ಸಣ್ಣಪ್ಪನ ದೊಡ್ಡ ಆದಾಯ


Team Udayavani, Jan 29, 2018, 11:42 AM IST

29-18.jpg

ಓದಿದ್ದು ಬಿ.ಎ.ಬಿ.ಇಡಿ.  ಪ್ರೌಢಶಾಲೆಯಲ್ಲಿ ಸಹಶಿಕ್ಷಕರಾಗಿ ಸೇರಿ ಸತತ 5 ವರ್ಷ ಕೆಲಸ ಮಾಡಿದರು.  ಆ ನಂತರ ಕೃಷಿಗೆ ಇಳಿದು ಈಗ ಕೈತುಂಬ ಲಾಭ ಮಾಡುತ್ತಿದ್ದಾರೆ. 

ಸರ್ಕಾರಿ ಕೆಲಸ ದೇವರ ಕೆಲಸ ಅಂತಾರೆ. ಆದರೆ ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ ಮಂಗಳೂರು ಗ್ರಾಮದ ಪ್ರಗತಿಪರ ರೈತ ಮಲ್ಲಪ್ಪ ರಾಮಪ್ಪ ಸಣ್ಣಪ್ಪನ್ನವರ, ಈ ದೇವರ ಕೆಲಸವನ್ನೇ ಬಿಟ್ಟು ಕೃಷಿ ಕಾಯಕದಲ್ಲಿ ನಿರತರಾಗಿದ್ದಾರೆ. 

ಶಿವಯೋಗಮಂದಿರದ ಹತ್ತಿರ ಮಲಪ್ರಭಾ ನದಿಯ ದಂಡೆಯ ಮೇಲೆ ಇವರದು 8 ಎಕರೆ ಜಮೀನಿದೆ. ಇದರಲ್ಲಿ  ಸಾವಯವ ಪದ್ಧತಿ ಮೂಲಕ ಗೋವಿನ ಜೋಳ, ಈರುಳ್ಳಿ, ಸಜ್ಜೆ, ಕಡಲೆ, ಶೇಂಗಾ, ತೊಗರಿ, ಮೆಣಸಿನಕಾಯಿ, ಕಬ್ಬು, ಗೋದಿ, ಅಲಸಂದಿ ಬೆಳೆಯುತ್ತಾ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.  

 ಇವರ ಮೂಲ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಯರಿಗೋನಾಳ ಗ್ರಾಮ.  ಓದಿದ್ದು ಬಿ.ಎ.ಬಿ.ಇಡಿ.  1988 ರಲ್ಲಿ ಬೆಂಗಳೂರಿನ ಶೇಷಾದ್ರಿಪುರಂ ಅನುದಾನಿತ ಪ್ರೌಢಶಾಲೆಯಲ್ಲಿ ಕನ್ನಡ ವಿಷಯ ಬೋಧಿಸಲು ಸಹಶಿಕ್ಷಕರಾಗಿ ಸೇರಿ ಸತತ 5 ವರ್ಷ ಕೆಲಸ ಮಾಡಿದರು. ನಂತರ ತಂದೆ ಮತ್ತು ತಾಯಿ ನಿಧನದ ನಂತರ ತಮಗೆ ಇದ್ದ 8 ಎಕರೆ ನೀರಾವರಿ ಭೂಮಿಯ ಕೃಷಿ ಮಾಡಲು ಬಂದರು.   ಇದು ತಂದೆಯ ಆಸೆಯೂ ಆಗಿತ್ತು. 

   ಎಲ್ಲ ರೀತಿಯ ಬೆಳೆ ಬೆಳೆಯುವುದರಿಂದ ಭೂಮಿ ಫ‌ಲವತ್ತಾಗುತ್ತದೆ. ಒಂದು ಬೆಳೆ ನಷ್ಟವಾದರೆ ಇನ್ನೊಂದು ಬೆಳೆಯಲ್ಲಿ ಲಾಭವಾಗುತ್ತದೆ. ವಿಷಮುಕ್ತ ಆಹಾರ ಬೆಳೆದಂತಾಗುತ್ತದೆ. ಉತ್ಪಾದನೆ ಹೆಚ್ಚಾಗುತ್ತದೆ. ರೋಗಗಳು ಬರುವುದಿಲ್ಲ. ಮಳೆ ಕಡಿಮೆಯಾದರೂ ಬೆಳೆ ಬರುತ್ತದೆ. ಬೆಲೆ ಹೆಚ್ಚು ಬರುತ್ತದೆ, ಸಾವಯವ ಕೃಷಿಯಲ್ಲಿ ಖರ್ಚು ಕಡಿಮೆ, ಲಾಭ ಹೆಚ್ಚು ಬರುತ್ತದೆ.  ಹೀಗೆ ಸಾವಯವ ಕೃಷಿ ಅಳವಡಿಸಿಕೊಳ್ಳುವುದರಿಂದ ಅನೇಕ ಪ್ರಯೋಜನಗಳಿವೆ ಎಂದೆಲ್ಲ ಕಳೆದು, ಲಾಭ ನಷ್ಟಗಳನ್ನು   ಲೆಕ್ಕ ಹಾಕಿಯೇ ಕೃಷಿಯನ್ನು  ಶುರುಮಾಡಿದ್ದು ಅಂತಾರೆ ರಾಮಪ್ಪ. 

