ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬದಲಾವಣೆಯ ನಿರೀಕ್ಷೆ
Team Udayavani, Nov 30, 2020, 7:58 PM IST
ಬ್ಯಾಂಕಿಂಗ್ ಕ್ಷೇತ್ರದಲ್ಲಿ, ಮುಂಬರುವ ದಿನಗಳಲ್ಲಿ ಹೊಸದೊಂದು ಬದಲಾವಣೆ ಆಗಲಿದೆಯಾ? ಈಗಿರುವ ಬ್ಯಾಂಕ್‌ಗಳ ಜೊತೆಗೆ ಇನ್ನಷ್ಟು ಹೊಸ ಬ್ಯಾಂಕ್‌ಗಳ ಸೇರ್ಪಡೆ ಆಗಲಿದೆಯಾ?
ಅಂಥದೊಂದು ಸಾಧ್ಯತೆ ಇದೆ ಅನ್ನುವುದು ಬ್ಯಾಂಕಿಂಗ್ ವಲಯದಲ್ಲಿ ಕೇಳಿಬರುತ್ತಿರುವ ಸುದ್ದಿ. 1969ರಲ್ಲಿ14, 1980ರಲ್ಲಿ6 ಬ್ಯಾಂಕುಗಳ ರಾಷ್ಟ್ರೀಕರಣ, 2017ರಲ್ಲಿ ಸ್ಟೇಟ್ ಬ್ಯಾಂಕ್‌ನಲ್ಲಿ ಸ್ಟೇಟ್ ಬ್ಯಾಂಕ್ ನ ಸಹವರ್ತಿ ಬ್ಯಾಂಕುಗಳ ವಿಲೀನ ಮತ್ತು 2019 ಮತ್ತು2020ರಲ್ಲಿ ರಲ್ಲಿ ಹಲವು ಸಾರ್ವಜನಿಕ ರಂಗದ ಬ್ಯಾಂಕುಗಳನ್ನು ವಿಲೀನಗೊಳಿಸಲಾಯಿತು.
ಆ ಮೂಲಕ ದೇಶದಲ್ಲಿ ಸಾರ್ವಜನಿಕ ರಂಗದ ಬ್ಯಾಂಕುಗಳ ಸಂಖ್ಯೆಯನ್ನು12ಕ್ಕೆ ಇಳಿಸಲಾಯಿತು. ಇದೀಗ, ರಿಸರ್ವ್ ಬ್ಯಾಂಕ್‌ನ ಅಂತರಿಕ ಸಮಿತಿಯೊಂದು, ಹೊಸ ಬ್ಯಾಂಕ್ ತೆರೆಯಲು ಕಾಪೋರೇಟ್ ಕಂಪನಿಗಳಿಗೆ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಅನುಮತಿ ನೀಡಬಹುದೆಂದು ಶಿಫಾರಸ್ಸು ಮಾಡಿರುವ ಸುದ್ದಿ ಬಂದಿದೆ.
ಇದೇನೂ ಹೊಸ ಬೆಳವಣಿಗೆಯಲ್ಲ. 1993-94ರಲ್ಲಿ, ಮೂರು ಸುತ್ತಿನಲ್ಲಿ ಗ್ಲೋಬಲ್ ಟ್ರಸ್ಟ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಚ್ ಡಿಎಫ್ಸಿ ಬ್ಯಾಂಕ್, ಯುಟಿಐ ಬ್ಯಾಂಕ್ (ಈಗಿನ ಎಕ್ಸಿಸ್ ಬ್ಯಾಂಕ್), ಟೈಮ್ಸ್ ಬ್ಯಾಂಕ್, ಬ್ಯಾಂಕ್ ಆಫ್ ಪಂಜಾಬ್, ಇಂಡಸ್ ಇಂಡ್ ಬ್ಯಾಂಕ್, ಡೆವೆಲಪ್‌ಕ್ರೆಡಿಟ್ ಬ್ಯಾಂಕ್, ಸೆಂಚೂರಿಯನ್ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕ್…
ಹೀಗೆ ಹತ್ತು ಬ್ಯಾಂಕುಗಳನ್ನು ತೆರೆಯಲು ಅನುಮತಿ ನೀಡಲಾಗಿತ್ತು. ಹಾಗೆಯೇ 2003-2004ರಲ್ಲಿಕೋಟಕ್ ಮಹೀಂದ್ರ ಮತ್ತು ಯೆಸ್ ಬ್ಯಾಂಕು ಮತ್ತು 2014ರಲ್ಲಿ ಐಡಿಎಫ್ಸಿ ಪಸ್ಟ್ ಮತ್ತು ಬಂಧನ್ ಬ್ಯಾಂಕುಗಳು ಖಾಸಗಿ ರಂಗದಲ್ಲಿ ತೆರೆಯುಲ್ಪಟ್ಟವು.
