ಸಮಗ್ರ ಕೃಷಿ ಎನ್ನುವ ಲಾಭದ ಬೀಗದ ಕೈ


Team Udayavani, May 21, 2018, 12:52 PM IST

samagra.jpg

ಮೂರು ದಶಕಗಳಿಂದ  ತರ್ಕಾರಿ ಬೆಳೆಯುವುದು, ಹೈನುಗಾರಿಕೆ, ಕೋಳಿ ಸಾಕಾಣಿಯಂಥ ರೈತಾಪಿ ಕೆಲಸಗಳಲ್ಲಿ ತೊಡಗಿರುವ ಅಶೋಕ್‌ಕುಮಾರ್‌, ಪ್ರತಿಯೊಂದು ಕೆಲಸದಲ್ಲೂ ಹೆಚ್ಚಿನ ಲಾಭ ಕಂಡಿದ್ದಾರೆ….
 
ಸಾಲ, ಹವಾಮಾನ ವೈಪರೀತ್ಯಗಳಂತಹ ಸಮಸ್ಯೆಗಳನ್ನು ನೋಡಿ ಕೃಷಿಯ ಸಹವಾಸವೇ ಬೇಡ ಎನ್ನುವವರು ಸಾಕಷ್ಟು ಮಂದಿ ಸಿಗುತ್ತಾರೆ. ಅಂಥವರ ಮಧ್ಯೆ ಈ ಎನ್‌. ಅಶೋಕ್‌ಕುಮಾರ್‌ ಭಿನ್ನವಾಗಿದ್ದಾರೆ. 3 ದಶಕಗಳಿಂದ ತರಕಾರಿ, ಹೈನುಗಾರಿಕೆ, ಕೋಳಿ ಸಾಕಾಣಿಕೆ ಹೀಗೆ ಸಮಗ್ರ ಕೃಷಿ ಮಾಡುತ್ತಲೇ ಹೀಗೂ ಬದುಕಬಹುದು ಅನ್ನೋದನ್ನು ತೋರಿಸಿದ್ದಾರೆ. 

ಇವರ ಮೂಲ ದಕ್ಷಿಣ ಕನ್ನಡದ ಸುಳ್ಯ. ಓದಿದ್ದು ಎಂಎಸ್‌ಸಿ. ದೊಡ್ಡಬಳ್ಳಾಪುರದ ಸಮೀಪವಿರುವ ಹದರಿಪುರದಲ್ಲಿ ಜಮೀನಿದೆ. ಇಲ್ಲಿ ಮಾ.ಇಂಟಿಗ್ರೇಟರ್ಸ್‌ ಅನ್ನೋ ಕೃಷಿ ಕುಟುಂಬ ರೂಪಿಸಿದ್ದಾರೆ. ಇದರ ಮೂಲಕ ಸಮಗ್ರ ಕೃಷಿಗೆ ಕೈ ಹಾಕಿದರು. ಹೆಚ್ಚು ಕಮ್ಮಿ ಇವರ ಕುಟುಂಬದಲ್ಲಿ ಇಂದು 300ಕ್ಕೂ ಹೆಚ್ಚು ಜನರು ಕೃಷಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.  

ಹೈನುಗಾರಿಕೆ, ಕೋಳಿ ಸಾಕಾಣಿಕೆಯೊಂದಿಗೆ ದ್ರಾಕ್ಷಿ ರಬ್ಬರ್‌, ತೆಂಗು, ಮಾವು ಮತ್ತಿತರ ಬೆಳೆ ಬೆಳೆಯುವ ಕ್ರಮದಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಸ್ಪರ್ಷ ನೀಡಿದ್ದುದರಿಂದ ಇವರ ಆದಾಯ ವೃದ್ದಿಯಾಗಿದೆಯಂತೆ.

