ಆರ್ಥಿಕತೆಯ ಭವಿಷ್ಯ!
Team Udayavani, Apr 13, 2020, 1:23 PM IST
ನಾವು, ದಿನನಿತ್ಯ ಬಳಸಿದ ಹಲವು ವಸ್ತುಗಳನ್ನು, ನಂತರ ಕಸದ ಬುಟ್ಟಿಗೆ ಎಸೆದು, ಕಾರ್ಪೊರೇಷನ್ ಲಾರಿಗೆ ತುಂಬಿ ಕೃತಾರ್ಥರಾಗುತ್ತೇವೆ. ಹೀಗೆ ಬಿಸಾಡಿದ ಆ ಕಸ ಎಲ್ಲಿ ಹೋಗುತ್ತದೆ? ಮುಂದೆ ಅದು ಏನಾಗುತ್ತದೆ ಎಂದು ಯಾವತ್ತಾದರೂ ಯೋಚಿಸಿದ್ದೀರಾ? ಒಂದೋ, ಊರ ಹೊರವಲಯದ ಪ್ರದೇಶವೊಂದರಲ್ಲಿ ಡಂಪ್ ಮಾಡಲ್ಪಟ್ಟು, ಅಲ್ಲಿ ಬೆಂಕಿಗೆ ಆಹುತಿಯಾಗುತ್ತದೆ. ಇಲ್ಲವೇ, ಹರಿಯುವ ಕಾಲುವೆಗೆ ಸೇರಿ ಕೊಳೆಯುತ್ತದೆ. ಅಥವಾ, ಸಮುದ್ರ, ನದಿಗಳಿಗೆ ಎಸೆಯಲ್ಪಡುತ್ತದೆ. ಇದನ್ನೇ ನಿಯರ್ ಎಕಾನಮಿ
ಎನ್ನುತ್ತಾರೆ. ಅಂದರೆ, ಒಂದು ವಸ್ತುವಿನ ಜೀವನ ಚಕ್ರವನ್ನು ಟ್ರ್ಯಾಕ್ ಮಾಡುವುದಾದರೆ- ಮೊದಲು ಅದು ಕಚ್ಚಾವಸ್ತುಗಳಿಂದ ತಯಾರಾಗುತ್ತದೆ. ನಂತರ ಮಾರುಕಟ್ಟೆಗೆ ಸಾಗಿಸಲ್ಪಡುತ್ತದೆ. ಗ್ರಾಹಕರು ಅದನ್ನು ದುಡ್ಡು ತೆತ್ತು ಖರೀದಿಸಿ, ಬಳಸಿದ ನಂತರ ಕಸದ ಬುಟ್ಟಿಗೆ ಎಸೆಯುತ್ತಾರೆ. ಇವಿಷ್ಟೂ ಪ್ರಕ್ರಿಯೆಯಲ್ಲಿ “ವ್ಯರ್ಥ’ ಎನ್ನುವುದು ಎಲ್ಲಾ ಹಂತಗಳಲ್ಲಿ ಆಗುತ್ತದೆ. ಸಕ್ಯುಲರ್ ಎಕಾನಮಿ ಎನ್ನುವುದು,
ಕಸದ ನಿರ್ವಹಣೆಯಿಂದ ಶುರುವಾಗುತ್ತದೆ. ಸಂಗ್ರಹಗೊಳ್ಳುವ ಕಸವನ್ನೇ ವಸ್ತುಗಳ ತಯಾರಿಗೆ ಬೇಕಾಗುವ ಕಚ್ಚಾ ಸಾಮಗ್ರಿಯನ್ನಾಗಿ ಪರಿವರ್ತಿಸುವುದು. ಆಗ, ಬಳಸಿ ಎಸೆಯಲ್ಪಟ್ಟ ನಂತರವೂ ಆ ವಸ್ತು ನಿರುಪಯೋಗಿಯಾಗುವುದಿಲ್ಲ. ಯಾವತ್ತಿಗೂ ಉಪಯುಕ್ತತೆಯನ್ನು ಉಳಿಸಿಕೊಳ್ಳುತ್ತದೆ. ಇದರಿಂದ ಕಸ ಉರಿಸಲ್ಪಡುವುದಿಲ್ಲ, ಸಮುದ್ರಕ್ಕೆ ಎಸೆಯಲ್ಪಡುವುದಿಲ್ಲ. ಕಸದ ಪ್ರಮಾಣದಲ್ಲಿಯೂ ಇಳಿಕೆ ಕಾಣುತ್ತದೆ.