ಇವುಗಳಲ್ಲಿ ಬ್ಯಾಂಕ್ ಆಫ್ ಪಂಜಾಬ್ ಗ್ಲೋಬಲ್ ಟ್ರಸ್ಟ್ ಬ್ಯಾಂಕ್ ಮತ್ತು ಸೆಂಚೂರಿಯನ್ ಬ್ಯಾಂಕುಗಳು ಬೇರೆ ಬ್ಯಾಂಕುಗಳಲ್ಲಿ ವಿಲೀನವಾದವು. ಆ ದಿನಗಳಲ್ಲಿ ಬ್ಯಾಂಕ್ ಆನ್ ಟ್ಯಾಪ್ ಪಾಲಿಸಿ ಅಡಿಯಲ್ಲಿ ಟಾಟಾ, ಅದಿತ್ಯ ಬಿರ್ಲಾ, ಎಲ್ ಆ್ಯಂಡ್ ಟಿ ಮುಂತಾದ ಕಾರ್ಪೋರೇಟ್ ಹೌಸ್‌ಗಳು ಬ್ಯಾಂಕ್ ಸ್ಥಾಪಿಸಲು ಮುಂದಾದರೂ ಹಿತಾಸಕ್ತಿ ಸಂಘರ್ಷದಕಾರಣ ನೀಡಿ ಅವುಗಳಿಗೆ ಅನುಮತಿ ನಿರಾಕರಿಸಲಾಗಿತ್ತು.
ಹೊಸ ಬ್ಯಾಂಕುಗಳು ಏಕೆ?
ಕಳೆದ ಒಂದು ದಶಕದಲ್ಲಿ ಸರ್ಕಾರವು 3.15 ಲಕ್ಷಕೋಟಿ ಬಂಡವಾಳವನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ನೀಡಿದೆ. ಒಂದು ಅಂದಾಜಿನ ಪ್ರಕಾರ, ಇನ್ನೂ70000 ಕೋಟಿ ಬಂಡವಾಳದ ಅಗತ್ಯವಿದೆ.
ಕೊರೊನಾ ಸಂಕಟದ ಕಾರಣದಿಂದ ಅದನ್ನು ಪೂರೈಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಇಂಥ ಸಂದರ್ಭದಲ್ಲಿ ಹೊಸ ಬ್ಯಾಂಕುಗಳನ್ನು ತೆರೆಯುಲುಕಾರ್ಪೋರೇಟ್ ಕಂಪನಿಗಳಿಗೆ ಅನುಮತಿ ನೀಡಿ, ಅವುಗಳ ಮೂಲಕ ಜನತೆಯ ಸಾಲದ ಅವಶ್ಯಕತೆಯನ್ನು ಪೂರೈಸುವ ಇರಾದೆ ಸರ್ಕಾರದ ಈ ಹೆಜ್ಜೆಯ ಹಿಂದೆ ಇದೆ ಎಂದು ಹೇಳಲಾಗುತ್ತಿದೆ.
ಇದರ ಪರಿಣಾಮ ಏನಾಗಬಹುದು?
ಯಾರು ಏನೇ ಹೇಳಿದರೂ,ಕಾರ್ಪೊರೇಟ್ ಕಂಪನಿಗಳು ಆರಂಭಿಸುವ ಬ್ಯಾಂಕ್‌ಗಳು ಶ್ರೀಸಾಮಾನ್ಯರಿಗೆ ಹತ್ತಿರಾಗುವುದು ಸಾಧ್ಯವಿಲ್ಲ. ಜೊತೆಗೆ, ಅವು ಸಾರ್ವಜನಿಕ ರಂಗದ ಬ್ಯಾಂಕುಗಳಂತೆಕಾರ್ಯ ನಿರ್ವಹಿಸುವುದು ಕಷ್ಟ ಸಾಧ್ಯ. ಮಾನವ ಸಂಪನ್ಮೂಲಗಳಿಗಿಂತ, ಅವರು ಅತ್ಯಾಧುನಿಕ ಯಂತ್ರಗಳನ್ನೇ ಹೆಚ್ಚು ಬಳಸುವ ಸಾಧ್ಯತೆ ಇದ್ದು, ಅವರ ಸೇವಾ ಶುಲ್ಕ ಸಾಮಾನ್ಯ ಗ್ರಾಹಕನಿಗೆಕೈಗೆಟುಕದಂತೆ ಇರುವ ಸಾಧ್ಯತೆಗಳೇ ಹೆಚ್ಚು.
