರ್ ಆಂತರಿಕ ಕಲಹದಲ್ಲಿ ಹ*ತ್ಯೆ

Suspended: ಕರ್ತವ್ಯಲೋಪ… ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಅಮಾನತು

Suspended: ಕರ್ತವ್ಯಲೋಪ… ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಅಮಾನತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

11-uv-fusion

Simple Life: ಬದುಕು ನಿರಾಡಂಬರವಾಗಿರಲಿ

Mangaluru: ಸ್ಪ್ಯಾಮ್ ಕರೆ ಪತ್ತೆಗೆ ಎಐ ತಂತ್ರಜ್ಞಾನ ಬಳಕೆ; ಏರ್‌ಟೆಲ್ ನಿಂದ ಹೊಸ ವ್ಯವಸ್ಥೆ

Mangaluru: Spam Call ಪತ್ತೆಗೆ ಎಐ ತಂತ್ರಜ್ಞಾನ ಬಳಕೆ… ಏರ್‌ಟೆಲ್ ನಿಂದ ಹೊಸ ವ್ಯವಸ್ಥೆ

BBK11: ಮಂಜುಗೆ ʼಥೂ..ʼ ಎಂದು ಉಗಿದ ಮೋಕ್ಷಿತಾ; ದೊಡ್ಮನೆಯಲ್ಲಿ ಜೋರಾಯಿತು ಯೋಗ್ಯತೆ ಮಾತು

BBK11: ಮಂಜುಗೆ ʼಥೂ..ʼ ಎಂದು ಉಗಿದ ಮೋಕ್ಷಿತಾ; ದೊಡ್ಮನೆಯಲ್ಲಿ ಜೋರಾಯಿತು ಯೋಗ್ಯತೆ ಮಾತು

Tragedy: ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 5ವೈದ್ಯರು ಸ್ಥಳದಲ್ಲೇ ಮೃತ್ಯು

Tragedy: ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 5ವೈದ್ಯರು ಸ್ಥಳದಲ್ಲೇ ಮೃತ್ಯು

11(1

Udupi: ಇಲ್ಲಿ ಹೊಂಡಗಳೇ ಸ್ಪೀಡ್‌ ಬ್ರೇಕರ್‌ಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.