ಗುಡ್ಡದ ರೈತ
Team Udayavani, Aug 26, 2019, 3:02 AM IST
“ಕೃಷಿತೋ ನಾಸ್ತಿ ದುರ್ಭಿಕ್ಷಂ’ ಎಂಬ ನಾಣ್ನುಡಿಯೊಂದಿದೆ. ಎಲ್ಲಿ ಕಷಿ ಇದೆಯೋ, ಅಲ್ಲಿ ನೆಮ್ಮದಿ ಇದೆ ಎನ್ನುವುದು ಅದರ ಅರ್ಥ. ಈಗಿನ ತಲೆಮಾರಿನ ಮಂದಿ ತಮ್ಮದು ಕೃಷಿಕ ಕುಟುಂಬವಾಗಿದ್ದರೂ ಕೃಷಿಯ ಕಡೆ ನಿರಾಸಕ್ತಿ ತೋರುತ್ತಿದ್ದಾರೆ. ಇದರ ಫಲವಾಗಿ ಒಂದೊಮ್ಮೆ ಫಲವತ್ತಾಗಿದ್ದ ನೆರ ಬರಡು ಭೂಮಿಯಾಗುತ್ತಿದೆ. ಈ ಸಂದರ್ಭದಲ್ಲಿ ಇಲ್ಲೊಬ್ಬರು ರೈತರು ಆದರ್ಶಪ್ರಾಯರಾಗಿ ತೋರುತ್ತಿದ್ದಾರೆ.
ಇರುವ ಕೃಷಿಭೂಮಿಯಲ್ಲೇ ಉಳುಮೆ ಮಾಡಲು ಹಿಂದೆ ಮುಂದೆ ನೋಡುತ್ತಿರುವ ಈ ಹೊತ್ತಿನಲ್ಲಿ ಬೆಳ್ತಂಗಡಿಯ ನಾರಾವಿ ಗ್ರಾಮದ ಸಂಜೀವ ದೇವಾಡಿಗ ಅವರು ಗುಡ್ಡವನ್ನು ಅಗೆದು ಗದ್ದೆ ಮಾಡಿ ವ್ಯವಸಾಯ ಮಾಡಿದ್ದಾರೆ. ಅಡಕೆ, ತೆಂಗು ತೋಟವಿದ್ದರೂ ತಾವು ಉಣ್ಣುವ ಅನ್ನವನ್ನು ತಾವೇ ಬೆಳೆಯಬೇಕು ಎಂಬ ಯೋಚನೆ ಅವರಿಗೆ ಬಂದಿದ್ದೇ ಇದಕ್ಕೆ ಕಾರಣ. 70ನೇ ವಯಸ್ಸಿನಲ್ಲಿ ಈ ಪರಿಯ ಉತ್ಸಾಹ ತೋರಿರುವುದು ಗಮನಾರ್ಹ. ಅರ್ಧ ಎಕರೆಯಷ್ಟಿದ್ದ ತಮ್ಮದೇ ಗುಡ್ಡವನ್ನು ಅಗೆದು ಗದ್ದೆ ಮಾಡಿದ್ದಾರೆ. ಅದೇ ಹೊಲದಲ್ಲಿ 10 ಕ್ವಿಂಟಾಲ್ ಭತ್ತದ ಫಸಲನ್ನು ತೆಗೆದಿದ್ದಾರೆ.
ಇಲ್ಲಿಂದಲೇ ದನಕರುಗಳಿಗೆ ಮೇವು ಕೂಡಾ ಸಿಗುತ್ತಿದೆ. ನೀರಿನ ಸಮಸ್ಯೆಯಾದರೆ ಪಂಪ್ ಸೆಟ್‌ನ ಮೂಲಕ ನೀರಿನ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇವರ ಗದ್ದೆಯಲ್ಲಿ ಇದೀಗ ಮೂರನೇ ಬೆಳೆ ಬೆಳೆಯುತ್ತಿದ್ದಾರೆ ಇದರಲ್ಲಿ ಏಣೇಲು ಮತ್ತು ಸುಗ್ಗಿ ಬೇಸಾಯ ಮಾಡುತ್ತಾರೆ. ನಮ್ಮಲ್ಲಿರುವ ಗದ್ದೆಗಳನ್ನು ಬಂಜರು ಬಿಡದೆ ವ್ಯವಸಾಯ ಮಾಡಬೇಕು. ಯುವಕರು ಕೃಷಿ ಕಡೆಗೆ ಗಮನ ಹರಿಸಬೇಕು. ರೈತರಿಗೆ ಸರಿಯಾದ ಗೌರವ ಸಿಗಬೇಕು. ಕೃಷಿ ಬೆಳೆಸಿ ದೇಶ ಉಳಿಸುವ ಕಾಯಕದಲ್ಲಿ ನಾವೆಲ್ಲ ತೊಡಗಬೇಕು ಎನ್ನುವ ಅವರ ಬದುಕು ಕೃಷಿಕರೆಲ್ಲರಿಗೂ ಸ್ಫೂರ್ತಿ.
* ಸುರೇಂದ್ರ ಜೈನ್ ನಾರಾವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.