ಕಾರ್ಪೊರೇಟ್ ಮಾಲೀಕತ್ವದ ಬ್ಯಾಂಕ್‌ಗಳು ಸಿರಿವಂತರನ್ನು ಮಾತ್ರ ತಮ್ಮ ಗ್ರಾಹಕರನ್ನಾಗಿ ಮಾಡಿಕೊಂಡರೂ ಯಾವುದೇ ಅಚ್ಚರಿಯಿಲ್ಲ. ಸಾರ್ವಜನಿಕ ರಂಗದ ಬ್ಯಾಂಕುಗಳಂತೆ ಇವು ನೀರಿಲ್ಲದ, ರಸ್ತೆಗಳಿಲ್ಲದ ಕೊಂಪೆಗಳಲ್ಲಿ,ಕನಿಷ್ಠ ನಾಗರಿಕ ಸೌಲಭ್ಯಗಳಿಲ್ಲದ ಊರುಗಳಲ್ಲಿ ಶಾಖೆಗಳನ್ನು ತೆರೆದು ಬ್ಯಾಂಕಿಂಗ್ ಸೇವೆಯನ್ನು ನೀಡಬಹುದೇ? ಗೂಡಂಗಡಿಯವನಿಗೆ, ರಸ್ತೆಬದಿ ಅಂಗಡಿಯವನಿಗೆ, ತರಕಾರಿ ಮಾರುವವನಿಗೆ, ಆಟೋ ಚಾಲಕನಿಗೆ,ದಿನಗೂಲಿಯವನಿಗೆ ಈ ಬ್ಯಾಂಕುಗಳಲ್ಲಿ ಸಾಲ ಸಿಗಬಹುದೇ? ಈ ಪ್ರಶ್ನೆಗಳಿಗೆ “ಸಿಗುತ್ತದೆ’ ಎಂದು ಸ್ಪಷ್ಟವಾಗಿ ಹೇಳುವ ವಿಶ್ವಾಸ ಯಾರಿಗೂ ಇಲ್ಲ.
ವಾಸ್ತವ ಹೀಗಿರುವಾಗ,ಕಾರ್ಪೊರೇಟ್ ಕಂಪನಿಯವರ ಹೊಸ ಬ್ಯಾಂಕ್‌ಗಳು ಬಂದರೂ ಅದರಿಂದ ಸಾಮಾನ್ಯ ಜನರಿಗೆ ಹೆಚ್ಚಿನ ಲಾಭವಂತೂ ಆಗದು ಎನ್ನಬಹುದೇನೋ
ಲಾಭಕ್ಕಿಂತ ನಷ್ಟದ ಸಾಧ್ಯತೆ ಹೆಚ್ಚು ಕಾರ್ಪೊರೇಟ್ ಕಂಪನಿಗಳು ಹೊಸ ಬ್ಯಾಂಕ್ ಸ್ಥಾಪಿಸಲು ಅನುಮತಿ ನೀಡಬಾರದು. ಏಕೆಂದರೆ, ಹಣ ಸಂಗ್ರಹದಂಥ ಒಂದು ಪ್ರಮುಖಕ್ಷೇತ್ರದ ಕೀಲಿಕೈ ಕಾರ್ಪೊರೇಟ್ ಕಂಪನಿಗಳಿಗೆ ಸಿಕ್ಕಿಬಿಟ್ಟರೆ, ಅದರಿಂದಕೆಟ್ಟ ಪರಿಣಾಮಗಳಾಗುತ್ತವೆ. ಮುಖ್ಯವಾಗಿ, ದೇಶದ ಸಂಪತ್ತು ಕೆಲವೇ ಕಾರ್ಪೋರೇಟ್ ಕಂಪನಿಗಳ ಅಥವಾ ಮುಖ್ಯಸ್ಥರ ಕೈಯಲ್ಲಿ ಉಳಿಯುವಂತಾಗುತ್ತದೆ.
ಕಾರ್ಪೊರೇಟ್ ಕಂಪನಿಗಳು ಶ್ರೀಮಂತ ಗ್ರಾಹಕರತ್ತ ಮಾತ್ರ ಹೆಚ್ಚಿನ ಆಸಕ್ತಿ ವಹಿಸುತ್ತವೆ. ಪಂಜಾಬ್, ಮಹಾರಾಷ್ಟ್ರದಕೋ ಆಪರೇಟಿವ್ ಬ್ಯಾಂಕ್, ಯೆಸ್ ಬ್ಯಾಂಕ್ ಮತ್ತು ಲಕ್ಷ್ಮಿ ವಿಲಾಸ ಬ್ಯಾಂಕ್‌ಗಳ ಕಾರ್ಯವೈಖರಿ ಮತ್ತು ಅವು ಅನುಭವಿಸಿದ ವೈಫಲ್ಯವನ್ನು ಕಂಡ ನಂತರವೂ ಖಾಸಗಿ ವಲಯದ ಹೊಸ ಬ್ಯಾಂಕ್‌ಗಳ ಸ್ಥಾಪನೆಯ ಕುರಿತು ಯೋಚಿಸುವುದು ಮೂರ್ಖತನ ಎಂದು ಬ್ಯಾಂಕಿಂಗ್ ಕ್ಷೇತ್ರದ ತಜ್ಞರು ಅಭಿಪ್ರಾಯ ಪಡುತ್ತಾರೆ.
ರಮಾನಂದ ಶರ್ಮಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.