ದೋಷಪೂರಿತ ಆತ್ಮ ಎಂದೂ ಸುಖವಾಗಿರದು..


Team Udayavani, Oct 16, 2017, 11:03 AM IST

vastui-home.jpg

ನಿಮ್ಮ ಮನೆಯನ್ನು ವಾಸ್ತು ಪ್ರಕಾರ ಸರಿಯಾಗಿ ಮಾಡಿಕೊಳ್ಳುವುದು ಒಂದು ಕ್ರಮ. ಮೊತ್ತಮೊದಲಾಗಿ ವಾಸ್ತುಶಾಸ್ತ್ರದ ಸಕಲ ವೈಶಿಷ್ಟ್ಯಗಳನ್ನು ಅಕ್ಷರಶಃ ಪರಿಪಾಲಿಸಲು ಆಧುನಿಕವಾದ  ಈ ಕಾಲದಲ್ಲಿ  ಅಸಾಧ್ಯ ಎಂಬುದು ನಿಮಗೆ ತಿಳಿದೇ ಇದೆ. ಆದರೆ ಪರಿಷ್ಕರಿಸಿ ಕೊಳ್ಳಬಲ್ಲ ಇನ್ನೊಂದು ಅಂಶ ನಮ್ಮೊಳಗೆ ಇರುವ ಒಂದು ಆತ್ಮಸಾಕ್ಷಿಯ ಆವರಣಗಳನ್ನು ಅದು ಧೈರ್ಯ ಮತ್ತು ನಮ್ಮ ಅಮಾನುಷ್ಯ ಘಟಕಗಳ ಪರಿಷ್ಕರಣೆಗಳಿಂದ ಸಾಧ್ಯವಾಗಲು ಅವಕಾಶ ಪಡೆದಿದೆ.

ಪಂಚಭೂತಗಳು ವಿಶ್ವವನ್ನೇ ರೂಪಿಸಿವೆ. ನಮ್ಮಬಾಹ್ಯ ಹಾಗೂ ಅಂತರ್ಯದ ಸೂಕ್ಷ್ಮ ಕಣಗಳು ಕೋಶಗಳು ಚೈತನ್ಯವನ್ನು ಪಡೆಯುವ ಪಡೆಯಲು ನಿಷ್ಕ್ರಿಯಗೊಳ್ಳುವ ವಿಚಾರಗಳು ಪಂಚಭೂತಗಳಿಂದಲೇ ಚಾಲನೆ ಪಡೆಯುತ್ತದೆ. ನಿಮ್ಮ ಸುತ್ತಲೂ ಅಲೌಕಿಕವಾದ ಒಂದು ಪ್ರಭಾವಳಿ ಇದೆ. ಅದು ನಮ್ಮ ವ್ಯಕ್ತಿತ್ವ, ವರ್ಚಸ್ಸು, ಶಕ್ತಿ, ಲವಲವಿಕೆಗಳನ್ನು ಕೊಡುವ, ಕಳೆಯುವ ಮೂಲಕ ನಿಯಂತ್ರಿಸುತ್ತದೆ. ಕುಶಲಮತಿಯಾದವವನು ತನ್ನ ಜ್ಞಾನದಿಂದ ತನ್ನ ಮತ್ತು ಸುತ್ತಲಿನ ಒಳಿತುಗಳಿಗೆ ಕಾರಣವಾಗಬಹುದು.

ಆದರೆ ಜ್ಞಾನಿಗಳಾಗಿಯೂ ಬುದ್ಧಿಯ ಪ್ರಯೋಜನ ಪಡೆಯಲಾಗದೆ ಜಡವಾಗಿರುವ ಎಷ್ಟೋ ಜನರಿದ್ದಾರೆ. ಜ್ಞಾನವನ್ನು ದುರ್ಬುದ್ಧಿಯನ್ನು ಸೂಕ್ಷ್ಮವಾದ ಒಂದು ಕೂದಲೆಳೆಯ ಅಂತರ ಒಂದು ಇನ್ನೊಂದಲಕ್ಕಿಂತ ಬೇರೆಯಾಗುವಂತೆ ಮಾಡುತ್ತದೆ. ಹೀಗಾಗಿ ಜ್ಞಾನವಿದ್ದರೂ ದುರ್ಬುದ್ಧಿಯಿಂದ ಸುತ್ತಲ ಜನಜೀವನ ಸ್ವಕೀಯರ ಅಶಾಂತಿಗೆ ಕಾರಣವಾಗುತ್ತದೆ. ಭಯೋತ್ಪಾದಕರು, ಭ್ರಷ್ಟರು, ವಿಘ್ನ ಸಂತೋಷಿಗಳು,