ಕೋಳಿ ಸಾಕಾಣಿಕೆಯಲ್ಲಿ ಯಶಸ್ಸಿನ ಬುತ್ತಿ: ಕೇವಲ 25 ಹಸುಗಳೊಂದಿಗೆ ಹೈನುಗಾರಿಕೆ ಪ್ರಾರಂಭಿಸಿ 5 ವರ್ಷದಲ್ಲಿ ತಮ್ಮ ಸಂಪಾದನೆಯಲ್ಲಿ ಹೆಚ್ಚಳ ಹಾಗೂ ಹಸುಗಳ ಸಂಖ್ಯೆಯನ್ನು 100ಕ್ಕೆ ವಿಸ್ತರಿಸುವಲ್ಲಿ ಯಶಸ್ವಿಯಾದರು. ಹಸುಗಳ ಸಗಣಿ ಮತ್ತು ಮೂತ್ರದಿಂದ ಮಿಥೇನ್‌ಗಾಸ್‌ ಉತ್ಪಾದಿಸಿ ಅದನ್ನು ಡಿಸೇ‍ಜನರೇಟರ್‌ಗೆ ಇಂಧನವಾಗಿಸಿದ್ದಾರೆ.

ಇದರಿಂದ 20 ಕೆ.ವಿ ವಿದ್ಯುತ್‌ ಉತ್ಪಾದಿಸಿ ಫಾರಂನ ದೈನಂದಿನ ಚಟುವಟಿಕೆಗಳಿಗೆ 6 ಗಂಟೆ ವಿದ್ಯುತ್ ಹರಿಸಲಾಗುತ್ತಿದೆ. 2003ರಲ್ಲಿ 400 ಕುರಿಗಳಿಂದ ಕುರಿ ಸಾಕಾಣಿಕೆ ಆರಂಭಿಸಿದರು. ನಂತರ ಮೇಕೆ ಸಾಕಾಣಿಕೆಯನ್ನು ಪ್ರಾರಂಭಿಸಿ ಅದರಲ್ಲೂ ಯಶಕಂಡರು. ಕೋಳಿ ಸಾಕಾಣಿಕೆಯಲ್ಲಿ ಕಾಡುವ ಅನೈರ್ಮಲ್ಯ, ಹಕ್ಕಿಜ್ವರ ಮುಂತಾದ ಸಮಸ್ಯೆಗಳಿಗೆ ಆಧುನಿಕ ತಂತ್ರಜ್ಞಾನದಿಂದ ಪರಿಹಾರವಿದೆ ಅನ್ನೋದನ್ನು ತೋರಿಸಿದ್ದಾರೆ.  

2007ರಲ್ಲಿ ಪ್ರಾರಂಭವಾದ ಮಾಇಂಟಿಗ್ರೇಟರ್ಸ್‌ ತನ್ನ ದಶಕದ ಕಾರ್ಯನಿರ್ವಹಣೆಯಲ್ಲಿ ಮಂಗಳೂರು, ಬಂಟ್ವಾಳ, ಆನವಟ್ಟಿ, ಕುಣಿಗಲ…, ಸುಳ್ಯದಲ್ಲಿ ಶಾಖೆಗಳನ್ನು ಹೊಂದಿದೆ. ಪ್ರಸಿದ್ಧ ಚಿಕನ್‌ ಬ್ರಾಂಡ್‌ ವೆಂಕಾಬ…ಗೆ ಬಹುಪಾಲು ಮಾಂಸ ಸರಬರಾಜು ಮಾಡುತ್ತಿರುವುದು ಅಶೋಕ್‌ ಕುಮಾರ್‌ ಅವರ ತಂಡ.  

