ಗೂಗಲ್ ಮ್ಯಾಪ್ಸ್‌ನಲ್ಲಿ ಅವಘಡಗಳು!
Team Udayavani, Nov 4, 2019, 4:08 AM IST
ಗೂಗಲ್ ಮ್ಯಾಪ್ಸ್ ನಕಾಶೆ ರೂಪದಲ್ಲಿ ಆಂಡ್ರಾಯ್ಡ್ಗೆ ಪರಿಚಯವಾದ ದಿನಗಳು ಬಹಳ ಹಳೆಯವು. ಆಗ ಲೈವ್ ಟ್ರಾಫಿಕ್ ಅಪ್‌ಡೇಟ್‌ಗಳು ಬಳಕೆದಾರರಿಗೆ ಸಿಗುತ್ತಿರಲಿಲ್ಲ. ಅಂದರೆ, ಬಳಕೆದಾರ ಯಾವ ಸಮಯದಲ್ಲಿ ಮ್ಯಾಪ್ಸ್ ತೆರೆಯುತ್ತಾನೋ ಆ ಸಮಯದ ಟ್ರಾಫಿಕ್ ವಿವರಗಳು ಲಭ್ಯವಿರುತ್ತಿರಲಿಲ್ಲ. ಆದರೆ ಈಗ ಹಾಗಲ್ಲ. ಲೈವ್ ಟ್ರಾಫಿಕ್ ಅಪ್‌ಡೇಟ್‌ಗಳು ಸಿಗುತ್ತವೆ.
ಬಳಕೆದಾರ ಹೋಗುತ್ತಿರುವ ಮಾರ್ಗದಲ್ಲಿ ಸಂಚಾರ ದಟ್ಟಣೆ ಹೆಚ್ಚಿದ್ದರೆ ಗೂಗಲ್ ಮ್ಯಾಪ್ಸ್ ಸಂಚಾರ ದಟ್ಟಣೆ ಕಡಿಮೆ ಇರುವ ಬದಲಿ ಮಾರ್ಗವನ್ನು ಸೂಚಿಸುತ್ತದೆ. ಆದರೆ ಗೂಗಲ್ ಮ್ಯಾಪ್‌ನ ಸವಲತ್ತುಗಳು ಅಷ್ಟಕ್ಕೇ ನಿಲ್ಲುವುದಿಲ್ಲ. ಅನೇಕ ಮಂದಿಗೆ ಗೊತ್ತಿರಲಿಕ್ಕಿಲ್ಲ, ಅದರಲ್ಲಿ “ಆ್ಯಡ್ ಎ ರಿಪೋರ್ಟ್’ ಎಂಬ ಆಯ್ಕೆಯೊಂದಿದೆ. ಬಳಕೆದಾರ ತಾನು ಹೋಗುತ್ತಿರುವ ರಸ್ತೆಯಲ್ಲಿ ಏನಾದರೂ ಅವಘಡ ಸಂಭವಿಸಿರುವುದು ಕಂಡರೆ, ಅದನ್ನು ದಾಖಲಿಸಬಹುದು.
ಅಷ್ಟೇ ಅಲ್ಲ, ಸ್ಪೀಡ್ ಟ್ರ್ಯಾಪ್, ರಸ್ತೆ ರಿಪೇರಿ, ಡೈವರ್ಷನ್‌ನಂಥ ಮಾಹಿತಿಯನ್ನೂ ದಾಖಲಿಸಬಹುದು. ಇದರಿಂದಾಗಿ, ಅದೇ ರಸ್ತೆಯಲ್ಲಿ ಓಡಾಡುವ ಬಳಕೆದಾರರು ಮುಂಚಿತವಾಗಿ ಇಂಥ ಸಂಗತಿಗಳತ್ತ ಗಮನ ಹರಿಸಲು, ಎಚ್ಚರಿಕೆ ವಹಿಸಲು ಸಾಧ್ಯವಾಗುತ್ತದೆ. ಇಷ್ಟು ದಿನ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರವೇ ಲಭ್ಯವಿದ್ದ “ಆ್ಯಡ್ ಎ ರಿಪೋರ್ಟ್’ ಸವಲತ್ತು ಇನ್ನುಮುಂದೆ ಐಫೋನ್ ಬಳಕೆದಾರರಿಗೂ ಸಿಗುತ್ತಿದೆ. ಅಂದಹಾಗೆ, ಆಂಡ್ರಾಯ್ಡ್ 10.27.2 ವರ್ಷನ್‌ನ ನಂತರ ಓಎಸ್ ಆವೃತ್ತಿಗಳಲ್ಲಿ ಮಾತ್ರವೇ ಈ ಸವಲತ್ತು ಲಭ್ಯ ಇರುವುದು.
ಸವಲತ್ತಿನ ಬಳಕೆ ಹೇಗೆ?: ಅವಘಡವನ್ನು ದಾಖಲಿಸಲು ಬಳಕೆದಾರ ಮಾಡಬೇಕಿರುವುದಿಷ್ಟೆ. ಗೂಗಲ್ ಮ್ಯಾಪ್ಸ್ ತೆರೆದು ತಾನು ಹೋಗುತ್ತಿರುವ ರೂಟನ್ನು ಎಂಟ್ರಿ ಮಾಡಬೇಕು. ಅಂದರೆ, ಹೊರಟಿರುವ ಸ್ಥಳ ಮತ್ತು ತಲುಪಬೇಕಾದ ಸ್ಥಳ, ಎರಡನ್ನೂ ನಮೂದಿಸಬೇಕು. ನಂತರ ನ್ಯಾವಿಗೇಷನ್ ಬಟನ್ ಒತ್ತಬೇಕು.
ಈಗ ಮೇಲೆ, ಬಲ ಬದಿಯಲ್ಲಿ ಮೈಕ್ರೊಫೋನ್ ಆಯ್ಕೆಯ ಪಕ್ಕದಲ್ಲಿ ಪ್ಲಸ್ ಚಿಹ್ನೆಯನ್ನು ಹೊಂದಿರುವ “ಆ್ಯಡ್ ಎ ರಿಪೋರ್ಟ್’ ಆಯ್ಕೆ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ, ಒಂದು ಪಟ್ಟಿ ತೆರೆದುಕೊಳ್ಳುತ್ತದೆ. ಅದರಲ್ಲಿ ಅನೇಕ ರೀತಿಯ ಅವಘಡಗಳ ಆಯ್ಕೆಗಳಿರುತ್ತವೆ. ಕಾಮಗಾರಿ, ರಸ್ತೆ ಮುಚ್ಚುವಿಕೆ, ಕೆಟ್ಟು ನಿಂತ ವಾಹನ, ನಿಧಾನಗತಿಯ ಟ್ರಾಫಿಕ್ ಹೀಗೆ… ಇವುಗಳಲ್ಲಿ ಬಳಕೆದಾರ ತನಗೆ ಬೇಕಾದ ಆಯ್ಕೆಯನ್ನು ಆರಿಸಿಕೊಳ್ಳಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.