ಪರ ಹಿಂಸಾನಿರತರಾಗಿ ಸಂತೋಷ ಪಡುವವರು ವಕ್ರವಾಗೇ ಇನ್ನೊಬ್ಬರ ಮಾತುಗಳನ್ನು ಕೇಳಿಸಿಕೊಳ್ಳು ವವರು, ಪರರ ತಪ್ಪುಗಳನ್ನೇ ಹುಡುಕುತ್ತ ಭೂತಗನ್ನಡಿಯನ್ನು ಕೈಗಂಟಿಸಿಕೊಂಡವರು, ಇನ್ನೊಬ್ಬರ ತೇಜೋವಧೆಗಾಗಿ ಸೂಕ್ಷ್ಮವಾಗಿ ವರ್ತಿಸುವವರು, ಬ್ಲಾಕ್‌ವೆುಲ್‌ ಮಾಡುತ್ತಾ ಬೇಳೆ ಬೇಯಿಸಿಕೊಳ್ಳುವವರು ಹೀಗೆ… ಇಂಥ  ಜನರನ್ನು ನಾವು ನೋಡುತ್ತಲೇ ಇದ್ದೇವೆ. ಸಂಧಿಸುತ್ತಲೇ ಇರುತ್ತೇವೆ.  ಇದು ಎಲ್ಲರ ಅನುಭವ.

ಆದರೆ ಒಂದು ತಿಳಿಯಿರಿ,  ಈ ಎಲ್ಲಾ  ದೋಷಗಳನ್ನು  ಹೊಂದಿದ   ವ್ಯಕ್ತಿಯ ಆತ್ಮ ಎಂದೂ ಸುಖದಲ್ಲಿ ಇರಲಾರದು. ಯಾಕೆಂದರೆ ಆನೆಗೆ ಸಿಂಹ ಉಂಟು, ಹಾಗೇ ಹಾವಿಗೆ ಗರುಡ   ಉಂಟು ಎಂಬಂತೆ   ಈ ರೀತಿಯ ದರಿದ್ರಗಳನ್ನು ಮೀರಿಸುವ ಇನ್ನೊಂದು ದರಿದ್ರಗಳೇ ಅವರಿಗೆ  ಎದುರಾಗುತ್ತಾರೆ. ಅಪರೂಪಕ್ಕೆ ಶಿಷ್ಟರ ಬಲವೇ ಇಂಥ ದುಷ್ಟ ವಿಷಯಗಳನ್ನು ಸಕಾರಾತ್ಮಕವಾಗಿ ಬಗ್ಗು ಬಡಿಯುತ್ತದೆ.

ಈ ನಮ್ಮ ಪ್ರಭಾವಳಿಯು ಪ್ರತಿಯೊಬ್ಬನಲ್ಲೂ ಪರಿಶುದ್ಧವಾಗಿಯೇ ಇದ್ದು ಅರಿಷಡ್ವರ್ಗಗಳು ಪ್ರಭಾವಳಿಯನ್ನು ಕೆಡಿಸುತ್ತ ವ್ಯಕ್ತಿಯ ವ್ಯಕ್ತಿತ್ವವನ್ನು ಛಿದ್ರಗೊಳಿಸುತ್ತವೆ. ಮನೆಯ ವಾಸ್ತುದೋಷ ನಮ್ಮ ನಾಶಕ್ಕೆ ಪ್ರಧಾನವಾದ ವಂತಿಗೆಯನ್ನು ಕೊಡಲಾರದು. ನೈತಿಕವಾದ ಎತ್ತರವನ್ನು ನಾವು ಸ್ಪಷ್ಟವಾಗಿ ತಡೆದೆವಾದರೆ ವಾಸ್ತುವಿನ ದೋಷ ಗೌಣವಾಗುತ್ತದೆ. ಆದರೆ ಮನೆಯ ಸ್ವತ್ಛತೆ ಪರಿಶುದ್ಧತೆ ವಸ್ತುಗಳ ಚೆಲ್ಲಾಪಿಲ್ಲಿತನವನ್ನು ತಡೆಯಿರಿ.