     ಎರೆಹುಳು ಗೊಬ್ಬರ, ತಿಪ್ಪೆ ಗೊಬ್ಬರ, ಕಾಂಪೋಸ್ಟ್‌ ಗೊಬ್ಬರ, ಹಸಿರು ಎಲೆ ಗೊಬ್ಬರ, ಬಯೋ ಡೈಜಿಸ್ಟ್‌, ಕುರಿ ಗೊಬ್ಬರ ಬಳಸಿ ಸಾವಯವ ಕೃಷಿ ಮಾಡುವುದರಿಂದ ಉತ್ತಮ ಇಳುವರಿ ಬಂದಿದೆ.  ಗೊಬ್ಬರ ಕಡಿಮೆ ಬಿದ್ದಾಗ ಕೃಷಿ ಇಲಾಖೆಯಿಂದ ಕಾಂಪೋಸ್ಟ್‌, ಜಿಪ್ಸಂ, ಜಿಂಕ್‌,ಬೋರಾನ್‌ ತಂದು ಹಾಕುತ್ತೇನೆ. ಜಿಂಕ್‌ ಬೋರಾನ್‌ ಹಾಕುವುದರಿಂದ ಭೂಮಿ ಅರಳಿ ಫ‌ಲವತ್ತತೆ ಆಗುತ್ತದೆ ಎಂಬುದು ಅವರ ಅನುಭವದ ಮಾತು. 

     ಕಳೆದ 10 ವರ್ಷಗಳಿಂದ ಸಾವಯವ ಕೃಷಿ ಪದ್ಧತಿ ಬೇಸಾಯದಲ್ಲಿ ತೊಡಗಿರುವ ಇವರು ಹೀಗೆ ಪ್ರಾರಂಭದಲ್ಲಿ ಕೇವಲ 8 ಎಕರೆ ಜಮೀನು ಇತ್ತು. ಈಗ 25 ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾರೆ. ಸುಮಾರು 8 ವರೆ ಎಕರೆಯಲ್ಲಿ ಕಬ್ಬು ನಾಟಿ ಮಾಡಿದ್ದಾರೆ. ಉಳಿದಂತೆ ಕಡಲೆ, ಗೋದಿ, ಜೋಳ, ತೊಗರಿ, ಅಲಸಂದಿ, ಶೇಂಗಾ ಸೇರಿದಂತೆ ಅನೇಕ ಬೆಳೆಗಳನ್ನು ಬೆಳೆಯುತ್ತಾರೆ. ಪ್ರತಿ ವರ್ಷ ಸರಾಸರಿ 350 ರಿಂದ 400 ಕ್ವಿಂಟಾಲ್‌ ಗೋವಿನಜೋಳ ಇಳುವರಿ ದೊರೆಯುತ್ತಿದೆ. ಇದರಿಂದ ಪ್ರತಿ ವರ್ಷ ಸರಾಸರಿ 8 ರಿಂದ 10 ಲಕ್ಷ ಆದಾಯ ಬರುತ್ತದೆ. 1 ಎಕರೆ ಭೂಮಿಯಲ್ಲಿ 65 ಟನ್‌ ಕಬ್ಬು ಬೆಳೆ ಬೆಳೆಯುತ್ತಾರೆ. ಇವರ ತೋಟದಲ್ಲಿ 180 ಕ್ಕೂ ಹೆಚ್ಚು ಅರಸೀಕೆರೆ ಜವಾರಿ ತೆಂಗಿನ ಗಿಡಗಳಿವೆ. ವರ್ಷವಿಡಿ  ಇವರ ತೋಟದಲ್ಲಿ 10 ಜನ ಕೂಲಿಕಾರ್ಮಿಕರು ಕೆಲಸ ಮಾಡುತ್ತಾರೆ. ಒಂದು ವರ್ಷದಲ್ಲಿ ಕನಿಷ್ಠ 35 ರಿಂದ 40 ಟ್ರ್ಯಾಕ್ಟರ್‌ ಗೊಬ್ಬರ ಉತ್ಪಾದನೆಯಾಗುತ್ತಿರುವುದರಿಂದ, ಗೊಬ್ಬರದ ಖರ್ಚು ಉಳಿತಾಯವಾಗುತ್ತಿದೆ. ವೈಜಾnನಿಕ ರೀತಿಯಲ್ಲಿ ಸತತ ಪರಿಶ್ರಮದಿಂದ ಕೃಷಿ ಮಾಡುವುದರಿಂದ ನಷ್ಟ ಆಗುವುದಿಲ್ಲ ಎನ್ನುತ್ತಾರೆ ರಾಮಪ್ಪ ಸಣ್ಣಪ್ಪ. 

ಎಚ್‌.ಆರ್‌.ಕಡಿವಾಲ, ಬಾದಾಮಿ

ಟಾಪ್ ನ್ಯೂಸ್

1-horoscope

Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ

ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್‌?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್‌

“ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

1-horoscope

Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ

ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್‌?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್‌

“ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.