ಮಾ. ಇಂಟಿಗ್ರೇಟರ್‌ನಲ್ಲಿ 200 ಕ್ಕೂ ಹೆಚ್ಚು ಜನರು ಉದ್ಯೋಗಿಗಳಾಗಿ ಕಾರ್ಯನಿರ್ವಹಿಸುತ್ತಿದ್ದು, 300ಕ್ಕೂ ಹೆಚ್ಚು ಸಣ್ಣ ಮತ್ತು 
ಮಧ್ಯಮ ರೈತರು ಮಾಇಂಟಿಗ್ರೇಟರ್ಸ…ನಲ್ಲಿ ಪಾಲುದಾರರಾಗಿದ್ದಾರೆ. ಮೊಟ್ಟೆ, ಕೋಳಿ ಮರಿ ಹಾಗೂ ಮಾಂಸ ಸೇರಿ ಕೋಳಿಗೆ ಬೇಕಾಗುವ ಸಮತೋಲಿತ ಆಹಾರವನ್ನು ಒಪ್ಪಂದದಡಿಯಲ್ಲಿ ಸರಬರಾಜು ಮಾಡುತ್ತಿದ್ದಾರೆ. 

ನೈರ್ಮಲ್ಯದಲ್ಲಿ ಗುಣಮಟ್ಟ: ಕೋಳಿ ಮಾಂಸ, ಮೊಟ್ಟೆಯ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಸ್ವತ್ಛ ಮಾಂಸವನ್ನು ತನ್ನಗ್ರಾಹಕರಿಗೆ ನೀಡಬೇಕು ಎನ್ನುವ ಗುರಿಯೊಂದಿಗೆ ಹಲವು ವೈಜ್ಞಾನಿಕ ಹಂತಗಳನ್ನು ಅನುಸರಿಸುತ್ತಿದೆ. ಕೋಳಿ ಸಾಕಾಣಿಕೆ ಕೇಂದ್ರದೊಳಗೆ ಪ್ರವೇಶಿಸಬೇಕೆಂದರೆ ಸ್ನಾನ ಮಾಡಲೇಬೇಕಿರುವುದು ನಿಯಮ.

ಇನ್ನು ಆವರಣದೊಳಗೆ ವಾಹನಗಳು ಪ್ರವೇಶಿಸಬೇಕೆಂದರೂ ರಾಸಾಯನಿಕ ಮಿಶ್ರಣ ನೀರಿನಿಂದ ವಾಹನಗಳನ್ನು ತೊಳೆಯುವುದು ಅವಶ್ಯ. ಇದಲ್ಲದೇ ಕೋಳಿ ಸಾಕಾಣಿಕೆ ಸ್ಥಳದಲ್ಲಿ ನೈರ್ಮಲ್ಯ ಕಾಪಾಡುವುದಕ್ಕಾಗಿ ಸುತ್ತಲೂ ಉದ್ಯಾನವನ ನಿರ್ಮಿಸಲಾಗಿದೆ. ಇದರಿಂದಾಗಿ ವೈರಸ್‌ಗಳಿಂದ ಕೋಳಿಗಳನ್ನು ರಕ್ಷಿಸಲು ಅನುಕೂಲ ಎನ್ನುತ್ತಾರೆ ಅಶೋಕ್‌. 

1200 ಅಡಿ ಭೂಮಿ ಕೊರೆದರೂ ಅಂತರ್ಜಲ ಕಾಣದ ಈ ಜಾಗದಲ್ಲಿ ನೀರಿನ ಮಿತ ಬಳಕೆಯೊಂದಿಗೆ ಮಲೆನಾಡನ್ನು ಸೃಷ್ಟಿಸಲು ಬಯಸಿದ್ದಾರೆ. ರಬ್ಬರ್‌, ಹಲಸು, ಬೇವು, ಹುಣಸೆ ಸೇರಿ ವಿವಿಧಸಸ್ಯಗಳನ್ನು ಬೆಳೆಸಿದ್ದಾರೆ. ಅದಲ್ಲದೇ ಹದರಿಪುರದಲ್ಲಿನ ಕೋಳಿ ಫಾರಂ ಸುತ್ತಲಿನ ಪ್ರದೇಶದಗುಡ್ಡದಲ್ಲಿ ವ್ಯೂ ಪಾಯಿಂಟ್ ನಿರ್ಮಿಸಿರುವುದು ವಿಶೇಷ. ಇದರಿಂದ ಸುತ್ತಲಿನ 30 ಕ್ಕೂ ಹೆಚ್ಚು ಕಿ.ಮೀ ಪ್ರದೇಶವನ್ನು ವೀಕ್ಷಿಸಬಹುದು. ಅಷ್ಟೇ ಅಲ್ಲ, ನಂದಿ ಬೆಟ್ಟ, ಶಿವಗಂಗೆ ಬೆಟ್ಟಗಳನ್ನು ಕಣ್ತುಂಬಿಕೊಳ್ಳಬಹುದು.