ಬೆಳಕೇ ಇರದಿದ್ದಲ್ಲಿ ಸೂಕ್ತವಾದ ಬಲುºಗಳನ್ನು ಉರಿಸಿ. ಉರಿಬಿಸಿಲು ಪೂರ್ವದಿಂದ ಕಣ್ಣು ಕುಕ್ಕುವ ಹಾಗೆ ಬರುವಂತಿದ್ದರೂ, ಪೂರ್ವದ ಬಾಗಿಲು ಶುಭಕರವಾಗಿರುವುದಿಲ್ಲ. ಸಂಡಾಸು ಸ್ನಾನಗೃಹ ಶುಚಿಯಾಗಿರಲಿ. ಅಡುಗೆ ಮನೆ ಸರಳವಾಗಿ ಶುದ್ಧವಾಗಿರಲಿ. ಮನಸ್ಸು ನಿರಾಳವಾಗಿರಲು ಬಿಡಿ. ನಿಮ್ಮ ಸುತ್ತಲಿನ ಪ್ರಭಾವಳಿಗೆ ಆಗ ತ್ರಿಮೂರ್ತಿಗಳ ತತ್ವಗಳು ಒಗ್ಗೂಡಿ ಪಂಚಭೂತಗಳನ್ನು ನಿಮ್ಮ ಪಾಳಿನ ಕಾಯುವ ಶಕ್ತಿಯನ್ನಾಗಿಸುತ್ತಾ, ಮನೆಯೊಳಗಡಯೇ ಒಂದು ಪ್ರಭಾವಳಿಯನ್ನು ನಿರ್ಮಿಸುತ್ತವೆ.

ನಿಮ್ಮ ಸುತ್ತಲಿನ ಪ್ರಭಾವಳಿಯ ಜೊತೆಗೆ ಅದು ಕೊಂಡಿ ಕೂಡಿಸಿದಾಗ ಜೀವನದ ಸಾಫ‌ಲ್ಯತೆಗೆ ದಾರಿ ತಂತಾನೆ ಸಿಗಲು ಅವಕಾಶವಾಗುತ್ತದೆ. ಮನೆಯ ಅತಿ ಸೂಕ್ಷ್ಮ ಸಂವೇದನಾಶೀಲ ಸ್ಥಳ ಗುರುತಿಸಕೊಳ್ಳಿ. ಅದು ನಿಮ್ಮ ಮೇಧಾ ಶಕ್ತಿಯನ್ನು ಸಂವರ್ಧನೆಗಳಿಗೆ  ಕಾರಣ ಮಾಡಿಕೊಡುತ್ತದೆ. ಮುಖ್ಯವಾದುದನ್ನು ಅಲ್ಲಿಯೇ ನಿಷ್ಕರ್ಷಿಸಿ ಆ ಸ್ಥಳದಲ್ಲೇ ಮನೆ ಮಂದಿಯೊಂದಿಗೆ ಒಳಿತು ಕೆಡಕುಗಳ ಬಗ್ಗೆ ಚರ್ಚಿಸಿ.  ನಿಮ್ಮ ಒತ್ತಡವನ್ನು ಒಮ್ಮೆಗೇ ಕಡಿಮೆಗೊಳಿಸಿಕೊಳ್ಳಿ.

ಚರ್ಚಿಸಬೇಕಾದ ಒತ್ತಡದ ವಿಚಾರಗಳನ್ನು ಒಂದೆಡೆ ಪಟ್ಟಿ ಮಾಡಿಕೊಳ್ಳಿ. ಸಂಬಂಧಿಸಿದವರ ಜೊತೆ ಅವರೂ ನಿರಾಳರಾಗಿರುವಾಗ ಚರ್ಚಿಸಿ. ಇದರಿಂದ ನಿಮ್ಮ ಕೆಲಸಗಳು ಹಗುರವಾಗುತ್ತವೆ. 

* ಅನಂತಶಾಸ್ತ್ರಿ

ಟಾಪ್ ನ್ಯೂಸ್

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.