ರೀಸೈಕಲ್ ಮಂತ್ರ ಸಕ್ಯುಲರ್
ಎಕಾನಮಿಯ ಮೂಲತತ್ವ ಅಡಗಿರುವುದು ರೀಸೈಕಲ್ (ಮರುಬಳಕೆ) ಮಾಡುವುದರಲ್ಲಿ. ರೀಸೈಕಲ್ ಎಂದಾಕ್ಷಣ, ನಮಗೆಲ್ಲರಿಗೂ ಬರುವ ಕಾಮನ್ ಯೋಚನೆ ಎಂದರೆ, ಆ ವಸ್ತುವನ್ನು ಮತ್ತೂಮ್ಮೆ ಬಳಸಬಹುದು ಎಂಬುದಷ್ಟೇ. ಆ ವಸ್ತುವಿನ ಮರುಬಳಕೆಯ ಬಗ್ಗೆ ನಾವು ಮತ್ತೇನೂ ಯೋಚಿಸುವುದಿಲ್ಲ. ಆದರೆ. ರೀಸೈಕಲ್ ಜೊತೆ ರೀಯೂಸ್ ಮತ್ತು ರೀಪೇರಿ ಸೇರಿದಾಗ ಮಾತ್ರ ಸಕ್ಯುಲರ್ ಎಕಾನಮಿಯಿಂದ ಅಧಿಕ ಪ್ರಯೋಜನ ಪಡೆಯಬಹುದು. ಒಂದು ವಸ್ತುವನ್ನು ಬಳಸಿದ ಸ್ವಲ್ಪ ಸಮಯದಲ್ಲೇ, ಅದನ್ನು ಕಸದ ಬುಟ್ಟಿಗೆ ಎಸೆಯುವ ಬದಲು,
ಅದೇ ವಸ್ತುವನ್ನು ಮತ್ತೆ ಬಳಸುವ ಹಾಗೆ ವ್ಯವಸ್ಥೆ ರೂಪಿಸಬೇಕು. ಜೊತೆಗೆ, ಯಾವುದೇ ಒಂದು ವಸ್ತು, ಉಪಕರಣ ಕೆಟ್ಟುಹೋದರೆ, ತಕ್ಷಣ ಹೊಸದನ್ನು ಖರೀದಿಸುವುದಕ್ಕೆ ಬದಲಾಗಿ, ಅದನ್ನೇ ರಿಪೇರಿ ಮಾಡುವುದರ ಬಗ್ಗೆ ಚಿಂತಿಸಬೇಕು. ಮುಖ್ಯವಾಗಿ, ಕೊಳ್ಳುಬಾಕತನಕ್ಕೆ ಕತ್ತರಿ ಹಾಕಬೇಕು.