* ಸೌಮ್ಯ

ಟಾಪ್ ನ್ಯೂಸ್

3-raichur

Raichur: ದೇವಸ್ಥಾನ ತೆರವು; ಬಿಜೆಪಿಯಿಂದ ಪ್ರತಿಭಟನೆ

Hit & Run: ಐಷಾರಾಮಿ ಕಾರಿಗೆ ಕ್ಯಾಮರಾಮ್ಯಾನ್ ಬಲಿ; 100 ಮೀ ದೂರದಲ್ಲಿ ಪತ್ತೆಯಾಯಿತು ಮೃತದೇಹ

Hit & Run: ಐಷಾರಾಮಿ ಕಾರಿಗೆ ಕ್ಯಾಮರಾಮ್ಯಾನ್ ಬಲಿ; 100 ಮೀ ದೂರದಲ್ಲಿ ಪತ್ತೆಯಾಯಿತು ಮೃತದೇಹ

1-bagalkote

Bagalkote: ಹೇರ್ ಡ್ರೈಯರ್ ಸ್ಪೋಟಗೊಂಡು ಮಹಿಳೆಯ ಎರಡು ಕೈ ತುಂಡು

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

1-supri

Crypto funds ಡೀಲ್ ಆಡಿಯೋ ಆರೋಪ: ನನ್ನ ಧ್ವನಿಯಲ್ಲ ಎಂದು ಕಿಡಿಯಾದ ಸುಪ್ರಿಯಾ ಸುಳೆ

1-leo

Football;ಕೇರಳದಲ್ಲಿ ಅಂತಾರಾಷ್ಟ್ರೀಯ ಪಂದ್ಯ ಆಡಲಿರುವ ದಿಗ್ಗಜ ಲಿಯೋನೆಲ್ ಮೆಸ್ಸಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

3-raichur

Raichur: ದೇವಸ್ಥಾನ ತೆರವು; ಬಿಜೆಪಿಯಿಂದ ಪ್ರತಿಭಟನೆ

2-kadaba

Kadaba: ವೃದ್ದ ದಂಪತಿಗಳ ಮನೆ ದ್ವಂಸ ಪ್ರಕರಣ; ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಪ್ರತಿಭಟನೆ

17

UV Fusion: ಹೃದಯದಲ್ಲಿ ಬಾಲ್ಯದ ಮಿಡಿತ

Hit & Run: ಐಷಾರಾಮಿ ಕಾರಿಗೆ ಕ್ಯಾಮರಾಮ್ಯಾನ್ ಬಲಿ; 100 ಮೀ ದೂರದಲ್ಲಿ ಪತ್ತೆಯಾಯಿತು ಮೃತದೇಹ

Hit & Run: ಐಷಾರಾಮಿ ಕಾರಿಗೆ ಕ್ಯಾಮರಾಮ್ಯಾನ್ ಬಲಿ; 100 ಮೀ ದೂರದಲ್ಲಿ ಪತ್ತೆಯಾಯಿತು ಮೃತದೇಹ

16

UV Fusion: ಚಿಮ್ಮಿದ ಸೇವಾಹನಿಗಳು ಮತ್ತೆ ಸಾಗರವ ಸೇರಿತು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.