ಇಂಕು ಖಾಲಿಯಾಗುವ ಮುನ್ನ…
ನಾವಿಂದು ಬಳಸುತ್ತಿರುವ ನೈಸರ್ಗಿಕ ಸಂಪನ್ಮೂಲಗಳಲ್ಲಿ ಬಹುತೇಕವು ಸೀಮಿತವಾದವು (ಇನ್‌ಫೆನೈಟ್). ಅಂದರೆ, ಭೂಮಿಯಿಂದ ಕಣ್ಮರೆಯಾಗುವಂಥವು. ಈ ಮಾತಿಗೆ, ತೈಲ, ಖನಿಜ ಮುಂತಾದವನ್ನು ಉದಾಹರಿಸಬಹುದು. ಮುಂದಿನ ದಿನಗಳಲ್ಲಿ ಅವುಗಳ ಲಭ್ಯತೆ ಕಡಿಮೆಯಾದಾಗ, ಬೇಡಿಕೆ ಹೆಚ್ಚುತ್ತದೆ. ಆಗ ಸೃಷ್ಟಿಯಾಗುವ ಅಡ್ಡಪರಿಣಾಮಗಳನ್ನು ಎದುರಿಸಲು ನಾವು ಸಿದ್ಧರಿರುವುದಿಲ್ಲ. ಇದನ್ನು
ಲೇಖನಿಯ ಇಂಕಿಗೆ ಹೋಲಿಸಬಹುದು. ಇಂಕ್ ಇರುವ ತನಕ ನಾವು ಲೇಖನಿಯನ್ನು ಬಳಸಬಹುದು. ಇಂಕ್ ಖಾಲಿಯಾದ ಮೇಲೆ ಬರೆಯುವುದು ಹೇಗೆ?! ಹೀಗಾಗಿ, ನೈಸರ್ಗಿಕ ಸಂಪತ್ತು ಖಾಲಿಯಾಗುವ ಮುನ್ನವೇ ನಾವು ಬದಲಿ ಮೂಲಗಳನ್ನು ಹುಡುಕಿಕೊಳ್ಳಬೇಕಾಗಿದೆ. ಅದು ಸಕ್ಯುಲರ್ ಎಕಾನಮಿಯಿಂದ ಸಾಧ್ಯವಾಗು ತ್ತದೆ.ಪ್ರಕೃತಿಯಲ್ಲಿ ಯಾವ ವಸ್ತುವೂ ನಿರುಪಯುಕ್ತವಲ್ಲ . ಬೀಜ ಮರವಾಗಿ, ಹಣ್ಣುಕೊಡುತ್ತದೆ. ಹಣ್ಣು, ಪ್ರಾಣಿಪಕ್ಷಿಗಳ ಹೊಟ್ಟೆ ತುಂಬಿಸುತ್ತದೆ. ಮತ್ತೆ ಮಣ್ಣು ಸೇರಿ ವೃಕ್ಷವಾಗುತ್ತದೆ.
ಇದೂ ಒಂದು ಚಕ್ರವೇ. ಇದರಲ್ಲಿ ದುಂದು ಅನ್ನುವುದು, ಪರಿಸರಕ್ಕೆ ಹಾನಿ ಉಂಟುಮಾಡುವಂಥದ್ದು ಇಲ್ಲವೇ ಇಲ್ಲ. ಪ್ರಕೃತಿಯ ನಿಯಮಾನುಸಾರ ಹೋಗುವುದರಿಂದ, ಯಾವುದೇ ತೊಂದರೆಗಳೂ ಇಲ್ಲ. ಇದೇ ಸಕ್ಯುಲರ್ ಆರ್ಥಿಕತೆಯ ಹೆಗ್ಗಳಿಕೆ.
ಕ್ಲೀನ್ ಎನರ್ಜಿಗೆ ಆದ್ಯತೆ
ಕೊರೊನಾ ವೈರಸ್ ಹಾವಳಿಯಿಂದಾಗಿ, ಮಾರುಕಟ್ಟೆಯಲ್ಲಿ ಹೊಸ ಬಗೆಯ ಟ್ರೆಂಡುಗಳು ಸೃಷ್ಟಿಯಾಗುವ ಸಾಧ್ಯತೆಗಳಿವೆ. ಇದು ಕ್ಲೀನ್ ಎಕಾನಮಿಗೂ ನಾಂದಿ ಹಾಡಲಿದೆ ಎಂಬುದು ಮಾರುಕಟ್ಟೆ ಪರಿಣಿತರ ಅಭಿಪ್ರಾಯ. ಕ್ಲೀನ್ ಎಕಾನಮಿ ಎಂದರೆ, ಪರಿಸರಸ್ನೇಹಿ
ತಂತ್ರಜ್ಞಾನಗಳ ಬಳಕೆ. ಮುಂದಿನ ದಿನಗಳಲ್ಲಿ, ಸೌರಶಕ್ತಿ ಚಾಲಿತ ಉಪಕರಣಗಳು ಮತ್ತು ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ, ಪರಿಸರಸ್ನೇಹಿ ಉತ್ಪನ್ನಗಳನ್ನು ಹೆಚ್ಚಾಗಿ ಬಳಸಲು ನಾವು ಮುಂದಾಗಬೇಕು.
ಹವನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.